18 ವರ್ಷ ಗೂಗಲ್‌ನಲ್ಲಿ ಕೆಲಸ ಮಾಡಿದ್ದ ಉದ್ಯೋಗಿ ರಾಜೀನಾಮೆ; ಸಿಇಒ ಸುಂದರ್‌ ಪಿಚೈ ವಿರುದ್ಧ ಗಂಭೀರ ಆರೋಪ!

By Vinutha PerlaFirst Published Nov 25, 2023, 3:24 PM IST
Highlights

ಪ್ರಪಂಚದ ಹಲವು ದಿಗ್ಗಜ ಕಂಪೆನಿಗಳಲ್ಲಿ ಗೂಗಲ್‌ನ್ನು ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದರೆ ಬರೋಬ್ಬರಿ 18 ವರ್ಷ ಗೂಗಲ್‌ನಲ್ಲಿ ಕೆಲಸ ಮಾಡಿದ್ದ ಉದ್ಯೋಗಿಯೊಬ್ಬರು ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ಗೂಗಲ್‌ ಸಿಇಒ ಸುಂದರ್ ಪಿಚೈ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದಾರೆ.

ಪ್ರಪಂಚದ ಹಲವು ದಿಗ್ಗಜ ಕಂಪೆನಿಗಳಲ್ಲಿ ಗೂಗಲ್‌ ಸಹ ಒಂದಾಗಿದೆ. Googleನ್ನು ಕೆಲಸ ಮಾಡಲು ಅತ್ಯುತ್ತಮ ಕಂಪನಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಗೂಗಲ್‌ ತನ್ನ ಉದ್ಯೋಗಿಗಳಿಗೆ ಒದಗಿಸುವ ಪರ್ಕ್‌ಗಳು ಮತ್ತು ಬೆನಿಫಿಟ್‌ಗಳಿಗೆ ಹೆಚ್ಚು ಹೆಸರುವಾಸಿಯಾಗಿದೆ. ದೊಡ್ಡ ಪ್ರಮಾಣದಲ್ಲಿ ಕಂಪೆನಿಯಿಂದ ಉದ್ಯೋಗಿಗಳನ್ನು ವಜಾಗೊಳಿಸಿದ್ದರೂ, ಕಂಪನಿಯು ಕಳೆದ ವರ್ಷ ಉತ್ತಮ ಸ್ಯಾಲರಿ ನೀಡಿದ ಕಂಪನಿಗಳಲ್ಲಿ ಒಂದಾಗಿದೆ. ಆದರೆ ಸದ್ಯ, Googleನಲ್ಲಿನ ಕೆಲಸದ ರೀತಿ-ನೀತಿಯ ಬಗ್ಗೆ ಹಲವರು ಅಸಮಾಧಾನಗೊಂಡಿದ್ದಾರೆ ಎಂದು ತಿಳಿದುಬಂದಿದೆ. 

ಗೂಗಲ್‌ ಕಂಪೆನಿಯೊಳಗಿರುವ ಭಿನ್ನಾಭಿಪ್ರಾಯಗಳಿಗೆ ಸಾಕ್ಷಿಯೆಂಬಂತೆ ಬರೋಬ್ಬರಿ 18 ವರ್ಷಗಳ ಕಾಲ ಟೆಕ್ ದೈತ್ಯದಲ್ಲಿ ಕೆಲಸ ಮಾಡಿದ ಮಾಜಿ ಗೂಗಲ್ ಉದ್ಯೋಗಿ, ರಾಜೀನಾಮೆ ನೀಡಿದ್ದಾರೆ. ಗೂಗಲ್‌ನ ರೂಲ್ಸ್ ಮತ್ತು ರೆಗ್ಯುಲೇಶನ್‌ ಮತ್ತು ಸಿಇಒ ಸುಂದರ್ ಪಿಚೈ ಅವರ ನಾಯಕತ್ವದ ಬಗ್ಗೆ ಅಸಮಾಧಾನಗೊಂಡು ರಾಜೀನಾಮೆ ನೀಡಿದ್ದಾಗಿ ತಿಳಿಸಿದ್ದಾರೆ. ಬ್ಲಾಗ್ ಪೋಸ್ಟ್‌ನಲ್ಲಿ ಉದ್ಯೋಗಿ, ಗೂಗಲ್‌ನಲ್ಲಿನ ತನ್ನ ಅನುಭವದ ಬಗ್ಗೆ ಮತ್ತು ಈ ಎಲ್ಲಾ ವರ್ಷಗಳಲ್ಲಿ ಅದು ಹೇಗೆ ಬದಲಾಗಿದೆ ಎಂಬುದರ ಕುರಿತು ಮಾತನಾಡಿದ್ದಾರೆ.

ಗೂಗಲ್ ಸಿಇಒ ಸುಂದರ್ ಪಿಚೈ ಬಾಲ್ಯದ ಮನೆ ಮಾರಾಟ: ತಮಿಳು ನಟ, ನಿರ್ಮಾಪಕನಿಂದ ಆಸ್ತಿ ಖರೀದಿ

18 ವರ್ಷಗಳ ನಂತರ ರಾಜೀನಾಮೆ ನೀಡಿದ ಗೂಗಲ್‌ ಉದ್ಯೋಗಿ
'ನಾನು ಅಕ್ಟೋಬರ್ 2005ರಲ್ಲಿ ಗೂಗಲ್‌ಗೆ ಸೇರಿಕೊಂಡೆ ಮತ್ತು 18 ವರ್ಷಗಳ ನಂತರ ನನ್ನ ರಾಜೀನಾಮೆಯನ್ನು ನೀಡಿದ್ದೇನೆ. ಕಳೆದ ವಾರ ಗೂಗಲ್‌ನಲ್ಲಿ ನನ್ನ ಕೊನೆಯ ವಾರವಾಗಿತ್ತು' ಎಂದು ಉದ್ಯೋಗಿ ಬ್ಲಾಗ್‌ನ ಆರಂಭದಲ್ಲಿ ಬರೆದಿದ್ದಾರೆ. ನಂತರ ಅವರು ಗೂಗಲ್‌ನ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು. 'ಗೂಗಲ್‌, ಸಮಾಜಕ್ಕಾಗಿ ಉತ್ತಮವಾಗಿ ಕೆಲಸ ಮಾಡುವ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುವ ಕಂಪನಿಯಾಗಿದೆ. ಪ್ರಪಂಚದ ಮಾಹಿತಿಯನ್ನು ಸಂಘಟಿಸುವ ಮತ್ತು ಅದನ್ನು ಸಾರ್ವತ್ರಿಕವಾಗಿ ಪ್ರವೇಶಿಸಬಹುದಾದ ಮತ್ತು ಉಪಯುಕ್ತವಾಗಿಸುವ ಕಂಪನಿಯ ಧ್ಯೇಯಕ್ಕೆ ಗೂಗಲ್‌ನ ಉದ್ಯೋಗಿಗಳು ಹೇಗೆ ಬದ್ಧರಾಗಿದ್ದಾರೆ ಎಂಬುದನ್ನು ಅವರು ನೇರವಾಗಿ ನೋಡಿದ್ದಾರೆ' ಎಂದು ಅವರು ಹೇಳಿದರು.

ಆದರೆ, ಕಾಲಾನಂತರದಲ್ಲಿ, ಟೆಕ್ ದೈತ್ಯನ ಕೆಲಸದ ಸಂಸ್ಕೃತಿಯು ಗಣನೀಯ ಕಡಿಮೆಯಾಗಿದೆ ಎಂದು ಗೂಗಲ್‌ನ ಮಾಜಿ ಉದ್ಯೋಗಿ ಹೇಳಿದ್ದಾರೆ. ಉದಾಹರಣೆಗೆ, ಬಳಕೆದಾರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಒಮ್ಮೆ ಮಾಡಿದ ನಿರ್ಧಾರಗಳನ್ನು ಲಾಭವನ್ನು ಹೆಚ್ಚಿಸುವ ಗುರಿಯೊಂದಿಗೆ ಹೆಚ್ಚಾಗಿ ಮಾಡಲಾಗುತ್ತಿದೆ ಎಂದು ಅವರು ಹೇಳಿದರು. ಸುಂದರ್ ಪಿಚೈ ಅವರ ನಿರ್ದೇಶನದ ಅಡಿಯಲ್ಲಿ ಕಂಪನಿಯ ನಾಯಕತ್ವವು ಉದ್ಯೋಗಿಗಳೊಂದಿಗೆ ಹೆಚ್ಚು ಸಂಪರ್ಕವನ್ನು ಕಳೆದುಕೊಂಡಿದೆ ಎಂದು ಮಾಜಿ ಉದ್ಯೋಗಿ ಹೇಳಿದ್ದಾರೆ.

ಗೂಗಲ್‌ ಸರ್ಚ್‌ನಲ್ಲಿ ಕೃತಕ ಬುದ್ಧಿಮತ್ತೆ ಸೇರ್ಪಡೆ; ಚಾಟ್‌ಬಾಟ್‌ನಿಂದ ಅವಕಾಶ ಸೃಷ್ಟಿ: ಸುಂದರ್ ಪಿಚೈ

ಪೋಸ್ಟ್‌ನಲ್ಲಿ, ಮಾಜಿ ಗೂಗಲ್ ಕಾರ್ಯನಿರ್ವಾಹಕರು ಈ ವರ್ಷದ ಆರಂಭದಲ್ಲಿ ಕಂಪನಿಯು ಸಾವಿರಾರು ಜನರನ್ನು ವಜಾಗೊಳಿಸಿದ ವಿಧಾನದ ಬಗ್ಗೆ ಮಾತನಾಡಿದ್ದಾರೆ. 'ಕಂಪನಿಗೆ ಇದು ಒಂದು ಮಹತ್ವದ ತಿರುವಾಗಿತ್ತು. ಉದ್ಯೋಗಿಗಳ ವಜಾಗೊಳಿಸುವಿಕೆಯು ಗೂಗಲ್‌ನ ಸಂಸ್ಕೃತಿಯ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ' ಎಂದು ಅವರು ತಿಳಿಸಿದರು.

click me!