ಮಗಳ ಹತ್ಯೆಗೆ ಸುಪಾರಿ ಕೊಟ್ಟ ಕಿಲ್ಲರ್‌ನಿಂದಲೇ ಬೀದಿ ಹೆಣವಾದ ತಾಯಿ, ಟ್ವಿಸ್ಟ್‌ಗೆ ಪೊಲೀಸರೇ ಶಾಕ್!

By Chethan Kumar  |  First Published Oct 12, 2024, 8:36 PM IST

ವಯಸ್ಸು 17 ದಾಟಿದೆ. ಆದರೆ ಮಗಳ ನಡತೆ ಸರಿ ಇಲ್ಲ, ಎಲ್ಲಾ ಪ್ರಯತ್ನ ಬಳಿಕ ತಾಯಿ ಮಗಳನ್ನೇ ಹತ್ಯೆ ಮಾಡಲು ಸುಪಾರಿ ಕೊಟ್ಟಿದ್ದಾಳೆ. ಆದರೆ  ಕೆಲವೇ ದಿನಗಳಲ್ಲಿ ಹಂತಕ ಮಗಳ ಹತ್ಯೆ ಮಾಡುವ ಬದಲು ತಾಯಿಯನ್ನೇ ಹತ್ಯೆ ಮಾಡಿದ್ದಾನೆ. ಈ ಪ್ರಕರಣ ಭೇದಿಸಿದ ಪೊಲೀಸರೇ ಒಂದು ಕ್ಷಣ ದಂಗಾಗಿದ್ದಾರೆ.


ಆಗ್ರ(ಅ.12) ಸುಪಾರಿ ಕಿಲ್ಲರ್ ಹಣ ಪಡೆದು ಬಳಿಕ ಹತ್ಯೆ ಸಾಧ್ಯವಾಗದೇ ಸಿಕ್ಕಿ ಬಿದ್ದ ಹಲವು ಘಟನೆಗಳಿವೆ. ಆದರೆ ಇಲ್ಲೊಂದು ಘಟನೆ ನೋಡಲು ಚಿತ್ರ ವಿಚಿತ್ರವಾದರೂ ಊಹೆಗೂ ಮೀರಿದೆ. 17 ವರ್ಷದ ಮಗಳು ನಡತೆ ಸರಿ ಇಲ್ಲ, ಯಾರೋ ಜೊತೆಗೆ ಓಡಿ ಹೋಗಿದ್ದ ಮಗಳನ್ನು ಹರಸಾಹಸ ಮಾಡಿ ಕರೆ ತಂದಿದ್ದ ತಾಯಿ ಕೊನೆಗೆ ಹತ್ಯೆಗೆ ಮುಂದಾಗಿದ್ದಾಳೆ. ಮಗಳನ್ನೇ ಹತ್ಯೆ ಮಾಡಿದರೆ ತಲೆನೋವೇ ಇಲ್ಲ ಎಂದುಕೊಂಡು ಸುಪಾರಿ ಕಿಲ್ಲರ್‌ಗೆ ಜವಾಬ್ದಾರಿ ವಹಿಸಿದ್ದಾಳೆ. ಆದರೆ ಸುಪಾರಿ ಕಿಲ್ಲರ್ ಮಗಳ ಬದಲು ಸುಪಾರಿ ನೀಡಿದ ತಾಯಿಯನ್ನೇ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಇಟಾ ಜಿಲ್ಲೆಯಲ್ಲಿ ನಡೆದಿದೆ.

35 ವರ್ಷದ ಅಲ್ಕಾ ಅನ್ನೋ ಮಹಿಳೆ ಮೃತದೇಹ ಬೀದಿ ಪಕ್ಕದ ಪೊದೆಯಲ್ಲಿ ಪತ್ತೆಯಾಗಿದೆ. ಪೊಲೀಸರು ಮೃತದೇಹ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದರೆ. ಮರಣೋತ್ತರ ಪರೀಕ್ಷೆ ವರದಿ ಸೇರಿದಂತೆ ಹಲವು ಮಾಹಿತಿ ಸಂಗ್ರಹಿಸಿ ತನಿಖೆ ನಡೆಸಿದಾಗ ಒಂದೊಂದೆ ಸ್ಫೋಟಕ ಮಾಹಿತಿ ಬಯಲಾಗಿದೆ. ಹಂತ ಹಂತದಲ್ಲಿ ಸಿಕ್ಕಿದ ಟ್ವಿಸ್ಟ್‌ಗೆ ಪೊಲೀಸರೇ ದಂಗಾಗಿದ್ದಾರೆ.

Tap to resize

Latest Videos

undefined

ನರ್ಸ್ ಅಪಹರಿಸಿ ಬಲಾತ್ಕಾರ, ಮಧ್ಯ ರಾತ್ರಿಯಲ್ಲಿ ಯುವತಿ ರಕ್ಷಿಸಿದ ಭಾರತೀಯ ನೌಕಾ ಪಡೆ ಅಧಿಕಾರಿ!

ಅಲ್ಕಾ ತನ್ನ 17 ವರ್ಷದ ಮಗಳಿಂದ ಬೇಸತ್ತು ಹೋಗಿದ್ದಳು. ವಯಸ್ಸು 17 ಆದರೂ ಈಕೆಯ ನಡತೆ ಮಾತ್ರ ಸರಿ ಇರಲಿಲ್ಲ ಅನ್ನೋದು ಅಲ್ಕಾ ನೋವಾಗಿತ್ತು. ಕಾಲೇಜು ಹೆಸರಿನಲ್ಲಿ ಮನೆಯಿಂದ ಹೊರಟರೆ ರಾತ್ರಿಯಾಗುತ್ತಿತ್ತು ಮರಳಲು. ಹಲವು ಬಾರಿ ಮಧ್ಯರಾತ್ರಿ ಯಾರೋ ಡ್ರಾಪ್ ಮಾಡಿ ಹೋಗುತ್ತಿದ್ದರು. ಇದರ ನಡುವೆ ಯಾರದ್ದೋ ಜೊತೆ ಓಡಿ ಹೋಗಿದ್ದ ಮಗಳನ್ನು ಹರಸಾಹಸ ಮಾಡಿ ಕರೆ ತಂದಿದ್ದಳು. ಬಳಿಕ ಅಲ್ಕಾ ಮಗಳನ್ನುತನ್ನ ತಾಯಿ ಮನೆಗೆ ಕಳುಹಿಸಿದ್ದಳು. 

ಆದರೆ ಅಲ್ಕಾ ತಾಯಿ ಮನೆಯಲ್ಲಿ ಫೋನ್‌ನಲ್ಲಿ ಮುಳುಗಿದ್ದ ಈಕೆಯನ್ನು ವಾಪಸ್ ಕರೆದುಕೊಂಡು ಹೋಗುವಂತೆ ತಾಯಿ ಮನೆಯ ಸಂಬಂಧಿಕರು ಸೂಚಿಸಿದ್ದಾರೆ. ಹೀಗಾಗಿ ಬೇರೆ ದಾರಿ ಕಾಣದೇ ಮತ್ತೆ ಮಗಳನ್ನು ಮನೆಗೆ ಕರೆದುಕೊಂಡು ಬಂದ ಅಲ್ಕಾ ಬುದ್ದಿ ಹೇಳಿದ್ದಾಳೆ. ಆದರೆ ಕೇಳಿಸಿಕೊಳ್ಳುವ ತಾಳ್ಮೆ ಮಗಳಿಗೆ ಇರಲಿಲ್ಲ. ಕೊನೆಗೆ ಗಟ್ಟಿ ನಿರ್ಧಾರ ಮಾಡಿದ ಅಲ್ಕಾ ಮಗಳನ್ನೇ ಹತ್ಯೆ ಮಾಡಲು ಸುಪಾರಿ ನೀಡಿದ್ದಾಳೆ.

38 ವರ್ಷದ ಸುಭಾಷ್ ಸಿಂಗ್‌ಗೆ ಮಗಳ ಹತ್ಯೆ ಮಾಡಲು 50,000 ರೂಪಾಯಿನೀಡಿದ್ದಾಳೆ. ಸುಭಾಷ್ ಸಿಂಗ್ ಅದೇ ಗ್ರಾಮದ ಸುಪಾರಿ ಕಿಲ್ಲರ್ ಆಗಿ ಜನಪ್ರಿಯವಾಗಿದ್ದ. ಹೇಳಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಾನೆ ಅನ್ನೋ ಹೆಸರು ಗಳಿಸಿದ್ದ. ಹೀಗಾಗಿ ಈತನ ಹುಡುಕಿದ ಅಲ್ಕಾ ಹಣ ನೀಡಿ ಮಗಳ ಹತ್ಯೆಗೆ ಸುಪಾರಿ ಕೊಟ್ಟಿದ್ದಾಳೆ. ಆದರೆ ಅಲ್ಕಾ ಎಡವಟ್ಟಿನ ಮೇಲೆ ಎಡವಟ್ಟು ಮಾಡಿಕೊಂಡಿದ್ದಳು. ಕಾರಣ ಈ ಸುಭಾಷ್ ಸಿಂಗ್ ತನ್ನ ಮಗಳ ಲವರ್ ಅನ್ನೋದು ಅಲ್ಕಾಗೆ ಗೊತ್ತಿರಲಿಲ್ಲ.

ಅಲ್ಕಾ ಮಗಳನ್ನೇ ಪ್ರೀತಿಸುತ್ತಿದ್ದ ಸುಭಾಷ್ ಸಿಂಗ್ ಈ ಮಾಹಿತಿಯನ್ನು ನೇರವಾಗಿ ಆಕೆಗೆ ತಿಳಿಸಿದ್ದಾನೆ. ಇದರಿಂದ ಅಲ್ಕಾ ಮಗಳು ಮತ್ತಷ್ಟು ಆಕ್ರೋಶಗೊಡಿದ್ದಾಳೆ. ನಿನ್ನ ಮದುವೆಯಾಗಬೇಕಾದರೆ ನನ್ನ ಕೊಲ್ಲಲು ಸುಪಾರಿ ಕೊಟ್ಟ ತಾಯಿ ಹತ್ಯೆ ಮಾಡುವಂತೆ ಅಲ್ಕಾ ಮಗಳೇ ಸುಭಾಷ್‌ಗೆ ಸೂಚಿಸಿದ್ದಾಳೆ. ಗೆಳತಿ ಏಕಾಏಕಿ ಮದುವೆ ಆಫರ್ ಮುಂದಿಟ್ಟಾಗ ಈತ ಹಿಂದೂ ಮುಂದೂ ನೋಡದೆ ಸುಪಾರಿ ಕೊಟ್ಟ ಅಲ್ಕಾಳನ್ನೇ ಹತ್ಯೆ ಮಾಡಿದ್ದಾನೆ.  ಇದೀಗ ಇಬ್ಬರನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಪೊದೆಯಲ್ಲಿ ಬಿಸಾಡಿದ್ದ ನವಜಾತ ಹೆಣ್ಣು ಮಗು ರಕ್ಷಿಸಿ ದತ್ತು ಪಡೆದ ಪೊಲೀಸ್ ಅಧಿಕಾರಿ!

click me!