ಇಂಡಿಯನ್‌ ಆರ್ಮಿಗೆ ಪ್ರಿಡೇಟರ್‌ ಬಲ, 400 ಕೋಟಿಯ 31 ಡ್ರೋನ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ!

Published : Feb 02, 2024, 11:25 AM ISTUpdated : Feb 02, 2024, 11:26 AM IST
ಇಂಡಿಯನ್‌ ಆರ್ಮಿಗೆ ಪ್ರಿಡೇಟರ್‌ ಬಲ, 400 ಕೋಟಿಯ 31 ಡ್ರೋನ್‌ ಮಾರಾಟಕ್ಕೆ ಅಮೆರಿಕ ಒಪ್ಪಿಗೆ!

ಸಾರಾಂಶ

ಕೊನೆಗೂ ಭಾರತೀಯ ಸೇನೆಗೆ ವಿಶ್ವದ ಅತ್ಯಂತ ಘಾತಕ ಡ್ರೋನ್‌ ಪ್ರಿಡೇಟರ್‌ ಬಲ ಸಿಕ್ಕಿದೆ. ಅಂದಾಜು 400 ಕೋಟಿ ರೂಪಾಯಿಗೆ 31 ಡ್ರೋನ್‌ ಖರೀದಿಗೆ ಅಮೆರಿಕದ ಕಾಂಗ್ರೆಸ್‌ ಒಪ್ಪಿಗೆ ನೀಡಿದೆ.

ನವದೆಹಲಿ (ಫೆ.2): ಭಾರತ ಹಾಗೂ ಅಮೆರಿಕ ನಡುವೆ ಆಧುನಿಕ ಯುಗದಲ್ಲಿ ಬೆಳೆಯುತ್ತಿರುವ ಬಾಂಧವ್ಯದ ಸಂಕೇತವಾಗಿ ಅಮೆರಿಕ ಹಾಗೂ ಭಾರತದ ನಡುವೆ ಮತ್ತೊಂದು ದೊಡ್ಡ ಮಿಲಿಟರಿ ಒಪ್ಪಂದವಾಗಿದೆ. ಅಮೆರಿಕ ಸರ್ಕಾರ ಗುರುವಾರ ಭಾರತ ಸರ್ಕಾರದಲ್ಲಿ ವಿದೇಶಿ ಮಿಲಿಟರಿ ಮಾರಾಟಕ್ಕೆ ಒಪ್ಪಿಗೆ ನೀಡಿದೆ. ಇದರ ಅನುಸಾರ ಭಾರತ ಅಮೆರಿಕದಿಂದ 31 ಎಂಕ್ಯು-9ಬಿ ಪ್ರಿಡೇಟರ್‌ ಡ್ರೋನ್‌ಅನ್ನು ಖರೀದಿ ಮಾಡಲಿದೆ. ಬಿಡೆನ್‌ ಸರ್ಕಾರ ಅಮೆರಿಕ ಸಂಸತ್ತಿನಲ್ಲಿ ಸಲ್ಲಿಸಿದ್ದ ಪ್ರಸ್ತಾಪಕ್ಕೆ ಅಮೆರಿಕ ಕಾಂಗ್ರೆಸ್‌ ಒಪ್ಪಿಗೆ ನೀಡಿದ್ದು ಅದರಂತೆ ದೀರ್ಘಕಾಲ ವಾಯು ಸಂಚಾರ ಮಾಡಬಲ್ಲ ಮಾನವರಹಿತ ಡ್ರೋನ್‌ ಭಾರತೀಯ ಸೇನೆಯ ತೆಕ್ಕೆಗೆ ಸೇರಲಿದೆ. ಕಳೆದ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಪ್ರವಾಸ ಕೈಗೊಂಡಿದ್ದಾಗ ಈ ಮೆಗಾ ಡೀಲ್‌ನ ಬಗ್ಗೆ ಮೊಟ್ಟ ಮೊದಲ ಬಾರಿಗೆ ಪ್ರಸ್ತಾಪ ಬಂದಿತ್ತು. ಪ್ರಿಡೇಟರ್‌ ಡ್ರೋನ್‌ ಪ್ರಸ್ತುತ ಮಿಲಿಡರಿ ವಲಯದಲ್ಲಿರುವ ಅತ್ಯಂತ ಘಾತಕ ಡ್ರೋನ್‌ ಆಗಿದ್ದು, ಅಮೆರಿಕದ ಸೇನೆ ಅಫ್ಘಾನಿಸ್ತಾನದ ತನ್ನ ಕಾರ್ಯಾಚರಣೆಯಲ್ಲಿ ಈ ಡ್ರೋನ್‌ಅನ್ನು ವ್ಯಾಪಕವಾಗಿ ಬಳಸಿಕೊಂಡಿತ್ತು. ತಾಲಿಬಾನ್‌ ಹಾಗೂ ಐಸಿಸ್‌ ನಾಯಕರನ್ನು ಮಟ್ಟ ಹಾಕುವಲ್ಲಿ ಪ್ರಿಡೇಟರ್‌ ಡ್ರೋನ್‌ ಮಹತ್ತರ ಪಾತ್ರ ನಿಭಾಯಿಸಿತ್ತು. ಅಮೆರಿಕ ಸೇನೆಯ ಹೆಚ್ಚಿನ ಡ್ರೋನ್‌ ಸ್ಟ್ರೈಕ್‌ಗಳಿಗೆ ಪ್ರಿಡೇಟರ್‌ಅನ್ನೇ ಬಳಸಿಕೊಳ್ಳುತ್ತಿದೆ.

ಅಂದಾಜು 3.99 ಬಿಲಿಯನ್‌ ಡಾಲರ್‌ ಮೌಲ್ಯದ ಒಪ್ಪಂದ ಇದಾಗಿದೆ. 31 MQ-9B ರಿಮೋಟ್ ಪೈಲಟೆಡ್ ಏರ್‌ಕ್ರಾಫ್ಟ್ ಜೊತೆಗೆ ಸಂಬಂಧಿತ ಸಲಕರಣೆಗಳ ಸಮಗ್ರ ಸೂಟ್ ಅನ್ನು ಕೂಡ ಈ ಒಪ್ಪಂದ ಒಳಗೊಂಡಿದೆ. ಅಮೆರಿಕ ಸೇನೆ ಪ್ರಿಡೇಟರ್‌ ಡ್ರೋನ್‌ಗೆ ಸಾಮಾನ್ಯವಾಗಿ ಹೆಲ್‌ಫೈರ್‌ ಕ್ಷಿಪಣಿಯನ್ನು ಬಳಸಿ ದಾಳಿ ಮಾಡುತ್ತದೆ.

ಈ ನಿರ್ಧಾರವು ಕಾಂಗ್ರೆಸ್‌ಗೆ ಡಿಫೆನ್ಸ್ ಸೆಕ್ಯುರಿಟಿ ಕೋಆಪರೇಷನ್ ಏಜೆನ್ಸಿಯ ಔಪಚಾರಿಕ ಅಧಿಸೂಚನೆಯನ್ನು ಅನುಸರಿಸುತ್ತದೆ, ಇದು ಎರಡು ರಾಷ್ಟ್ರಗಳ ನಡುವಿನ ಅತ್ಯಂತ ಉನ್ನತ ಮಟ್ಟದ ರಕ್ಷಣಾ ವಹಿವಾಟುಗಳಲ್ಲಿ ಅಂತಿಮಗೊಳಿಸುವತ್ತ ಪ್ರಮುಖ ಹೆಜ್ಜೆಯಾಗಿದೆ.

ಯಾಕೆ ಪ್ರಿಡೇಟರ್‌ ಡ್ರೋನ್‌ ಒಪ್ಪಂದ ಅತ್ಯಂತ ಮಹತ್ವದ್ದು, ಇಲ್ಲಿದೆ ಡೀಟೇಲ್ಸ್‌

ಹಾಗಂತ ಪ್ರಿಡೇಟರ್‌ ಡ್ರೋನ್‌ ಮಾರಾಟದ ಘೋಷಣೆ ಯಾವುದೇ ವಿವಾದಗಳಿಲ್ಲದೆ ನಡೆದಿಲ್ಲ. ಅಮೆರಿಕ ತನ್ನ ಡ್ರೋನ್‌ಅನ್ನು ಭಾರತಕ್ಕೆ ಮಾರಾಟ ಮಾಡುವ ಮುನ್ನ 30 ದಿನಗಳ ಪರಿಶೀಲನಾ ಅವಧಿಯನ್ನು ಅಮೆರಿಕ ಕಾಂಗ್ರೆಸ್‌ ಕೇಳಿತ್ತು. ಇದು ಉದ್ದೇಶಿತ ಡ್ರೋನ್‌ ಮಾರಾಟದ ಶಾಸಕಾಂಗ ಪರಿಶೀಲನೆಗೆ ಅನುವು ಮಾಡಿಕೊಡುವ ಕಾರ್ಯವಿಧಾನದ ಹಂತವಾಗಿದೆ. ಈ ಬಗ್ಗೆ ದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವ್ಕ್ತಾರರು ಮಾತನಾಡಿದ್ದು, ಇದರ ಸೂಕ್ಷ್ಮ ವ್ಯತ್ಯಾಸಗಳನ್ನು ತಿಳಿಸಿದ್ದು, ಪ್ರಸ್ತಾವಿತ ಮಾರಾಟಕ್ಕೂ ಮುನ್ನ ಅಮೆರಿಕ ಕಾಂಗ್ರೆಸ್‌ 30 ದಿನಗಳ ಪರಿಶೀಲನಾ ಸಮಯವನ್ನು ಹೊಂದಿರಲಿದೆ. ಅವರ ಪರಿಶೀಲನೆ ಮುಕ್ತಾಯದ ಬಳಿಕ ಭಾರತ ಹಾಗೂ ಅಮೆರಿಕ ಈ ಮಾರಾಟದ ಆಫರ್‌ ಹಾಗೂ ಸ್ವೀಕಾರ ಪತ್ರವನ್ನು ಪಡೆಯಬಹುದು ಎಂದು ತಿಳಿಸಿದ್ದರು.

ಕೊಲೆಗಡುಕನಿಗೆ ನೈಟ್ರೋಜನ್‌ ಗ್ಯಾಸ್‌ ನೀಡಿ ಮರಣದಂಡನೆ: ಅಮೆರಿಕದಲ್ಲಿ ವಿಶ್ವದ ಮೊದಲ ಪ್ರಕರಣ

US ಕಾಂಗ್ರೆಸ್‌ಗೆ ಸೂಚನೆ ನೀಡುತ್ತಾ, ರಕ್ಷಣಾ ಭದ್ರತಾ ಸಹಕಾರ ಸಂಸ್ಥೆ (DSCA) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಯ  “ಭಾರತ ಸರ್ಕಾರಕ್ಕೆ MQ-9B ರಿಮೋಟ್‌ಲಿ ಪೈಲಟೆಡ್ ಏರ್‌ಕ್ರಾಫ್ಟ್ ಮತ್ತು ಸಂಬಂಧಿತ ಸಲಕರಣೆಗಳ ಸಂಭಾವ್ಯ ವಿದೇಶಿ ಮಿಲಿಟರಿ ಮಾರಾಟವನ್ನು ಅನುಮೋದಿಸುವ ನಿರ್ಧಾರವನ್ನು ವಿದೇಶಾಂಗ ಇಲಾಖೆ ಮಾಡಿದೆ. ಇದಕ್ಕೆ ಒಟ್ಟು 3.99 ಬಿಲಿಯನ್ ವೆಚ್ಚವಾಗಲಿದೆ' ಎಂದು ತಿಳಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿದ್ದೇಶ್ವರ್‌ ಎಕ್ಸ್‌ಪ್ರೆಸ್‌ನಲ್ಲಿ ನಿದ್ದೆಗೆ ಜಾರಿದ ಚಿನ್ನದ ವ್ಯಾಪಾರಿಗೆ ಆಘಾತ: 5.53 ಕೋಟಿ ಮೊತ್ತದ ಚಿನ್ನ ಮಾಯ
ಭೂರೂಪ ಬದಲಾಯಿಸಿದ ಪ್ರವಾಹ.. ವಿಶ್ವದ ಅತಿದೊಡ್ಡ ನದಿ ಮಜುಲಿ ದ್ವೀಪ ಬಗ್ಗೆ ನಿಮಗೆ ಗೊತ್ತೇ?