ಅಂಬಾನಿಗೆ ಸವಾಲೆಸಯಲು ಬರ್ತಿದೆ ಆಫ್ರಿಕನ್ ಕಂಪನಿ; ಮಹಾ ಕಾಳಗಕ್ಕೆ ಸಾಕ್ಷಿಯಾಗಲಿದೆ ಭಾರತದ ಮಾರುಕಟ್ಟೆ

By Mahmad RafikFirst Published Sep 7, 2024, 7:03 PM IST
Highlights

ಆಫ್ರಿಕಾದ ಅತಿದೊಡ್ಡ ವಿಮಾ ಕಂಪನಿಯಾದ ಸನಲಂ ಲಿಮಿಟೆಡ್, ಭಾರತದ ಉದಯೋನ್ಮುಖ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಸಜ್ಜಾಗಿದೆ. ಶ್ರೀರಾಮ್ ಕ್ಯಾಪಿಟಲ್ ಗ್ರೂಪ್ ಜೊತೆ ಜಂಟಿ ಉದ್ಯಮ ಸ್ಥಾಪಿಸಲು ಚರ್ಚೆ ನಡೆಸುತ್ತಿದ್ದು, ಭಾರತೀಯ ವಿಮಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ.

ನವದೆಹಲಿ: ಭಾರತದ ಅರ್ಥವ್ಯವಸ್ಥೆ ರಾಕೆಟ್ ವೇಗದಲ್ಲಿ ಬೆಳವಣಿಗೆಯಾಗುತ್ತಿರುವ ಕಾರಣ ವಿದೇಶಿ ಕಂಪನಿಗಳು ಹಿಂದೂಸ್ತಾನದತ್ತ ಮುಖ ಮಾಡುತ್ತಿವೆ. ಭಾರತದ ಮಾರುಕಟ್ಟೆಯಲ್ಲಿ ಹರಿಯುತ್ತಿರುವ ಹಣದ ಹೊಳೆಯಲ್ಲಿ ಬೊಕ್ಕಸ ತುಂಬಿಸಿಕೊಳ್ಳಲು ಪ್ರಯತ್ನಿಸುತ್ತಿವೆ. ಆಫ್ರಿಕಾದ  ಅತಿದೊಡ್ಡ ವಿಮಾ ಕಂಪನಿಯಾಗಿರುವ ಸನಲಂ ಲಿಮಿಟೆಡ್ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ. ಈಗಾಗಲೇ ಭಾರತದಲ್ಲಿರುವ ವಿಮಾ ಕಂಪನಿಗಳಿಗೆ ಸನಲಂ ಲಿಮಿಟೆಡ್‌ (sanlam limited ) ಠಕ್ಕರ್ ನೀಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಭಾರತದ ಉದಯೋನ್ಮುಖ ಆಸ್ತಿ ಮತ್ತು ಸಂಪತ್ತು ನಿರ್ವಹಣಾ ಉದ್ಯಮವನ್ನು ಪ್ರವೇಶಿಸಿ ಚಾಲ್ತಿಯಲ್ಲಿರುವ ವಿಮಾ ಸಂಸ್ಥೆಗಳ ಜೊತೆ ಸ್ಪರ್ಧೆಗಿಳಿಯಲು ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದೆ. ಹಾಗಾಗಿ ಶ್ರೀರಾಮ್ ಕ್ಯಾಪಿಟಲ್ ಗ್ರೂಪ್ ಜೊತೆ ಒಪ್ಪಂದ ಮಾಡಿಕೊಳ್ಳುವ ಕುರಿತು ಸನಲಂ ಲಿಮಿಟೆಡ್ ಚರ್ಚೆ ನಡಸುತ್ತಿದೆ. 

ಎರಡೂ ಕಂಪನಿಗಳು ಜೊತೆಯಾಗಿ ಜಾಯಿಂಟ್ ವೆಂಚರ್ ನಿರ್ಮಾಣಕ್ಕೆ ಮುಂದಾಗಿದ್ದು, ಜೊತೆಯಾಗಿ ವೆಲ್ತ್ ಆಂಡ್ ಅಡ್ವೈಸ್ ಸರ್ವಿಸ್ ನೀಡಲಿದೆ.   ಈಗಾಗಲೇ ಈ ಕಂಪನಿ ಕ್ರೆಡಿಟ್ ಮತ್ತು ಇನ್ಸುಯರೆನ್ಸ್ ಸೆಕ್ಟರ್‌ನಲ್ಲಿದ್ದು, ಆರಂಭಿಕ ಹೂಡಿಕೆಯ ಮೊತ್ತವನ್ನು ದ್ವಿಗುಣಗೊಳಿಸಲು ಮುಂದಾಗಿದೆ ಎಂದು ಬ್ಲೂಮ್‌ಬರ್ಗ ವರದಿ ಮಾಡಿದೆ. 

Latest Videos

ಸನಲಂ ಲಿಮಿಟೆಡ್ ಸಿಇಓ ಪೌಲ್ ಹ್ಯಾನ್‌ರಾತಿ ಅತ್ಯಂತ ಪರಿಣಾಮಕಾರಿಯಾಗಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸುವ ಕುರಿತು ಮಾತನಾಡಿದ್ದಾರೆ. ಭಾರತದ ಜನರು ದೊಡ್ಡ ಸಂಖ್ಯೆಯಲ್ಲಿ ಬಡತನದಿಂದ ಹೊರಗೆ ಬರುತ್ತಿದ್ದಾರೆ. ಈ ಜನರು ಭವಿಷ್ಯದ ಯೋಜನೆಗಳ ಕುರಿತು ಕೇಂದ್ರಿಕೃತವಾಗುತ್ತಿದ್ದಾರೆ. ಭಾರತದ ಜನರು ದೊಡ್ಡಮಟ್ಟದಲ್ಲಿ ಭವಿಷ್ಯಕ್ಕಾಗಿ ಹಣ ಉಳಿಸುವ ಪಾಯಿಂಟ್‌ನಲ್ಲಿದೆ. ಸುರಕ್ಷಿತ ಮತ್ತ ಭದ್ರತೆಯನ್ನು ಹೊಂದಿರುವ ಶೇರು ಮಾರುಕಟ್ಟೆ/ಯೋಜನೆ/ಮಾರುಕಟ್ಟೆ/ಬ್ಯಾಂಕ್‌/ವಿಮೆಗಳಲ್ಲಿ ಹಣ ಹೂಡಿಕೆ ಅಥವಾ ಉಳಿತಾಯದ ಬಿಂದುವಿನಲ್ಲಿ ಭಾರತದ ಮಾರುಕಟ್ಟೆಯಿದೆ ಎಂದು ಹೇಳಿದ್ದಾರೆ.

ಐಎಂಎಫ್ ಪ್ರಕಾರ, ಈ ವರ್ಷದ ಭಾರತದ ಆರ್ಥಿಕ ವ್ಯವಸ್ಥೆ ಶೇ.6.8ರಷ್ಟು ಏರಿಕೆಯಾಗಲಿದೆ ಎಂದು ಹೇಳಿದೆ. ಆದರೆ ದಕ್ಷಿಣ ಆಫ್ರಿಕಾದ ಬೆಳವಣಿಗೆ ದರ ಕೇವಲ ಶೇ.0.9ರಷ್ಟಿದೆ. ಬೋಸ್ಟನ್ ಕನಸ್ಟಲಿಂಗ್ ಪ್ರಕಾರ, ಭಾರತ 2028ರೊಳಗೆ 730 ಶತಕೋಟಿ ಡಾಲರ್ ಸಂಪತ್ತು ಗಳಿಸಲಿದೆ ಎಂದು ಅಂದಾಜಿಸಿದೆ. ಇದೇ ಕಾರಣಕ್ಕಾಗಿ HSBC ಹೋಲ್ಡಿಂಗ್ಸ್ ಮತ್ತು ಬಾರ್ಕ್‌ಲೇಜ್‌ನಂತಹ ಕಂಪನಿಗಳು ಭಾರತದಲ್ಲಿ ತಮ್ಮ ಉದ್ಯಮವನ್ನು ವಿಸ್ತರಿಸುತ್ತಿವೆ ಎಂದು ಪೌಲ್ ಹ್ಯಾನ್‌ರಾತಿ ಮಾರುಕಟ್ಟೆಯಲ್ಲಾಗುತ್ತಿರುವ ಬೆಳವಣಿಗೆಗಳ ಬಗ್ಗೆ ವಿವರಿಸಿದರು.

ದಿಢೀರ್ ಬದಲಾಯ್ತು ಅನಿಲ್ ಅಂಬಾನಿ ಅದೃಷ್ಟ, ಮಗನಿಗೆ ಸಿಕ್ತು ಸಕ್ಸಸ್‌ ಕೀ, ಹಣದ ಸುರಿಮಳೆ ಫಿಕ್ಸ್!

ಭಾರತದ ಅತಿದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐ ಸಾಲಗಾರರನ್ನು ಓಲೈಸಲು 2,000 ಶಾಖೆಗಳನ್ನು ಆರಂಭಿಸುವ ನಿಟ್ಟಿನಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ 22,500 ಶಾಖೆಗಳನ್ನು ಹೊಂದಿರುವ ಎಸ್‌ಬಿಐ, ಏಪ್ರಿಲ್‌ನಲ್ಲಿ ವಿಶ್ವದ ಅತಿ ದೊಡ್ಡ ಫಂಡ್ ಮ್ಯಾನೇಜರ್ ಬ್ಲ್ಯಾಕ್‌ರಾಕ್ ಇಂಕ್, ಬಿಲಿಯನೇರ್ ಉದ್ಯಮಿ  ಮುಖೇಶ್ ಅಂಬಾನಿಯವರ ಜಿಯೋ ಫೈನಾನ್ಶಿಯಲ್ ಸರ್ವಿಸಸ್ ಲಿಮಿಟೆಡ್‌ನೊಂದಿಗೆ ಜಂಟಿ ಉದ್ಯಮವನ್ನು ರೂಪಿಸಲು ಒಪ್ಪಂದಕ್ಕೆ ಸಹಿ ಹಾಕಿತ್ತು. ಜಿಯೋ-ಎಸ್‌ಬಿಐ ಜಂಟಿಯಾಗಿ ವೆಲ್ತ್-ಮ್ಯಾನೇಜ್‌ಮೆಂಟ್ ಬ್ಯುಸಿನೆಸ್ ಆರಂಭಿಸೋದರ ಜೊತೆ ಬ್ರೋಕರೇಜ್ ಕಂಪನಿಯನ್ನು ಆರಂಭಿಸಲಿವೆ. ಪೌಲ್ ಹ್ಯಾನ್‌ರಾತಿ ಹೇಳುವ ಪ್ರಕಾರ, ಪ್ರಪಂಚದ ಎಲ್ಲಾ ಬೃಹತ್ ಉದ್ಯಮಗಳು ತಮ್ಮ ವ್ಯವಹಾರವನ್ನು ಭಾರತದಲ್ಲಿ ಸ್ಥಾಪಿಸಲು ಮುಂದಾಗುತ್ತಿವೆ.

ಸದ್ಯ ಭಾರತದಲ್ಲಿ ತಮ್ಮ ಉದ್ಯಮ ಆರಂಭಿಸಲು ಭಾರತದ ಮಾರುಕಟ್ಟೆ ಸೂಕ್ತವಾಗಿದೆ. ನಮ್ಮ ಪ್ರೊಡಕ್ಟ್ ಡಿಸ್ಟ್ರಿಬ್ಯೂಷನ್‌ಗೆ ಬಹು ವಿಶಾಲವಾದ ಮಾರುಕಟ್ಟೆಯನ್ನು ಹೊಂದಿದ್ದೇವೆ. ಈಗ ನಾವು ನಮ್ಮ ವ್ಯವಹಾರವನ್ನು ಸರಿಯಾದ ಮಾರ್ಗದಲ್ಲಿ ಮುಂದುವರಿಸಬೇಕಿದೆ. ಹಂತ ಹಂತವಾಗಿ ಭಾರತದ ಎಲ್ಲಾ ಪ್ರದೇಶಗಳಲ್ಲಿ ಶಾಖೆ ಆರಂಭಿಸೋದು ಮತ್ತು ಗ್ರಾಹಕರ ವಿಶ್ವಾಸಗಳಿಸೋದು ನಮ್ಮ ಮುಂದಿರುವ ಸವಾಲು. ಜೂನ್ 30 ಅಂತ್ಯಕ್ಕೆ ಅಂದರೆ ಆರು  ತಿಂಗಳಲ್ಲಿಯೇ ಭಾರತದ ಮಾರುಕಟ್ಟೆಯಿಂದ ಶೇ.16ರಷ್ಟು ಲಾಭವನ್ನು ಗಳಿಸಿದೆ. 2021ರಲ್ಲಿ ಲಾಭದ ಪ್ರಮಾಣ ಶೇ.10ರಷ್ಟಿತ್ತು. ಒಂದು ವರ್ಷದಲ್ಲಿ ಕಂಪನಿಯ ಲಾಭದ ಪ್ರಮಾಣ ಶೇ.43ರಷ್ಟು ಏರಿಕೆಯಾಗಿದೆ. ಈ ಬೆಳವಣಿಗೆ ದೇಶದ ಅಗ್ರಜ ಉದ್ಯಮಿಯಾಗಿರುವ ಮುಕೇಶ್ ಅಂಬಾನಿ ಮೇಲೆ ದೊಡ್ಡ ಹೊಡೆತ ಬೀರುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗುತ್ತಿದೆ.

ಸರ್ಕಾರದಿಂದ BSNLಗೆ ₹6 ಸಾವಿರ ಕೋಟಿ, ಇನ್ಮುಂದೆ 365 ದಿನ ವ್ಯಾಲಿಡಿಟಿಗೆ ಕೇವಲ ಇಷ್ಟೇ ಕೊಡೋದು!

click me!