ದೇಶದೆಲ್ಲೆಡೆ ಗಣೇಶ ಹಬ್ಬ ಆಚರಿಸಲಾಗುತ್ತಿದೆ. ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡಿದೆ. ಇದರ ನಡುವೆ ಹಬ್ಬದ ಆಚರಣೆ ನಡುವೆ ಕೆಲ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮದ್ಯ ನಿಷೇಧಕ್ಕೆ ಆದೇಶ ನೀಡಿದ್ದಾರೆ. ಯಾವ ಯಾವ ರಾಜ್ಯದ ಜಿಲ್ಲೆಗಳಲ್ಲಿ ಗಣೇಶ ಹಬ್ಬಕ್ಕೆ ಮದ್ಯ ನಿಷೇಧಿಸಲಾಗಿದೆ?
ನವದೆಹಲಿ(ಸೆ.07) ಗಣೇಶ ಹಬ್ಬದ ಆಚರಣೆ ವಿಜ್ರಂಭಣೆಯಿಂದ ನಡೆಯುತ್ತಿದೆ. ಗಣೇಶನ ಕೂರಿಸಿ ಪೂಜೆಗಳು, ಹಲವು ಕಾರ್ಯಕ್ರಮಗಳು ಆಯೋಜನೆಗೊಂಡಿದೆ. ದೇಶದ ಬಹುತೇಕ ಕಡೆಗಳಲ್ಲಿ ಗಣೇಶ ಹಬ್ಬ ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿದೆ. ಗಣೇಶ ಹಬ್ಬದ ಆಚರಣೆಯಿಂದ ಕೆಲ ಜಿಲ್ಲೆಗಳಲ್ಲಿ ಮದ್ಯ ನಿಷೇಧಕ್ಕೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಈ ಪೈಕಿ ಪುಣೆಯಲ್ಲಿ ಬರೋಬ್ಬರಿ 10 ದಿನ ಮದ್ಯ ನಿಷೇಧಕ್ಕೆ ಆದೇಶ ನೀಡಲಾಗಿದೆ. ಗಣೇಶ ಹಬ್ಬದಿಂದ ವಿಸರ್ಜನೆವರೆಗೂ ಮದ್ಯ ನಿಷೇಧ ಮಾಡಲಾಗಿದೆ.
ಸೆಪ್ಟೆಂಬರ್ 7 ರಿಂದ ಸೆಪ್ಟೆಂಬರ್ 17ರ ವರೆಗೆ 10 ದಿನಗಳ ವರೆಗೆ ಪುಣೆಯಲ್ಲಿ ಮದ್ಯ ನಿಷೇಧಿಸಲಾಗಿದೆ. ಪುಣೆಯ ಫರ್ಸಖನ, ವಿಶ್ರಾಮಬಾಗ್ ಹಾಗೂ ಖದಾಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 10 ದಿನಗಳ ಕಾಲ ಮದ್ಯ ನಿಷೇಧಿಸಲು ಆದೇಶ ಹೊರಡಿಸಲಾಗಿದೆ. ಈ ಭಾಗದಲ್ಲಿ ಮಧ್ಯ ನಿಷೇಧಿಸುವಂತೆ ಸ್ಥಳೀಯರು, ಗಣೇಶ ಹಬ್ಬ ಆಯೋಜನೆಗ ಸಂಘಟನೆಗಳು ಮನವಿ ಮಾಡಿಕೊಂಡಿತ್ತು.
ಈ ಬಾರಿಯ ಗಣೇಶ ಚತುರ್ಥಿ ದಿನ ಗಣಪತಿ ಕೃಪೆಗೆ ಪಾತ್ರರಾಗಲು ಇಲ್ಲಿದೆ 7 ಸುಲಭ ಮಾರ್ಗ!
ಇದೇ ವೇಳೆ ಪುಣೆಯ ಯಾವುದೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಮದ್ಯದ ಅಂಗಡಿ ಮುಚ್ಚಬೇಕಾದಲ್ಲಿ ಬಾಂಬೆ ಪ್ರೊಹಿಬಿಷನ್ ಆ್ಯಕ್ಟ್ 124 (2)ಅಡಿಯಲ್ಲಿ ಅವಕಾಶವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ. 10 ದಿನಗಳ ಕಾಲ ಮದ್ಯದಂಗಡಿಗೆ ನಿರ್ಬಂಧ ವಿಧಿಲುವುದರಿಂದ ಹಲವು ಸಮಸ್ಯೆಗಳು ಎದುರಾಗಲಿದೆ. ಪ್ರಮುಖವಾಗಿ ಸರ್ಕಾರದ ಆದಾಯಕ್ಕೆ ತೀವ್ರ ಹೊಡೆತ ಬೀಳಲಿದೆ. ಆದರೆ ಸುರಕ್ಷತೆಗೆ ಪ್ರಮುಖ ಆದ್ಯತೆ ನೀಡಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ಸೆಪ್ಟೆಂಬರ್ 5ರಿಂದಲೇ ಹಬ್ಬ ಆರಂಭಗೊಂಡಿದೆ. 7ರಂದು ಗಣೇಶ ಹಬ್ಬ, ಬಳಿಕ ಅದೇ ದಿನ ವಿಸರ್ಜನೆ. ಕೆಲ ಗಣೇಶ ಮೂರ್ತಿಗಳನ್ನು ಸೆಂಪ್ಟೆಂಬರ್ 8 ರಿಂದ ವಿಸರ್ಜನೆ ಮಾಡಲಾಗುತ್ತದೆ. ಗಣೇಶ ವಿಸರ್ಜನೆ ಕೊನೆಯ ದಿನಾಂಕ ಸೆಪ್ಟೆಂಬರ್ 17. ಹೀಗಾಗಿ ವಿಸರ್ಜನೆ ವೇಳೆ ಮೆರಣಿಗೆ ಸಾಗಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಲಿದ್ದಾರೆ. ಹೀಗಾಗಿ ಅವಘಡಗಳು, ಆತಂಕ ದೂರ ಮಾಡಲು ಮದ್ಯ ನಿಷೇಧಕ್ಕೆ ಪುಣೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ಸದ್ಯ ಪುಣೆಯ ಕೆಲ ಭಾಗದ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಮದ್ಯ ನಿಷೇಧಿಸಲಾಗಿದೆ. ಮುಂಬೈ ಸೇರಿದಂತೆ ಮಹಾರಾಷ್ಟ್ರದಲ್ಲಿ ಮದ್ಯ ನಿಷೇಧ ವರದಿಯಾಗಿಲ್ಲ. ಇಷ್ಟೇ ಅಲ್ಲ ಇತರ ಯಾವುದೇ ರಾಜ್ಯ ಹಾಗೂ ಜಿಲ್ಲೆಗಳಲ್ಲಿ ಮದ್ಯ ನಿಷೇಧ ಕುರಿತು ವರದಿಯಾಗಿಲ್ಲ. ಇನ್ನು ಕರ್ನಾಟಕದ ಯಾವುದೇ ಜಿಲ್ಲೆಯಲ್ಲೂ ಮದ್ಯ ನಿಷೇಧ ಮಾಡಿಲ್ಲ.