ಹತ್ರಾಸ್ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ಭೀಮ ಸೇನೆ ಮುಖ್ಯಸ್ಥನ ಮೇಲೆ FIR

By Suvarna NewsFirst Published Oct 5, 2020, 3:38 PM IST
Highlights

ಹತ್ರಾಸ್ ಅತ್ಯಾಚಾರ ಪ್ರಕರಣ/ ಸಂತ್ರಸ್ತೆ ಮನೆಗೆ ಭೇಟಿ ನೀಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್  ಮೇಲೆ  ಎಫ್ ಐಆರ್/  ಇಡೀ  ದೇಶದಲ್ಲಿ ಅತ್ಯಾಚಾರದ ವಿರುದ್ಧ ಪ್ರತಿಭಟನೆ

ಲಕ್ನೋ(ಅ. 05)  ಹತ್ರಾಸ್  ಅತ್ಯಾಚಾರ ಸಂತ್ರಸ್ತೆ ಮನೆಗೆ ಭೇಟಿ ನೀಡಿದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್  ಮೇಲೆ ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ.

ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಉಪಾಧ್ಯಕ್ಷ ಜಯಂತ್ ಚೌಧರಿ ವಿರುದ್ಧವೂ ಸೆಕ್ಷನ್ 188 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.  ಸಂತ್ರಸ್ತೆ ಮನೆ ಸಮೀಪ ಅಳವಡಿಕೆ ಮಾಡಿದ್ದ ಬ್ಯಾರಿಕೇಡ್ ಮುರಿದು ಒಳಕ್ಕೆ ನುಗ್ಗಲು ಯತ್ನಿಸಿದ ಆರ್‌ಎಲ್‌ಡಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠೀ ಚಾರ್ಜ್ ಸಹ ಮಾಡಿದ್ದರು. ಆರ್‌ಎಲ್‌ಡಿ ಮತ್ತು ಭೀಮ್ ಸೇನೆಯ ಸುಮಾರು 400  ಕಾರ್ಯಕರ್ತರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ರೇಪ್ ಗಳಿಗೆ ಪೋಷಕರೆ ನೇರ ಹೊಣೆ;  ವಿವಾದ ಕಿಡಿ ಹೊತ್ತಿಸಿದ ಬಿಜೆಪಿ ಮುಖಂಡನ ಹೇಳಿಕೆ

ಪೊಲೀಸರು ಲಾಠಿ ಚಾರ್ಜ್ ಗೆ ಮುಂದಾಗಿದ್ದಾಗ ಚೌಧರಿ ಅವರನ್ನು ಕಾರ್ಯಕರ್ತರು ರಕ್ಷಣೆ ಮಾಡಿದ್ದರು.  ಸಂತ್ರಸ್ತೆ ಮನೆಗೆ ಭೇಟಿ ನೀಡಲು ಯತ್ನ ಮಾಡಿ ನೊಂದ ಕುಟುಂಬಕ್ಕೆ ನ್ಯಾಯ ನೀಡಬೇಕು ಎಂದು ಒತ್ತಾಯ ಮಾಡಿದ್ದರು.

ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದ ನಂತರ ಆಜಾದ್ ಅವರು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಿಂದ  ಪ್ರಕರಣ ತನಿಖೆಯಾಗಬೇಕು. ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದು ಒತ್ತಾಯ ಮಾಡಿದ್ದರು.

 

click me!