Latest Videos

ಜಿರಳೆಗಳ ಮೂಲ ಆಗ್ನೇಯ ಏಷ್ಯಾವಂತೆ: ಅಧ್ಯಯನ

By Kannadaprabha NewsFirst Published May 22, 2024, 9:22 AM IST
Highlights

ಮಾನವರಿಗೆ ಅತಿಹೆಚ್ಚು ಕಾಟ ಕೊಡುವ ಮಾರಣಾಂತಿಕ ಕೀಟಗಳಲ್ಲಿ ಒಂದಾಗಿರುವ ಜಿರಳೆಗಳ ಮೂಲ ಆಗ್ನೇಯ ಏಷ್ಯಾ ಎಂಬುದಾಗಿ ಸಂಶೋಧನಾ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ.

ಡಲ್ಲಾಸ್‌: ಮಾನವರಿಗೆ ಅತಿಹೆಚ್ಚು ಕಾಟ ಕೊಡುವ ಮಾರಣಾಂತಿಕ ಕೀಟಗಳಲ್ಲಿ ಒಂದಾಗಿರುವ ಜಿರಳೆಗಳ ಮೂಲ ಆಗ್ನೇಯ ಏಷ್ಯಾ ಎಂಬುದಾಗಿ ಸಂಶೋಧನಾ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ಜಿರಳೆಗಳ ಉಗಮ ಮತ್ತ ಹರಡುವಿಕೆಯ ಕುರಿತು ನ್ಯಾಷನಲ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಜರ್ನಲ್‌ನಲ್ಲಿ ಸಂಶೋಧನಾ ವರದಿಯೊಂದನ್ನು ಪ್ರಕಟಿಸಲಾಗಿದೆ. ಅದರಲ್ಲಿ ಜರ್ಮನ್‌ ಕಾಕ್‌ರೋಚ್‌ಗಳೂ ಸೇರಿದಂತೆ ಆರು ಖಂಡಗಳ 17 ದೇಶಗಳಲ್ಲಿರುವ 280 ಜಿರಳೆ ತಳಿಗಳನ್ನು ಅಧ್ಯಯನ ಮಾಡಲಾಗಿದೆ. ಇದರಲ್ಲಿ ಮೂಲ ತಳಿಗಳು ಆಗ್ನೇಯ ಏಷ್ಯಾಕ್ಕೆ ಸೇರಿದ್ದು, ಎಲ್ಲ ಜಿರಳೆ ತಳಿಗಳೂ ಆಗ್ನೇಯ ಏಷ್ಯಾದಲ್ಲಿರುವ ಜಿರಳೆಗಳ ತಳಿಗೇ ಸಾಮ್ಯತೆ ಹೊಂದಿವೆ ಎಂಬುದು ತಿಳಿದುಬಂದಿದೆ.

ಪ್ರಪಂಚಕ್ಕೆ ಹರಡಿದ್ದು ಹೇಗೆ?:

ಮಾನವರ ಎಲ್ಲ ಡಿಎನ್‌ಎಗಳು ಆ್ಯಡಂ ಎಂಬ ವ್ಯಕ್ತಿಯ ಡಿಎನ್‌ಎಗೆ ಸಾಮ್ಯತೆ ಹೊಂದಿರುವಂತೆ ಜಿರಳೆಗಳ ಉಗಮವೂ ಒಂದೇ ಸ್ಥಳದಲ್ಲಿ ಆಗಿದೆ ಎಂಬುದೇನೋ ಖಚಿತವಾಗಿದೆ. ಆದರೆ 2,100 ವರ್ಷಗಳ ಮುಂಚೆ ಏಷ್ಯಾದಲ್ಲಿ ಉಗಮವಾದ ಜಿರಳೆ ತಳಿ ಪ್ರಪಂಚದಾದ್ಯಂತ ಹೇಗೆ ಹರಡಿತು ಎಂಬುದನ್ನು ಸಂಶೋಧಕರು ಅಧ್ಯಯನ ನಡೆಸಿದ್ದಾರೆ. ಅದರಂತೆ ಮಧ್ಯಪ್ರಾಚ್ಯದ ವರ್ತಕರ ಆಹಾರ ಬ್ಯಾಸ್ಕೆಟ್‌ಗಳಲ್ಲಿ ಒಳ ನುಸುಳಿ ಏಷ್ಯನ್‌ ಕಾಕ್‌ರೋಚ್‌ಗಳು 1,200 ವರ್ಷಗಳ ಹಿಂದೆಯೇ ವಿದೇಶಗಳಿಗೆ ಹೋಗಿರಬಹುದು ಎಂದು ತರ್ಕಿಸಲಾಗಿದೆ.

ಮನೆಯಲ್ಲಿ ಜಿರಳೆ ಕಾಟನಾ, ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

ಜೊತೆಗೆ ಯೂರೋಪ್‌ನ ಡಚ್ಚರು, ಬ್ರಿಟಿಷರು ಭಾರತ ಮತ್ತು ಚೀನಾದಂತಹ ಎಷ್ಯನ್‌ ರಾಷ್ಟ್ರಗಳ ಜೊತೆ ವ್ಯಾಪಾರ ಪ್ರಾರಂಭಿಸಿದ ಬಳಿಕ 270 ವರ್ಷಗಳ ಹಿಂದೆಯೇ ಅವರ ಹಡಗಿನ ಮೂಲಕ ಯೂರೋಪ್‌ ತಲುಪಿರಬಹುದು ಎಂದು ಅಧ್ಯಯನದಲ್ಲಿ ತಿಳಿಸಲಾಗಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ಸ್ಟೀಮ್‌ ಎಂಜಿನ್‌ ಮತ್ತು ಒಳಾಂಗಣದಲ್ಲಿ ನಲ್ಲಿ ಸಂಪರ್ಕಗಳು ಆವಿಷ್ಕಾರವಾದ ಬಳಿಕ ಜಿರಳೆಗಳು ಅವುಗಳನ್ನು ತಮ್ಮ ಆವಾಸ ಸ್ಥಾನವನ್ನಾಗಿ ಮಾಡಿಕೊಂಡಿವೆ ಎಂದು ಸಂಶೋಧಕರು ಉಲ್ಲೇಖಿಸಿದ್ದಾರೆ.

ವ್ಯಕ್ತಿಯ ಶ್ವಾಸಕೋಶದಲ್ಲಿದ್ದ 4 ಸೆಂ.ಮೀ. ಉದ್ದ ಜಿರಳೆ ಹೊರತೆಗೆದ ಕೇರಳದ ವೈದ್ಯರು

click me!