Exit Polls: ಮಹಾಯುತಿಗೆ ಮಹಾರಾಷ್ಟ್ರ, ಬಿಜೆಪಿಗೆ ಜಾರ್ಖಂಡ್‌ ಎಂದ ಚುನಾವಣೋತ್ತರ ಸಮೀಕ್ಷೆ

By Santosh Naik  |  First Published Nov 20, 2024, 7:12 PM IST

Exit Poll Results 2024: ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳ ಫಲಿತಾಂಶಗಳನ್ನು ಚುನಾವಣಾ ಆಯೋಗ ನ.23 ರಂದು ಪ್ರಕಟ ಮಾಡಲಿದೆ.


ನವದೆಹಲಿ (ನ.20): ಮಹಾರಾಷ್ಟ್ರ ಮತ್ತು ಜಾರ್ಖಂಡ್‌ನಲ್ಲಿ ಮಹಾ ಪೈಪೋಟಿಯ ಪ್ರಚಾರಗಳು ಮತ್ತು ಚುನಾವಣೆಗಳ ನಂತರ, ಈಗ ಎಕ್ಸಿಟ್‌ ಪೋಲ್‌ಗಳು ಈ ರಾಜ್ಯಗಳ ಬಗ್ಗೆ ನುಡಿದಿರುವ ಭವಿಷ್ಯಗಳು ಪ್ರಕಟವಾಗುತ್ತಿವೆ. ಮ್ಯಾಟ್ರೀಜ್‌ ಹಾಗೂ ಪೀಪಲ್ಸ್‌ ಪಲ್ಸ್‌ನ ಎಕ್ಸಿಟ್‌ಪೋಲ್‌ಗಳು ಹೊರಬಂದಿದ್ದು, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟದ ಗೆಲುವವನ್ನು ಭವಿಷ್ಯ ನುಡಿದಿದೆ. ಈ ಎರಡೂ ರಾಜ್ಯಗಳೊಂದಿಗೆ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನಡೆದ ಲೋಕಸಭೆ ಹಾಗೂ ವಿಧಾನಸಭೆಯ ಉಪಚುನಾವಣೆಗಳ ಫಲಿತಾಂಶವನ್ನು ಚುನಾವಣಾ ಆಯೋಗ ನವೆಂಬರ್‌ 23 ರಂದು ಪ್ರಕಟಿಸಲಿದೆ.

ಎಚ್ಚರಿಕೆ: ಎಕ್ಸಿಟ್ ಪೋಲ್‌ಗಳು ಯಾವಾಗಲೂ ನಿಖರವಾಗಿರುವುದಿಲ್ಲ.

Latest Videos

undefined

ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದೇ ಹಂತದ ಮತದಾನವು ಬೆಳಗ್ಗೆ 7 ಗಂಟೆಗೆ ಆರಂಭವಾಗಿ ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಆಡಳಿತಾರೂಢ ಮಹಾಯುತಿ ಮೈತ್ರಿಕೂಟ - ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ (ಅಜಿತ್ ಪವಾರ್ ಬಣ) ಮತ್ತು ವಿರೋಧ ಪಕ್ಷವಾದ ಮಹಾ ವಿಕಾಸ್ ಅಘಾಡಿ (ಎಂವಿಎ) - ಕಾಂಗ್ರೆಸ್, ಶಿವಸೇನೆ (ಯುಬಿಟಿ) ಮತ್ತು ಎನ್‌ಸಿಪಿ (ಶರದ್ ಪವಾರ್ ಬಣ) ನಡುವೆ ಸ್ಪರ್ಧೆ ಇದೆ. 2019 ರ ಚುನಾವಣೆಯಲ್ಲಿ, ಬಿಜೆಪಿ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು (105) ಗೆದ್ದುಕೊಂಡಿತು, ನಂತರದ ಸ್ಥಾನದಲ್ಲಿ ಶಿವಸೇನೆ (56) ಮತ್ತು ಕಾಂಗ್ರೆಸ್ (44) ಪಕ್ಷಗಳು ಇದ್ದವು. ಇಲ್ಲಿ 145 ಮ್ಯಾಜಿಕ್‌ ನಂಬರ್‌ ಆಗಿದೆ.

ರಾಧಿಕಾ ಕರಿಯ ಅಂದ್ರೆ ಖುಷಿ, ಜಮೀರ್‌ ಹೇಳಿದ್ರೆ ಟೀಕೆ ಯಾಕೆ ಎಂದ ತೇಜಸ್ವಿನಿ ಗೌಡ

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಎರಡನೇ ಮತ್ತು ಅಂತಿಮ ಹಂತದಲ್ಲಿ ಮತದಾನ ಕೂಡ ಮುಕ್ತಾಯವಾಗಿದೆ. ಮೊದಲ ಹಂತವು ನವೆಂಬರ್ 13 ರಂದು ನಡೆದಿತ್ತು. ರಾಜ್ಯದಲ್ಲಿ ಪ್ರಾಥಮಿಕ ಸ್ಪರ್ಧೆಯು ಆಡಳಿತಾರೂಢ ಜೆಎಂಎಂ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ನಡುವೆ ಇದೆ. ಜಾರ್ಖಂಡ್‌ನಲ್ಲಿ 41 ಮ್ಯಾಜಿಕ್‌ ನಂಬರ್‌ ಆಗಿದೆ.

ಸೆಪ್ಟಂಬರ್‌ ತ್ರೈಮಾಸಿಕದಲ್ಲಿ ಭಾರತದ 143 ಕಂಪನಿಗಳಿಗೆ ಒಟ್ಟಾರೆ 20 ಸಾವಿರ ಕೋಟಿ ನಷ್ಟ!

ಮಹಾರಾಷ್ಟ್ರ ಎಕ್ಸಿಟ್‌ ಪೋಲ್‌ಗಳ ವಿವರ..

ಮೂಲ ಎನ್‌ಡಿಎ ಎಂವಿಎ ಇತರೇ
ಮಾರ್ಟಿಜ್‌ 150-170 110-130 8-10
ಪಿ-ಮಾರ್ಕ್‌ 137-157 126-146 2-8
ಪೀಪಲ್ಸ್‌ ಪಲ್ಸ್‌ 175-195, 85-112 7-12
ಲೋಕಶಾನಿ ಮರಾಠಿ-ರುದ್ರ 128-142 125-140 18-23
ಚಾಣಕ್ಯ  152-160 130-138 6-8
ದೈನಿಕ್‌ ಭಾಸ್ಕರ್‌ 152-160 130-138 6-8
ಪೋಲ್‌ ಆಫ್‌ ಪೋಲ್ಸ್‌ 153 126 9

ಮೂಲ: ಪ್ರಾದೇಶಿಕ ಮತ್ತು ರಾಷ್ಟ್ರೀಯ ಚಾನೆಲ್‌ಗಳು | ಎಚ್ಚರಿಕೆ: ಎಕ್ಸಿಟ್ ಪೋಲ್‌ಗಳು ಯಾವಾಗಲೂ ನಿಖರವಾಗಿರುವುದಿಲ್ಲ

ಜಾರ್ಖಂಡ್‌ ಎಕ್ಸಿಟ್‌ ಪೋಲ್‌ ವಿವರ

ಮೂಲ ಎನ್‌ಡಿಎ ಐಎನ್‌ಡಿಐಎ ಇತರೇ
ಮಾರ್ಟಿಜ್‌ 42-47 25-30 1-4
ಪೀಪಲ್ಸ್‌ ಪಲ್ಸ್‌ 44-53 25-37 5-9
ಪಿ-ಮಾರ್ಕ್‌ 31-40 37-47 1-6
ಆಕ್ಸಿಸ್‌ ಮೈ ಇಂಡಿಯಾ 25 53 3
ಟೈಮ್ಸ್‌ ನೌ-ಜೆವಿಸಿ 40-44 30-40 1-1
ದೈನಿಕ್‌ ಭಾಸ್ಕರ್‌ 37-40 36-39 0-2
ಪೋಲ್‌ ಆಫ್‌ ಪೋಲ್ಸ್‌ 39 38 4

ಮೂಲ: ಪ್ರಾದೇಶಿಕ ಮತ್ತು ರಾಷ್ಟ್ರೀಯ ಚಾನೆಲ್‌ಗಳು | ಎಚ್ಚರಿಕೆ: ಎಕ್ಸಿಟ್ ಪೋಲ್‌ಗಳು ಯಾವಾಗಲೂ ನಿಖರವಾಗಿರುವುದಿಲ್ಲ

click me!