ದೇಶಾದ್ಯಂತ ಸಂಚಲನ ಮೂಡಿಸಿರುವ ಡೀಪ್‌ಫೇಕ್‌ಗಳ ಹಾವಳಿ ತಡೆಯಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಠಿಣ ನಿಯಮಾವಳಿ ಜಾರಿಗೊಳಿಸಲು ಸಿದ್ಧವಾಗಿದೆ. ಅದರಡಿ ಡೀಪ್‌ಫೇಕ್‌ಗಳನ್ನು ಸೃಷ್ಟಿಸುವವರು ಹಾಗೂ ಅವುಗಳಿಗೆ ಜಾಗ ನೀಡುವ ಸಾಮಾಜಿಕ ಜಾಲತಾಣಗಳಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದೆ.
ನವದೆಹಲಿ: ದೇಶಾದ್ಯಂತ ಸಂಚಲನ ಮೂಡಿಸಿರುವ ಡೀಪ್‌ಫೇಕ್‌ಗಳ ಹಾವಳಿ ತಡೆಯಲು ಕೇಂದ್ರ ಸರ್ಕಾರ ಶೀಘ್ರದಲ್ಲೇ ಕಠಿಣ ನಿಯಮಾವಳಿ ಜಾರಿಗೊಳಿಸಲು ಸಿದ್ಧವಾಗಿದೆ. ಅದರಡಿ ಡೀಪ್‌ಫೇಕ್‌ಗಳನ್ನು ಸೃಷ್ಟಿಸುವವರು ಹಾಗೂ ಅವುಗಳಿಗೆ ಜಾಗ ನೀಡುವ ಸಾಮಾಜಿಕ ಜಾಲತಾಣಗಳಿಗೆ ಶಿಕ್ಷೆ ವಿಧಿಸಲು ನಿರ್ಧರಿಸಿದೆ. ಈ ಕುರಿತು ಸೋಷಿಯಲ್ ಮೀಡಿಯಾಗಳು ಹಾಗೂ ಕೃತಕ ಬುದ್ಧಿಮತ್ತೆಯ ಜೊತೆ ವ್ಯವಹರಿಸುವ ಕಂಪನಿಗಳ ಜೊತೆ ಗುರುವಾರ ಮಹತ್ವದ ಸಭೆ ನಡೆಸಿದ ಬಳಿಕ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ (Ashwin Vaishnav) ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಪ್‌ಫೇಕ್‌ಗಳು ಪ್ರಜಾಪ್ರಭುತ್ವಕ್ಕೆ ಹೊಸ ಅಪಾಯವಾಗಿ ಪರಿಣಮಿಸಿವೆ. ಅಂತಹ ಕಂಟೆಂಟ್‌ಗಳ ಹೊಣೆಗಾರಿಕೆ ಅವುಗಳನ್ನು ಸೃಷ್ಟಿಸುವವರು ಹಾಗೂ ಅವುಗಳಿಗೆ ಜಾಗ ನೀಡುವ ಸೋಷಿಯಲ್ ಮೀಡಿಯಾ ಇಬ್ಬರ ಮೇಲೂ ಇರುತ್ತದೆ. ಹೀಗಾಗಿ ಡೀಪ್‌ಫೇಕ್‌ಗಳ ಸೃಷ್ಟಿಕರ್ತರು ಮತ್ತು ಅವು ಪೋಸ್ಟ್ ಮಾಡಲ್ಪಡುವ ಸಾಮಾಜಿಕ ಜಾಲತಾಣಗಳಿಗೆ ದಂಡ ಹಾಗೂ ಶಿಕ್ಷೆ ವಿಧಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.
undefined
ಡೀಪ್‌ಫೇಕ್ ವಿರುದ್ಧ ಜಾಗತಿಕ ಸಮರ ಅಗತ್ಯ: ಮೋದಿ
ಡೀಪ್ ಫೇಕ್‌ಗಳನ್ನು ಹೇಗೆ ಪತ್ತೆಹಚ್ಚಬೇಕು, ಡೀಪ್‌ಫೇಕ್‌ಗಳನ್ನು ಜನರು ಪೋಸ್ಟ್ ಮಾಡುವುದನ್ನು ಹೇಗೆ ತಡೆಯಬೇಕು, ಅಂತಹ ಕಂಟೆಂಟ್‌ಗಳು ವೈರಲ್ ಆಗುವುದನ್ನು ಹೇಗೆ ತಪ್ಪಿಸಬೇಕು ಮತ್ತು ಅವುಗಳ ಬಗ್ಗೆ ಹೇಗೆ ದೂರು ನೀಡಬೇಕು ಎಂಬ ನಾಲ್ಕು ಪ್ರಮುಖ ಅಂಶಗಳ ಬಗ್ಗೆ ಚರ್ಚಿಸಲಾಗಿದೆ. ಡೀಪ್‌ಫೇಕ್‌ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಸೋಷಿಯಲ್ ಮೀಡಿಯಾಗಳು, ಸರ್ಕಾರ ಹಾಗೂ ಮಾಧ್ಯಮಗಳು ಏನು ಮಾಡಬಹುದು ಎಂಬ ಬಗ್ಗೆಯೂ ಚರ್ಚಿಸಲಾಗಿದೆ ಎಂದು ತಿಳಿಸಿದರು.
‘ಡೀಪ್‌ಫೇಕ್‌ಗಳನ್ನು ತಡೆಯಲು ಹೊಸ ನಿಯಂತ್ರಣ ಕ್ರಮಗಳ ಅಗತ್ಯವಿದೆ ಎಂದು ಚರ್ಚೆಯ ಬಳಿಕ ನಿರ್ಧರಿಸಲಾಗಿದೆ. ತಕ್ಷಣ ಈ ನಿಟ್ಟಿನಲ್ಲಿ ಕೆಲಸ ಆರಂಭಿಸಿ, ಕೆಲ ವಾರಗಳಲ್ಲಿ ನಿಯಮಾವಳಿ ಜಾರಿಗೊಳಿಸಲಾಗುವುದು. ಡಿಸೆಂಬರ್ ಮೊದಲ ವಾರ ಇನ್ನೊಂದು ಸಭೆ ನಡೆಸಲಾಗುವುದು. ಅಷ್ಟರೊಳಗೆ ಸೋಷಿಯಲ್ ಮೀಡಿಯಾಗಳು ಡೀಪ್‌ಫೇಕ್ ತಡೆಯಲು ತಾವೇ ಕ್ರಮ ಕೈಗೊಳ್ಳುವುದಾಗಿ ತಿಳಿಸಿವೆ. ಅವು ಏನು ಕ್ರಮ ಕೈಗೊಳ್ಳುತ್ತವೆ ಎಂಬುದನ್ನು ನೋಡಿ ಮುಂದಿನ ಹೆಜ್ಜೆ ಇರಿಸಲಾಗುವುದು’ ಎಂದೂ ಹೇಳಿದರು.
ಶುಭ್‌ಮನ್ ಗಿಲ್ ಜೊತೆ ಡೀಪ್‌ಫೇಕ್ ಫೋಟೋ, ಮೌನ ಮುರಿದ ಸಾರಾ ತೆಂಡುಲ್ಕರ್!
ಪಂಜಾಬ್ ರಾಜ್ಯಪಾಲರ ಬಗ್ಗೆ ಮತ್ತೆ ಸುಪ್ರೀಂ ಕಿಡಿ ನುಡಿ
ನವದೆಹಲಿ: ರಾಜ್ಯಪಾಲರು, ಸರ್ಕಾರವೊಂದರ ಚುನಾಯಿತರಲ್ಲದ ಮುಖ್ಯಸ್ಥ. ಹೀಗಿರುವಾಗ ಅವರು ಸಂವಿಧಾನದತ್ತ ಅಧಿಕಾರವನ್ನು ಶಾಸನ ಸಭೆಯ ಸಾಮಾನ್ಯ ನಡಾವಳಿಗೆ ಅಡ್ಡಿಪಡಿಸಲು ಬಳಸಬಾರದು ಎಂದು ಸುಪ್ರೀಂಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಂಜಾಬ್ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಆಮ್‌ಆದ್ಮಿ ಪಕ್ಷದ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಸಹಿ ಹಾಕದೇ ರಾಜ್ಯಪಾಲರು ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳಬಾರದು ಎಂದು ಹೇಳಿತ್ತು. ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನ ಅಭಿಪ್ರಾಯ ವಿಸ್ರೃತ ಮಾಹಿತಿ ಇದೀಗ ಹೊರಬಿದ್ದಿದೆ. ಅದರಲ್ಲಿ, ರಾಜ್ಯಪಾಲರು ಯಾವುದೇ ಮಸೂದೆಗೆ ಸಹಿ ಹಾಕಲಿಲ್ಲ ಎಂದಾದಲ್ಲಿ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುವಂತಿಲ್ಲ. ಅದನ್ನು ಮುಂದಿನ ಕ್ರಮಕ್ಕಾಗಿ ಮರಳಿ ವಿಧಾನಸಭೆಗೆ ಕಳುಹಿಸಿಕೊಡಬೇಕು ಎಂದು ಸ್ಪಷ್ಟಪಡಿಸಿದೆ.
ಜೊತೆಗೆ, ರಾಜ್ಯಪಾಲರು, ರಾಜ್ಯವೊಂದರ ಚುನಾಯಿತವಾಗಿರದ ಮುಖ್ಯಸ್ಥರು. ಹೀಗಾಗಿ ಅವರು ತಮ್ಮ ಸಾಂವಿಧಾನಿಕ ಅಧಿಕಾರವನ್ನು ಶಾಸನ ರಚಿಸುವ ರಾಜ್ಯದ ಸಾಮಾನ್ಯ ನಡಾವಳಿಗೆ ಅಡ್ಡಿಪಡಿಸಲು ಬಳಸಬಾರದು. ಇಂಥ ಯಾವುದೇ ಪ್ರಯತ್ನ ಸಂಸದೀಯ ಮಾದರಿಯ ಆಡಳಿತ ವ್ಯವಸ್ಥೆಗೆ ಸಂಪೂರ್ಣ ವಿರುದ್ಧವಾದುದು ಎಂದು ಹೇಳಿದೆ.