ಕೊರೋನಾ ಸಂಕಷ್ಟಮುಗಿದ ನಂತರ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷ?

By Kannadaprabha NewsFirst Published May 1, 2020, 2:35 PM IST
Highlights

ಕೊರೋನಾ ಸಂಕಷ್ಟಮುಗಿದ ನಂತರ ರಾಹುಲ್ ಗಾಂಧಿ ಮತ್ತೆ ಅಧ್ಯಕ್ಷರಾಗಲಿದ್ದಾರಂತೆ. ಸೋನಿಯಾ, ಪ್ರಿಯಾಂಕಾ ಎದುರು ರಾಹುಲ್ ಪಕ್ಷ ನಡೆಸುವ ಪೂರ್ತಿ ಜವಾಬ್ದಾರಿ ಮತ್ತು ಸ್ವಾತಂತ್ರ್ಯ ಕೊಟ್ಟರೆ ಮರಳಿ ಅಧ್ಯಕ್ಷನಾಗಲು ಬಹುತೇಕ ಓಕೆ ಅಂದಿದ್ದಾರೆ ಎಂಬ ಸುದ್ದಿ ಟೆನ್‌ಜನ್‌ ಪಥದಿಂದ ಬರುತ್ತಿದೆ. 

ಕೊರೋನಾ ಸಲಹಾ ಸಮಿತಿ ರಚಿಸಿರುವ ಸೋನಿಯಾ ಗಾಂಧಿ, ಅದರಲ್ಲಿ ವಯಸ್ಸಾದ ಖರ್ಗೆ, ಆಂಟೋನಿ, ಗುಲಾಂ ನಬಿ, ಜನಾರ್ಧನ್‌ ದ್ವಿವೇದಿ ಇವರನ್ನೆಲ್ಲಾ ದೂರ ಇಟ್ಟಿದ್ದು ಪುತ್ರ ರಾಹುಲ್‌ರ ವೈಯಕ್ತಿಕ ಸಲಹಾಗಾರರನ್ನೆಲ್ಲ ಕಾಂಗ್ರೆಸ್‌ ಸಮಿತಿಯಲ್ಲಿ ತುಂಬಿಸಿದ್ದಾರೆ.

ಉದ್ಧವ್‌ ಮಾತೇ ಕೇಳೋರಿಲ್ಲ; ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಠಾಕ್ರೆ?

ಒಂದು ವರ್ಷ ಸುಮ್ಮನಿದ್ದ ರಾಹುಲ್ ಈಗ ಎಕಾಏಕಿ ಕೊರೋನಾ ಪರಿಣಿತರಂತೆ ಮಾತನಾಡುತ್ತಿದ್ದು, ಅರ್ಥಶಾಸ್ತ್ರಿಗಳ ಜೊತೆ ಫೇಸ್‌ಬುಕ್‌ ಲೈವ್‌ ಕೂಡ ಆರಂಭಿಸಿದ್ದಾರೆ. ಕೊರೋನಾ ಹೊಡೆತದಿಂದ ಮೋದಿ ಜನಪ್ರಿಯತೆ ಕಳೆದುಕೊಂಡರೆ ಇರಲಿ ಎಂದು ಸೋನಿಯಾ ಮಗನನ್ನು ಮತ್ತೆ ಸಕ್ರಿಯ ಮಾಡುತ್ತಿದ್ದಾರೆ. ಭಾರತದ ರಾಜಕಾರಣಕ್ಕೆ ಪುತ್ರ ಪ್ರೇಮದ ದೊಡ್ಡ ವಾರಸುದಾರಿಕೆಯೇ ಇದೇ ಅಲ್ಲವೇ?

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!