ಮನ್ ಕೀ ಬಾತ್‌ ನಲ್ಲಿ ಅಲೋವೇರಾ ಕೃಷಿ ಮಾತು... ಹಳ್ಳಿಯ ಚಿತ್ರಣವೇ  ಬದಲು!

By Suvarna NewsFirst Published Sep 29, 2021, 12:28 AM IST
Highlights

* ಮೋದಿ ಮನ್ ಕೀ ಬಾತ್ ನಲ್ಲಿ ಅಲೋವೇರಾ ಕೃಷಿ
* ರಾಂಚಿಯ ಹಳ್ಳಿಯ ಸ್ಥಿತಿ ಬದಲಾಗಿದ್ದು ಹೇಗೆ?
* ಪ್ರಧಾನಿಗಳ ಬಾಯಲ್ಲಿ ಹಳ್ಳಿ ಹೆಸರು ಕೇಳಿ ಸಂತಸಕ್ಕೆ ಪಾರವೇ ಇಲ್ಲ

ರಾಂಚಿ(ಸೆ. 29)  ಪ್ರಧಾನಿ ನರೇಂದ್ರ ಮೋದಿ(Narendra Modi) ಮನ್ ಕೀ ಬಾತ್(Mann ki Baat) ನಲ್ಲಿ ಮಾತನಾಡುತ್ತ ಅದೆಷ್ಟೋ ಹೊಸ ವಿಚಾರಗಳನ್ನು, ಸಾಧಕರನ್ನು ನಮ್ಮ ಮುಂದೆ ತಂದಿಡುತ್ತಲೇ ಬಂದಿದ್ದಾರೆ. ಕೃಷಿ ಮತ್ತು ಶಿಕ್ಷಣ ಕ್ಷೇತ್ರದ ಸಾಧಕರಿಗೆ ವಿಶೇಷ ಅಭಿನಂದನೆ ತಿಳಿಸುತ್ತಾರೆ.

ರಾಂಚಿ ನಾಗ್ರಿ ಬ್ಲಾಕ್ ಸಮೀಪದ ಡಿಯೋರಿ ಹಳ್ಳಿಯ ಮಹಿಳೆಯರ(Woman) ಸಾಧನೆ ಬಗ್ಗೆ ಮೋದಿ ಉಲ್ಲೇಖ ಮಾಡಿದ್ದು ಗ್ರಾಮದ ಎಲ್ಲರ ಸಂತಸಕ್ಕೆ ಪಾರವೇ ಇಲ್ಲ.  ಮಂಜು ದೇವಿ ಕಶ್ಯಪ್ ಮತ್ತು ಹಳ್ಳಿಗರ ಸಾಧನೆಯನ್ನು ಮುಕ್ತ ಕಂಠದಿಂದ ಮೋದಿ ಶ್ಲಾಘಿಸಿದ್ದಾರೆ. 

ಬಿರ್ಸಾ ಕೃಷಿ ವಿವಿ ನೆರವಿನಲ್ಲಿ ಹಳ್ಳಿಗರು ಅಲೋವೇರಾ (Aloe vera)ಕೃಷಿಯನ್ನು (Agriculture)ಮಾಡಿ ಮಾದರಿಯಾಗಿ ನಿಂತಿರುವ ವಿಚಾರದ ಬಗ್ಗೆ ಮೋದಿ ಮಾತನಾಡಿದ್ದರು.  ಮೋದಿ ನಮ್ಮ ಗ್ರಾಮದ ಹೆಸರು ಉಲ್ಲೇಖ ಮಾಡಿದ್ದು ಸಂತಸ ತಂದಿದೆ. ನಮ್ಮ  ಮುಂದೆ  ಔಷಧಿ ಸದ್ಯಗಳನ್ನು ಬೆಸುವ ಆಲೋಚನೆ ಇದ್ದು ಅದಕ್ಕೆ ನೆರವು ಸಿಗಲಿದೆ ಎಂಬ ವಿಶ್ವಾಸವನ್ನು ಮಂಜು ಕಶ್ಯಪ್ ವ್ಯಕ್ತಪಡಿಸುತ್ತಾರೆ.

ಕರ್ನಾಟಕದ ಬಾಕಾಹುಗೆ ಮೋದಿ ಮನ್ನಣೆ

2018  ರಲ್ಲಿ ಅಲೋವೇರಾ ಕೃಷಿ ಬಗ್ಗೆ ನಮಗೆ ವಿಶ್ವವಿದ್ಯಾನಿಲಯದಲ್ಲಿ ತರಬೇತಿ ನೀಡಲಾಯಿತು.  ಸಾಂಪ್ರದಾಯಿಕ ಕೃಷಿಯಿಂದ ಹೊರಬಂದು ಔಷಧಿ ಸಸ್ಯಗಳ ಕೃಷಿ ಮಾಡಲು ಪಂಚಾಯಿತದ ಮೂರು ಹಳ್ಳಿಯ ಜನರಿಗೆ ತರಬೇತಿ ನೀಡಲಾಯಿತು.

ಮಂಜು ಕಶ್ಯಪ್ ಜತೆ  ಮೀನಾ ದೇವಿ ಭಾಗಮನಿ ಮತ್ತು ಕೆಲವರು ತರಬೇತಿ ಪಡೆದುಕೊಂಡರು. ಇದರ ಖರ್ಚು ವೆಚ್ಚ ಸಹ ತುಂಬಾ ಕಡಿಮೆ ಇದ್ದು ಚಿಕ್ಕ ಜಾಗದಲ್ಲಿ ವರ್ಷಕ್ಕೆ 1.5 ಕ್ವಿಂಟಾಲ್ ಅಲೋವೇರಾ ಉತ್ಪಾದನೆ ಮಾಡಿ ಮಾರಾಟ ಮಾಡಬಹುದು. 

ಕೊರೋನಾ ಸಂದರ್ಭದಲ್ಲಿ ನಮಗೆ ಬೇಡಿಕೆ ಮತ್ತಷ್ಟು ಹೆಚ್ಚಾಯಿತು.  ನಮ್ಮ ಹೊಲಕ್ಕೆ ಬಂದ ಖರೀದಿದಾರರು ಅಲೋವೇರಾ ಜ್ಯೂಸ್ ಮತ್ತು ಜೆಲ್ ಗಾಗಿ ಮುಂಗಡ ಬೇಡಿಕೆ ಇಟ್ಟರು.  ನಮಗೆ ಜೆಲ್ ತಯಾರಿಕೆ ಮಾಡಲು ಅಗತ್ಯ ಉಪಕರಣ ಲಭ್ಯವಾಗದ ಕಾರಣ ಎಲೆಯನ್ನೇ ಮಾರಾಟ ಮಾಡಿಕೊಂಡು ಬಂದೆವು ಎಂದು ಕಶ್ಯಪ್ ಹೇಳುತ್ತಾ ಹೋಗುತ್ತಾರೆ.

ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರೀಸರ್ಚ್ ಈ ಯೋಜನೆಗೆ ಫಂಡ್ ಮಾಡಿದೆ ಎಂದು ಅಲೋವೇರಾ ಕರಷಿಯ ನೇತೃತ್ವ ಮತ್ತು ಮಾರ್ಗದರ್ಶನ ವಹಿಸಿದ್ದ ಯುನಿವರ್ಸಿಟಿಯ ಡಾ. ಕೌಶಲ್ ಕುಮಾರ್ ಹೇಳುತ್ತಾರೆ.

ನಾಲ್ಉ ಡಜನ್ ಗೂ ಅಧೀಕ ಜನರಿಗೆ ತರಬೇತಿ ನೀಡಲಾಗಿತ್ತು. ಆದರೆ ಕೆಲವರು ಮಾತ್ರ ಅಲೋವೇರಾ ಬೆಳೆಯಲು ಒಪ್ಪಿಕೊಂಡರು.   ಒಂದು ಸಾರಿ ಸಸ್ಯ ತರಾರಾದ ಮೇಲೆ ನಮ್ಮ ವಿವಿ ಸಂಪೂರ್ಣ ಮೇಲ್ವಿಚಾರಣೆಯನ್ನು ನೋಡಿಕೊಂಡೇ ಬಂದಿದೆ ಎಂದು ತಿಳಿಸುತ್ತಾರೆ.

ಜಾರ್ಖಂಡ್ ನ ಈ ಜಾಗದ ವಾತಾವರಣಕ್ಕೆ ಅಲೋವೇರಾ ತಕ್ಕ  ಬೆಳೆ. ಇದೀಗ ಮಂಜು ದೇವಿ ನಾಯಕತ್ವದಲ್ಲಿ ಮತ್ತಷ್ಟು ಜನ ಅಲೋವೇರಾ  ಕೃಷಿಗೆ ಮುಂದೆ ಬಂದಿದ್ದಾರೆ.  ಗ್ರಾಮದಲ್ಲಿ  ಬೆಳೆಯ ಬಗ್ಗೆ ವಿಶೇಷ ಪ್ರೀತಿ ಮೂಡಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಬದಲಾವಣೆ ಕಾಣಲಿದೆ ಎಂದು ಪ್ರೊಫೆಸರ್ ಹೇಳುತ್ತಾರೆ. 

 

 

click me!