32 ವರ್ಷ ಜೈಲು ಶಿಕ್ಷೆ ಅನುಭವಿಸಿದ ರಾಜೀವ್ ಗಾಂಧಿ ಹತ್ಯೆ ಅಪರಾಧಿ ಶಾಂತನ್ ನಿಧನ!

By Suvarna NewsFirst Published Feb 28, 2024, 11:00 AM IST
Highlights

ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದ ಅಪರಾಧಿ ಸಂತನ್ ಇಂದು ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚೆನ್ನೈ(ಫೆ.28) ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆಗೆ ಗುರಿಯಾಗಿದ್ದ 7 ಅಪರಾಧಿಗಳ ಬೈಕಿ ಒಬ್ಬರಾದ ಶಾಂತನ್ ಇಂದು ಬೆಳಗ್ಗೆ ಚೈನ್ನೈನಲ್ಲಿ ಮೃತಪಟ್ಟಿದ್ದಾರೆ. 55 ವರ್ಷದ ಶ್ರೀಲಂಕಾದ ಟಿ ಸುತೇಂದ್ರರಾಜ ಅಲಿಯಾಸ್ ಸಂತನ್ 32 ವರ್ಷ ಜೈಲು ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿದ್ದರು. ಲಿವರ್ ವೈಫಲ್ಯ, ಬಹು ಅಂಗಾಗಲ ವೈಫಲ್ಯದಿಂದ ಜನವರಿ ತಿಂಗಳಲ್ಲಿ ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾದ ಸಂತನ್ ಇಂದು(ಫೆ.28) ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 

1991ರಲ್ಲಿ ಶ್ರೀಪೆರಂಬದೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿಯನ್ನು  ಆತ್ಮಾಹುತಿ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. ರಾಜೀವ್ ಗಾಂಧಿ ಹತ್ಯೆಗೆ ಬಹುದೊಡ್ಡ ಪ್ಲಾನ್ ಮಾಡಿ ಶ್ರೀಲಂಕಾದಿಂದ ಭಾರತಕ್ಕೆ ಬಂದು ವ್ಯವಸ್ಥಿತವಾಗಿ ಬಾಂಬ್ ಸ್ಫೋಟಿಸಿ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿತ್ತು. ಈ ಪೈಕಿ 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. 32 ವರ್ಷಗಳ ಬಳಿಕ 6 ಅಪರಾಧಿಗಳನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. 

ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿ ನಳಿನಿ ಶ್ರೀ ಹರನ್ ಯಾರು?

ನವೆಂಬರ್ 2022ರಲ್ಲಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಗಳನ್ನು ಬಿಡುಗಡೆ ಮಾಡಲಾಗಿತ್ತು. ಇತರ ಅಪರಾಧಿಗಳು ಶ್ರೀಲಂಕಾಗೆ ಮರಳಿದರೆ, ಸಂತನ್ ಬಳಿ ಪಾಸ್‌‌ಪೋರ್ಟ್ ಸೇರಿದಂತೆ ಯಾವುದೇ ದಾಖಲೆಗಳು ಇಲ್ಲದ ಕಾರಣ ತಿರುಚಿ ಕಾರಗೃಹದ ವಿಶೇಷ ಶಿಬಿರಕ್ಕೆ ಕಳುಹಿಸಲಾಗಿತ್ತು. ಜೈಲಿನಿಂದ ಬಿಡುಗಡೆಯಾಗಿದ್ದರೂ ಸಂತನ್‌ಗೆ ತವರಿಗೆ ಮರಳಲು ಸಾಧ್ಯವಾಗಿರಲಿಲ್ಲ. ತನ್ನ ಕುಟುಂಬಸ್ಥರನ್ನು, ತಾಯಿಯನ್ನು ನೋಡುವ ಭಾಗ್ಯ ಸಿಕ್ಕಿರಲಿಲ್ಲ. 

2023ರಲ್ಲಿ ಸಂತನ್ ಮದ್ರಾಸ್ ಹೈಕೋರ್ಟ್‌ಗೆ ವಿಶೇಷ ಅರ್ಜಿಯೊಂದನ್ನು ಸಲ್ಲಿಸಿದ್ದರು. ಜೈಲಿನಿಂದ ಬಿಡಗಡೆಗೊಂಡಿರುವ ತನಗೆ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಪಾಸ್‌ಪೋರ್ಟ್ ಸೇರಿದಂತೆ ಯಾವುದೇ ದಾಖಲೆಗಳು ತನ್ನ ಬಳಿ ಇಲ್ಲದ ಕಾರಣ ತವರಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮದ್ರಾಸ್ ಹೈಕೋರ್ಟ್ ತನಗೆ ತವರಿಗೆ ಮರಳಲು ಅವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.  ಇದೀಗ ಬಹುಅಂಗಾಂಗ ವೈಫಲ್ಯ, ಹೃದಯಾಘಾತದಿಂದ ಸಂತನ್ ಮೃತಪಟ್ಟಿದ್ದಾರೆ. 

ರಾಜೀವ್ ಹಂತಕರ ಬಿಡುಗಡೆ, ಸೋನಿಯಾ ಗಾಂಧಿ ನಿಲುವಿಗೆ ವಿರುದ್ಧ ಹೇಳಿಕೆ ನೀಡಿದ ಕಾಂಗ್ರೆಸ್!

ದ್ವೀಪರಾಷ್ಟ್ರ ಶೀಲಂಕಾದಲ್ಲಿ ಎಲ್‌ಟಿಟಿಇ ಅಟ್ಟಹಾಸ ತೀವ್ರವಾಗಿದ್ದ ಸಂದರ್ಭದಲ್ಲಿ ರಾಜೀವ್‌ ಗಾಂಧಿ ನೇತೃತ್ವದ ಕೇಂದ್ರ ಸರ್ಕಾರ ಭಾರತೀಯ ಯೋಧರನ್ನು ಅಲ್ಲಿಗೆ ಕಳುಹಿಸಿಕೊಟ್ಟಿತ್ತು. ಇದು ಎಲ್‌ಟಿಟಿಇ ಸಿಟ್ಟಿಗೆ ಕಾರಣವಾಗಿತ್ತು. 1991ರ ಸಾರ್ವತ್ರಿಕ ಲೋಕಸಭೆ ಚುನಾವಣೆಯ ಪ್ರಚಾರ ಉತ್ತುಂಗದಲ್ಲಿದ್ದಾಗ ಮೇ 21ರಂದು ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಶ್ರೀಪೆರಂಬದೂರಿನಲ್ಲಿ ಪ್ರಚಾರ ಸಭೆಯೊಂದರಲ್ಲಿ ಭಾಗವಹಿಸಿದ್ದರು. ಎಲ್‌ಟಿಟಿಇ ಸಂಘಟನೆಯ ಧನು ಎಂಬ ಆತ್ಮಾಹುತಿ ಬಾಂಬರ್‌ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದರಿಂದ ರಾಜೀವ್‌ ಗಾಂಧಿ ದೇಹ ಛಿದ್ರವಾಗಿತ್ತು. ಜೀವಾವಧಿ ಶಿಕ್ಷೆಯಲ್ಲಿದ್ದ  ನಳಿನಿ ಶ್ರೀಹರನ್‌, ಆರ್‌.ಪಿ.ರವಿಚಂದ್ರನ್‌, ಶಾಂತನ್‌, ಮುರುಗನ್‌ (ನಳಿನಿ ಪತಿ), ರಾಬರ್ಚ್‌ ಪಯಸ್‌ ಹಾಗೂ ಜಯಕುಮಾರ್‌ ಬಿಡುಗಡೆಗೆ ನ್ಯಾಯಮೂರ್ತಿಗಳಾದ ಬಿ.ಆರ್‌.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿದ್ದ ಪೀಠ ಸೂಚಿಸಿತ್ತು. ‘ಅಪರಾಧಿಗಳ ಗಲ್ಲು ಶಿಕ್ಷೆಯನ್ನು ವಿಳಂಬದ ಕಾರಣ ಜೀವಾವಧಿ ಶಿಕ್ಷೆಗೆ ಪರಿವರ್ತಿಸಲಾಗಿತ್ತು. ಈಗ ಎಲ್ಲರೂ ಶಿಕ್ಷೆ ಅನುಭವಿಸಿದ್ದಾರೆ. ತಮಿಳುನಾಡು ಸರ್ಕಾರ ಕೂಡ ಅವರ ಬಿಡುಗಡೆಗೆ ಶಿಫಾರಸು ಮಾಡಿದೆ. ಅವರು ಬೇರೆ ಪ್ರಕರಣದಲ್ಲಿ ಬೇಕಿಲ್ಲದಿದ್ದರೆ ಬಿಡುಗಡೆ ಮಾಡಬಹುದು’ ಎಂದು ನ್ಯಾಯಪೀಠ ತಿಳಿಸಿತ್ತು. ಇದರಿಂದ ಬಿಡುಗಡೆಯಾಗಿದ್ದರು. 

click me!