ಭಾರಿ ಮಳೆಯಿಂದ ಇದೀಗ ಜನಜೀವನ ಅಸ್ತವ್ಯಸ್ತಗೊಂಡಿದೆ. ಇದರ ಜೊತೆಗೆ ಅಗತ್ಯವಸ್ತುಗಳ ಬೆಲೆಯೂ ಏರಿಕೆಯಾಗಿದೆ. ಪ್ರಮುಖವಾಗಿ ತರಕಾರಿ ಬೆಲೆ ಗಗನಕ್ಕೇರಿದೆ. ಈ ಪೈಕಿ ಟೊಮೆಟೋ ದರ ಇದೀಗ 80 ರೂಪಾಯಿ ದಾಟಿದೆ.
ನವದೆಹಲಿ(ಜು.05) ಭಾರಿ ಮಳೆ, ಬೆಳೆ ನಾಶ, ರಸ್ತೆ ಸಂಪರ್ಕ ಕಡಿತದಿಂದ ಇದೀಗ ತರಕಾರಿ ಬೆಲೆ ಗಗನಕ್ಕೇರಿದೆ. ಹಿಮಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಮಳೆಯಿಂದ ಟೊಮೆಟೊ ಸೇರಿದಂತೆ ವಿವಿಧ ತರಕಾರಿಗಳು ಪೂರೈಕೆಯಾಗುತ್ತಿಲ್ಲ. ಇದರ ಪರಿಣಾಮ ಟೊಮೆಟೊ ಬೆಲೆ ಇದೀಗ ಕೆಜಿಗೆ 80 ರೂಪಾಯಿ ದಾಟಿದೆ. ಜೂನ್ ತಿಂಗಳಲ್ಲಿ 35 ರೂಪಾಯಿ ಇದ್ದ ಟೊಮೆಟೊ ಇದೀಗ 80 ರೂಪಾಯಿ ದಾಟಿದೆ. ಟೊಮೆಟೋ ಮಾತ್ರವಲ್ಲ, ಬಹುತೇಕಾ ಎಲ್ಲಾ ತರಕಾರಿಗಳ ಬೆಲೆ ಏರಿಕೆಯಾಗಿದೆ. ಪರಿಣಾಮ ಇದೀಗ ಹೊಟೆಲ್ ವೆಜ್ ಹಾಗೂ ನಾಜ್ ವೆಜ್ ಊಟದ ಬೆಲೆಯಲ್ಲೂ ಏರಿಕೆಯಾಗುವ ಸಾಧ್ಯತೆ ಇದೆ.
ಜೂನ್ ತಿಂಗಳಲ್ಲಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದಲ್ಲಿ ಟೊಮೆಟೊ ಬೆಲೆ ಏರಿಕೆ ಆರಂಭಗೊಂಡಿತ್ತು. ಬಿಸಿ ಗಾಳಿಯಿಂದ ಬೆಲೆ ಏರಿಕೆ ಆರಂಭಗೊಂಡಿತ್ತು. ಇದೀಗ ಈಶಾನ್ಯ ಹಾಗೂ ಉತ್ತರ ಭಾರತದಲ್ಲಿನ ಭಾರಿ ಮಳೆಯಿಂದ ತರಕಾರಿ ಬೆಲೆ ರಾಕೆಟ್ ರೀತಿ ಏರಿಕೆಯಾಗಿದೆ. ಹಿಮಾಚಲ ಪ್ರದೇಶದಲ್ಲಿನ ಭಾರಿ ಮಳೆಯಿಂದ ಟೊಮೆಟೊ ಪೂರೈಕೆ ಸ್ಥಗಿತಗೊಂಡಿದೆ.
ಪಾಕಿಸ್ತಾನದಲ್ಲಿ ಪೆಟ್ರೋಲ್‌ಗಿಂತ ದುಬಾರಿಯಾದ ಹಾಲು, ಲೀಟರ್‌ಗೆ 370 ರೂಪಾಯಿ!
ಹವಾಮಾನ ಇಲಾಖೆ ಮನ್ಸೂಚನೆ ಪ್ರಕಾರ ಜುಲೈ7ರ ವರೆಗೆ ಹಿಮಾಚಲ ಪ್ರದೇಶದಲ್ಲಿ ಭಾರಿ ಮಳೆಯಾಗಲಿದೆ ಎಂದಿದೆ. ಜುಲೈ 7ರ ಬಳಿಕ ಸಾಧಾರಣ ಮಳೆಯಾಗಲಿದೆ. ಸದ್ಯ ಹಲವು ಪ್ರದೇಶಗಳು ಮುಳುಗಡೆಯಾಗಿದೆ. ಟೊಮೆಟೊ ಬೆಳೆಗಳ ನಾಶವಾಗಿದೆ. ಕಟಾವ್ ಮಾಡಿದ ಬೆಳೆಗಳನ್ನು ಸಾಗಾಟ ಮಾಡಲು ಸಾಧ್ಯವಾಗದೆ ಕೊಳೆಯುವ ಪರಿಸ್ಥಿತಿ ಎದುರಾಗಿದೆ.
ಟೊಮೆಟೋ ಸೇರಿದಂತೆ ಬಹುತೇಕ ಎಲ್ಲಾ ತರಕಾರಿ ಬೆಲೆ ದುಬಾರಿಯಾಗಿದೆ. ಶೇಕಡಾ 18ರಿಂದ ಶೇಕಡಾ 55ರಷ್ಟು ತರಕಾರಿ ಬೆಲೆ ಏರಿಕೆಯಾಗಿದೆ. ಕಳೆದ ವರ್ಷ ಮಳೆ ಕೊರತೆಯಿಂದ ಈರುಳ್ಳಿ ಉತ್ಪಾದನೆಯಲ್ಲಿ ಕುಸಿತ ಕಂಡಿದೆ. ಶೇಕಡಾ 20 ರಷ್ಚು ಈರುಳ್ಳಿ ಉತ್ಪಾದನೆ ಕುಸಿತ ಕಂಡಿದೆ. ಏಪ್ರಿಲ್ ತಿಂಗಳಲ್ಲಿನ ಭಾರಿ ಉಷ್ಣತೆ ಹಾಗೂ ಬಿಸಿ ಗಾಳಿಯಿಂದ ಬೆಂಡೆಕಾಯಿ, ಕ್ಯಾಬೇಜ್, ಬೀನ್ಸ್ ಸೇರಿದಂತೆ ಕೆಲ ತರಕಾರಿಗಳು ಮೇಲೆ ಪರಿಣಾಮ ಬೀರಿದೆ.
ನಂದಿನಿ ಪ್ಯಾಕೆಟ್‌ಗೆ 50 ಮಿ.ಲೀ ಹಾಲು ಹೆಚ್ಚಿಸಿ 2 ರೂ. ಸೇರ್ಪಡೆ ಮಾಡಿದ್ದೇವೆ, ದರ ಹೆಚ್ಚಿಸಿಲ್ಲ ಸಿಎಂ ಸಿದ್ದರಾಮಯ್ಯ
ಇದೀಗ ವಿಪರೀತ ಮಳೆಯಿಂದ ಬೆಳೆಗಳು ಹಾನಿಯಾಗಿದೆ. ತರಕಾರಿ ಹಣ್ಣಿನ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಹವಾಮಾನ ಇದೇ ರೀತಿ ಮುಂದುವರಿದರೆ, ತರಾಕಾರಿ ಹಣ್ಣು ಮಾತ್ರವಲ್ಲ ಇತರ ವಸ್ತುಗಳ ಬೆಲೆಯೂ ಹೆಚ್ಚಾಗಲಿದೆ.