40 ವರ್ಷದ ಹಿಂದೆ ಏಲಿಯನ್ ಭೂಮಿಗೆ ಕಳುಹಿಸಿದ ಸಂದೇಶವೇನು? ಡಿಕೋಡ್ ಮಾಡಿದ ಸೈಂಟಿಸ್ಟ್!

By Chethan Kumar  |  First Published Jul 5, 2024, 2:36 PM IST

ಬರೋಬ್ಬರಿ 40 ವರ್ಷಗಳ ಹಿಂದೆ ಅನ್ಯಗ್ರಹ ಜೀವಿ ಭೂಮಿಗೆ ಕಳುಹಿಸಿದ ಸಂದೇಶವನ್ನು ವಿಜ್ಞಾನಿಗಳು ಡಿಕೋಡ್ ಮಾಡಿದ್ದಾರೆ. ಸಿಗ್ನಲ್ ಪತ್ತೆ ಹಚ್ಚಿ ಡಿಕೋಡ್ ಮಾಡಿದ ವಿಜ್ಞಾನಿಗಳು ಸಂದೇಶ ಏನು ಅನ್ನೋದು ಬಹಿರಂಗಪಡಿಸಿದ್ದಾರೆ.


ಕೊಲಂಬಸ್(ಜು.05) ಅನ್ಯಗ್ರಹ ಜೀವಿಗಳ ಕುರಿತು ನಿರಂತರ ಸಂಶೋಧನೆಗಳು ನಡೆಯುತ್ತಲೇ ಇದೆ. ಇದರ ನಡುವೆ ಅಲ್ಲೊಂದು ಇಲ್ಲೊಂದು ವಿಡಿಯೋಗಗಳು, ಕಳೆಬರಹಗಳು ಭಾರಿ ಕೋಲಾಹಲ ಸೃಷ್ಟಿಸಿದೆ. ಇತ್ತೀಚೆಗೆ ಅನ್ಯ ಗ್ರಹ ಜೀವಿ ಮಾನವನ ವೇಷದಲ್ಲಿ ನಮ್ಮ ಜೊತೆಗಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಇದೀಗ ಮತ್ತೊಂದು ಕುತೂಹಲಕಾರಿ ಮಾಹಿತಿಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. 40 ವರ್ಷಗಳ ಹಿಂದೆ ಏಲಿಯನ್ ಭೂಮಿಗೆ ಕಳುಹಿಸಿದ ಸಂದೇಶವನ್ನು ಡಿಕೋಡ್ ಮಾಡಲಾಗಿದೆ. ಹೌದು, 1977ರಲ್ಲಿ ರೇಡಿಯಾ ಟೆಲಿಸ್ಕೋಪ್ ಹತ್ತೆ ಹಚ್ಚಿದ ಈ  ಸಿಗ್ನಲ್ ವಾವ್ ಎಂದು ಸಂಶೋಧನಾ ವಿಜ್ಞಾನಿ ಜೆರಿ ಎಹ್ಮಾನ್ ಬರೆದಿದ್ದಾರೆ.

1970ರ ದಶಕದಲ್ಲಿ ಅನ್ಯಗ್ರಹ ಜೀವಿ ಕುರಿತು ಸಾಕಷ್ಟು ಕತೆಗಳು ಹುಟ್ಟಿಕೊಂಡಿತ್ತು. ಮಾನವನಿಂತ ಅತಿಮಾನುಷವಾದ, ಅತೀತ ಬುದ್ಧಿಯುಳ್ಳು, ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸುತ್ತಿರುವ ಜೀವಿಯೊಂದಿಗೆ. ಈ ಜೀವಿ ಗ್ರಹಗಳಿಂದ ಗ್ರಹಗಳಿಗೆ ಸಂಚರಿಸುತ್ತಿದೆ. ಹೀಗೆ ಸಂಚರಿಸುವ ಅನ್ಯಗ್ರಹ ಜೀವಿಗಳ ವಿಮಾನ ಗೋಚರಿಸುತ್ತಿದೆ ಅನ್ನೋ ಮಾತುಗಳೇ ತುಂಬಿತ್ತು. ಭೂಮಿಗೂ  ಅನ್ಯಗ್ರಹ ಜೀವಿಗಳು ಬಂದು ಹೋಗುತ್ತಿದೆ ಅನ್ನೋ ಕತೆಗಳು ಬಲವಾಗಿತ್ತು. ಹೀಗಾಗಿ ಹಲವು ದೇಶದ ವಿಜ್ಞಾನಿಗಳು ಅನ್ಯಗ್ರಹ ಜೀವಿಗಳ ಇರುವಿಕೆ ಪತ್ತೆ ಹಚ್ಚಲು ಸಂಶೋಧನೆಗಳನ್ನು ಆರಂಭಿಸಿತ್ತು. ಈ ಪೈಕಿ ಅಮೆರಿಕದ ಒಹಿಯೋ ಸ್ಟೇಟ್ ವಿಶ್ವವಿದ್ಯಾಲಯ ರೇಡಿಯೋ ಟೆಲಿಸ್ಕೋಪ್ ಡೆಟೆಕ್ಷನ್ ಸೆಂಟರ್ ಮೂಲಕ ಅಧ್ಯಯನದಲ್ಲಿ ಮಹತ್ವದ ಸಿಗ್ನಲ್ ಪತ್ತೆಯಾಗಿದೆ.

Latest Videos

undefined

ಹಾರ್ವರ್ಡ್ ಅಧ್ಯಯನಕ್ಕೆ ಬೆಚ್ಚಿ ಬಿದ್ದ ಜಗತ್ತು, ಭೂಮಿ ಮೇಲೆ ಮನುಷ್ಯನ ವೇಷದಲ್ಲಿದೆ ಅನ್ಯಗ್ರಹ ಜೀವಿ!

1977ರ ಆಗಸ್ಟ್ ತಿಂಗಳಲ್ಲಿ ಬಿಗ್ ಇಯರ್ ರೆಡಿಯೋ ಟೆಲಿಕ್ಕೋಪ್ ಸಿಗ್ನಲ್ ಒಂದನ್ನು ಪತ್ತೆ ಹಚ್ಚಿತ್ತು. ಭೂಮ್ಯತೀತ ಬುದ್ಧಿಮತ್ತೆ ಕುರಿತು ಅಧ್ಯಯನದ ವೇಳೆ ಈ ಸಿಗ್ನಲ್ ಪತ್ತೆಯಾಗಿತ್ತು. ಈ ಸಿಗ್ನಲ್ 72 ಸೆಕೆಂಡ್‌ಗಳ ಕಾಲ ಪತ್ತೆಯಾಗಿತ್ತು. ಬಳಿಕ ಈ ಸಿಗ್ನಲ್ ಕುರಿತು ಸುಳಿವು ಪತ್ತೆಯಾಗಿಲ್ಲ. ವಿಜ್ಞಾನಿ ಜೆರಿ ಎಹ್ಮಾನ್ ಈ ಸಿಗ್ನಲ್ ಕುರಿತು ಅಧ್ಯಯನ ನಡೆಸಿದ್ದಾರೆ. ಇದು ಅನ್ಯಗ್ರಹ ಜೀವಿಯ ರೇಡಿಯೋ ಸಂದೇಶ ಆಗಿರುವ ಸಾಧ್ಯತೆ ಇದೆ ಎಂದು ಸಂಶೋಧನಾ ಪ್ರಬಂಧದಲ್ಲಿ ಬರೆದಿದ್ದಾರೆ. ಜೊತೆಗೆ ಈ ಸಂದೇಶದ ಕುರಿತು ಬರೆದಿರುವ ಜೆರಿ ಎಹ್ಮಾನ್, ವಾವ್ ಎಂದು ಉಲ್ಲೇಖಿಸಿದ್ದಾರೆ.

ಏಲಿಯನ್ ಇರುವಿಕೆ ಕುರಿತು ಈಗಲೂ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಆದರೆ ಕೆಲ ವೈಜ್ಞಾನಿಕ ಕುರುಹುಗಳು, ದಾಖಲೆಗಳು ಏಲಿಯನ್  ಇರುವಿಕೆಯನ್ನು ಸೂಚಿಸುತ್ತದೆ. ಇದಕ್ಕೆ ಪೂರಕವಾಗಿ ಹಲವು ಸಂಶೋಧನೆ, ಅಧ್ಯಯನ ವರದಿಗಳು ಲಭ್ಯವಿದೆ. 

AI ಇಂಟಲಿಜೆನ್ಸ್‌ನನ್ನು ಏಲಿಯನ್ ಇಂಟೆಲಿಜೆನ್ಸ್ ಎಂದು ಕರೆದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌!
 

click me!