ಆಗಸ್ಟ್‌ ವೇಳೆಗೆ ಕೇಂದ್ರದ ಮೋದಿ ಸರ್ಕಾರ ಪತನ, ಲಾಲೂ ಪ್ರಸಾದ್‌ ಯಾದವ್‌ ಭವಿಷ್ಯ

By Santosh NaikFirst Published Jul 5, 2024, 9:03 PM IST
Highlights

ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳೊಳಗೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು "ಅತ್ಯಂತ ದುರ್ಬಲವಾಗಿದೆ" ಎಂದು ಲಾಲು ಯಾದವ್ ಹೇಳಿದ್ದಾರೆ.

ನವದೆಹಲಿ (ಜು.5): ಕಳೆದ ತಿಂಗಳು ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ಸರ್ಕಾರ ಆಗಸ್ಟ್‌ ವೇಳೆಗೆ ಪತನವಾಗಬಹುದು ಎಂದು ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗಷ್ಟೇ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಲ್ಲಿದ್ದ ಬಿಜೆಪಿ 240 ಸ್ಥಾನಗಳಿಗೆ ಸೀಮಿತವಾಯಿತು ಮತ್ತು ಸಮ್ಮಿಶ್ರ ಸರ್ಕಾರ ರಚಿಸಲು ಮೈತ್ರಿ ಪಾಲುದಾರರನ್ನು ಅವಲಂಬಿಸಬೇಕಾಯಿತು. ಹೊಸ ಸರ್ಕಾರ ಪ್ರಮಾಣವಚನ ಸ್ವೀಕರಿಸಿದ ಒಂದು ತಿಂಗಳೊಳಗೆ, ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು "ಅತ್ಯಂತ ದುರ್ಬಲವಾಗಿದೆ" ಎಂದು ಲಾಲು ಯಾದವ್ ಹೇಳಿದ್ದಾರೆ. "ಎಲ್ಲಾ ಪಕ್ಷದ ಕಾರ್ಯಕರ್ತರು ಸಿದ್ಧರಾಗಿರಲು ನಾನು ಮನವಿ ಮಾಡುತ್ತೇನೆ, ಏಕೆಂದರೆ ಯಾವುದೇ ಸಮಯದಲ್ಲಿ ಚುನಾವಣೆಗಳು ನಡೆಯಬಹುದು. ದೆಹಲಿಯಲ್ಲಿ ಮೋದಿ ಸರ್ಕಾರವು ತುಂಬಾ ದುರ್ಬಲವಾಗಿದೆ ಮತ್ತು ಆಗಸ್ಟ್ ವೇಳೆಗೆ ಅದು ಬೀಳಬಹುದು" ಎಂದು ಲಾಲು ಯಾದವ್ ಹೇಳಿದ್ದಾರೆ.

ಶುಕ್ರವಾರ ರಾಷ್ಟ್ರೀಯ ಜನತಾ ದಳದ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಲಾಲು ಯಾದವ್ ಈ ಹೇಳಿಕೆ ನೀಡಿದ್ದಾರೆ. ಆರ್‌ಜೆಡಿ ಮುಖ್ಯಸ್ಥರು ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಸಾಧನೆಯ ಬಗ್ಗೆ ಮತ್ತಷ್ಟು ತೃಪ್ತಿ ವ್ಯಕ್ತಪಡಿಸಿದ್ದಾರೆ.

'ನಿಮ್ಮ ಮಾತಿನಿಂದ ಯಾರಿಗಾದ್ರೂ ನೋಯಿಸಿದ್ದೀರಾ..' ನಿವೇದಿತಾ ಗೌಡ ಈ ಪ್ರಶ್ನೆ ಕೇಳಿದ್ಯಾಕೆ?

ಏತನ್ಮಧ್ಯೆ, ಲಾಲು ಯಾದವ್ ಅವರ ಪುತ್ರ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಪಕ್ಷವನ್ನು ಮುನ್ನಡೆಸಲು ಆಯ್ಕೆಯಾದರೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ಹೇಳಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ನಮ್ಮ ಸಾಧನೆಯ ಪರಾಮರ್ಶೆ ನಡೆಸಿದ್ದೇವೆ. ಪಕ್ಷವನ್ನು ಮುನ್ನಡೆಸಲು ನಾನು ಆಯ್ಕೆಯಾದರೆ ಅದನ್ನು ಗೆಲುವಿನತ್ತ ಕೊಂಡೊಯ್ಯುವುದು ನನ್ನ ಜವಾಬ್ದಾರಿ. ಶಾಸಕ ಅಭ್ಯರ್ಥಿಗಳ ಬದಲಾವಣೆಯಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ತೇಜಸ್ವಿ ಯಾದವ್ ಹೇಳಿದ್ದಾರೆ.

ಎರಡು ವಾರದಲ್ಲಿ 12 ಸೇತುವೆ ಕುಸಿತ, 15 ಇಂಜಿನಿಯರ್‌ಗಳ ಸಸ್ಪೆಂಡ್ ಮಾಡಿದ ಬಿಹಾರ ಸರ್ಕಾರ!

click me!