ಪರೋಲ್‌ ಸಮಯವನ್ನು ಶಿಕ್ಷೆ ಅವಧಿ ಎನ್ನಲಾಗದು : ಸುಪ್ರೀಂಕೋರ್ಟ್

By Kannadaprabha NewsFirst Published Jan 8, 2023, 8:18 AM IST
Highlights

ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ ಪರೋಲ್‌ ಪಡೆದು ಜೈಲಿನಿಂದ ಹೊರಗಿದ್ದ ಅವಧಿಯನ್ನು, ಆತ ಶಿಕ್ಷೆ ಅನುಭವಿಸಿದ ಅವಧಿ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.

ನವದೆಹಲಿ: ಜೀವಾವಧಿ ಶಿಕ್ಷೆಗೆ ಗುರಿಯಾದ ವ್ಯಕ್ತಿ ಪರೋಲ್‌ ಪಡೆದು ಜೈಲಿನಿಂದ ಹೊರಗಿದ್ದ ಅವಧಿಯನ್ನು, ಆತ ಶಿಕ್ಷೆ ಅನುಭವಿಸಿದ ಅವಧಿ ಎಂದು ಪರಿಗಣಿಸಲಾಗದು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.  ಈ ವಿಷಯದಲ್ಲಿ ಬಾಂಬೆ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ನ್ಯಾ.ಎಂ.ಆರ್‌.ಶಾ ಮತ್ತು ನ್ಯಾ.ಸಿ.ಟಿ.ರವಿಕುಮಾರ್‌ ಅವರನ್ನೊಳಗೊಂಡ ನ್ಯಾಯಪೀಠ ಎತ್ತಿಹಿಡಿದಿದೆ. ಶಿಕ್ಷೆಯ ಅವಧಿ ಪರಿಗಣನೆ ವೇಳೆ ಪರೋಲ್‌ ಅವಧಿ ಕಡಿತಗೊಳಿಸಿದ ಗೋವಾ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಬಾಂಬೆ ಹೈಕೋರ್ಟ್ ಆದೇಶ ಪ್ರಶ್ನಿಸಿದ್ದ ಗೋವಾದ ಸುರಾಳ್ಕರ್‌ ಹತ್ಯೆ ಪ್ರಕರಣದ ನಾಲ್ವರು ದೋಷಿಗಳ ಅರ್ಜಿ ವಜಾ ಮಾಡುವ ವೇಳೆ ನ್ಯಾಯಪೀಠ ಈ ತೀರ್ಪು ನೀಡಿದೆ.

ಗೋವಾ ಬಂದೀಖಾನೆ ನಿಯಮ-2006 (Goa Prison Rules-2006) ಪ್ರಕಾರ ಅವಧಿಪೂರ್ವ ಬಿಡುಗಡೆಗೆ ಕನಿಷ್ಠ 14 ವರ್ಷ ಜೈಲು ಸಜೆ ಅನುಭವಿಸಿರಬೇಕು. ಹೀಗಾಗಿ ಒಂದು ವೇಳೆ ಅವಧಿ ಪೂರ್ವ ಬಿಡುಗಡೆಗಾಗಿ ದೋಷಿಯ ಶಿಕ್ಷೆಯ ಅವಧಿ ಪರಿಗಣಿಸಬೇಕಿದ್ದರೆ, ಆತ ಪರೋಲ್‌ ಹೊರತುಪಡಿಸಿ ಕನಿಷ್ಠ 14 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಸ್ಪಷ್ಟಪಡಿಸಿದೆ.

ಹೆಂಡತಿಯನ್ನು ಗರ್ಭಿಣಿ ಮಾಡ್ಬೇಕು ಅನ್ನೋ ಕಾರಣಕ್ಕೆ 15 ದಿನದ ಪೆರೋಲ್ ಪಡೆದ ಅಪರಾಧಿ!

ಕೋರ್ಟ್ ಹೇಳಿದ್ದೇನು?:

ಯಾವುದೇ ದೋಷಿಯನ್ನು ಅವಧಿ ಪೂರ್ವ ಬಿಡುಗಡೆ ಮಾಡಲು ಪರಿಗಣಿಸಬೇಕಾದರೆ ಆತ ಕನಿಷ್ಠ 14 ವರ್ಷ ಜೈಲು ಶಿಕ್ಷೆ ಅನುಭವಿಸಿರಬೇಕು. ಈ 14 ವರ್ಷ ಜೈಲು ಶಿಕ್ಷೆಯಲ್ಲಿ ಆತ ಪರೋಲ್‌ ಪಡೆದ ಅವಧಿಯನ್ನು ಪ್ರತ್ಯೇಕಿಸಬೇಕು. ಏಕೆಂದರೆ ದೋಷಿಯೊಬ್ಬನಿಗೆ ಇಂತಿಷ್ಟೇ ಪ್ರಮಾಣದಲ್ಲಿ ಪರೋಲ್‌ ನೀಡಬೇಕು ಎಂಬ ಯಾವ ನಿಯಮವೂ ಇಲ್ಲ. ಹೀಗಿರುವಾಗ ಪರೋಲ್‌ (parole) ಅವಧಿಯನ್ನು ಪ್ರತ್ಯೇಕಿಸದೇ ಹೋದರೆ ಪ್ರಭಾವಿಯಾಗಿರುವ ಕೈದಿಯೊಬ್ಬ ಎಷ್ಟು ಬಾರಿ ಬೇಕಾದರೂ ಪರೋಲ್‌ ಪಡೆದು ಜೈಲಿನಿಂದ ಹೊರಗೆ ಇರಬಹುದು. ಹೀಗಾದಲ್ಲಿ ಪ್ರಕರಣವೊಂದರಲ್ಲಿ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿರುವುದಕ್ಕೆ ಅರ್ಥವೇ ಉಳಿಯುವುದಿಲ್ಲ. ಹೀಗಾಗಿ ವಾಸ್ತವ ಶಿಕ್ಷೆಯ (punishment) ಪ್ರಮಾಣ ಗಮನಿಸುವಾಗ ಪರೋಲ್‌ ಅವಧಿಯನ್ನು ಪ್ರತ್ಯೇಕಿಸಿ, ಉಳಿದ ಅವಧಿಯನ್ನು ಮಾತ್ರವೇ ಪರಿಗಣಿಸಬೇಕು ಎಂದು ಪೀಠ ಹೇಳಿತು. 

ತಾಯಿಯಾಗಲು ಬಯಸಿದ ಮಹಿಳೆ, ಗಂಡನಿಗೆ 15 ದಿನದ ಪರೋಲ್ ಕೊಟ್ಟು ಕಳುಹಿಸಿದ ಹೈಕೋರ್ಟ್‌

click me!