ನಿರ್ಭಯಾ ಕೇಸ್: ರೇಪ್ ಮಾಡುವಾಗ ಅಪ್ರಾಪ್ತನಾಗಿದ್ದೆ ಎಂದ ಪವನ್ ಅರ್ಜಿ ವಜಾ!

By Suvarna NewsFirst Published Jan 20, 2020, 5:40 PM IST
Highlights

ನಿರ್ಭಯಾ ರೇಪಿಸ್ಟ್ ಪವನ್ ಅರ್ಜಿ ವಜಾ| ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್| ಪವನ್ ಸೇರಿ ಎಲ್ಲಾ ದೋಷಿಗಳಿಗೆ ಗಲ್ಲು ಪಿಕ್ಸ್| 

ನವದೆಹಲಿ[ಜ.20]: ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ಗಲ್ಲುಶಿಕ್ಷೆಯಿಂದ ಪಾರಾಗಲು ನಾನಾ ಯತ್ನ ನಡೆಸುತ್ತಿದ್ದಾರೆ. ಅದ್ಯ ಅಪರಾಧಿಗಳಲ್ಲೊಬ್ಬನಾದ ಪವನ್ ಗುಪ್ತಾ ಗಲ್ಲು ಶಿಕ್ಷೆ ವಿಧಿಸದಂತೆ ಸಲ್ಲಿಸಿದ್ದ ರ್ಜಿಯನ್ನು ಸುಪ್ರೀಂ ವಜಾಗೊಳಿಸಿದೆ.

ನಿಮಗೆಷ್ಟು ಧೈರ್ಯ?: ತಾಯಿಯ ಕೋಪದ ಕಂಗಳಲ್ಲಿ ಕಂಡಳು ನಿರ್ಭಯಾ!

ಹೌದು ನಿರ್ಭಯಾ ಅತ್ಯಾಚಾರ ಪ್ರಕರಣದ ನಾಲ್ವರು ಅಪರಾಧಿಗಳು ಗಲ್ಲು ಶಿಕ್ಷೆಯಿಂದ ಪಾರಾಗಲು ನಾನಾ ಯತ್ನಗಳನ್ನು ನಡೆಸುತ್ತಿದ್ದಾರೆ. ಅಪರಾಧಿ ಮುಕೇಶ್ ಸಿಂಗ್ ಸಲ್ಲಿಸಿದ್ದ ಕ್ಯುರೇಟಿವ್ ಹಾಗೂ ಕ್ಷಮಾದಾನ ಅರ್ಜಿ ವಜಾಗೊಂಡ ಬೆನ್ನಲ್ಲೇ, ಪವನ್ ಗುಪ್ತಾ ಕೂಡಾ ವಿಚಿತ್ರ ಕೋರಿಕೆ ಮೂಲಕ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅತ್ಯಾಚಾರ ನಡೆದಾಗ ತಾನು ಅಪ್ರಾಪ್ತನಾಗಿದ್ದೆ. ಹೀಗಾಗಿ ಬಾಲಾಪರಾಧಿ ಎಂದು ಪರಿಗಣಿಸಿ ಗಲ್ಲು ಶಿಕ್ಷೆ ತಡೆ ಹಿಡಿಯಬೇಕೆಂದು ಮನವಿ ಮಾಡಿಕೊಂಡಿದ್ದರು. ಆದರೆ ದೆಹಲಿ ಹೈಕೋರ್ಟ್ ಅವರ ಅರ್ಜಿ ವಜಾಗೊಳಿಸಿತ್ತು.

ಫೆ.1ರಂದೂ ಗಲ್ಲು ಶಿಕ್ಷೆ ಅನುಮಾನ, 3 ದೋಷಿಗಳ ಮುಂದಿವೆ ಇನ್ನೂ ಹಲವು ಅವಕಾಶ!

ಆದರೆ ಅಷ್ಟರಲ್ಲೇ ಸುಮ್ಮನಾಗದ ಪವನ್ ಗುಪ್ತಾ ಅದೇ ಅಂಶಗಳನ್ನು ಮುಂದಿಟ್ಟುಕೊಂಡು ಸುಪ್ರೀಂ ಮೆಟ್ಟಿಲೇರಿದ್ದರು. ಆಧರೀಗ ಸುಪ್ರೀಂ ಕೋರ್ಟ್‌ನಲ್ಲೂ ಈ ಅರ್ಜಿ ವಜಾಗೊಂಡಿದೆ. ಈ ಮೂಲಕ ನಾಲ್ವರಿಗೂ ಫೆ. 1ರಂದೇ ಗಲ್ಲು ಶಿಕ್ಷೆಯಾಗುವ ಸಾಧ್ಯತೆಗಳಿವೆ.

ಹೀಗಿದ್ದರೂ ಅಪರಾಧಿಗಳು ಕಾನೂನನ್ನೇ ಮುಂದಿಟ್ಟುಕೊಂಡು ಗಲ್ಲು ವಿಳಂಬಗೊಳಿಸುವ ಎಲ್ಲಾ ಯತ್ನಗಳನ್ನು ಮಾಡುವ ಸಾಧ್ಯತೆಗಳಿವೆ. ಅಪರಾಧಿಗಳ ಎದುರು ಇನ್ನೂ ಹಲವಾರು ಆಯ್ಕೆಗಳಿರುವುದರಿಂದ ಗಲ್ಲು ವಿಳಂಬವಾಗುವ ಸಾಧ್ಯತೆ ಇದೆ.

'ನಾನು ಬಾಲಾಪರಾಧಿ': ನೇಣು ತಪ್ಪಿಸಿಕೊಳ್ಳಲು ನಿರ್ಭಯಾ ರೇಪಿಸ್ಟ್ ಪವನ್‌ ಹೊಸ ದಾಳ!

click me!