ನವದೆಹಲಿ (ಅ.8): ಬಿಹಾರದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕುತೂಹಲದ ರಾಜಕೀಯ ತಿರುವುಗಳು ಕಂಡು ಬರುತ್ತಿವೆ. ಎಲ್‌ಜೆಪಿ (ರಾಮ್ ವಿಲಾಸ್ ಪಾಸ್ವಾನ್) ಪಕ್ಷದ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..
09:46 PM (IST) Oct 08
ಜಿಯೋ ತನ್ನ ಗ್ರಾಹಕರಿಗಾಗಿ ಹೊಸ ಫ್ಯಾಮಿಲಿ ಪ್ಲ್ಯಾನ್ ಪರಿಚಯಿಸಿದೆ. ಈ ಯೋಜನೆಯಲ್ಲಿ, ಕೇವಲ 449 ರೂಪಾಯಿಗಳ ಮೂಲ ಬೆಲೆಯಲ್ಲಿ ಮೂರು ಮೊಬೈಲ್ ಸಂಖ್ಯೆಗಳನ್ನು ಬಳಸಬಹುದು. ಇದು ತಿಂಗಳು ಪೂರ್ತಿ ಅನಿಯಮಿತ ಕರೆ, 75 GB ಡೇಟಾ ಮತ್ತು SMS ಸೌಲಭ್ಯಗಳನ್ನು ಒದಗಿಸುತ್ತದೆ. ಏನಿದು ಪ್ಲ್ಯಾನ್?
08:49 PM (IST) Oct 08
Pouring Hot Oil on Husband: ಮಲಗಿದ್ದ ಗಂಡನ ಮೇಲೆ ಹೆಂಡತಿಯೊಬ್ಬಳು ಅಮಾನುಷ ಕ್ರೌರ್ಯವೆಸಗಿದ್ದಾಳೆ. ಬಿಸಿ ಎಣ್ಣೆಯ ಜೊತೆ ಖಾರದ ಪುಡಿಯನ್ನು ಆತನ ಮೇಲೆ ಎರಚಿ ಹಲ್ಲೆ ಮಾಡಿದ್ದು, ಇದರಿಂದ ಗಂಡನ ಸ್ಥಿತಿ ಗಂಭೀರವಾಗಿದೆ.
07:24 PM (IST) Oct 08
Court Denies Shilpa Shetty's Plea: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿಗೆ ವಿದೇಶಕ್ಕೆ ತೆರಳುವುದಕ್ಕೆ ನ್ಯಾಯಾಲಯ ಅನುಮತಿ ನಿರಾಕರಿಸಿದೆ. ಯೂಟ್ಯೂಬ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವುದಕ್ಕಾಗಿ ನಟಿ ಶಿಲ್ಪಾ ಶೆಟ್ಟಿಗೆ ಶ್ರೀಲಂಕಾದ ಕೊಲಂಬೋಗೆ ತೆರಳಬೇಕಿತ್ತು.
06:42 PM (IST) Oct 08
ಜಿಮೇಲ್‌ನಿಂದ ಸ್ವದೇಶಿ ಝೋಹೋ ಇಮೇಲ್‌ಗೆ ಶಿಫ್ಟ್ ಆದ ಅಮಿತ್ ಶಾ, ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಸ್ವದೇಶಿಗೆ ಹೆಚ್ಚು ಒತ್ತುಕೊಡುತ್ತಿರುವ ಸಂದರ್ಭದಲ್ಲೇ ಅಮಿತ್ ಶಾ ಮಹತ್ವದ ನಿರ್ಧಾರ ಇದೀಗ ದೇಶದಲ್ಲೇ ಹೊಸ ಕ್ರಾಂತಿ ಬರೆಯುವ ಸಾಧ್ಯತೆ ಇದೆ.
06:09 PM (IST) Oct 08
Rayavaram Fireworks Factory Blast: ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿ ಉರಿದ ಪರಿಣಾಮ ಅಲ್ಲಿ ಕೆಲಸ ಮಾಡುತ್ತಿದ್ದ ಆರು ಜನ ಸಾವನ್ನಪ್ಪಿ ಹಲವರು ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕೋನಾಸೀಮಾ ಜಿಲ್ಲೆಯಲ್ಲಿನ ಪಟಾಕಿ ತಯಾರಿ ಘಟಕದಲ್ಲಿ ಈ ದುರಂತ ನಡೆದಿದೆ.
05:55 PM (IST) Oct 08
ಇದು ವಿಶ್ವದ ಅತ್ಯಂತ ಸುಂದರ ಹೆದ್ದಾರಿ, ಆನಂದ್ ಮಹೀಂದ್ರ ಹೆಸರಿಸಿದ ಹೈವೇ ಯಾವುದು? ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಾ ಸಾಗಲು ಸಾಧ್ಯವಿರುವ ಈ ಹೆದ್ದಾರಿ ಪ್ರತಿಯೊಬ್ಬ ಭಾರತೀಯನ ಪುಳಕಿತನಾಗಿ ಮಾಡುತ್ತೆ. ಈ ಹೆದ್ದಾರಿ ವಿಡಿಯೋ ಇಲ್ಲಿದೆ.
05:28 PM (IST) Oct 08
ಸಿಡ್ನಿ: ಆಸ್ಟ್ರೇಲಿಯಾ ಟೆಸ್ಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಸ್ಪೋಟಕ ಎಡಗೈ ಬ್ಯಾಟರ್ ಟ್ರ್ಯಾವಿಸ್ ಹೆಡ್ ಅವರಿಗೆ ಐಪಿಎಲ್ ಫ್ರಾಂಚೈಸಿಯೊಂದು ಬಿಗ್ ಆಫರ್ ನೀಡಿತ್ತು ಎಂದು ವರದಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
05:27 PM (IST) Oct 08
ನದಿಯಲ್ಲಿ ಸ್ನಾನ ಮಾಡುತ್ತಿದ್ದ 57 ವರ್ಷದ ಮಹಿಳೆಯನ್ನು ಮೊಸಳೆಯೊಂದು ಎಳೆದೊಯ್ದಿದೆ. ಗ್ರಾಮಸ್ಥರು ರಕ್ಷಿಸಲು ಪ್ರಯತ್ನಿಸಿದರೂ ವಿಫಲರಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಮಹಿಳೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
05:20 PM (IST) Oct 08
Chirag Paswan Demand: ಬಿಹಾರ ವಿಧಾನಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಮಾಧ್ಯಮಗಳ ವರದಿಗಳನ್ನು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ತಳ್ಳಿಹಾಕಿದ್ದಾರೆ.
04:51 PM (IST) Oct 08
ಔರಂಗಜೇಬ್ ಕಾಲದಲ್ಲಿ ಮಾತ್ರ ಭಾರತ ಒಗ್ಗಟ್ಟಾಗಿತ್ತು, ಪಾಕ್ ರಕ್ಷಣಾ ಸಚಿವನ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಹರಿದು ಹಂಚಿಹೋಗಿದ್ದ ಭಾರತವನ್ನು ಔರಂಗಜೇಬ್ ಬಂದು ಸರಿ ಮಾಡಿದ್ದ ಎಂದಿದ್ದಾರೆ. ಈ ಹೇಳಿಕೆ ನೀಡಲು ಒಂದು ಮಹತ್ವದ ಕಾರಣವಿದೆ.
04:32 PM (IST) Oct 08
Aryan Khan's Web Series ಕ್ರೂಸ್‌ನಲ್ಲಿ ಆರ್ಯನ್ ಖಾನ್ ಮಾದಕವಸ್ತುವಿನೊಂದಿಗೆ ಸಿಕ್ಕಿಬಿದ್ದ ಆರೋಪ ಎದುರಾದಾಗ ಆ ಪ್ರಕರಣದ ತನಿಖಾಧಿಕಾರಿಯಾಗಿದ್ದ ಸಮೀರ್ ವಾಂಖೆಡೆ ಅವರನ್ನೇ ಹೋಲುವ ಪಾತ್ರವನ್ನು ಆರ್ಯನ್ ಖಾನ್ ವೆಬ್ ಸರಣಿ ಬಾಸ್ಟರ್ಡ್ಸ್ ಆಫ್ ಬಾಲಿವುಡ್‌ನಲ್ಲಿ ಸೃಷ್ಟಿಸಲಾಗಿದೆ.
04:18 PM (IST) Oct 08
ಬೆಂಗಳೂರು: ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರವೇ ಉಳಿದಿದ್ದರೂ ಆಗಾಗ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ಧೋನಿ ತೊಟ್ಟ ಜೆರ್ಸಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
02:50 PM (IST) Oct 08
Pakistan Minister Blames India for jaffar express Attacks ಪಾಕಿಸ್ತಾನದ ಶಿಕಾರ್‌ಪುರ ಬಳಿ ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಸ್ಫೋಟ ಸಂಭವಿಸಿ ಏಳು ಮಂದಿ ಗಾಯಗೊಂಡಿದ್ದಾರೆ. ಈ ಸರಣಿ ದಾಳಿಗಳ ಹಿಂದೆ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ರೈಲ್ವೆ ಸಚಿವರು ಆರೋಪಿಸಿದ್ದಾರೆ.
02:45 PM (IST) Oct 08
ಬೆಂಗಳೂರು: ಅಸ್ಟ್ರೇಲಿಯಾ ಎದುರಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದೆ. ಹೀಗಿರುವಾಗಲೇ ಖಾಸಗಿ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿರುವ ಟೀಂ ಇಂಡಿಯಾ ಮಾಜಿ ನಾಯಕ ರೋಹಿತ್ ಶರ್ಮಾ ಹಾಲಿ ಕೋಚ್ ಗಂಭೀರ್ ಅವರನ್ನು ಬಿಟ್ಟು ದ್ರಾವಿಡ್‌ಗೆ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಶ್ರೇಯ ನೀಡಿದ್ದಾರೆ.
02:44 PM (IST) Oct 08
ರಾತ್ರಿಯಾದರೇ ಹಾವಾಗಿ ಪರಿವರ್ತನೆಯಾಗ್ತಾಳೆ ಹೆಂಡತಿ, ವಿಚಿತ್ರ ದೂರು ದಾಖಲಿಸಿದ ಪತಿ, ರಾತ್ರಿ ನಿದ್ದೆ ಇಲ್ಲ, ಬೆಳಗ್ಗೆ ನೆಮ್ಮದಿ ಇಲ್ಲ ಎಂದು ಪತಿ, ಹಾವಾಗಿ ಕಚ್ಚುತ್ತಿದ್ದಾಳೆ. ನನಗೆ ನೆಮ್ಮದಿಯಾಗಿ ನಿದ್ದೆ ಮಾಡಲು ಬಿಡಿ ಎಂದು ಪತಿ ದಾರು ದಾಖಲಿಸಿದ್ದಾರೆ.
01:53 PM (IST) Oct 08
ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ರಿಷಭ್ ಪಂತ್, ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಲು ಸಜ್ಜಾಗಿದ್ದಾರೆ. ಈ ತಿಂಗಳ 25 ರಿಂದ ಆರಂಭವಾಗಲಿರುವ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಆಡಿ ತಮ್ಮ ಫಿಟ್ನೆಸ್ ಸಾಬೀತುಪಡಿಸಿ, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾಗುವ ಗುರಿ ಹೊಂದಿದ್ದಾರೆ.
01:32 PM (IST) Oct 08
Tata Trusts Crisis After Ratan Tatas Demise ರತನ್ ಟಾಟಾ ನಿಧನಾನಂತರ ಟಾಟಾ ಟ್ರಸ್ಟ್‌ನಲ್ಲಿ ಆಡಳಿತಾತ್ಮಕ ಬಿಕ್ಕಟ್ಟು ತಲೆದೋರಿದೆ. ಟಾಟಾ ಸನ್ಸ್ ಮೇಲಿನ ನಿಯಂತ್ರಣಕ್ಕಾಗಿ ಟ್ರಸ್ಟಿಗಳ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿದೆ.
01:09 PM (IST) Oct 08
Thailand buffalo festival: ಮಾಡೆಲ್‌ಗಳು ಹೈ ಹೀಲ್ ಹಾಕಿ ಡಿಸೈನರ್ ಬಟ್ಟೆ ಧರಿಸಿ ಸೌಂದರ್ಯ ಸ್ಪರ್ಧೆಗಳಲ್ಲಿ ಕ್ಯಾಟ್‌ವಾಕ್ ಮಾಡುವುದನ್ನು ನೋಡಬಹುದು. ಆದರೆ ಇಲ್ಲೊಂದು ಕಡೆ ಪ್ರಾಣಿಗಳಿಗೆ ಅದರಲ್ಲೂ ಎಮ್ಮೆಗಳಿಗಾಗಿ ಸೌಂದರ್ಯ ಸ್ಪರ್ಧೆ ಏರ್ಪಡಿಸಲಾಗಿದೆ.
12:45 PM (IST) Oct 08
Why Muslim Men Are Forbidden from Wearing Gold and Silk (Haram) in Islam ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಮಾತ್ರವಲ್ಲ, ಅನೇಕ ಪುರುಷರು ಸಹ ಚಿನ್ನವನ್ನು ಧರಿಸುತ್ತಾರೆ. ಆದರೆ ಕೆಲವು ಧರ್ಮಗಳಲ್ಲಿ, ಪುರುಷರು ಚಿನ್ನವನ್ನು ಧರಿಸಲು ಅನುಮತಿ ಇಲ್ಲ.
12:15 PM (IST) Oct 08
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಭಾರತ ತಂಡಕ್ಕೆ ಹಲವು ಅದ್ಭುತ ಜಯಗಳನ್ನು ತಂದುಕೊಟ್ಟಿದ್ದಾರೆ. ಆದರೆ, ಸದ್ಯ ಅವರ ವೃತ್ತಿಜೀವನದ ಬಗ್ಗೆ ಅನಿಶ್ಚಿತತೆ ಇದೆ. ಈ ಹಿನ್ನೆಲೆಯಲ್ಲಿ 2027ರ ವಿಶ್ವಕಪ್‌ನಲ್ಲಿ ರೋಹಿತ್, ಕೊಹ್ಲಿ ಆಡುವ ಬಗ್ಗೆ ಎಬಿ ಡಿವಿಲಿಯರ್ಸ್ ಹೇಳಿಕೆ ವೈರಲ್ ಆಗಿದೆ.
11:23 AM (IST) Oct 08
CJI Gavais Family Condemns Shoe Attack as Constitutional Assault by Toxic Ideology ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ನ್ಯಾಯಾಲಯದಲ್ಲಿ ವಕೀಲರೊಬ್ಬರು ಶೂ ಎಸೆದು ಹಲ್ಲೆಗೆ ಯತ್ನಿಸಿದ್ದಾರೆ. ಈ ಘಟನೆಯನ್ನು "ಸಂವಿಧಾನದ ಮೇಲಿನ ದಾಳಿ" ಎಂದು ಸಿಜೆಐ ಕುಟುಂಬ ಖಂಡಿಸಿದೆ.
10:42 AM (IST) Oct 08
10:19 AM (IST) Oct 08
Indian Railways to Allow Free Ticket Date Change from January ಜನವರಿಯಿಂದ, ಭಾರತೀಯ ರೈಲ್ವೆ ಪ್ರಯಾಣಿಕರಿಗೆ ತಮ್ಮ ದೃಢೀಕೃತ ಟಿಕೆಟ್‌ಗಳ ಪ್ರಯಾಣ ದಿನಾಂಕವನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬದಲಾಯಿಸಲು ಅವಕಾಶ ನೀಡಲಿದೆ.
09:34 AM (IST) Oct 08
08:55 AM (IST) Oct 08
Massive LPG Truck Explosion on Jaipur-Ajmer Highway ಜೈಪುರ-ಅಜ್ಮೀರ್ ಹೆದ್ದಾರಿಯ ದುಡು ಬಳಿ ಎಲ್‌ಪಿಜಿ ಸಿಲಿಂಡರ್ ತುಂಬಿದ್ದ ಟ್ರಕ್‌ಗೆ ಮತ್ತೊಂದು ವಾಹನ ಡಿಕ್ಕಿ ಹೊಡೆದ ಪರಿಣಾಮ ಭೀಕರ ಸರಣಿ ಸ್ಫೋಟ ಸಂಭವಿಸಿದೆ. ಈ ಅವಘಡದಲ್ಲಿ ಏಳು ವಾಹನಗಳು ಸಂಪೂರ್ಣ ಸುಟ್ಟು ಕರಕಲಾಗಿದೆ.
08:50 AM (IST) Oct 08
08:02 AM (IST) Oct 08
ಬಿಹಾರದಲ್ಲಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ ಕುತೂಹಲದ ರಾಜಕೀಯ ತಿರುವುಗಳು ಕಂಡುಬರುತ್ತಿವೆ. ಎಲ್‌ಜೆಪಿ (ರಾಮ್‌ವಿಲಾಸ್) ಪಕ್ಷದ ನಾಯಕ ಹಾಗೂ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರು, ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷದ ಜತೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ
08:02 AM (IST) Oct 08
ಉದ್ಯಮಿಯೊಬ್ಬರಿಗೆ 60 ಕೋಟಿ ರು. ವಂಚಿಸಿದ ಪ್ರಕರಣದ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಅವರನ್ನು ಮುಂಬೈ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಈ ವೇಳೆ ನಟಿ, ‘ಪ್ರಕರಣದಲ್ಲಿ ಉ್ಲಲೇಖಿಸಲಾಗಿರುವ ಕಂಪನಿಯ ವ್ಯವಹಾರದಲ್ಲಿ ನಾನು ತೊಡಗಿರಲಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
08:01 AM (IST) Oct 08
ಹರ್ಯಾಣದ ಹಿರಿಯ ಪೊಲೀಸ್ ಅಧಿಕಾರಿ ವೈ. ಪೂರಣ್ ಕುಮಾರ್ ಅವರು ಇಲ್ಲಿನ ತಮ್ಮ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರು ತಮಗೆ ತಾವೇ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
08:01 AM (IST) Oct 08
ಪಶ್ಚಿಮ ಬಂಗಾಳದ ಇಬ್ಬರು ಬಿಜೆಪಿ ನಾಯಕರ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಮರುದಿನವೇ ಮತ್ತೊಬ್ಬ ಬಿಜೆಪಿ ಶಾಸಕನ ಮೇಲೆ ಹಲ್ಲೆ ನಡೆಸಲಾಗಿದೆ. ಮಂಗಳವಾರ ಆಲಿಪುರದ್ವಾರದಲ್ಲಿ ಪ್ರವಾಹ ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಬಿಜೆಪಿ ಶಾಸಕ ಮನೋಜ್ ಕುಮಾರ್ ಒರಾನ್ ಅವರ ಮೇಲೆ ಹಲ್ಲೆ
08:01 AM (IST) Oct 08
ಮಧ್ಯಪ್ರದೇಶದ ಛಿಂದ್ವಾಡದಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಮೂತ್ರಪಿಂಡ ವೈಫಲ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ಮತ್ತಿಬ್ಬರು ಮಕ್ಕಳು ಸಾವನ್ನಪ್ಪಿದ್ದು, ಈ ಮೂಲಕ ಜಿಲ್ಲೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 16 ಕ್ಕೆ ಏರಿಕೆಯಾಗಿದೆ.
08:00 AM (IST) Oct 08
ಶಬರಿಮಲೆ ದೇಗುಲದ ವಿಗ್ರಹಗಳ ಚಿನ್ನಲೇಪಿತ ತಾಮ್ರದ ಕವಚಗಳ ಚಿನ್ನದಲ್ಲಿ 4 ಕೆಜಿ ಕಡಿಮೆಯಾದ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ . ಪ್ರಮುಖ ಆರೋಪಿ ಉನ್ನಿಕೃಷ್ಣನ್ , ಮರುಲೇಪನದ ಬಳಿಕ ಉಳಿದ ಚಿನ್ನವನ್ನು ಹುಡುಗಿಯೊಬ್ಬಳ ಮದುವೆಗೆ ವಿನಿಯೋಗಿಸುವುದಾಗಿ ಪತ್ರ ಬರೆದಿದ್ದ ಎಂಬ ವಿಚಾರ ಬಹಿರಂಗವಾಗಿದೆ.
08:00 AM (IST) Oct 08
ಹಿಮಾಚಲ ಪ್ರದೇಶದ ಬಿಲಾಸ್‌ಪುರ ಜಿಲ್ಲೆಯಲ್ಲಿ ಬಸ್ ಮೇಲೆ ಗುಡ್ಡ ಕುಸಿದು 18 ಜನರು ಮೃತಪಟ್ಟಿರುವ ಆಘಾತಕಾರಿ ಘಟನೆ ಮಂಗಳವಾರ ನಡೆದಿದೆ. ಸಾವಿನ ಸಂಖ್ಯೆ ಏರುವ ಭೀತಿ - - ಘಟನೆ ಬಗ್ಗೆ ರಾಷ್ಟ್ರಪತಿ, ಮೋದಿ, ಶಾ ಆಘಾತ