ಜಿಮೇಲ್‌ನಿಂದ ಸ್ವದೇಶಿ ಝೋಹೋ ಇಮೇಲ್‌ಗೆ ಶಿಫ್ಟ್ ಆದ ಅಮಿತ್ ಶಾ, ಹೊಸ ಕ್ರಾಂತಿಗೆ ಮುನ್ನುಡಿ ಬರೆಯಲಾಗಿದೆ. ಸ್ವದೇಶಿಗೆ ಹೆಚ್ಚು ಒತ್ತುಕೊಡುತ್ತಿರುವ ಸಂದರ್ಭದಲ್ಲೇ ಅಮಿತ್ ಶಾ ಮಹತ್ವದ ನಿರ್ಧಾರ ಇದೀಗ ದೇಶದಲ್ಲೇ ಹೊಸ ಕ್ರಾಂತಿ ಬರೆಯುವ ಸಾಧ್ಯತೆ ಇದೆ.

ನವದೆಹಲಿ (ಅ.08) ಪ್ರಧಾನಿ ನರೇಂದ್ರ ಮೋದಿ ಆತ್ಮನಿರ್ಭರ ಭಾರತ ಪರಿಕಲ್ಪನೆಯೊಂದಿಗೆ ಹಲವು ಯೋಜನೆಗಳನ್ನು ಜಾರಿಗೊಳಿಸಿದ್ದರೆ.ಪ್ರಮುಖವಾಗಿ ಭಾರತ ಅವಲಂಬನೆಯಿಂದ ಹೊರಬರಬೇಕು. ಪ್ರತಿ ಕ್ಷೇತ್ರದಲ್ಲಿ ಸ್ವಾಲಂಬನೆ ಸಾಧಿಸಬೇಕು ಎಂದು ಒತ್ತಿ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ, ವೋಕಲ್ ಫಾರ್ ಲೋಕಲ್ ಸೇರಿದಂತೆ ಹಲವು ಮಹತ್ವಾಂಕ್ಷೆ ಯೋಜನೆಗಳ ಮೂಲಕ ಭಾರತ ವಿಶ್ವದ ಶಕ್ತಿಯಾಗಿ ಬೆಳೆಯುತ್ತಿದೆ. ಇದರ ಬೆನ್ನಲ್ಲೇ ಅಮಿತ್ ಶಾ ಏಕಾಏಕಿ ಜಿಮೇಲ್‌ಗೆ ಅಂತ್ಯಹಾಡಿದ್ದಾರೆ. ಇದೀಗ ಜಿಮೇಲ್‌ನಿಂದ ಸ್ವದೇಶಿ ಝೋಹೋಗೆ ಶಿಫ್ಟ್ ಆಗಿದ್ದಾರೆ. ಇನ್ನು ಅಮಿತ್ ಶಾ ಇಮೇಲ್ ವ್ಯವಹಾರಗಳು ಎಲ್ಲವೂ ಝೋಹೋ ಮೂಲಕ ನಡೆಯಲಿದೆ.

ಝೋಹೋ ಇಮೇಲ್‌ಗೆ ಶಿಫ್ಟ್ ಆಗಿದ್ದೇನೆ

ನಾನು ಝೋಹೋ ಇಮೇಲ್‌ಗೆ ಶಿಫ್ಟ್ ಆಗಿದ್ದೇನೆ. ದಯವಿಟ್ಟು ಇಮೇಲ್‌ನಲ್ಲಿ ಆಗಿರುವ ಬದಲಾವಣೆ ಗಮನಿಸಿ. ನನ್ನ ಹೊಸ ಇಮೇಲ್ ವಿಳಾಸ amitshah.bjp @ http://zohomail.in. ಮುಂದಿನ ಎಲ್ಲಾ ಸಂವಹನ ಇದೇ ಇಮೇಲ್ ಮೂಲಕ ನಡೆಯಲಿದೆ. ದಯವಿಟ್ಟು ಎಲ್ಲರೂ ಈ ಇಮೇಲ್ ವಿಳಾಸ ಬಳಸಿ. ನಿಮ್ಮ ಗಮನ ಈ ಕಡೆ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅಮಿತ್ ಶಾ ಎಕ್ಸ್ ಮೂಲಕ ಬರೆದುಕೊಂಡಿದ್ದಾರೆ.

ಅಮೆರಿಕ ಟ್ಯಾರಿಫ್ ಬಳಿಕ ಭಾರತದ ಹಲವು ದಿಟ್ಟ ನಿರ್ಧಾರ

ಅಮೆರಿಕ ಏಕಾಏಕಿ ಟ್ಯಾರಿಫ್ ಏರಿಕೆ ಮಾಡಿ ಅಟ್ಟಹಾಸ ಮರೆಯಲು ಮುಂದಾಗಿತ್ತು. ಭಾರತವನ್ನು ಬಗ್ಗಿಸಲು ಯತ್ನಿಸಿತ್ತು. ಆದರೆ ಭಾರತ ಟ್ಯಾರಿಫ್ ನೀತಿಯನ್ನು ಎದುರಿಸುತ್ತಲೇ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳುತ್ತಿದೆ. ಪ್ರಧಾನಿ ಮೋದಿ ಕೂಡ ಸ್ವದೇಶಿ ಆಂದೋಲನ, ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಬಳಕೆಗೆ ಸೂಚನೆ ನೀಡಿದ್ದರು. ಗೂಗಲ್ ಅಮೆರಿಕನ್ ಮೂಲದ ಕಂಪನಿ. ಗೂಗಲ್ ಅಡಿಯಲ್ಲಿರುವ ಜಿಮೇಲ್‌ಗೆ ಪರ್ಯಾವಾಗಿ ಭಾರತದ ಝೋಹೋ ಕಾರ್ಯನಿರ್ವಹಿಸುತ್ತಿದೆ. ಜಿಮೇಲ್‌ನಲ್ಲಿರುವ ಎಲ್ಲಾ ಫೀಚರ್ಸ್ ಝೋಹೋದಲ್ಲಿದೆ. ಭಾರತದ ಹಲವು ಕಚೇರಿಗಳು ಈಗಾಗಲೇ ಝೋಹೋಗೆ ಶಿಫ್ಟ್ ಆಗಿದೆ. ಕಳೆದ ತಿಂಗಳು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಕೂಡ ಝೋಹೋ ಡಾಕ್ಯುಮೆಂಟ್ ಸೇರಿದಂತೆ ಇತರ ಸೇವೆ ಬಳಕೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

Scroll to load tweet…

ಕ್ರಾಂತಿ ಮಾಡಿದ ಶ್ರೀಧರ್ ವೆಂಬು

ಝೋಹೋ ಸಂಸ್ಥಾಪಕ ನಿರ್ದೇಶಕ ಶ್ರೀಧರ್ ವೆಂಬು ಈಗಾಗಲೇ ಸ್ವದೇಶಿ ಸೇವೆಗಳ ಮೂಲಕ ಕ್ರಾಂತಿ ಮಾಡಿದ್ದಾರೆ. ಝೋಹೋ ಇಮೇಲ್ ಮಾತ್ರವಲ್ಲ, ಇತ್ತೀಚೆಗೆ ವ್ಯಾಟ್ಸಾಪ್‌ಗೆ ಪ್ರತಿಯಾಗಿ ಅರಟ್ಟೈ ಆ್ಯಪ್ ಪರಿಣಾಮಕಾರಿಯಾಗಿ ಪ್ರಚಾರ ಪಡಿಸಿದ್ದಾರೆ. ಇದೀಗ ಹಲವರು ವ್ಯಾಟ್ಸಾಪ್‌ನಿಂದ ಅರಟ್ಟೈ ಆ್ಯಪ್‌ಗೆ ಶಿಫ್ಟ್ ಆಗಿದ್ದಾರೆ. ಮತ್ತೆ ಕೆಲವರು ಅರಟ್ಟೈ ಹಾಗೂ ವ್ಯಾಟ್ಸಾಪ್ ಎರಡೂ ಬಳಸುತ್ತಿದ್ದಾರೆ. ಅರಟ್ಟೈ ಆ್ಯಪ್ ಈಗಾಗಲೇ ಭಾರತದಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿದೆ.ಅರಟ್ಟೈ ಆ್ಯಪ್ 2021ರಲ್ಲಿ ಲಾಂಚ್ ಮಾಡಲಾಗಿತ್ತು. ಆದರೆ ಹೆಚ್ಚಿನವರು ಡೌನ್ಲೋಡ್ ಮಾಡಿರಲಿಲ್ಲ. 3,000 ಬಳಕೆದಾರರಿದ್ದ ಅರಟ್ಟೈ ಆ್ಯಪ್ ಕಳೆದ ಕೆಲ ದಿನಗಳಲ್ಲಿ ಭಾರತೀಯರು ಅರಟ್ಟೈ ಆ್ಯಪ್ ಬಳಕೆ ಮಾಡುತ್ತಿದ್ದಾರೆ. ಪರಿಣಾಮ 3,000 ಬಳಕೆದಾರರಿಂದ 3.5 ಲಕ್ಷಕ್ಕೆ ಏರಿಕೆಯಾಗಿದೆ.