ಇದು ವಿಶ್ವದ ಅತ್ಯಂತ ಸುಂದರ ಹೆದ್ದಾರಿ, ಆನಂದ್ ಮಹೀಂದ್ರ ಹೆಸರಿಸಿದ ಹೈವೇ ಯಾವುದು? ಪ್ರಕೃತಿಯ ಸೌಂದರ್ಯ ಆಸ್ವಾದಿಸುತ್ತಾ ಸಾಗಲು ಸಾಧ್ಯವಿರುವ ಈ ಹೆದ್ದಾರಿ ಪ್ರತಿಯೊಬ್ಬ ಭಾರತೀಯನ ಪುಳಕಿತನಾಗಿ ಮಾಡುತ್ತೆ. ಈ ಹೆದ್ದಾರಿ ವಿಡಿಯೋ ಇಲ್ಲಿದೆ.

ಮುಂಬೈ (ಅ.08) ಭಾರತದ ಉದ್ಯಮಿ, ಮಹೀದ್ರ ಆ್ಯಂಡ್ ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯ. ಕೆಲ ವಿಶೇಷ ವಿಡಿಯೋಗಳು, ವೈರಲ್ ವಿಡಿಯೋಗಳು ಸೇರಿದಂತೆ ಹಲವು ವಿಚಾರಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಈಗಾಗಲೇ ಆನಂದ್ ಮಹೀಂದ್ರ ಭಾರತದ ಸುಂದರ ಹಳ್ಳಿ ಸೇರಿದಂತೆ ಹಲವು ಪ್ರದೇಶಗಳ ವಿಡಿಯೋ ಹಂಚಿಕೊಂಡಿದ್ದಾರೆ. ಇದೀಗ ವಿಶ್ವದ ಅತ್ಯಂತ ಸುಂದರ ಹೆದ್ದಾರಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಆನಂದ್ ಮಹೀಂದ್ರ ಪ್ರಕಾರ ವಿಶ್ವದ ಅತ್ಯಂದ ಸುಂದರ ಹೆದ್ದಾರಿ ಭಾರತದ ಲೆಹ್-ಮನಾಲಿ ನಡುವಿನ ಹೆದ್ದಾರಿ ಎಂದಿದ್ದಾರೆ.

ಈ ಹೆದ್ದಾರಿ ಪಕ್ಕ ಕುಳಿತು ಪ್ರಕೃತಿ ಸೌಂದರ್ಯ ಅಸ್ವಾದಿಸಬೇಕು

ಆನಂದ್ ಮಹೀಂದ್ರ ಲೆಹ್-ಮನಾಲಿ ವಿಶ್ವದ ಅತ್ಯಂತ ಸುಂದರ ಹೆದ್ದಾರಿ ಎಂದು ಹೆಸರಿಸಿದ್ದಾರೆ. ಲೆಹ್ ಮನಾಲಿ ಹೆದ್ದಾರಿ, ವಿಶ್ವದ ಅತ್ಯಂತ ಸುಂದರ ಹೆದ್ದಾರಿಗಳಲ್ಲೊಂದು. ಈ ಹೆದ್ದಾರಿಯಲ್ಲಿ ಸಾಗಿದೆರ ಒಂದುು ಆರ್ಮ್ ಚೇರ್‌ನಲ್ಲಿ ಕುಳಿತು ಪ್ರಕೃತಿ ಸೌಂದರ್ಯ ಅಸ್ವಾದಿಸುವ ಮನಸ್ಸಾಗುತ್ತದೆ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ.

ಲೇಹ್ ಮನಾಲಿ 474 ಕಿಲೋಮೀಟರ್ ಹೆದ್ದಾರಿ

ಲೇಹ್ ಮನಾಲಿ ನಡುವಿನ ಹೆದ್ದಾರಿ ಬರೋಬ್ಬರಿ 474 ಕಿಲೋಮೀಟರ್ ಹೆದ್ದಾರಿ. ಸದ್ಯ ಅಟಲ್ ಟನಲ್ ಕಾರಣ ಈ ಹೆದ್ದಾರಿ 430 ಕಿಲೋಮೀಟರ್‌ಗೆ ಇಳಿಕೆಯಾಗಿದೆ. ಲೆಹ್ ಹಾಗೂ ಮನಾಲಿ ಎರಡೂ ಕೂಡ ಭಾರತದ ಸುಂದರ ಪ್ರವಾಸಿ ತಾಣಗಳು. ಎರಡೂ ಕೂಡ ಹಿಮಾಲಯನ್ ರೀಜನ್ ಪ್ರಾಂತ್ಯಗಳು. ಅತೀ ಹೆಚ್ಚು ಮಂದಿ ಬೈಕ್ ರೈಡ್ ಮಾಡುವ ಹಾಗೂ ಮಾಡಲು ಬಯಸುವ ಹೆದ್ದಾರಿ ಇದಾಗಿದೆ. ಈ ಹೆದ್ದಾರಿಯಲ್ಲಿ ಸಿಗುವ ಪ್ರಾಕೃತಿ ತಾಣ, ಬೆಟ್ಟ, ಗುಡ್ಡ ಜಲಪಾತ , ನದಿ, ಹಿಮ ಸೇರಿದಂತೆ ಸಿನಿಮ್ಯಾಟಿಕ್ ಅನುಭವ ನೀಡಲಿದೆ. ಕಣಿವೆ ಪ್ರದೇಶಗಳ ಮೂಲಕ ಸಾಗುವ ಹೆದ್ದಾರಿ ಹಲವು ಸವಾಲುಗಳಿಂದಲೂ ಕೂಡಿದೆ. ಪ್ರಮುಖವಾಗಿ ಈ ಹೆದ್ದಾರಿಯ 350 ಕಿಲೋಮೀಟರ್ ಯಾವುದೇ ಪೆಟ್ರೋಲ್ ಬಂಕ್, ರಿಪೇರಿ ಸ್ಟೇಶನ್ ಲಭ್ಯವಿರುವುದಿಲ್ಲ. ಲೇಹ್ ಮನಾಲಿ ಹೆದ್ದಾರಿಯನ್ನು ಭಾರತೀಯ ಸೇನೆಯ ಬಾರ್ಡರ್ ರೋಡ್ ಆರ್ಗನೈಸೇಶನ್ ನಿರ್ವಹಣೆ ಮಾಡುತ್ತಿದೆ.

Scroll to load tweet…

ಲೇಹ್ ಮನಾಲಿ ಪ್ರಯಾಣಕ್ಕೆ ಯಾವ ಸಮಯ ಉತ್ತಮ

ಜೂನ್- ಆಗಸ್ಟ್: ಜೂನ್ ತಿಂಗಳಿನಿಂದ ಆಗಸ್ಟ್ ತಿಂಗಳು ಮಳೆಗಾಲದ ಪ್ರಯಾಣ ಉತ್ತಮವಾಗಿರುತ್ತದೆ. ಈ ವೇಳೆ ಮಳೆ, ಪ್ರವಾಹದ ಸವಾಲುಗಳು ಹೆಚ್ಚು. ಆದರೆ ಇಡೀ ಪ್ರಕೃತಿ ನಳನಳಿಸುತ್ತಿರುತ್ತದೆ. ಹಚ್ಚಹಸಿರು, ಎಲ್ಲೆಡೆ ಜಲಪಾತ, ತುಂಬಿ ಹರಿಯುತ್ತಿರುವ ನದಿಗಳಿಂದ ಪ್ರಕೃತಿ ಸೌಂದರ್ಯ ಹೆಚ್ಚಿರುತ್ತದೆ.

ಸೆಪ್ಟೆಂಬರ್: ಮಳೆಗಾಲ ಅಂತ್ಯಗೊಳ್ಳುತ್ತಿದ್ದಂತೆ ಸೆಪ್ಟೆಂಬರ್ ತಿಂಗಳ ಪ್ರವಾಸ ಆಹ್ಲಾದಕರ. ಸ್ಪಷ್ಟ ಆಗಸ, ಪರಿಸರವೂ ಉತ್ತಮವಾಗಿರುತ್ತದೆ.

ಅಕ್ಟೋಬರ್ ಹಾಗೂ ಮೇ ತಿಂಗಳ ಆರಂಭದಲ್ಲಿ ಪ್ರಯಾಣ ಉತ್ತಮವಲ್ಲ. ಕಾರಣ ಈ ವೇಳೆ ಭಾರಿ ಹಿಮ ಬೀಳುವ ಸಾಧ್ಯತೆ ಇದೆ. ಹೀಗಾಗಿ ರಸ್ತೆಗಳು ಬಂದ್ ಆಗಲಿದೆ. ಪ್ರಯಾಣ ದುಸ್ತರವಾಗಲಿದೆ. ಹಿಮ ತುಂಬಿದ ರಸ್ತೆಯಲ್ಲಿ ಪ್ರಯಾಣ ಸುರಕ್ಷಿತವಲ್ಲ.