ತಮ್ಮನನ್ನು ಸೋಲಿಸಿದ್ದಕ್ಕೆ ನಡುರಸ್ತೆಯಲ್ಲೇ ಬಿಜೆಪಿ ಶಾಸಕ ಕೃಷ್ಣಾನಂದ ರೈ ಹತ್ಯೆ ಮಾಡಿದ್ದ ಮುಖ್ತಾರ್‌ ಅನ್ಸಾರಿ!

By Santosh NaikFirst Published Mar 29, 2024, 6:25 PM IST
Highlights


ಬಿಜೆಪಿಯ ಶಾಸಕ ಕೃಷ್ಣಾನಂದ ರೈ ಹತ್ಯೆ ಇಡೀ ಯು ಪಿಯಲ್ಲಿ ಸಂಚಲನ ಮೂಡಿಸಿತ್ತು. ಜೊತೆಗೆ ಹೆಚ್ಚು ಸಂಚಲನ ಮೂಡಿಸಿದ್ದು ಹತ್ಯೆಗೆ ಬಳಸಿದ್ದ ಮಿಲಿಟರಿಯಲ್ಲಿ ಬಳಿಸುವ ಲೈಟ್ ಮಿಷನ್‌ಗನ್. 

ಡೆಲ್ಲಿ ಮಂಜು, ಏಷ್ಯಾನೆಟ್‌ ಸುವರ್ಣನ್ಯೂಸ್

ನವದೆಹಲಿ (ಮಾ.29): ದೇಹಕ್ಕೆ ಹೊಕ್ಕಿದ್ದು 67 ಬುಲೆಟ್..! ಘಟನಾ ಸ್ಥಳದಲ್ಲಿ ಸಿಕ್ಕಿದ್ದು 500ಕ್ಕೂ ಅಧಿಕ ಬುಲೆಟ್..! ಬಹುಶಃ ಇದೊಂದು ಸಾಲು ಸಾಕು ಆ ಹತ್ಯೆಯ ಹಿಂದಿನ ದ್ವೇಷ ವಿವರಿಸಲು. ಕೈಯಲ್ಲಿ ಪಿಸ್ತೂಲ್ ಇದ್ರೆ ಅದರಲ್ಲಿರುವ ಗುಂಡು ಮುಗಿಯೋತನಕ ವಿರೋಧಿಯ ದೇಹ ಛಿದ್ರವಾಗುವ ತನಕ ಬಿಡೋದಿಲ್ಲ. ಕೈಯಲ್ಲೊಂದು ಎಕೆ-47 ಇದ್ರೆ..? ಎದುರಾಳಿಯ ದೇಹ ಇನ್ನೆಷ್ಟು ಛಿದ್ರವಾಗಿರಬೇಡ...!

ಇದುವೇ ಪೂರ್ವಾಂಚಲದ ಬಿಜೆಪಿ ಮಾಜಿ ಶಾಸಕ ಕೃಷ್ಣಾನಂದ ರೈ ಹತ್ಯೆ..!

ಉತ್ತರ ಭಾರತದಲ್ಲಿ ಹತ್ಯೆಗಳ ಹಿಂದಿನ ಕಥೆಗಳು ಹೀಗೆಯೇ ಇರುತ್ತವೆ. ದ್ವೇಷದ ಪಾತ್ರೆಯನ್ನು ಮುಂದಿಟ್ಟುಕೊಂಡು ಅದರಲ್ಲಿ ಎಷ್ಟು ಬುಲೆಟ್‌ಗಳು ಬೀಳಿಸಬಹುದು ಎಂದು ಹಂತಕರು ಲೆಕ್ಕ ಹಾಕುತ್ತಿರುತ್ತಾರೆ. ಇದಕ್ಕೆ ರಾಜಕೀಯ ಹೊರತಲ್ಲ. ಉತ್ತರ ಭಾರತ ಅದರಲ್ಲೂ ಉತ್ತರ ಪ್ರದೇಶ ಯಾವಾಗಲೂ ಸದ್ದು ಮಾಡೋದೆ ರಾಜಕೀಯದ ಹತ್ಯೆಗಳಿಗಾಗಿ. 2005ರಲ್ಲಿ ಬಿಜೆಪಿ ಮಾಜಿ ಶಾಸಕ ಕೃಷ್ಣಾನಂದ ರೈ ಕೊಲೆ ಕೂಡ ಇಡೀ ಉತ್ತರ ಪ್ರದೇಶವನ್ನು ತಲ್ಲಣಗೊಳಿಸಿತ್ತು. ಅದು ಕೂಡ ತನ್ನ ಸಹೋದರನ ಎದುರಾಳಿಯಾಗಿ ಬಿಜೆಪಿಯಿಂದ ನಿಂತನಲ್ಲ ಅಂಥ ಅಷ್ಟೇ ನೋಡಿ ದ್ವೇಷ. 

ಕೃಷ್ಣಾನಂದ ರೈ, ಘಾಜಿಪುರದ ಮೊಹಮದಾಬಾದ್ ಕ್ಷೇತ್ರದ ಶಾಸಕರಾಗಿದ್ದರು. ಶಾಸಕರಾಗಿದ್ದ ಕಾರಣಕ್ಕೆ ಮದುವೆ, ಮುಂಜಿ, ಶೋರಂ ಉದ್ಘಾಟನೆ, ಪಂದ್ಯಾವಳಿ ಉದ್ಘಾಟನೆ ಇದ್ದೇ ಇರ್ತಾವೆ. ಅಂತೆಯೇ ರೈ ಅಂದು ತನ್ನ ಕ್ಷೇತ್ರದಲ್ಲಿ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಹಿಂತಿರುಗುತ್ತಿದ್ದರು. ಹೊತ್ತು ಆಗಲೇ ಮಧ್ಯಾಹ್ನ 1.30 ದುಷ್ಟರಿಗೆ ತನ್ನ ಎದುರಾಳಿಯ ವಿರುದ್ಧ ಅಟ್ಟಹಾಸ ಮೆರೆಯಲು ಅಷ್ಟು ಸಾಕಾಗಿತ್ತು. ಹಾಡಹಗಲೇ ರೈ ಕಾರಿಗೆ ಅಡ್ಡ ಹಾಕ್ತಾರೆ. ಆಗ ರೈ ಜೊತೆ ಆರು ಮಂದಿ ಕೂಡ ಇರ್ತಾರೆ. ಪೂರ್ವ ನಿಯೋಜಿತ ಸ್ಕೆಚ್ ನಂತೆ ರೈ ಸೇರಿ ಜೊತೆಗಿದ್ದವರ ಮೇಲೆ ಗುಂಡುಗಳ ಸುರಿಮಳೆಯಾಗುತ್ತೆ. ಆ ಹೊತ್ತಲ್ಲಿ ರೈ ದೇಹಕ್ಕೆ 67 ಬುಲೆಟ್ ಹೊಕ್ಕರೇ ಸುತ್ತಮುತ್ತ 500ಕ್ಕೂ ಹೆಚ್ಚು ಬುಲೆಟ್‌ಗಳು ಚೆಲ್ಲಾಡಿದ್ದವು. ಇಷ್ಟೂ ಗುಂಡುಗಳು ಎಕೆ-47 ನಿಂದ ಹಾರಿದ್ದು ಅನ್ನೋದು ಮತ್ತೊಂದು ಆಸಕ್ತಿಯ ವಿಷಯ. ಇದರ ಹಿಂದಿದ್ದವನೇ ಗ್ಯಾಂಗ್‌ಸ್ಟರ್, ಬಾಹುಬಲಿ, ಮಾಫಿಯಾ ಡಾನ್ ಮುಖ್ತಾರ್ ಅನ್ಸಾರಿ. 65 ಪ್ರಕರಣಗಳಲ್ಲಿ ಆರೋಪಿ. 8 ಪ್ರಕರಣಗಳಲ್ಲಿ ಅಪರಾಧಿ ಇಂಥ ಕ್ರೈಮ್‌ ಗ್ರಾಫ್ ಹೊತ್ತಿರುವವ ಇದೇ ಅನ್ಸಾರಿ, ಗುರುವಾರ ಜೈಲ್ಲಿನಲ್ಲಿ ಅಸ್ವಸ್ಥಗೊಂಡಿದ್ದಾನೆ. ಬಳಿಕ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ತಂದಾಗ ವಿಧಿ ಆಗಲೇ ತನ್ನ ಆಟವಾಡಿಬಿಟ್ಟಿತ್ತು. ಹೃದಯ ಬಡಿತವನ್ನು ನಿಲ್ಲಿಸಿಬಿಟ್ಟಿತ್ತು.  

ರೈ ಹತ್ಯೆ ಇಡೀ ಯು ಪಿಯಲ್ಲಿ ಸಂಚಲನ ಮೂಡಿಸಿತ್ತು. ಜೊತೆಗೆ ಹೆಚ್ಚು ಸಂಚಲನ ಮೂಡಿಸಿದ್ದು ಹತ್ಯೆಗೆ ಬಳಸಿದ್ದ ಮಿಲಿಟರಿಯಲ್ಲಿ ಬಳಿಸುವ ಲೈಟ್ ಮಿಷನ್‌ಗನ್. ಈ ಕುರಿತು ಮಾತನಾಡಿದ ನಿವೃತ್ತ ಡಿಎಸ್‌ಪಿ ಶೈಲೇಂದ್ರ ಸಿಂಗ್, ಅವತ್ತಿನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು. ತನಿಖೆ ನಡೆಸುವುದು ದೊಡ್ಡ ಮಾತು, ಕೇಸ್ ದಾಖಲಿಸುವುದು ಇನ್ನೂ ಕಷ್ಟವಾಗಿತ್ತು. ಅನ್ಸಾರಿ ಸಾಮ್ರಾಜ್ಯದ ಒಳಗಡೆ ಹೋಗೋದೆ ಕಷ್ಟ. ಅಂಥ ಹೊತ್ತಲ್ಲಿ ನಮ್ಮ ತಂಡ ಆತನ ಸಾಮ್ರಾಜಕ್ಕೆ ಹೊಕ್ಕು ಲೈಟ್ ಮಿಷನ್ ಗನ್ ವಶಪಡಿಸಿಕೊಂಡಿತ್ತು ಅಂಥ ಅಂದಿನ ಅನ್ಸಾರಿ ಸಾಮ್ರಾಜ್ಯದ ಬಗ್ಗೆ ವಿವರಿಸುತ್ತಿದ್ದರು.  

ಹೀಗೆ ಗನ್ ನಕಲಿ ಪರವಾನಗಿ ಹೊಂದಿದ್ದು, ಕೊಲೆ, ಸುಲಿಗೆ, ಹತ್ಯೆ, ಮಾಫಿಯಾ ನಡೆಸಿ ಡಾನ್ ಪಟ್ಟ ಗಿಟ್ಟಿಸಿಕೊಂಡಿದ್ದ ಮುಖ್ತಾರ್ ಅನ್ಸಾರಿ, ಈಗ ಹೃದಯಾಘಾತಕ್ಕೆ ತುತ್ತಾಗಿ ಮಣ್ಣಲ್ಲಿ ಮಣ್ಣಾಗಿದ್ದಾನೆ. ಮಾಫಿಯಾ ನಡೆಸೋನಿಗೆ ರಾಜಕಾರಣಿಗಳ ಶ್ರೀರಕ್ಷೆ ಇದ್ದೇ ಇರುತ್ತೆ. ಅವನ ಬೆನ್ನಿಗೆ ಒಬ್ಬರಲ್ಲ ಒಬ್ಬರು, ಒಂದಲ್ಲ ಒಂದು ಪಕ್ಷ ಇದ್ದೇ ಇರುತ್ತೆ. ಅನ್ಸಾರಿಯ ಘನಂದಾರಿ ಕೆಲಸ ನೋಡಿ ಬಿಎಸ್ಪಿ ಪಕ್ಷದ ಮಾಯಾವತಿ ಅವರು ಈತನಿಗೆ ಎರಡು ಬಾರಿ ಟಿಕೆಟ್ ನೀಡಿದ್ದರು. ಅನ್ಸಾರಿ ಗೆದ್ದು ಯು.ಪಿಯ ವಿಧಾನಸಭೆಯಲ್ಲಿ ರಕ್ಷಣೆಯ ಬಗ್ಗೆ, ಕ್ರೈಮ್ ಕಡಿಮೆ ಮಾಡುವ ಬಗ್ಗೆ ಮಾತಾಡಿದ್ದ ಅಂತ ಉತ್ತರ ಪ್ರದೇಶದ ಜನ ತಮಾಶೆ ಮಾಡ್ತಾರೆ. ಮೌ ಕ್ಷೇತ್ರದಿಂದ ಎರಡಲ್ಲ ಐದು ಬಾರಿ ಗೆದ್ದು ಅನ್ಸಾರಿ ವಿಧಾನಸಭೆ ಪ್ರವೇಶಿಸಿದ್ದ.  

Mukhtar Ansari Death: ಕಾಂಗ್ರೆಸ್‌ ಅಧ್ಯಕ್ಷ, ಸ್ವಾತಂತ್ರ್ಯ ಹೋರಾಟಗಾರನ ಮೊಮ್ಮಗ ಕ್ರಿಮಿನಲ್‌ ಆಗಿ ಬದಲಾಗಿದ್ದು ಹೇಗೆ?

ಇವತ್ತೇ ದೀಪಾವಳಿ : ಅನ್ಸಾರಿ ಸಂಚಿನಿಂದ ಎಕೆ-47 ಬುಲೆಟ್ ದಾಳಿಗೆ ತುತ್ತಾಗಿ ಪ್ರಾಣತೆತ್ತಿದ್ದ ಕೃಷ್ಣಾನಂದ ರೈ ಪುತ್ರ ಮತ್ತು ಪತ್ನಿ ಇವತ್ತು ಗೋರಕ್‌ನಾಥ ಮತ್ತು ವಾರಣಾಸಿಯ ವಿಶ್ವನಾಥನ ದರ್ಶನ ಪಡೆದರು. ಈ ಹೊತ್ತಲ್ಲಿ ಮಾತನಾಡಿದ ಪುತ್ರ ಇವತ್ತೇ ನಮಗೆ ದೀಪಾವಳಿ ಎಂದ. ನಾವು ವಿಶ್ವನಾಥನ ದರ್ಶನ ಪಡೆದಿದ್ದೇವೆ. ದೇವರು ನೋಡಿಕೊಳ್ತಾನೆ ಎಂದಷ್ಟೆ ಹೇಳಿದ್ರು. ಸುಮಾರು 19 ವರ್ಷಗಳ ಬಳಿಕ ಅವರ ಮನೆಯಲ್ಲಿ ಖುಷಿ ಕಂಡಿದ್ದೇವೆ ಅಂದ್ರು ಅವರ ಜೊತೆಗಿದ್ದವರು.

ವಿಷಪ್ರಾಶನದ ಆರೋಪದ ಬೆನ್ನಲ್ಲೇ ಮುಖ್ತಾರ್‌ ಅನ್ಸಾರಿ ಸಾವಿನ ತನಿಖೆ ಶುರು, ಇಲ್ಲಿಯವರೆಗೂ ಆಗಿದ್ದೇನು?

ಇಂಥ ಕ್ರಿಮಿನಲ್ ಆರೋಪ ಹೊತ್ತ ಅನ್ಸಾರಿ ಸಾವು ಇದೀಗ ರಾಜಕೀಯ ಬಣ್ಣ ಪಡೆದುಕೊಂಡಿದೆ. ಅನ್ಸಾರಿ ಕುಟುಂಬ ವಿಷಪ್ರಾಶನ ಮಾಡಲಾಗಿದೆ ಅಂಥ ಆರೋಪ ಮಾಡಿದ್ರೆ, ಇತ್ತ ಕಾಂಗ್ರೆಸ್ ಪಕ್ಷ , ಎಸ್ಪಿ, ಬಿ,ಎಸ್ಪಿ ಇದೊಂದು ಸಂಚಿನಿಂದ ಕೂಡಿದ ಕೊಲೆ ಅಂಥ ಆರೋಪಿಸಿವೆ. ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ನಡೆಯುತ್ತಿದೆ ಅಂಥ ಆರೋಪಿಸುತ್ತಿವೆ. ಬಿಜೆಪಿ ಇದು ಮುಸ್ಲಿಂರ ಓಲೈಕೆ ಅಂಥ ಆರೋಪ ಮಾಡುತ್ತಿವೆ. ಇನ್ನು ಪಂಜಾಬ್‌ನ ಭಗವಂತ್ ಮಾನ್ ಸರ್ಕಾರ, ಅಂದಿನ ಅಮರಿಂದರ್ ಸಿಂಗ್ ಸರ್ಕಾರ ಈತನಿಗೆ ವಿಐಪಿ ಟ್ರಿಟ್‌ಮೆಂಟ್ ನೀಡಿದೆ. ಈತನಿಗಾಗಿ 55 ಲಕ್ಷ ರುಪಾಯಿ ಪಂಜಾಬ್ ಸರ್ಕಾರ ಖರ್ಚು ಮಾಡಿದೆ. ಈತನ ಯುಪಿ ಸರ್ಕಾರದಿಂದ ನಮಗೆ ಹಣ ಬಂದಿಲ್ಲ. ಅಲ್ಲದೇ ಯುಪಿ ಸರ್ಕಾರ ನಕಲಿ ಎಫ್‌ಐಆರ್ ದಾಖಲಿಸಿದೆ ಎಂದು ಆರೋಪ ಮಾಡಿದೆ.     
 

click me!