ಪೂರ್ವ ಲಡಾಖ್‌ನಲ್ಲಿ ಭಾರತದ ಮೇಲೆ ಚೀನಾ ದಾಳಿ: 2020ರ ದೊಡ್ಡ ತಪ್ಪು!

By Suvarna NewsFirst Published Jun 7, 2021, 4:54 PM IST
Highlights

* ಗಲ್ವಾನ್‌ ಕಣಿವೆಯಲ್ಲಿ ಚೀನಾ ಭಾರತ ಸೈನಿಕರ ಸಂಘರ್ಷ

* ಪೂರ್ವ ಲಡಾಖ್‌ನಲ್ಲಿ ಭಾರತದೊಂದಿಗೆ ಬೇಕೆಂದೇ ಜಗಳಕ್ಕೆ ನಿಂತ ಡ್ರ್ಯಾಗನ್

* ಭಾರತ ತಿರುಗೇಟು ನೀಡುತ್ತದೆ ಎಂದು ಊಹಿಸಿಯೂ ಇರದ ಚೀನಾ

ಲೇಖಕರು: ಲೆಫ್ಟಿನೆಂಟ್ ಜನರಲ್ ಸೈಯದ್ ಅಟಾ ಹಸ್ನೈನ್ (ನಿವೃತ್ತ)
ಶ್ರೀನಗರ: 15 ಕಾರ್ಪ್ಸ್ ಮಾಜಿ ಕಮಾಂಡರ್ ಮತ್ತು ಕಾಶ್ಮೀರದ ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ.

ಪೂರ್ವ ಲಡಾಖ್‌ನ ಗಲ್ವಾನ್‌ನಲ್ಲಿ ಭಾರತ ಹಾಗೂ ಚೀನಾ ನಡುವಿನ ಸಂಘರ್ಷಕ್ಕೆ ಒಂದು ವರ್ಷವಾಗಿದೆ. ಹೀಗಿರುವಾಗ ಈ ಸಂಘರ್ಷ ಸಂಬಂಧ ಅನೇಕ ವಿಚಾರಗಳ ಬಗ್ಗೆ ಸವಾಲುಗಳರೆದಿದ್ದಿವೆ. ಚೀನಾ ಏಕಾಏಕಿ ಇಂತಹುದ್ದೊಂದು ದಾಳಿ ನಡೆಸಿದ್ದೇಕೆ? ದಾಳಿ ನಡೆದಲ್ಲಿ ತನ್ನ ನಿಯಂತ್ರಣವಿಲ್ಲ ಎಂದು ತಿಳಿದಿದ್ದರೂ ಡ್ರ್ಯಾಗನ್‌ ಹೀಗೆ ಯಾಕೆ ವರ್ತಸಿತು ಎಂಬುವುದು ಪ್ರಮುಖ ವಿಚಾರ. ಜೊತೆಗೆ ಈ ವಿಚಾರವನ್ನು ಚೀನಾ ವಿದೇಶಾಂಗ ಬನೀತಿಯಲ್ಲಿ ಪಗ್ರಮುಖ ವಿಚಾರವನ್ನಾಗಿ ಮಾಡಿಕೊಂಡಿದೆ. ಹೀಗಿರುವಾಗ ಇದು ಚೀನಾದ ಪ್ರಮುಖ ತಪ್ಪಾಗಿ ಮಾರ್ಪಾಡಾಗುತ್ತಾ ಎಂಬುವುದು ಪ್ರಮುಖ ಪ್ರಶ್ನೆ.

ಶತ್ರು ರಾಷ್ಟ್ರದ ಬೆದರಿಕೆ ಎದುರಿಸಲು ಭಾರತದ ಮಿಲಿಟರಿ ಶಕ್ತಿ ರೂಪಾಂತರಗೊಳ್ಳಬೇಕು: ರಾವತ್!

 ಕ್ಸಿ ಜಿನ್‌ಪಿಂಗ್ ಚಿತ್ರಣವೇ ಬದಲು

ಕ್ಸಿ ಜಿನ್‌ಪಿಂಗ್ ಇತ್ತೀಚೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲಶಾಲಿಯಾಗಲು ಕರೆ ನೀಡಿದ್ದರು. ಅಲ್ಲದೇ ಜಿನ್‌ಪಿಂಗ್ ಸಹ ವುಲ್ಫ್ ವಾರಿಯರ್ ರಾಜತಾಂತ್ರಿಕತೆಗೆ ಪ್ರಾಮುಖ್ಯತೆ ನೀಡಲಿಲ್ಲ, ಇದು ಚೀನಾ ಹೆಸರನ್ನು ಕೆಡಿಸಿತ್ತು. ಅಲ್ಲದೇ ಇದೆಲ್ಲವೂ ಕಳೆದ 30 ವರ್ಷಗಳಿಂದ ಸಂವಹನ ಕಾರ್ಯತಂತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ವೃತ್ತಿಪರಗೊಳಿಸಿದ ದೇಶ ನಡೆಸಿದೆ ಎಂಬುವುದೂ ಇನ್ನೂ ವಿಚಿತ್ರ ವಿಚಾರವಾಗಿದೆ. 

ಅಲ್ಲದೇ ಭಾರತದ ದಕ್ಷಿಣ ಏಷ್ಯಾದ ನೆರೆಹೊರೆಯಲ್ಲಿ ಪ್ರಭಾವವನ್ನು ಸೃಷ್ಟಿಸಲು ಚೀನಾ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿತ್ತು, ಅದು ಉನ್ನತ ನಾಯಕತ್ವ ಮಟ್ಟದಲ್ಲಿ ಭಾರತದೊಂದಿಗಿನ ಸಂವಾದದ ಹಾದಿಯಲ್ಲಿತ್ತು. ಅಮೆರಿಕದ ಪ್ರಮುಖ ಬೆಂಬಲಿಗನೆಂಬ ರೂಪದಲ್ಲಿ ಭಾರತವನ್ನು ಸಂದಿಗ್ಧತೆಗೆ ತಳ್ಳುವ ಪ್ರಯತ್ನವೂ ನಡೆದಿತ್ತು. ಚೀನಾದ ಈ ಉದ್ದೇಶ ಭಾರತಕ್ಕೂ ತಿಳಿದಿತ್ತು ಹಾಗೂ ಜಾಗರೂಕತೆಯಿಂದ ವಹಿಸಿತ್ತು. ಈ ಪ್ರದೇಶದಲ್ಲಿ ತನ್ನದೇ ಉಪಾಯದ ಮೂಲಕ ಆರಾಮಾಗಿ ಬದುಕಬಹುದಿತ್ತು.

ಗಲ್ವಾನ್‌ ಸಂಘರ್ಷಕ್ಕೆ ಒಂದು ವರ್ಷ: ಚೀನಾ, ಭಾರತ ಸಂಬಂಧಕ್ಕೆ ತಿರುವು ಕೊಟ್ಟ ಹೋರಾಟ!

ಯಾಕೆಂದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಡಳಿತದಡಿ ಭಾರತ ಶಾಂತವಾಗಿ ಕೂರುವುದಿಲ್ಲ ಎಂಬುವುದನ್ನು ಮನಗಂಡಿದೆ. ಡೊಕ್ಲಾಂ ವಿವಾದ, ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್‌ ಏರ್‌ಸ್ಟ್ರೈಕ್, ಆಪೊರೇಷನ್ ಆಲೌಟ್‌, 270ನೇ ವಿಧಿಯನ್ನು ರದ್ದುಗೊಳಿಸುವುದು ಹೀಗೆ 2016 ರಿಂದ 2019ರ ನಡುವೆ ಭಾರತ ತೆಗೆದುಕೊಂಡ ನಿರ್ಧಾರದಿಂದ ಅದು ಮತ್ತಷ್ಟು ಬಲಶಾಲಿಯಾಗಿದೆ ಎಂಬುವುದನ್ನು ತೋರಿಸಿಕೊಟ್ಟಿತ್ತು. ಹೀಗಿರುವಾಗ ಗಡಿ ವಿಚಾರ ಕೇವಲ ಅಲ್ಲಿಗೇ ನಿಲ್ಲದೇ ಮುಂದೆ ಚೀನಾಗೆ ದೊಡ್ಡ ಕಂಟಕವಾಗಿ ಪರಿಣಮಿಸಬಹುದೆಂಬ ಅಂದಾಜಿತ್ತು. 

ಚೀನಾ ಉದ್ದೇಶವೂ ಅಸ್ಪಷ್ಟ

ಯಾವುದಾದರೂ ದೇಶ ಆಕ್ರಮಣ ನಡೆಸುವಾಗ ಅಥವಾ ಗಂಭೀರವಾದ ಆಪರೇಷನ್‌ಗೆ ಯೋಜನೆ ರೂಪಿಸುವಾಗ ಅದರ ಹಿಂದೆ ಕೆಲವೊಂದು ಉದ್ದೇಶಗಳಿರುತ್ತವೆ. ಆಧರೆ ಚಿನಾ ನಡೆಸಿದ ಈ ದಾಳಿಯ ಉದ್ದೇಶ ಈವರೆಗೂ ಅಸ್ಪಷ್ಟವಾಗಿದೆ. ಆದರೆ ಈ ಬಗ್ಗೆ ದೀರ್ಘವಾಗಿ ಯೋಚಿಸಿದಾಗ ಭಾರತದ ಆತ್ಮವಿಶ್ವಾಸ ಕುಸಗಸಿಸಲು, ಆರ್ಥಿಕವಾಗಿ ಹೊಡೆತ ನೀಡಿ ಯುದ್ಧದಲ್ಲಿ ಹೋರಾಡುವ ಕ್ಷಮತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಇಂತಹುದ್ದೊಂದು ದುಸ್ಸಾಹಸ ನಡೆಸಿರಬಹುದೆಂದು ಹೇಳಬಹುದು. ಆದರೆ ಭಾರತವೂ ಸುಮ್ಮನಾಗಲಿಲ್ಲ, ಚೀನಾದ ಈ ನರಿಬುದ್ಧಿಯಿಂದ ಚಿರಪರಿಚಿತಗೊಂಡಿದ್ದ ಭಾರತವೂ ತಕ್ಕ ಉತ್ತರ ನೀಡಿತು. 

ಇನ್ನು ಯುದ್ಧ ಸಂಭವಿಸಿದರೂ ಚೀನಾ ಭಾರತದೊಂದಿಗಿನ ಸೌಹಾರ್ದತೆಯ ಲಾಭವನ್ನು ಕಳೆದುಕೊಳ್ಳುತ್ತದೆಯಾದರೂ, ಭಾರತ ಯುದ್ಧದ ಹೊಸ್ತಿಲನ್ನು ತಲುಪಿದರೂ ತನ್ನೊಂದಿಗಿನ ವ್ಯಾಪಾರ ಸಂಬಂಧ ಮುಂದುವರೆಸುತ್ತದೆ ಎಂದು ಚೀನಾ ನಂಬಿತ್ತು. ಹೀಗಾಗಿ ಭಾರತವನ್ನು ಎಚ್ಚರಿಸಲು ತಮ್ಮ ಮಿಲಿಟರಿ ಕಾರ್ಯತಂತ್ರವನ್ನು ಕೇವಲ ಸೀಮಿತ ಒತ್ತಡದಿಂದ ಮುಂದುವರಿಸಿದ್ದರು. 

ಇಲ್ಲಿ ನಡೆಯುವ ಪ್ರಕ್ರಿಯೆ ಉಭಯ ದೇಶಗಳ ಸಂಬಂಧ ಆರ್ಥಿಕ ಹಾಗೂ ರಾಜಕೀಯವಾಗಿ ಮುರಿಯದಂತೆ ವಿನ್ಯಾಸಗೊಳಿಸಲಾಗಿತ್ತು. ಏನೇ ಆಗಲಿ ಆದರೆ ಕಣಿವೆಯಲ್ಲಿ ನಡೆದದ್ದು ಮಾತ್ರ ತಪ್ಪು. ಪರಿಸ್ಥಿತಿ ಕೈಮೀರಿ ಹೋಗುತ್ತದೆ ಎಂದು ಚೀನಾ ಭಾವಿಸಿರಲಿಲ್ಲ ಹಾಗೂ ಎರಡೂ ದೇಶದ ಸೈನಿಕರ ಪ್ರಾಣ ಹೋಗುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಉಭಯ ದೇಶಗಳ ನಡುವೆ ಒಂದು ಗಡಿ ಇತ್ತು. ಇಲ್ಲಿ 1975ರಿಂದ ಫೈರಿಂಗ್ ನಡೆದಿರಲಿಲ್ಲ, ಯಾರೊಬ್ಬರ ಪ್ರಾಣವೂ ಹೋಗಿರಲಿಲ್ಲ. 

ಗಲ್ವಾನ್ ಕಣಿವೆಯಲ್ಲಾದ ಸಂಘರ್ಷದ ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಚಾರ ಅಲ್ಲಿಗೇ ಕೊನೆಯಾಗುತ್ತಿತ್ತು. ಆದರೆ ಹಾಗಾಗಲಿಲ್ಲ. ಚೀನಾ ಈ ವಿವಾದವನ್ನು ಮತ್ತಷ್ಟು ಎಳೆಯಲಾರಂಭಿಸಿತು. ಅನೇಕ ಸುತ್ತಿನ ಮಾತುಕತೆ ನಡೆರೂ ಬಗೆಹರಿಯಲಿಲ್ಲ. ಚೀನಾ ಗಡಿ ಬಳಿ ತನ್ನ ಸೈನಿಕರನ್ನು ಮತ್ತಷ್ಟು ಸಂಖ್ಯೆಯಲ್ಲಿ ಜಮಾವಣೆ ಮಾಡಲಾರಂಭಿಸಿತು. ಆದರೆ ಇತ್ತ ಭಾರತವೂ ಸುಮ್ಮನಾಗಲಿಲ್ಲ. ಗಡಿಗೆ ತನ್ನ ಸೈನಿಕರನ್ನೂ ಕಳುಹಿಸಿತು. ಅವರಿಗೆ ಬೇಕಾದ ಎಲ್ಲಾ ಸೌಲಭ್ಯಗಳಿಗೆ ವ್ಯವಸ್ಥೆ ಮಾಡಿದ್ದಲ್ಲದೇ, ಯುದ್ಧ ಪರಿಸ್ಥಿತಿಗೆ ಬೇಕಾದ ಎಲ್ಲಾ ಶಸ್ತ್ರಾಸ್ತ್ರಗಳನ್ನು ಸಾಗಿಸಿತು. ಚೀನಾ ಭಾರತದಿಂದ ಇಂತಹುದ್ದೊಂದು ನಡೆಯನ್ನು ನಿರೀಕ್ಷಿಸಿರಲ್ಲ. ಭಾರತಕ್ಕೆ ತನ್ನನ್ನು ಎದುರಿಸುವ ಸಾಹಸವಿಲ್ಲ ಎಂದೇ ಅದು ಭಾವಿಸಿತ್ತು. ಆದರೆ ಇತ್ತ ಭಾರತ ಗಡಿಯಲ್ಲಿ ಚೀನಾ ಎದುರಿಸಲು ಸಂಪೂರ್ಣವಾಗಿ ಸಜ್ಜಾಗಿತ್ತು. 

ಅಲ್ಲದೇ ಆಗಸ್ಟ್ 29-30ರೊಳಗೆ ಭಾರತ ತನ್ನ ಭೂಪ್ರದೇಶವನ್ನೆಲ್ಲಾ ಮರಳಿ ಪಡೆದಾಗಿತ್ತು. ಆದರೆ ಇದು ಚೀನಾಗೆ ಬಹುದೊಡ್ಡ ಶಾಕ್ ನೀಡಿತ್ತು. ಚೀನಾ ಹಲವಾರು ಬಾರಿ ತನ್ನ ಕಾರ್ಯತಂತ್ರ ಮತ್ತು ಭಾರತದ ವಿರುದ್ಧ ಲಡಾಕ್‌ನಲ್ಲಿ ನಡೆಯುವ ಕೊನೆಯ ಆಟದ ಬಗ್ಗೆ ಯೋಚಿಸದೇ ದೀರ್ಘ ಕಾಲದಿಂದ ಬೆದರಿಕೆ ಹಾಕುತ್ತಾ ಬಂದಿತ್ತು. ಕಾಲು ಕೆರೆದು ಜಗಳಕ್ಕೆ ಬಂದ ಚೀನಾಗೆ ಕೊನೆಗೂ ಭಾರತ ಸಾಮರ್ಥ್ಯ ಮತ್ತು ದೌರ್ಬಲ್ಯಗಳ ಬಗ್ಗೆ ಅರಿತುಕೊಳ್ಳುವಂತೆ ಮಾಡಿದೆ. ಚೀನಾದ ಒತ್ತಡಕ್ಕೆ ಮಣಿಯದೆ, ದೊಡ್ಡ ರಾಷ್ಟ್ರಗಳನ್ನು ಹೇಗೆ ಎದುರಿಸಬೇಕೆನ್ನುವುದನ್ನು ಭಾರತ ತೋರಿಸಿಕೊಟ್ಟಿದೆ. 

ಆದರೆ ಇದು ಆಟದ ಕೊನೆಯಲ್ಲ, ಹೀಗಾಗಿ ಎಚ್ಚರಿಕೆ ಕಾಪಾಡಿಕೊಳ್ಳುವುದರಲ್ಲೇ ಬುದ್ಧಿವಂತಿಕೆಡ ಇದೆ. ಕೊರೋನಾವಿರಲಿ, ಇಲ್ಲದಿರಲಿ ಏನೇ ಆದರೂ ವಿಶ್ರಾಂತಿ ಪಡೆಯುವಂತಿಲ್ಲ ಎಂಬುವುದು ವಾಸ್ತವ. 

ಈ ಸುದ್ದಿಯನ್ನು ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ: Blunder of 2020: It went horribly wrong for China

click me!