ಗರ್ಭಪಾತ ಮಿತಿ 24 ವಾರಕ್ಕೆ ವಿಸ್ತರಿಸಿ ಕೇಂದ್ರ ಅಧಿಸೂಚನೆ!

By Kannadaprabha NewsFirst Published Sep 27, 2021, 8:08 AM IST
Highlights

* ಅತ್ಯಾ​ಚಾರ ಸಂತ್ರ​ಸ್ತರು, ಅಪ್ರಾ​ಪ್ತರು, ಕಾಯಿ​ಲೆ​ಪೀ​ಡಿ​ತ​ರಿಗೆ ಅನ್ವ​ಯ

* ಗರ್ಭಪಾತ ಮಿತಿ 24 ವಾರಕ್ಕೆ ವಿಸ್ತರಿಸಿ ಕೇಂದ್ರ ಅಧಿಸೂಚನೆ

* ಸಾಮಾನ್ಯ ಸಂದರ್ಭಗಳಲ್ಲಿ 20 ವಾರಗಳ ಮಿತಿಯೇ ಮುಂದು​ವ​ರಿ​ಕೆ

ಮುಂಬೈ(ಸೆ.27): ವೈದ್ಯಕೀಯ ವಿಧಾನದ ಮೂಲಕ ಗರ್ಭವನ್ನು ತೆಗೆಸಲು ಇದ್ದ 20 ವಾರಗಳ ಮಿತಿಯನ್ನು 24 ವಾರಗಳವರೆಗೆ ವಿಸ್ತರಿಸಿರುವ ಗರ್ಭಪಾತ (ತಿದ್ದುಪಡಿ) ಕಾಯ್ದೆ- 2018 ಅನ್ನು ಜಾರಿಗೊಳಿಸಿ ಆರೋಗ್ಯ ಸಚಿವಾಲಯ(Heath Ministry) ಶುಕ್ರವಾರ ಅಧಿಸೂಚನೆ ಹೊರಡಿಸಿದೆ.

ಆದರೆ, ಈ ನಿಯಮ ಸಾರ್ವತ್ರಿಕವಾಗಿ ಎಲ್ಲರಿಗೂ ಅನ್ವಯ ಆಗುವುದಿಲ್ಲ. ಅತ್ಯಾಚಾರ ಸಂತ್ರಸ್ತರು(Rape Victims), ಅಪ್ರಾಪ್ತ ವಯಸ್ಕರು(Minors), ಮಾರಣಾಂತಿಕ ಅಸಹಜತೆಯನ್ನು ಹೊಂದಿರುವವರು ಮಾತ್ರವೇ ಗರ್ಭಪಾತಕ್ಕೆ 24 ವಾರಗಳ ಮಿತಿ ಅನ್ವಯ ಆಗಲಿದೆ.

ಸಾಮಾನ್ಯವಾಗಿ ಗರ್ಭಪಾತಕ್ಕೆ ಗರ್ಭನಿರೋಧಕಗಳ ವೈಫಲ್ಯವನ್ನು ಕಾರಣವನ್ನಾಗಿ ನೀಡಲಾಗುತ್ತದೆ. ಇಂತಹ ಸಾಮಾನ್ಯ ಸಂದರ್ಭಗಳಲ್ಲಿ ಗರ್ಭಪಾತಕ್ಕೆ ಹಾಲಿ ಇರುವ 20 ವಾರಗಳ ಮಿತಿಯೇ ಅನ್ವಯ ಆಗಲಿದೆ.

ತಜ್ಞರ ಆಕ್ಷೇ​ಪ:

ಇತ್ತೀಚೆಗೆ ಮಹಿಳೆಯೊಬ್ಬಳಿಗೆ 21 ವಾರಗಳ ಗರ್ಭಪಾತಕ್ಕೆ ಅವಕಾಶ ನೀಡಿದ್ದ ಬಾಂಬೆ ಹೈಕೋರ್ಟ್‌, 24 ವಾರದ ಗರ್ಭಪಾತಕ್ಕೆ ನೂತನ ಮಾರ್ಗಸೂಚಿಯನ್ನು ಪಾಲುಸುವಂತೆ ಸೂಚನೆ ನೀಡಿತ್ತು. ಆದರೆ, ಗರ್ಭಪಾತದ ನಿರ್ಣಯ ಕೈಗೊಳ್ಳುವುದಕ್ಕೆ ಸ್ಪಷ್ಟವಾದ ವ್ಯಾಖ್ಯಾನಗಳು ಕಾಯ್ದೆಯಲ್ಲಿ ಇಲ್ಲ.

ಅಲ್ಲದೇ ಕೇಂದ್ರ, ರಾಜ್ಯ ಅಥವಾ ಜಿಲ್ಲಾ ಮಟ್ಟದಲ್ಲಿ ಗರ್ಭಪಾತಕ್ಕೆ ಯಾವ ಮಾನದಂಡವನ್ನು ಪಾಲಿಸಬೇಕು ಎಂಬುದರ ಬಗ್ಗೆಯೂ ಕಾಯ್ದೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸದೇ ಇರುವುದು ಈ ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಸ್ಪಷ್ಟತೆ ಕೋರಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಸ್ತ್ರೀರೋಗ ತಜ್ಞ ನಿಖಿಲ್‌ ದಾತರ್‌ ಹೇಳಿದ್ದಾರೆ.

 

click me!