ಪಶುವೈದ್ಯೆ ಪ್ರಿಯಂಕಾ ರೆಡ್ಡಿ ಅತ್ಯಾಚಾರ, ಹತ್ಯೆ ಪ್ರಕರಣ| ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು| ಆರೋಪಿಗಳನ್ನು ವಶಕ್ಕೆ ಒಪ್ಪಿಸುವಂತೆ ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ ಜನಸ್ತೋಮ| ಶಾದ್‌ನಗರ್ ಪೊಲೀಸ್ ಠಾಣೆಯ ಮುಂದೆ ಜನಾಕ್ರೋಶ ಸ್ಫೋಟ| ಠಾಣೆ ಒಳಗೆ ನುಗ್ಗಲು ಬಿಡದ ಪೊಲೀಸರ ಮೇಲೆ ಚಪ್ಪಲಿ ಎಸೆದ ಜನ| ನಾಲ್ವರೂ ಆರೋಪಿಗಳನ್ನು ಚಂಚಲ್‌ಗುಡ ಜೈಲಿಗೆ ವರ್ಗಾಯಿಸಿದ ಪೊಲೀಸರು|
ಶಾದ್‌ನಗರ್(ನ.30): ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಸೆರೆ ಸಿಕ್ಕಿರುವ ನಾಲ್ವರು ಆರೋಪಿಗಳನ್ನು ಶಾದ್‌ನಗರ್ ಪೊಲೀಸ್ ಠಾಣೆಯಲ್ಲಿ ಬಂಧಿಸಿಡಲಾಗಿದೆ.
ಸುಟ್ಟಸ್ಥಿತಿಯಲ್ಲಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆ ಶವ ಪತ್ತೆ
undefined
ಈ ವೇಳೆ ಆರೋಪಿಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಒತ್ತಾಯಿಸಿ ಭಾರೀ ಜನಸ್ತೋಮ ಶಾದ್‌ನಗರ್ ಪೊಲೀಸ್ ಠಾಣೆ ಮುಂದೆ ಜಮಾಯಿಸಿದೆ. ಆರೋಪಿಗಳಿಗೆ ನಾವೇ ಶಿಕ್ಷೆ ಕೊಡುತ್ತೇವೆ ಎಂದು ನಾಗರಿಕರು ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದ್ದಾರೆ.
: Locals hurled slippers on police after police stopped them from entering Shadnagar police station, where the accused in rape&murder case of the woman veterinary doctor, were lodged earlier today. Accused have been shifted to Chanchalguda Central Jail. pic.twitter.com/f8nV4yLiw3
— ANI (@ANI)ಈ ವೇಳೆ ಪೊಲಿಸ್ ಠಾಣೆ ಪ್ರವೇಶಿಸದಂತೆ ಜನರನ್ನು ಪೊಲೀಸರು ತಡೆಯುತ್ತಿದ್ದು, ಜನ ಪೊಲೀಸರತ್ತ ಚಪ್ಪಲಿ ಎಸೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಆಕ್ರೋಶಭರಿತ ಜನರನ್ನು ನಿಯಂತ್ರಿಸುವಲ್ಲಿ ಪೊಲೀಸರು ಹರಸಾಹಸಪಡುತ್ತಿದ್ದಾರೆ.
ವೈದ್ಯೆಯ ಮೇಲೆ ರೇಪ್, ಕೊಲೆ: ಪೊಲೀಸರಿಗೇಕೆ ಸಂತ್ರಸ್ತೆ ಕರೆ ಮಾಡಲಿಲ್ಲ? ಮಂತ್ರಿ ವಿವಾದ!
ಸದ್ಯ ನಾಲ್ವರೂ ಆರೋಪಿಗಳನ್ನು ಚಂಚಲ್‌ಗುಡ ಜೈಲಿಗೆ ವರ್ಗಾಯಿಸಲಾಗಿದ್ದು, ಜನ ಕಾನೂನು ಪ್ರಕ್ರಿಯೆಗೆ ಸಹಕರಿಸುವಂತೆ ತೆಲಂಗಾಣ ಡಿಜಿಪಿ ಮನವಿ ಮಾಡಿದ್ದಾರೆ.
ವೈದ್ಯೆ ಅತ್ಯಾಚಾರ ಆರೋಪಿಗಳ ಪರ ವಕಾಲತ್ತಿಗೆ ವಕೀಲರ ನಕಾರ!