ಹೈದರಾಬಾದ್(ನ. 28)  ಬುಧವಾರ ರಾತ್ರಿ ನಾಪತ್ತೆಯಾಗಿದ್ದ 26 ವರ್ಷದ ಪಶುವೈದ್ಯೆ ಪ್ರಿಯಾಂಕಾ ರೆಡ್ಡಿ ಅವರ ಶವ ಗುರುವಾರ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ತೆಲಂಗಾಣದ ಕೊಲ್ಲೂರು ಗ್ರಾಮದ ಪಶುವೈದ್ಯಕೀಯ ಆಸ್ಪತ್ರೆಯಲ್ಲಿ ಪಶುವೈದ್ಯೆಯಾದ ಪ್ರಿಯಾಂಕಾ ರೆಡ್ಡಿ, ಬುಧವಾರ ಬೆಳಗ್ಗೆ ಶಾಡ್ ನಗರದ ತನ್ನ ಮನೆಯಿಂದ ಕೆಲಸಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದರು. ನಂತರ  ರಾತ್ರಿ ಬೈಕ್ ಪಂಕ್ಚರ್ ಆಗಿದೆ ಎಂದು ತನ್ನ ತಂಗಿಗೆ ಕರೆ ಮಾಡಿದ್ದರು. ಇದಾದ ಮೇಲೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದರು.

ಅವರ ಶವ ಗುರುವಾರ ಶಾಡ್‍ನಗರದಲ್ಲಿ ಅಂಡರ್ ಬ್ರಿಡ್ಜ್  ಬಳಿ ಪತ್ತೆಯಾಗಿದೆ.   ಅಕ್ಕ ನನಗೆ ರಾತ್ರಿ 9:15 ಸುಮಾರಿಗೆ ಕರೆ ಮಾಡಿದ್ದಳು. ನನ್ನ ಬೈಕ್ ಪಂಕ್ಚರ್ ಆಗಿದೆ. ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಳು ಎಂದು ತಂಗಿ ಹೇಳಿಕೆ ನೀಡಿದ್ದಾರೆ.

ಈಗ ಶವ ಪತ್ತೆಯಾಗಿದ್ದು ಆಕೆ ಹಾಕಿದ್ದ ಚೈನ್ ಮತ್ತು ಲಾಕೆಟ್ ನೋಡಿ ಪತ್ತೆ ಮಾಡಿದ್ದೇವೆ ಎಂದು ತಂಗಿ ಹೇಳಿದ್ದಾರೆ.

ಪೊಲೀಸರು ಘಟನೆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಪ್ರಿಯಾಂಕಾ ಕುಟುಂಬ ಸಾವಿಗೆ ಕಾರಣರಾದವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಒತ್ತಾಯ ಮಾಡಿದೆ.