ಸೋಂಕು ಪೀಡಿತೆ ಮೇಲೆ ಆ್ಯಂಬುಲೆನ್ಸ್‌ ಡ್ರೈವರ್‌ ಅತ್ಯಾಚಾರ!

By Suvarna NewsFirst Published Sep 7, 2020, 5:39 PM IST
Highlights

ಕೇರಳದ ಪಟ್ಟಣಂತಿಟ್ಟತಾಲೂಕಿನ ಆರಾನ್‌ಮುಲ ಎಂಬಲ್ಲಿ ಘಟನೆ| ಸೋಂಕು ಪೀಡಿತೆ ಮೇಲೆ ಆ್ಯಂಬುಲೆನ್ಸ್‌ ಡ್ರೈವರ್‌ ಅತ್ಯಾಚಾರ

ಪಟ್ಟಣಂತಿಟ್ಟ(: ಕೋವಿಡ್‌-19 ಸೋಂಕು ಪೀಡಿತ 19 ವರ್ಷದ ಯುವತಿ ಮೇಲೆ ಆ್ಯಂಬುಲೆನ್ಸ್‌ ಚಾಲಕನೋರ್ವ ಅತ್ಯಾಚಾರ ಮಾಡಿದ ಹೇಯ ಘಟನೆ ಕೇರಳದ ಪಟ್ಟಣಂತಿಟ್ಟತಾಲೂಕಿನ ಆರಾನ್‌ಮುಲ ಎಂಬಲ್ಲಿ ಶನಿವಾರ ನಡೆದಿದೆ.

ಸೋಂಕಿತ ಯುವತಿಯನ್ನು ಚಿಕಿತ್ಸೆಗಾಗಿ ಸರ್ಕಾರಿ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಗುತ್ತಿತ್ತು. ಈ ವೇಳೆ ಚಾಲಕ ನೌಫಲ್‌ (29) ಎಂಬಾತ ನಿರ್ಜನ ಪ್ರದೇಶದಲ್ಲಿ ಆ್ಯಂಬುಲೆನ್ಸ್‌ ನಿಲ್ಲಿಸಿ ಯುವತಿ ಮೇಲೆ ಆತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಸಂತ್ರಸ್ತೆಯ ತಾಯಿ ನೀಡಿದ ದೂರಿನನ್ವಯ ಭಾನುವಾರ ಆತನನ್ನು ಬಂಧಿಸಲಾಗಿದ್ದು, ಕೆಲಸದಿಂದ ಕಿತ್ತು ಹಾಕಲಾಗಿದೆ. ತನ್ನ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಸಂತ್ರಸ್ತೆ ವೈದ್ಯರೊಂದಿಗೆ ಹೇಳಿಕೊಂಡಿದ್ದು, ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಮಹಿಳೆ ಆದೂರ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕಾಯಕುಳಂ ನಿವಾಸಿಯಾಗಿರುವ ಆರೋಪಿ ಈ ಹಿಂದೆ ಕೊಲೆ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದ.

ಘಟನೆ ಆಡಳಿತ ಹಾಗೂ ವಿಪಕ್ಷ ನಾಯಕರ ಗುದ್ದಾಟಕ್ಕೆ ವೇದಿಕೆ ಕಲ್ಪಿಸಿದೆ. ಆರೋಪಿಯ ಮೇಲೆ ಕಾಠಿಣ ಕ್ರಮ ಜರುಗಿಸುವ ಭರವಸೆ ನೀಡಿರುವ ರಾಜ್ಯ ಆರೋಗ್ಯ ಸಚಿವೆ ಕೆ.ಕೆ ಶೈಲಜಾ, ಮಹಿಳಾ ರೋಗಿಗಳಿಗೆ ವಿಶೇಷ ಭದ್ರತಾ ವ್ಯವಸ್ಥೆ ಬೇಕಾಗಿದೆ. ಅಲ್ಲದೇ ಆರೋಪಿಯ ಚಾಲನಾ ಪರವಾನಗಿ ರದ್ದು ಮಾಡಬೇಕು. ಆ್ಯಂಬುಲೆನ್ಸ್‌ ಚಾಲಕರನ್ನು ನೇಮಕ ಮಾಡುವ ಮ್ನುನ ಅವರ ಹಿನ್ನೆಲೆ ಪರೀಕ್ಷೆ ಮಾಡಬೇಕು ಎಂದು ಅವರು ಹೇಳಿದ್ದಾರೆ.

click me!