Ambulance  

(Search results - 64)
 • mangalore

  Karnataka Districts18, Feb 2020, 8:17 AM IST

  ಜೀರೋ ಟ್ರಾಫಿಕ್‌ನಲ್ಲಿ ಬಂದಿದ್ದ ಮಗುವಿನ ಶಸ್ತ್ರಚಿಕಿತ್ಸೆ ಯಶಸ್ವಿ

  ಹೃದಯ ಸಂಬಂಧಿ ಸಮಸ್ಯೆಯಿಂದ ಫೆ.6ರಂದು ಮಂಗಳೂರಿನಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ ಮೂಲಕ ಆಗಮಿಸಿದ್ದ ಮಗುವಿಗೆ ಜಯದೇವ ಆಸ್ಪತ್ರೆ ವೈದ್ಯರು ಯಶಸ್ವಿ ತೆರೆದ ಹೃದಯ ಶಸ್ತ್ರಚಿಕಿತ್ಸೆ ನಡೆಸಿದ್ದು, ಗುಣಮುಖವಾಗಿರುವ ಮಗುವನ್ನು ಸೋಮವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

 • Zero traffic
  Video Icon

  Shivamogga10, Feb 2020, 1:17 PM IST

  ಉಸಿರಾಟದ ಸಮಸ್ಯೆ ಇರುವ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಬೆಂಗಳೂರಿಗೆ ರವಾನೆ

  ಶಿವಮೊಗ್ಗದಿಂದ ಬೆಂಗಳೂರಿಗೆ ಜೀರೋ ಟ್ರಾಫಿಕ್‌ನಲ್ಲಿ ನವಜಾತ ಶಿಶುವನ್ನು ಕರೆ ತರಲಾಗಿದೆ.  ದಾವಣಗೆರೆಯ ಸ್ವಾಮಿ -ಸುಧಾ ದಂಪತಿಯ ಮಗು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಜೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. 

 • 108 ambulance

  Karnataka Districts9, Feb 2020, 1:38 PM IST

  ಆರೋಗ್ಯ ಸಚಿವ ಶ್ರೀರಾಮುಲು ಜಿಲ್ಲೆಯಲ್ಲೇ ಆಂಬುಲೆನ್ಸ್ ಸಿಗದೇ ಗರ್ಭಿಣಿಯ ನರಳಾಟ

  ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಆರೋಗ್ಯ ಸಚಿವ ಬಿ. ಶ್ರೀರಾಮುಲು ಅವರ ಜಿಲ್ಲೆಯಲ್ಲೇ ಗರ್ಭಿಣಿಯೊಬ್ಬರು ಆಂಬುಲೆನ್ಸ್ ಸಿಗದೇ  ಪರದಾಡಿದ ಘಟನೆ ನಗರದಲ್ಲಿ ನಡೆದಿದೆ. ಓರಿಸ್ಸಾ ಮೂಲದ ಕಾರ್ಮಿಕ ಮಹಿಳೆ ಆಂಬುಲೆನ್ಸ್ ಸಿಗದೇ ನರಳಾಡಿದ್ದಾರೆ.  
   

 • Delivery

  Karnataka Districts8, Feb 2020, 10:23 AM IST

  ಮಂಗಳೂರು: ದಾರಿ ಮಧ್ಯೆ ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ

  ತುಂಬು ಗರ್ಭಿಣಿಯೊಬ್ಬರನ್ನು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಮಹಿಳೆ ವಾಹನದಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಪಣಂಬೂರು ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.

 • Mohammud Haneef

  Karnataka Districts7, Feb 2020, 1:51 PM IST

  'ಝೀರೋ ಟ್ರಾಫಿಕ್ ಹೀರೋ' : ಹನೀಫ್‌ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

  ಮಹಮ್ಮದ್‌ ಹನೀಫ್‌ ಸದ್ಯ ಎಲ್ಲೆಡೆ ಸದ್ದು ಮಾಡುತ್ತಿರುವ  ಆಂಬುಲೆನ್ಸ್ ಹೀರೋ. ನಾಲ್ಕುವರೇ ಗಂಟೆಯಲ್ಲಿ ಈತ ಕ್ರಮಿಸಿದ್ದು 380 ಕಿ. ಮೀಟರ್ ದೂರವನ್ನು. ಆಂಬುಲೆನ್ಸ್‌ ಡ್ರೈವರ್ ಆಗೋದು ಕನಸಷ್ಟೇ ಅಲ್ಲ, ಚಟವಾಗಿತ್ತು ಎನ್ನುತ್ತಾರೆ ಹನೀಫ್.

   

 • Baby

  Karnataka Districts6, Feb 2020, 2:26 PM IST

  ಹೃದಯ ಚಿಕಿತ್ಸೆ, 40 ದಿನದ ಹಸುಗೂಸಿಗೆ ಮಂಗಳೂರಿಂದ- ಬೆಂಗಳೂರಿಗೆ ಝೀರೋ ಟ್ರಾಫಿಕ್

  ಪುಟ್ಟ ಕಂದಮ್ಮನ ಜೀವ ಉಳಿಸಲು ಹಾವೇರಿಯಿಂದ ಹುಬ್ಬಳ್ಳಿಗೆ ಮಗುವನ್ನು ಝೀರೋ ಟ್ರಾಫಿಕ್‌ನಲ್ಲಿ ಕರೆಂತದ ಘಟನೆ ಕೇಳಿರಬಹುದು. ಇದೀಗ 40 ದಿನದ ಮಗುವನ್ನು ಹೃದಯ ಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್‌ನಲ್ಲಿ ಕರೆ ತರಲಾಗಿದೆ. ಈ ಸಂದರ್ಭ ಜನ ಆಂಬ್ಯುಲೆನ್ಸ್‌ಗೆ ಅನುವು ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • Navayuga Toll
  Video Icon

  state3, Feb 2020, 12:21 PM IST

  ನವಯುಗ ಟೋಲ್‌ನಲ್ಲಿ ಆ್ಯಂಬುಲೆನ್ಸ್ ಸಿಬ್ಬಂದಿ ಪಿಕಪ್-ಡ್ರಾಪ್‌ಗೆ ಬಳಕೆ!

  ಟೋಲ್ ತುರ್ತು ಆ್ಯಂಬುಲೆನ್ಸ್  ವಾಹನ ದುರ್ಬಳಕೆ ಆರೋಪ ಕೇಳಿ ಬರುತ್ತಿದೆ.  ನೆಲಮಂಗಲ ನವಯುಗ  ಟೋಲ್‌ನಲ್ಲಿ ಸಿಬ್ಬಂದಿ ಪಿಕಪ್ -ಡ್ರಾಪ್‌ಗೆ ಆ್ಯಂಬುಲೆನ್ಸ್ ಬಳಕೆಯಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.  ಅಪಘಾತ ಸಮಯದಲ್ಲಿ ಕೂಡಲೇ ನೆರವಿಗೆ ಧಾವಿಸಲು ಆ್ಯಂಬುಲೆನ್ಸ್ ವ್ಯವಸ್ಥೆ ಇರುತ್ತದೆ. ಆದರೆ ಅದು ನವಯುಗ ಟೋಲ್‌ನಲ್ಲಿ ದುರ್ಬಳಕೆಯಾಗುತ್ತಿದೆ.  

 • malayinkeezh hospital ambulance

  Karnataka Districts30, Jan 2020, 7:32 AM IST

  ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!

  ಯೋಧರಿಗೆ ಹುಬ್ಬಳ್ಳೀಲಿ ಸಿದ್ಧವಾಗ್ತಿದೆ ವಿಶೇಷ ಆ್ಯಂಬುಲೆನ್ಸ್‌!| ಹಿಮಾಲಯದ ವಾತಾವರಣಕ್ಕೆ ತಕ್ಕಂತೆ ವಾಹನ ಮರುವಿನ್ಯಾಸ| ಸದ್ಯಕ್ಕೆ ಸಿದ್ಧಗೊಳ್ಳಲಿದೆ ಎರಡು ಆ್ಯಂಬುಲೆನ್ಸ್‌

 • Belagavi

  Magazine22, Jan 2020, 12:41 PM IST

  ಕುಂದಾನಗರಿಯಲ್ಲೊಬ್ಬ ಆ್ಯಂಬುಲೆನ್ಸ್ ಮ್ಯಾನ್: ರೋಗಿಗಳಿಗೆ ಉಚಿತ ಸೇವೆ

  ನಮ್ಮ ಕುಂದಾನಗರಿ ಬೆಳಗಾವಿಯ ಅಶೋಕ ನಗರದ ನಿವಾಸಿ ಮಂಜುನಾಥ ಪೂಜಾರಿ ಅವರ ದಿನಚರಿ ಬೆಳಿಗ್ಗೆ 6 ಗಂಟೆಯಿಂದ ಆರಂಭ. ಅಲ್ಲಿಂದ 9 ಗಂಟೆವರೆಗೂ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣವನ್ನು ಸಂಗ್ರಹಿಸಿ ಒಂದು ಚಾರಿಟಿಗೆ ಕೊಡುತ್ತಾರೆ. ಇದಾದ ಮೇಲೆ ಬೆಳಗ್ಗೆ 10 ರಿಂದ ಸಂಜೆ 5 ಗಂಟೆವರೆಗೂ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾರೆ. ಇದು ಇವರ ಸಂಸಾರಕ್ಕೆ. ಕೆಲಸ ಬಿಟ್ಟ ಮೇಲೆ, ಸಂಜೆ 6 ರಿಂದ 11 ಗಂಟೆವರೆಗೂ ಮತ್ತೆ ಆಟೋ ಓಡಿಸುತ್ತಾರೆ. ಈ ವೇಳೆ ಬಂದ ಹಣ ಆಟೋ ಪೆಟ್ರೋಲ್ ಹಾಗೂ ನಿರ್ವಹಣೆಗೆ ಮೀಸಲು. ಇದರೊಂದಿಗೆ ಮಧ್ಯ ರಾತ್ರಿಯಲ್ಲಿ ಯಾರೇ ಸಹಾಯಕ್ಕಾಗಿ ಕರೆ ಮಾಡಿದರೂ ತಕ್ಷಣ ಸ್ಪಂದಿಸಿ ಉಚಿತ ಸೇವೆ ನೀಡುತ್ತಾರೆ. ಇಂತಹ ಅನುಪಮ ಸಮಾಜ ಸೇವಕರಾದ ಮಂಜುನಾಥ್ ಇದೀಗ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸೇರಿದ್ದಾರೆ. 

 • auto 123

  Karnataka Districts13, Jan 2020, 3:45 PM IST

  ರೋಗಿಗಳಿಗೆ ಉಚಿತ ಆಟೋ ಸೇವೆ: ಚಾಲಕನಿಗೆ ಬುಕ್‌ ಆಫ್‌ ರೆಕಾರ್ಡ್ಸ್‌ನ ಪ್ರಶಸ್ತಿ

  ಸಾರ್ವಜನಿಕರಿಗೆ ಉಚಿತವಾಗಿ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಕಾರ್ಯ ಮಾಡಿದ ಹಿನ್ನೆಲೆಯಲ್ಲಿ ಓರ್ವ ಆಟೊ ಚಾಲಕನಿಗೆ ಬುಕ್ ಆಫ್ ರೇಕಾರ್ಡ್ಸ್ ಕೊಡಮಾಡುವ ರಾತ್ರಿಯ ಆಂಬ್ಯುಲೆನ್ಸ್ ಮನುಷ್ಯ (Nocturnal ambulance Man) ಎಂಬ ಪ್ರಶಸ್ತಿ ಲಭಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಮಂಜುನಾಥ ಪೂಜಾರಿ ಅವರು ತಿಳಿಸಿದ್ದಾರೆ. 
   

 • Accident

  CRIME8, Jan 2020, 8:56 PM IST

  ಬೆಂಗಳೂರು: ಜೀವ ಉಳಿಸಬೇಕಾದ ಆಂಬುಲೆನ್ಸ್ ಇಬ್ಬರ ಪ್ರಾಣ ಪಡೆಯಿತು

  ರಸ್ತೆ ಅಪಘಾತಗಳಾದಾಗ ಅಥವಾ ತುರ್ತು ಸಂದರ್ಭ ಎದುರಾಗಾದ ಆಂಬುಲೆನ್ಸ್ ಗೆ ಕರೆ ಮಾಡುವುದು ಸಾಮಾನ್ಯ. ಜೀವ ಕಾಪಾಡಬೇಕಾದ ಆಂಬುಲೆನ್ಸ್ ಇಲ್ಲಿ ಜೀವ ಪಡೆದುಕೊಂಡಿದೆ.

 • দুর্ঘটনার ছবি

  CRIME8, Jan 2020, 5:31 PM IST

  ಬೆಂಗಳೂರು: ಜೀವ ಉಳಿಸುವ ಆ್ಯಂಬುಲೆನ್ಸ್‌ಗೆ ಇಬ್ಬರು ಬಲಿ

  ಜೀವ ಉಳಿಸುವ ಆ್ಯಂಬುಲೆನ್ಸ್ ಒಂದು ಓನ್ ವೇಯಲ್ಲಿ ವೇಗವಾಗಿ ಬರುತ್ತಿದ್ದಾಗ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಿಬ್ಬರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

 • 108 ambulance

  Karnataka Districts19, Dec 2019, 1:02 PM IST

  ಸರಿಯಾದ ಸಮಯಕ್ಕೆ ಸಿಗದ ಆಂಬುಲೆನ್ಸ್‌: ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

  ವೆಂಟಿಲೇಟರ್ ಇರುವ ಆಂಬುಲೆನ್ಸ್‌ ಸರಿಯಾದ ಸಮಯಕ್ಕೆ ದೊರೆಯದ ಕಾರಣದಿಂದಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಯತ್ನಿಸಿ ಸಾವನ್ನಪ್ಪಿದ ಯುವಕನನ್ನು ಸಿದ್ದಪ್ಪ ಗುಡ್ಡಣ್ಣವರ (20) ಎಂದು ಗುರುತಿಸಲಾಗಿದೆ. 
   

 • Ambulence

  India18, Dec 2019, 2:31 PM IST

  ಕಾಯ್ದೆ ವಿರೋಧಿಸುವ ಪೌರರು: ಆಂಬುಲೆನ್ಸ್‌ಗೆ ದಾರಿಬಿಟ್ಟ ಜಾಮಿಯಾ ಪ್ರತಿಭಟನಾಕಾರರು!

  ಪೌರತ್ವ ಕಾಯ್ದೆ ವಿರೋಧಿಸಿ ಜಾಮಿಯಾ ವಿದ್ಯಾರ್ಥಿಗಳ ಪ್ರತಿಭಟನೆ| ಪ್ರತಿಭಟನೆಯ ಆಕ್ರೋಶದ ನಡುವೆಯೂ ಮಾನವೀಯತೆ ಮೆರೆದ ವಿದ್ಯಾರ್ಥಿಗಳು| ಆ್ಯಂಬುಲೆನ್ಸ್‌ಗೆ ದಾರಿ, ಟ್ರಾಫಿಕ್ ಜಾಮ್ ಆಗದಂತೆ ನಿಗಾ ವಹಿಸಿದ ವಿದ್ಯಾರ್ಥಿಗಳು

 • undefined

  Karnataka Districts3, Dec 2019, 11:54 AM IST

  ಪೊಲೀಸ್‌ ವ್ಯಾನ್‌, ಆಂಬ್ಯಲೆನ್ಸ್‌ನಲ್ಲಿ BJP ದುಡ್ಡು ಸಾಗಣೆ: ಸಿದ್ದು

  ಪೊಲೀಸ್ ವ್ಯಾನ್‌, ಆಂಬ್ಯುಲೆನ್ಸ್ ಮೂಲಕ ಬಿಜೆಪಿಯವರು ದುಡ್ಡು ಸಾಗಿಸ್ತಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.