ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ಭಾರತೀಯ ಸೇನೆ ಬ್ರೇಕ್ ಹಾಕುತ್ತಿದೆ. ಇದರ ನಡುವೆ ಅಡಗುತಾಣದಲ್ಲಿ ಕುಳಿತು ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸುತ್ತಿರುವ ಉಗ್ರರನ್ನು ಸೇನೆ ಹುಡುಕಿ ಹೊಡೆದುರುಳಿಸಿತ್ತುದೆ. ಇದೀಗ ಕಳೆದ 72 ಗಂಟೆಯಲ್ಲಿ ಭಾರತೀಯ ಸೇನೆ 12 ಉಗ್ರರರನ್ನು ಹತ್ಯೆ ಮಾಡಿ ಬಹುದೊಡ್ಡ ಅನಾಹುತವನ್ನು ತಪ್ಪಿಸಿದೆ.
ಶ್ರೀನಗರ(ಏ.11): ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಕೇಂದ್ರಾಡಳಿತ ಪ್ರದೇಶವನ್ನಾಗಿ ರಚಿಸಿದ ಬಳಿಕ ರಕ್ತಚರಿತ್ರೆ ನಾಡು ಇದೀಗ ಶಾಂತವಾಗುತ್ತಿದೆ. ಇದರ ನಡುವೆ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಭಯೋತ್ಪಾದಕರಿಗೆ ಜಮ್ಮ ಮತ್ತು ಕಾಶ್ಮೀರ ಪೊಲೀಸರ್ ಹಾಗೂ ಸೇನೆ ತಕ್ಕ ಪಾಠ ಕಲಿಸುತ್ತಿದೆ. ಇದೀಗ ಕಳೆದ 72 ಗಂಟೆ ಕಾರ್ಯಚರಣೆಯಲ್ಲಿ 12 ಉಗ್ರರನ್ನು ಹೊಡೆದುರುಳಿಸುವಲ್ಲಿ ಭಾರತೀಯ ಭದ್ರತಾ ಪಡೆ ಯಶಸ್ವಿಯಾಗಿದೆ.
BJP ಮುಖಂಡನ ಮನೆ ಮೇಲೆ ದಾಳಿ ಮಾಡಿದ್ದ ಮೂವರು ಉಗ್ರರ ಸದೆ ಬಡಿದ ಭಾರತೀಯ ಸೇನೆ.
undefined
ತ್ರಾಲ್ ಹಾಗೂ ಶೋಪಿಯಾನ್ ಎನ್‌ಕೌಂಟರ್‌ನಲ್ಲಿ 7 ಭಯೋತ್ಪಾದಕರನ್ನು ಹೊಡೆದುರುಳಿಸಿದ್ದರೆ, ಹರಿಪೊರದ ಅಲ್ ಬದ್ರ್ ವಲಯದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಹಾಗೂ ಬಿಜ್‌ಬೆಹರ ಎನ್‌ಕೌಂಟರ್‌ನಲ್ಲಿ ಇಬ್ಬರು ಭಯೋತ್ಪಾದಕರನ್ನು ಪರಲೋಕಕ್ಕೆ ಕಳುಹಿಸಲಾಗಿದೆ.
ಚೀನಾ ಗಡಿಯಲ್ಲಿ ಭಾರತೀಯ ಯೋಧರ ಸಖತ್ ಡ್ಯಾನ್ಸ್; ವಿಡಿಯೋ ವೈರಲ್!
ಕಳೆದ 72 ಗಂಟೆಗಳಲ್ಲಿ ಜಮ್ಮ ಮುತ್ತು ಕಾಶ್ಮೀರದ ಕೆಲ ಭಾಗಗಳಲ್ಲಿ ಕಾರ್ಯಚರಣೆ ನಡೆಸಲಾಗಿದೆ. ಸತತ ಗುಂಡಿನ ಕಾಳಗದಲ್ಲಿ 12 ಮಂದಿ ಉಗ್ರರನ್ನು ಕೊಲ್ಲಲಾಗಿದೆ. ಶೋಪಿಯಾನ್ ಕೆಲ ಭಾಗದಲ್ಲಿ ಕಾರ್ಯಚರಣೆ ಮುಂದುವರಿದಿದೆ ಎಂದು ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್‌ಬಾಗ್ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಶಾಂತಿ ಕಾಪಾಡಲು ಪೊಲೀಸ್ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ. ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಹುಡುಕಿ ಹೊಡೆದುರಳಿಸಲಿದ್ದೇವೇ ಎಂದು ದಿಲ್‌ಬಾಗ್ ಹೇಳಿದ್ದಾರೆ.