ಭಾರತದ ಮಹಿಳಾ ಏಜೆಂಟ್‌‌ನಿಂದ ಪಾಕಿಸ್ತಾನದಲ್ಲಿ ಏರ್ ಇಂಡಿಯಾ ಹೈಜಾಕ್ ಉಗ್ರ ಹತ್ಯೆ; ಬ್ರಿಟನ್ ಪತ್ರಿಕೆ ವರದಿ!

By Suvarna NewsFirst Published Apr 5, 2024, 9:36 PM IST
Highlights

ಕಳೆದ 2-3 ವರ್ಷಗಳಿಂದ ಪಾಕಿಸ್ತಾನ, ಇಂಗ್ಲೆಂಡ್ ಹಾಗೂ ಕೆನಡಾದಲ್ಲಿ ಭಾರತ ವಿರೋಧಿಗಳು ಹಾಗೂ ಉಗ್ರರ ಸರಣಿ ಹತ್ಯೆ ನಡೆಯುತ್ತಿದೆ.. ಇದರ ಹಿಂದೆ ಯಾರಿದ್ದಾರೆ ಎಂಬುದೇ ಉತ್ತರ ಸಿಗದ ಪ್ರಶ್ನೆಯಾಗಿತ್ತು.. ಇದೀಗ ಬ್ರಿಟನ್ ಪತ್ರಿಕೆ ದಿ ಗಾರ್ಡಿಯನ್ ತನಿಖಾ ವರದಿ ಬಿಡುಗಡೆ ಮಾಡಿದ್ದು.. ಭಾರತ ಹಾಗೂ ಪಾಕ್ ಗುಪ್ತಚರ ಅಧಿಕಾರಿಗಳ ಸಂದರ್ಶನದ ಬಳಿಕ ಘಟನೆ ಹಿಂದಿರುವವರು ಯಾರು ಎಂಬ ಸತ್ಯವನ್ನ ಬಿಚ್ಚಿಟ್ಟಿದೆ. 
 

ಶಿವರಾಜ್, ಬುಲೆಟಿನ್ ಪ್ರೊಡ್ಯೂಸರ್

2020ರಿಂದ ಶುರುವಾದ ಭಾರತ ವಿರೋಧಿಗಳ ಸರಣಿ ಹತ್ಯೆಗೆ ಕಾರಣವೇನು ಅಂತಾ ಹುಡುಕುತ್ತಾ ಹೋದರೆ.. ಭಾರತದ ಗುಪ್ತಚರ ಅಧಿಕಾರಿಗಳು ಬಿಚ್ಚಿಟ್ಟಿದ್ದು ಪುಲ್ವಾಮಾ ಉಗ್ರ ದಾಳಿ.. 2019ರಲ್ಲಿ ಭಾರತದ ಸೇನಾಪಡೆ ಮೇಲೆ ನಡೆದ ಭೀಕರ ಉಗ್ರ ದಾಳಿಯಲ್ಲಿ 40ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ರು. ಆಗ ಇಂತಹ ದಾಳಿಗಳನ್ನ ತಡೆಯಲು ಭಾರತ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂದಾಗ ರೂಪಿತವಾಗಿದ್ದೇ.. ವಿದೇಶದಲ್ಲಿ ಅಡಗಿ ಕುಳಿತಿರುವ ಉಗ್ರ ಸಂಘಟನೆಗಳು ಹಾಗೂ ಭಾರತ ವಿರೋಧಿ ನಾಯಕರ ಹತ್ಯೆಯ ಆಪರೇಷನ್. ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದಂತೆ ಭಾರತದ ಗುಪ್ತಚರ ಅಧಿಕಾರಿಗಳೇ ಸ್ವತಃ ಈ ಮಾಹಿತಿ ಹಂಚಿಕೊಂಡಿದ್ದಾರಂತೆ. 

 ಇನ್ನೂ ಪಾಕ್ ಗುಪ್ತಚರ ಅಧಿಕಾರಿಗಳ ಮಾಹಿತಿ ಪ್ರಕಾರ 2020ರಿಂದ ಪಾಕಿಸ್ತಾನದಲ್ಲಿ 20ಕ್ಕೂ ಹೆಚ್ಚು ಉಗ್ರರ ಸರಣಿ ಹತ್ಯೆ ಮಾಡಲಾಗಿದೆ, ಇದರಲ್ಲಿ ಭಾರತದ ಗುಪ್ತಚರ ಸಂಸ್ಥೆ RAW ನೇರ ಕೈವಾಡ ಇದೆ ಎನ್ನಲಾಗಿದೆ. ಪ್ರಧಾನಿ ಕಚೇರಿ ಆಡಳಿತ ವ್ಯಾಪ್ತಿಗೆ ಬರೋ RAW ದಿಂದ ಕೃತ್ಯ ನಡೀತಿದೆ ಎಂದು ಪಾಕ್ ಅಧಿಕಾರಿಗಳು ಆರೋಪಿಸಿದ್ದಾರೆ. ಇದಕ್ಕೆ ಹಲವು ಸಾಕ್ಷ್ಯ ಹಾಗೂ ದಾಖಲೆಗಳಿವೆ ಎಂದು ದಿ ಗಾರ್ಡಿಯನ್ ಬಳಿ ಹೇಳಿಕೊಂಡಿದ್ದಾರೆ. ಯುಎಇನಲ್ಲಿ ಕುಳಿತು RAW ಅಧಿಕಾರಿಗಳು ಈ ದಾಳಿ ನಿರ್ವಹಿಸುತ್ತಿದ್ದಾರೆ.. ಉಗ್ರರ ಹತ್ಯೆಗೆಂದೇ ಪಾಕಿಸ್ತಾನದಲ್ಲಿ ಸ್ಲೀಪರ್ ಸೆಲ್ಗಳ ಸೃಷ್ಟಿಸಲಾಗಿದೆ. ಉಗ್ರರ ಹತ್ಯೆಗಾಗಿ ಕ್ರಿಮಿನಲ್ಗಳಿಗೆ ಭಾರತದಿಂದ ಲಕ್ಷಾಂತರ ಹಣ ನೀಡಲಾಗ್ತಿದ್ದು. ಬಹುತೇಕ ಕ್ರಿಮಿನಲ್ಗಳಿಗೆ ದುಬೈ ಮೂಲಕ ಹಣ ಪಾವತಿ ಮಾಡಲಾಗಿದೆ ಎಂದು ಪಾಕ್ ಅಧಿಕಾರಿಗಳು ಹೇಳಿಕೊಂಡಿದ್ದಾರೆ. 

'ಘರ್‌ ಮೆ ಗುಸ್‌ ಕೆ ಮಾರೇಂಗೆ..' ಮೋದಿ ಹೇಳಿದ್ದನ್ನು ನಿಜ ಮಾಡಿತಾ ಭಾರತದ RAW?

ಪಾಕ್ ಅಧಿಕಾರಿಗಳು ಇತ್ತೀಚೆಗೆ ಹತ್ಯೆಯಾದ ಏರ್ ಇಂಡಿಯಾ ವಿಮಾನ ಹೈಜಾಕ್ ರೂವಾರಿ ಜಾಹೀದ್ ಅಕುಂಡ್@ ಜಹೂರ್ ಮಿಸ್ತ್ರಿ ಹತ್ಯೆಯ ರಹಸ್ಯ ಬಿಚ್ಚಿಟ್ಟಿದ್ದಾರೆ. ಜಹೂರ್ ಮಿಸ್ತ್ರಿ ಹತ್ಯೆಗೆ ತಿಂಗಳುಗಳಿಂದ ಮಾಹಿತಿ ಸಂಗ್ರಹ ಮಾಡಿದ್ದ ರಾ ಮಹಿಳಾ ಏಜೆಂಟ್.. ಕೊನೆಗೂ ಜಹೂರ್ ಮಿಸ್ತ್ರಿ ನಂಬರ್ ಪತ್ತೆ ಮಾಡಿ ಆತನಿಗೆ ಸಂದೇಶ ಕಳಿಸಿದ್ದಾಳೆ.. ನಾನೊಬ್ಬ ಪತ್ರಕರ್ತೆ ಎಂದು ಪರಿಚಯ ಮಾಡಿಕೊಂಡ ಮಹಿಳಾ ಏಜೆಂಟ್.. 
ನೀವು ಜಾಹಿದ್ದಾ? ನಾನು ನ್ಯೂಯಾರ್ಕ್ ಪೋಸ್ಟ್ ಪತ್ರಕರ್ತೆ ಎಂದು ಮೆಸೇಜ್ ಮಾಡಿದ್ದಾಳೆ. ಆ ಕಡೆಯಿಂದ ನನಗ್ಯಾಕೆ ಮೆಸೇಜ್ ಮಾಡ್ತಿದ್ದೀರಿ ಎಂದು ಉಗ್ರ ಜಾಹಿದ್ನಿಂದ ರಿಪ್ಲೈ ಮಾಡಿದ್ದೆ ತಡ ಈತ ಉಗ್ರನೇ ಎಂದು ಖಚಿತ ಮಾಡಿಕೊಂಡ RAW.. ಪಾಕಿಸ್ತಾನದಲ್ಲಿದ್ದ ಆಪ್ಘಾನ್ ಪ್ರಜೆಗೆ ಭಾರೀ ಮೊತ್ತದ ಸುಪಾರಿ ನೀಡಿ.. ಉಗ್ರನ ಫೋಟೋ, ಲೋಕೇಷನ್ ಸಮೇತ ಮಾಹಿತಿ ನೀಡಿ ಹತ್ಯೆ ಮಾಡಿಸಿದೆ. ಭಾರತಕ್ಕೆ ಬೇಕಾದ ಮೋಸ್ಟ್ ವಾಂಟೆಡ್ ಉಗ್ರನನ್ನ ಗುಂಡಿಟ್ಟು ಸಾಯಿಸಿ ಪಾಕ್ ಪೊಲೀಸರ ಕೈಗೆ ಆಪ್ಘಾನ್ ಪ್ರಜೆ ಸಿಕ್ಕಿಬಿದ್ದಿದ್ದಾನೆ.. ಆದ್ರೆ ಇದನ್ನ ಸಾಬೀತು ಮಾಡಲು ಪಾಕ್ ಅಧಿಕಾರಿಗಳ ಬಳಿ ಯಾವುದೇ ಆಧಾರಗಳಿಲ್ಲವಂತೆ.. 

ಇನ್ನೂ ಈ ಗಾರ್ಡಿಯನ್ ವರದಿಗೆ ಭಾರತ ತನ್ನ ವಿದೇಶಾಂಗ ನೀತಿಯಂತೆ ಪ್ರತಿಕ್ರಿಯೆ ನೀಡಿದ್ದು, ಸುಳ್ಳು ದುರುದ್ದೇಶ ಪೂರಿತ ಆರೋಪಗಳಿವು.. ಈ ವರದಿ ಭಾರತದ ವಿರುದ್ಧದ ಷ್ಯಡ್ಯಂತ್ರವಾಗಿದೆ.. ಟಾರ್ಗೆಟ್ ಹತ್ಯೆ ಮಾಡೋದೆ ನಮ್ಮ ನೀತಿ ಅಲ್ಲ ಎಂದು ಹೇಳಿದೆ.

ಮೊಹಮ್ಮದ್ ಖಾಸಿಮ್ ಗುಜ್ಜರ್ ಭಯೋತ್ಪಾದಕ, ಕೇಂದ್ರ ಗೃಹ ಸಚಿವಾಲಯ ಘೋಷಣೆ!
 

click me!