ನಾವು 400+ ಗೆಲ್ಲೇವೆ, ಕಾಂಗ್ರೆಸ್‌ಗೆ 50 ಸೀಟೂ ಸಿಗಲ್ಲ, ಬರೆದಿಟ್ಕೊಳ್ಳಿ: ಮೋದಿ

By Kannadaprabha NewsFirst Published May 12, 2024, 6:21 AM IST
Highlights

ಬರೆದಿಟ್ಟುಕೊಳ್ಳಿ, ಈ ಬಾರಿ ಎನ್ ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಲು ಅಗತ್ಯವಿರುವ 50 ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ, 53ರ ಹರೆಯದ ರಾಹುಲ್ ಗಾಂಧಿ ವಯಸ್ಸಿನಷ್ಟೂ ಸ್ಥಾನ ಬರಲ್ಲ' ಎಂದು ಹೇಳಿದ ಪ್ರಧಾನಿ ನರೇಂದ್ರ ಮೋದಿ

ಒಡಿಶಾ(ಮೇ.11): 'ಬರೆದಿಟ್ಟುಕೊಳ್ಳಿ, ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದಿಲ್ಲ ಎಂಬ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿಕೆಗೆ ತಿರುಗೇಟು ನೀಡಿರುವ ಪ್ರಧಾನಿ ನರೇಂದ್ರ ಮೋದಿ, 'ಬರೆದಿಟ್ಟುಕೊಳ್ಳಿ, ಈ ಬಾರಿ ಎನ್ ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷ ಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಲು ಅಗತ್ಯವಿರುವ 50 ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ, 53ರ ಹರೆಯದ ರಾಹುಲ್ ಗಾಂಧಿ ವಯಸ್ಸಿನಷ್ಟೂ ಸ್ಥಾನ ಬರಲ್ಲ' ಎಂದು ಹೇಳಿದ್ದಾರೆ.

ಪ್ರಚಾರ ಸಮಾವೇಶಗಳಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಪಕ್ಷ ಈ ಬಾರಿ ಶೇ.10ರಷ್ಟು ಸೀಟು ಕೂಡ ಲೋಕಸಭೆ ಚುನಾವಣೆಯಲ್ಲಿ ಅದಕ್ಕೆ 50 ಸೀಟು ಕೂಡ ಸಿಗುವುದಿಲ್ಲ.  ಹೀಗಾಗಿ ಅಧಿಕೃತ ಪ್ರತಿಪಕ್ಷದ ಸ್ಥಾನವಾಗುವ ಯೋಗ್ಯತೆಯನ್ನೂ ಪಡೆಯುವುದಿಲ್ಲ. ಕಾಂಗ್ರೆಸ್‌ನ ಶೆಹಜಾದ 2014ರ ಚುನಾವಣೆಯಿಂದಲೂ ಒಂದೇ ಭಾಷಣ ಓದುತ್ತಿದ್ದಾರೆ. ಆದರೆ, ಬರೆದಿಟ್ಟು ಕೊಳ್ಳಿ... ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟು ಗೆಲ್ಲಲಿದೆ' ಎಂದು ಹೇಳಿದರು. ಅಲ್ಲದೆ, ವಿಪಕ್ಷ ನಾಯಕ ಸ್ಥಾನ ಸಿಗದು ಎಂಬ ಖಚಿತತೆ ಕಾರಣ ಕಾಂಗ್ರೆಸ್ ಪಕ್ಷಸಣ್ಣಪುಟ್ಟ ಪಕ್ಷಗಳನ್ನು ತನ್ನಲ್ಲಿ ವಿಲೀನ ಮಾಡಿಕೊಂಡು ಬಲ ಹೆಚ್ಚಿಸಿಕೊಳ್ಳಲು ಯತ್ನಿಸುತ್ತಿದೆ. ಈ ಮೂಲಕ ಲೋಕಸಭೆ ಪ್ರತಿಪಕ್ಷ ಪಟ್ಟವನ್ನಾದರೂ ಸಂಪಾದಿಸೋಣ ಎಂದು ಯತ್ನಿಸುತ್ತಿದೆ ಎಂದರು.

Latest Videos

ಪೂರ್ಣಾವಧಿಗೆ ಮತ್ತೆ ಮೋದಿಯೇ ಪ್ರಧಾನಿ: ಅಮಿತ್‌ ಶಾ

ಶೇ.10ರಷ್ಟು ಸೀಟೂ ಕಾಂಗ್ರೆಸ್ಸಿಗೆ ಸಿಗಲ್ಲ

ಬರೆದಿಟ್ಟುಕೊಳ್ಳಿ, ಈ ಬಾರಿ ಎನ್‌ಡಿಎ ಹಿಂದಿನ ಎಲ್ಲಾ ದಾಖಲೆ ಮುರಿದು 400 ಸೀಟಿಗಿಂತ ಹೆಚ್ಚು ಗೆಲ್ಲಲಿದೆ. ಕಾಂಗ್ರೆಸ್ ಪಕ್ಷಲೋಕಸಭೆಯಲ್ಲಿ ಅಧಿಕೃತ ವಿಪಕ್ಷವಾಗಲು ಅಗತ್ಯವಿರುವ 50 ಸೀಟುಗಳನ್ನು ಕೂಡ ಗೆಲ್ಲುವು ದಿಲ್ಲ. 53ರ ಹರೆಯದ ರಾಹುಲ್ ಗಾಂಧಿ ವಯಸ್ಸಿನಷ್ಟೂ ಸ್ಥಾನ ಬರಲ್ಲ. ಕಾಂಗ್ರೆಸ್ ಪಕ್ಷ ಈ ಬಾರಿ ಶೇ.10ರಷ್ಟು ಸೀಟು ಕೂಡ ಗೆಲ್ಲುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. 

ಮೋದಿ ಮತ್ತೆ ಪ್ರಧಾನಿ ಆಗೋದು ಕಷ್ಟ

ಮೋದಿ ಭಾಷಣದಲ್ಲಿ ಈ ಹಿಂದೆ ಇರುತ್ತಿದ್ದ ಅಭಿಮಾನ ಮತ್ತು ಗರ್ವ ಕಾಣೆ ಯಾಗಿದೆ. ಮೂರು ಹಂತದ ಎಲೆಕ್ಷನ್ ಬಳಿಕ ಮೋದಿ 3ನೇ ಬಾರಿಗೆ ಅಧಿ ಕಾರಕ್ಕೇರುವುದು ಕಷ್ಟ ಎಂದು ನಾನು ಖಚಿತವಾಗಿ ಹೇಳಬಲ್ಲೆ, ಮೋದಿ ಯವರಿಗೆ ತಮ್ಮ ಸರ್ಕಾರದ 10 ವರ್ಷಗಳ ಸಾಧನೆ ಬಗ್ಗೆ ಮಾತನಾಡಿ ಎಂದರೆ, ಅವರು ಹಿಂದೂ-ಮುಸ್ಲಿಂ ಪ್ರತ್ಯೇಕಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು  ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. 

click me!