Published : Aug 22, 2026, 07:46 AM ISTUpdated : Aug 22, 2026, 11:12 PM IST

National News Live: Saifullah Kasuri - ಪಿಒಕೆ ಹೊತ್ತಿ ಉರಿಯವ ಹೊತ್ತಲ್ಲಿ ಕಾಶ್ಮೀರದ ಬಗ್ಗೆ ವಿಷ ಕಕ್ಕಿದ ಲಷ್ಕರ್ ಉಗ್ರ!

ಸಾರಾಂಶ

ನವದೆಹಲಿ (ಆ.22): 'ಸ್ಕೂಲ್ ಠೀಕ್ ಕರೋ' ಅಭಿಯಾನದ ಭಾಗವಾಗಿ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ (ಸಿಜೆಪಿ) ತಂಡವನ್ನು ಸ್ಥಳೀಯರು ತಡೆದು, ಗ್ರಾಮದಿಂದ ಹೊರದಬ್ಬಿರುವ ಘಟನೆ ಜೈಪುರದ ರಾಮಪುರ ಕನ್ವರ್‌ಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ಬೆನ್ನಲ್ಲೇ, 48 ಗಂಟೆಗಳಲ್ಲಿ ಶಾಲೆ ದುರಸ್ತಿ ಆರಂಭಿಸದಿದ್ದರೆ ಹಾಗೂ ಬಿಜೆಪಿ ಗೂಂಡಾಗಳನ್ನು ಬಂಧಿಸದಿದ್ದರೆ ಧರಣಿ ಕೂರುತ್ತೇವೆ ಎಂದು ಸಿಜೆಪಿ ಸ್ಥಾಪಕ ಅಬಿಜೀತ್‌ ದೀಪೈ ಎಚ್ಚರಿಸಿದ್ದಾರೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

11:12 PM (IST) Aug 22

Saifullah Kasuri - ಪಿಒಕೆ ಹೊತ್ತಿ ಉರಿಯವ ಹೊತ್ತಲ್ಲಿ ಕಾಶ್ಮೀರದ ಬಗ್ಗೆ ವಿಷ ಕಕ್ಕಿದ ಲಷ್ಕರ್ ಉಗ್ರ!

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಪಾಕಿಸ್ತಾನ ಸರ್ಕಾರ ಮತ್ತು ಸೇನೆಯ ವಿರುದ್ಧ ತೀವ್ರ ಪ್ರತಿಭಟನೆಗಳು ನಡೆಯುತ್ತಿರುವಾಗಲೇ, ಲಷ್ಕರ್-ಎ-ತೊಯ್ಬಾ ಉಗ್ರ ಸಂಘಟನೆಯ ಉಪ ಕಮಾಂಡರ್ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.

Read Full Story

09:54 PM (IST) Aug 22

Dimagi Naxals - 'ನಮಗೆ ದೇಶಭಕ್ತಿಯ ಪಾಠ ಮಾಡಬೇಡಿ..' ಪ್ರಧಾನಿ ಮೋದಿ ದಿಮಾಗಿ ನಕ್ಸಲ್ ಹೇಳಿಕೆಗೆ ಖರ್ಗೆ ತಿರುಗೇಟು!

ಪ್ರಧಾನಿ ಮೋದಿಯವರ 'ದಿಮಾಗಿ ನಕ್ಸಲ್' ಹೇಳಿಕೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ಗಮನಹರಿಸಿ ಎಂದು ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

Read Full Story

09:38 PM (IST) Aug 22

ನಾಲ್ಕು ವರ್ಷದ ಮಕ್ಕಳಿಗೆ ಈ ಔಷಧಿ ನಿಷೇಧ ಮಾಡಿ ಕೇಂದ್ರ ಸರ್ಕಾರ ಆದೇಶ

4 ವರ್ಷದೊಳಗಿನ ಮಕ್ಕಳಿಗೆ ಶೀತ ಮತ್ತು ಅಲರ್ಜಿಗಾಗಿ ಬಳಸಲಾಗುವ ಕ್ಲೋರ್‌ಫೆನಿರಮೈನ್ ಮಲೇಟ್ ಹಾಗೂ ಫೆನೈಲೆಫ್ರಿನ್ ಹೈಡ್ರೋಕ್ಲೋರೈಡ್ ಕಾಂಬಿನೇಷನ್ (FDC) ಔಷಧಗಳ ಬಳಕೆಯನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿದೆ. ಸುರಕ್ಷತೆಯ ದೃಷ್ಟಿಯಿಂದ ಈ ಔಷಧಗಳ ಲೇಬಲ್ ಮತ್ತು ಪ್ಯಾಕೆಟ್‌ಗಳ ಮೇಲೆ 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಇದನ್ನು ಬಳಸಬಾರದು ಎಂಬ ಎಚ್ಚರಿಕೆಯನ್ನು ಕಡ್ಡಾಯವಾಗಿ ಪ್ರದರ್ಶಿಸಲು ಸೂಚಿಸಲಾಗಿದೆ.

Read Full Story

08:45 PM (IST) Aug 22

ಅಣ್ಣಾ, ಹತ್ತು ದಿನದಲ್ಲಿ ರಾಖಿ ಹಬ್ಬ ಇದೆ, ಆಗ ಯಾರಿಗೆ ಫೋನ್ ಮಾಡಲಿ? ಅಣ್ಣನ ಮೃತದೇಹ ನೋಡಿ ತಂಗಿ ಕಣ್ಣೀರು

ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಐಫೋನ್‌ಗಾಗಿ ನಡೆದ ಜಗಳದ ಬಳಿಕ ಮಗ ಬೆಟ್ಟದಿಂದ ಧುಮುಕಿದ್ದು, ಆತನನ್ನು ರಕ್ಷಿಸಲು ಹೋದ ತಂದೆ-ತಾಯಿ ಇಬ್ಬರೂ ಬೆಟ್ಟದಿಂದ ಬಿದ್ದು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಮೃತ ಸಹೋದರನ ಶವ ಕಂಡು ಕಣ್ಣೀರಿಟ್ಟ ತಂಗಿ, ಇನ್ನು ಹತ್ತು ದಿನದಲ್ಲಿ ರಾಖಿ ಇದೆ, ಈಗ ನಾನು ಯಾರಿಗೆ ಫೋನ್ ಮಾಡಲಿ? ಎಂದು ಕರುಣಾಜನಕವಾಗಿ ರೋದಿಸಿರುವುದು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿದೆ.

Read Full Story

08:41 PM (IST) Aug 22

‘ಫೌಜಿ’, ‘ಟಾಕ್ಸಿಕ್’ ನಡುವೆ ಕ್ಯೂಟ್ ಲವ್ ಸ್ಟೋರಿಗಳ ಲಗ್ಗೆ - ಬಾಕ್ಸ್ ಆಫೀಸ್‌ನಲ್ಲಿ ಈ ಸಿನಿಮಾಗಳದ್ದೇ ಹವಾ?

ಸದ್ಯ ಸಿನಿಮಾ ಪ್ರೇಮಿಗಳ ಮಾತಿನಲ್ಲಿ ‘ಫೌಜಿ’, ‘ವಿಶ್ವಂಭರ’, ‘ಟಾಕ್ಸಿಕ್’ನಂತಹ ಬಿಗ್ ಬಜೆಟ್ ಸಿನಿಮಾಗಳದ್ದೇ ಸದ್ದು. ಆದರೆ ಮುಂದಿನ ಎರಡು ತಿಂಗಳು ಬಾಕ್ಸ್ ಆಫೀಸ್‌ನಲ್ಲಿ ಕೇವಲ ದೊಡ್ಡ ಸಿನಿಮಾಗಳದ್ದೇ ಅಬ್ಬರವಿರಲ್ಲ.

Read Full Story

07:07 PM (IST) Aug 22

ಅಧಿಕೃತವಾಗಿ ಮದುವೆಯಾದ ನಟ ಅರ್ಜುನ್ ರಾಂಪಾಲ್; ಇಲ್ಲೊಂದು ಭಾರೀ ಟ್ವಿಸ್ಟ್ ಇದೆ ನೋಡಿ!

ಯಾವುದೇ ಆರ್ಭಟವಿಲ್ಲದೆ, ಕೇವಲ ಪ್ರೀತಿ ಮತ್ತು ಕಾನೂನಿನ ಗೌರವದೊಂದಿಗೆ ಸತಿ-ಪತಿಯರಾಗಿರುವ ಅರ್ಜುನ್ ಮತ್ತು ಗೇಬ್ರಿಯೆಲಾ ಜೋಡಿಗೆ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಆದರೆ, ಈ ಜೋಡಿಯ ಮದುವೆಯಲ್ಲಿ ಒಂದು ಟ್ವಿಸ್ಟ್ ಇದೆ..! ಅದೇನ್ ಗೊತ್ತಾ?

Read Full Story

06:42 PM (IST) Aug 22

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್‌ನ್ಯೂಸ್ - ಚಿರತೆ ನಿಗಾಕ್ಕೆ ಬರಲಿದೆ ರೋಬೋಟಿಕ್ ನಾಯಿಗಳು

ಎಲ್ಲವೂ ಅಂದುಕೊಂಡಂತೆ ನಡೆದರೆ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಆಗಮಿಸುವ ಭಕ್ತರ ಸುರಕ್ಷತೆಗೆ ನಾಯಿಗಳ ನಿಯೋಜನೆ ಆಗಲಿದೆ. ಆದರೆ, ಇದು ಅಂತಿಂಥ ನಾಯಿಗಳಲ್ಲ, ಅತ್ಯಾಧುನಿಕ ರೋಬೋಟಿಕ್‌ ನಾಯಿಗಳು!

Read Full Story

06:34 PM (IST) Aug 22

ಹಳದಿಯಾಗಿ ಬದಲಾದ ಫೋನ್ ಕವರನ್ನು ಹೊಸದಾಗಿ ಕಾಣುವಂತೆ ಮಾಡಿ; ಮನೆಯಲ್ಲಿರುವ 2 ವಸ್ತುಗಳು ಸಾಕು!

ಕಾಲಕ್ರಮೇಣ ಹಳದಿ ಬಣ್ಣಕ್ಕೆ ತಿರುಗುವ ಪಾರದರ್ಶಕ ಮೊಬೈಲ್ ಕವರ್‌ಗಳನ್ನು ಪ್ರತಿ ಬಾರಿ ಬದಲಿಸುವ ಅಗತ್ಯವಿಲ್ಲ. ಮನೆಯಲ್ಲಿಯೇ ಸುಲಭವಾಗಿ ಲಭ್ಯವಿರುವ ಬೇಕಿಂಗ್ ಸೋಡಾ, ವಿನೆಗರ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಹಳೆಯ ಕವರ್‌ಗೆ ಹೊಸ ಹೊಳಪನ್ನು ನೀಡುವ ಸರಳ ವಿಧಾನಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.
Read Full Story

05:53 PM (IST) Aug 22

ವಿಜ್ಞಾನವನ್ನೂ ಬೆಚ್ಚಿಬೀಳಿಸಿದ 7 ನಿಗೂಢ ರಹಸ್ಯಗಳು; ಜಗತ್ತನ್ನು ಕಾಡುತ್ತಿರುವ ಪ್ರಶ್ನೆಗಳು

ತಂತ್ರಜ್ಞಾನ ಎಷ್ಟೇ ಮುಂದುವರೆದರೂ, ಜಗತ್ತಿನಲ್ಲಿ ಇಂದಿಗೂ ಉತ್ತರ ಸಿಗದ ಹಲವಾರು ನಿಗೂಢ ರಹಸ್ಯಗಳಿವೆ. ಡಯಾಟ್ಲೋವ್ ಪಾಸ್ ಘಟನೆ, ಮೇರಿ ಸೆಲೆಸ್ಟ್ ಹಡಗಿನ ಸಿಬ್ಬಂದಿ ನಾಪತ್ತೆ, ಮತ್ತು ವೋಯ್ನಿಚ್ ಹಸ್ತಪ್ರತಿಯಂತಹ 7 ಘಟನೆಗಳು ವಿಜ್ಞಾನಿಗಳಿಗೆ ಮತ್ತು ಇತಿಹಾಸಕಾರರಿಗೆ ಇಂದಿಗೂ ಸವಾಲಾಗಿ ಉಳಿದಿವೆ.
Read Full Story

05:53 PM (IST) Aug 22

ಬ್ಯಾಂಕ್ ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ.. ಈ ಬ್ಯಾಂಕ್‌ನಲ್ಲಿ 2,482 ಹುದ್ದೆಗಳಿಗೆ ಅರ್ಜಿ ಆಹ್ವಾನ..

ಬ್ಯಾಂಕ್ ಆಫ್ ಬರೋಡಾ ದೇಶಾದ್ಯಂತ ಒಟ್ಟು 2,482 ಲೋಕಲ್ ಬ್ಯಾಂಕ್ ಆಫೀಸರ್ (LBO) ಹುದ್ದೆಗಳ ಭರ್ತಿಗಾಗಿ ಅಧಿಕೃತ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಪದವಿ ಜೊತೆಗೆ ಕನಿಷ್ಠ ಒಂದು ವರ್ಷದ ಬ್ಯಾಂಕಿಂಗ್ ಅಧಿಕಾರಿ ಹುದ್ದೆಯ ಅನುಭವ ಹೊಂದಿರುವ ಅಭ್ಯರ್ಥಿಗಳು ಸೆಪ್ಟೆಂಬರ್ 7, 2026 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Read Full Story

05:23 PM (IST) Aug 22

'ಈ ಪಾತ್ರ ನನ್ನನ್ನು ಬದಲಿಸಿದೆ' - ‘ಮಹಾಕಾಳಿ’ಗಾಗಿ ಇಷ್ಟು ತಯಾರಿ ನಡೆಸಿದ್ರಾ ಬಿಗ್‌ಬಾಸ್‌ ಖ್ಯಾತಿಯ ಭೂಮಿ ಶೆಟ್ಟಿ

Mahakali The End Begins: ನಟಿ ಭೂಮಿ ಶೆಟ್ಟಿ ಸದ್ಯ ಪ್ರಶಾಂತ್ ವರ್ಮಾ ಸಿನಿಮ್ಯಾಟಿಕ್ ಯೂನಿವರ್ಸ್‌ನ ಬಹುನಿರೀಕ್ಷಿತ ಸಿನಿಮಾ ‘ಮಹಾಕಾಳಿ-ದಿ ಎಂಡ್ ಬಿಗಿನ್ಸ್’ನಲ್ಲಿ ಟೈಟಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Read Full Story

04:52 PM (IST) Aug 22

ಟಿವಿ ನೋಡುವವರಿಗೆ ಕೇಂದ್ರದ ಬಿಗ್ ಶಾಕ್! 20 ವರ್ಷಗಳ ಬಳಿಕ ರೂಲ್ಸ್ ಬದಲಾವಣೆ

ಕೇಂದ್ರ ಸರ್ಕಾರವು ಟಿವಿ ಚಾನೆಲ್‌ಗಳಲ್ಲಿನ ಜಾಹೀರಾತು ಸಮಯದ ಮಿತಿಯನ್ನು ರದ್ದುಗೊಳಿಸಿದೆ. ಈ ಹಿಂದೆ ಗಂಟೆಗೆ 12 ನಿಮಿಷಗಳ ಜಾಹೀರಾತು ಮಿತಿ ಇದ್ದು, ಈಗ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ನಿಯಮಗಳ ತಿದ್ದುಪಡಿಯೊಂದಿಗೆ ಈ ನಿರ್ಬಂಧವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
Read Full Story

04:52 PM (IST) Aug 22

ಕನ್ನಡಿಗರಿಗೂ ಪರಿಚಿತ ನಟಿ ರೆಜಿನಾ ಸಿನಿ ಕೆರಿಯರ್‌ನಲ್ಲಿ ಹೊಸ ಅಧ್ಯಾಯ - ವಿಲನ್ ಪಾತ್ರಕ್ಕೆ ಗ್ರೀನ್ ಸಿಗ್ನಲ್?

ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳಂ ಸಿನಿಮಾಗಳಲ್ಲಿ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿರುವ ನಟಿ ರೆಜಿನಾ ಕ್ಯಾಸಂಡ್ರಾ, ಚಿತ್ರರಂಗದಲ್ಲಿ ಬರೋಬ್ಬರಿ 20 ವರ್ಷಗಳನ್ನು ಪೂರೈಸಿದ್ದಾರೆ.

Read Full Story

04:43 PM (IST) Aug 22

ಭೂಮಿಯ ಕಾಂತಕ್ಷೇತ್ರ ಗ್ರಹಿಸುವ ಬಾನೆಟ್‌ಹೆಡ್ ಶಾರ್ಕ್‌ಗಳು - ಸಾಗರದ ಅದೃಶ್ಯ 'ಜಿಪಿಎಸ್' ರಹಸ್ಯ ಭೇದಿಸಿದ ವಿಜ್ಞಾನಿಗಳು!

ಶಾರ್ಕ್‌ಗಳು ಸಾಗರದಲ್ಲಿ ದಾರಿ ತಪ್ಪದೆ ಸಾವಿರಾರು ಕಿಲೋಮೀಟರ್ ಹೇಗೆ ಚಲಿಸುತ್ತವೆ ಎಂಬುದು ಬಹುಕಾಲದ ರಹಸ್ಯವಾಗಿತ್ತು. ಫ್ಲೋರಿಡಾದಲ್ಲಿ ನಡೆದ ಅಧ್ಯಯನವೊಂದು, ಶಾರ್ಕ್‌ಗಳು ಭೂಮಿಯ ಕಾಂತಕ್ಷೇತ್ರವನ್ನು ಕೇವಲ ದಿಕ್ಸೂಚಿಯಂತೆ ಅಲ್ಲ, ಬದಲಾಗಿ ತಮ್ಮ ಸ್ಥಾನವನ್ನು ಗುರುತಿಸುವ 'ಕಾಂತೀಯ ನಕ್ಷೆ'ಯಾಗಿ ಬಳಸುತ್ತವೆ ಎಂಬುದಕ್ಕೆ ಪ್ರಾಯೋಗಿಕ ಸಾಕ್ಷ್ಯವನ್ನು ಒದಗಿಸಿದೆ.

Read Full Story

04:35 PM (IST) Aug 22

ಮಗು ಗಂಡೋ, ಹೆಣ್ಣೋ ಗೊತ್ತಾಗೋದೇ 12 ವರ್ಷ ಆದ್ಮೇಲೆ! ವಿಜ್ಞಾನ ಲೋಕವನ್ನೇ ಬೆಚ್ಚಿಬೀಳಿಸಿರೋ ಊರಿದು

ಡೊಮಿನಿಕನ್ ರಿಪಬ್ಲಿಕ್‌ನ ಸಲೀನಾಸ್ ಎಂಬ ವಿಚಿತ್ರ ಗ್ರಾಮದಲ್ಲಿ, ಮಕ್ಕಳು ಹುಟ್ಟುವಾಗ ಹೆಣ್ಣಿನಂತೆ ಕಂಡರೂ 12 ವರ್ಷ ತುಂಬುತ್ತಿದ್ದಂತೆ ಗಂಡಾಗಿ ಬದಲಾಗುತ್ತಾರೆ. 'ಗೆವೆಡೋಸಸ್' ಎಂದು ಕರೆಯಲ್ಪಡುವ ಈ ವಿದ್ಯಮಾನವು 5-ಆಲ್ಫಾ-ರಿಡಕ್ಟೇಸ್ ಎಂಬ ಎಂಜೈಮ್ ಕೊರತೆಯಿಂದ ಉಂಟಾಗುವ ಅಪರೂಪದ ತಳೀಯ ಅಸ್ವಸ್ಥತೆಯಾಗಿದೆ. ಈ ಕುರಿತ ಸಂಶೋಧನೆಯು ವೈದ್ಯಕೀಯ ಲೋಕದಲ್ಲಿ ಹೊಸ ಔಷಧಿಗಳ ಆವಿಷ್ಕಾರಕ್ಕೆ ಕಾರಣವಾಗಿದೆ.
Read Full Story

04:30 PM (IST) Aug 22

ಮೆಗಾ158 ಅಲ್ಲ... ಇನ್ಮುಂದೆ ‘ಕಾಕ’ - ಹುಟ್ಟುಹಬ್ಬದಂದು ಚಿರಂಜೀವಿ ಹೊಸ ಸಿನಿಮಾದ ಟೈಟಲ್ ರಿವೀಲ್

ಮೆಗಾಸ್ಟಾರ್ ಚಿರಂಜೀವಿ ಅವರ 70ನೇ ಹುಟ್ಟುಹಬ್ಬದ ದಿನ ಅವರ ಮುಂದಿನ ಸಿನಿಮಾ Mega158ಗೆ 'ಕಾಕ' ಎಂದು ಹೆಸರಿಡಲಾಗಿದೆ. ಬಾಬಿ ಕೊಲ್ಲಿ ನಿರ್ದೇಶನದ ಈ ಚಿತ್ರದ ಗ್ಲಿಂಪ್ಸ್‌ನಲ್ಲಿ ಚಿರಂಜೀವಿ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

Read Full Story

04:17 PM (IST) Aug 22

ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಬಿಟ್ಟು ಜನರಿಂದ ಛೀಮಾರಿ ಹಾಕಿಸಿಕೊಂಡ ಕೇರಳ ಸರ್ಕಾರ

ಕೇರಳ ಸರ್ಕಾರವು ಆಲಪ್ಪುಳದಿಂದ ಬೆಂಗಳೂರಿಗೆ ಹೊಸ ಐಷಾರಾಮಿ ಬಸ್ ಸೇವೆಯನ್ನು ಪ್ರಾರಂಭಿಸಿದೆ. ಆದರೆ, ತಮ್ಮ ರಾಜ್ಯದಲ್ಲಿ ಉದ್ಯೋಗ ಸೃಷ್ಟಿಸುವ ಬದಲು ಬೆಂಗಳೂರಿಗೆ ವಲಸೆ ಹೋಗಲು ಪ್ರೋತ್ಸಾಹಿಸುತ್ತಿದೆ ಎಂದು ಕೇರಳದ ಯುವ ಸಮುದಾಯವೇ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
Read Full Story

04:14 PM (IST) Aug 22

FDI ದೇಶದ ನೆರೆ ರಾಷ್ಟ್ರಗಳಿಗೆ ಬಿಗ್ ಆಫರ್, ಭಾರತಕ್ಕೆ ಹರಿದುಬಂತು ₹4,895 ಕೋಟಿ ವಿದೇಶಿ ಹಣ!

ಭಾರತದೊಂದಿಗೆ ಭೂ ಗಡಿ ಹಂಚಿಕೊಳ್ಳುವ ದೇಶಗಳಿಗೆ ಹೂಡಿಕೆ ನಿಯಮಗಳನ್ನು ಸಡಿಲಗೊಳಿಸಿದ ನಂತರ, ದೇಶಕ್ಕೆ ₹4,895 ಕೋಟಿ ಮೌಲ್ಯದ ವಿದೇಶಿ ನೇರ ಹೂಡಿಕೆ (FDI) ಬಂದಿದೆ. ಈ ಹೂಡಿಕೆಗಳು ಐಟಿ, ಉತ್ಪಾದನೆ, ಮತ್ತು ಫಾರ್ಮಾದಂತಹ ಕ್ಷೇತ್ರಗಳಲ್ಲಿ ಬಂದಿದ್ದು, ಶೇ. 10ಕ್ಕಿಂತ ಕಡಿಮೆ ಪಾಲುದಾರಿಕೆಗೆ 'ಸ್ವಯಂಚಾಲಿತ ಮಾರ್ಗ'ದ ಮೂಲಕ ಅವಕಾಶ ಕಲ್ಪಿಸಲಾಗಿದೆ.
Read Full Story

03:59 PM (IST) Aug 22

ಎಂತ ಕಷ್ಟ ಬಂತು! ರಸ್ತೆ ಬದಿ ಕೂತು ತರಕಾರಿ ಮಾರಾಟಕ್ಕೆ ಇಳಿದ ನಟ; ವಿಡಿಯೋ ವೈರಲ್!

ಕಾಲಿವುಡ್ ನಟ ವಿಮಲ್ ತಮ್ಮ ಸ್ವಂತ ಊರಿನ ಸಂತೆಯಲ್ಲಿ ತರಕಾರಿ ವ್ಯಾಪಾರಿಯಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಶೂಟಿಂಗ್ ವೇಳೆ ಸ್ಥಳೀಯ ವ್ಯಾಪಾರಿಗಳೊಂದಿಗೆ ಬೆರೆತು, ಅವರಿಗೆ ಆರ್ಥಿಕ ಸಹಾಯವನ್ನೂ ಮಾಡಿ ತಮ್ಮ ಸರಳತೆಯಿಂದಾಗಿ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸಿದ್ದಾರೆ.
Read Full Story

03:31 PM (IST) Aug 22

ರೀಲ್ಸ್‌ ನೋಡಿದ್ರೆ ನಿಮ್ಮ ಮೆದುಳು ಡಮಾರ್‌! ಭಯಾನಕ ಸತ್ಯ ಬಿಚ್ಚಿಟ್ಟ ಹೊಸ ಸಂಶೋಧನೆ..!

ಶಾರ್ಟ್ಸ್, ರೀಲ್ಸ್‌ಗಳಂತಹ ಕಿರು ವಿಡಿಯೋಗಳನ್ನು ಅತಿಯಾಗಿ ನೋಡೋದ್ರಿಂದ ಮೆದುಳಿನ ಪ್ರಿಫ್ರಂಟಲ್ ಭಾಗದ ಮೇಲೆ ಪರಿಣಾಮ ಉಂಟಾಗಿ, ಏಕಾಗ್ರತೆ, ಸ್ವಯಂ ನಿಯಂತ್ರಣದ ಸಾಮರ್ಥ್ಯ ಕುಂಠಿತವಾಗುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತವೆ. ಈ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆಗಳ ಅಗತ್ಯವಿದ್ದರೂ, ಮಾನಸಿಕ ಗಮನ ಮತ್ತು ಬೌದ್ಧಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಮೊಬೈಲ್ ಬಳಕೆಯ ಸಮಯ ಮಿತಿಗೊಳಿಸುವುದು ಉತ್ತಮ ಎಂದು ತಜ್ಞರು ಎಚ್ಚರಿಸಿದ್ದಾರೆ.

Read Full Story

02:28 PM (IST) Aug 22

Axis credit card ಬಳಕೆದಾರರಿಗೆ ಶಾಕ್.. ಆಗಸ್ಟ್ 28 ರಿಂದ ಹೊಸ ರೂಲ್ಸ್‌, ಜೇಬಿಗೆ ಕತ್ತರಿ ಗ್ಯಾರಂಟಿ..!

ಆಕ್ಸಿಸ್ ಬ್ಯಾಂಕ್ (Axis Bank) ತನ್ನ ಕ್ರೆಡಿಟ್ ಕಾರ್ಡ್ ಗ್ರಾಹಕರಿಗೆ ಬಿಗ್ ಶಾಕ್ ನೀಡಿದೆ. ಬ್ಯಾಂಕ್ ತನ್ನ ಕ್ರೆಡಿಟ್ ಕಾರ್ಡ್‌ಗಳ ನಿಯಮಗಳು ಮತ್ತು ಶುಲ್ಕಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಘೋಷಿಸಿದೆ. ಈ ಹೊಸ ನಿಯಮಗಳು ಆಗಸ್ಟ್ 28, 2026 ರಿಂದ ಜಾರಿಗೆ ಬರಲಿವೆ.

Read Full Story

02:12 PM (IST) Aug 22

ಮಂಗಳೂರು ರೈಲ್ವೆ ಮೈಸೂರು ವಿಭಾಗಕ್ಕೆ ಸೇರ್ಪಡೆಗೆ ಕೇರಳಂ ಸಿಎಂ ಕಿರಿಕ್; ಯಾಕೆ ಈ ವಿರೋಧ?

ಮಂಗಳೂರು ರೈಲ್ವೆ ವಲಯವನ್ನು ಪಾಲಕ್ಕಾಡ್ ವಿಭಾಗದಿಂದ ಬೇರ್ಪಡಿಸಿ ಮೈಸೂರು ವಿಭಾಗಕ್ಕೆ ಸೇರಿಸುವ ಕೇಂದ್ರದ ನಿರ್ಧಾರಕ್ಕೆ ಕೇರಳ ಮುಖ್ಯಮಂತ್ರಿ ವಿ.ಡಿ. ಸತೀಶನ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಜ್ಯದ ಸಂಸದರೊಂದಿಗೆ ಒಗ್ಗಟ್ಟಿನ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.

Read Full Story

01:42 PM (IST) Aug 22

ಭಾರತದ ಚಂದ್ರಯಾನ-3 ಬೆನ್ನಲ್ಲೇ ಚಂದ್ರನ ದಕ್ಷಿಣ ಧ್ರುವಕ್ಕೆ ಚೀನಾದ ಲಗ್ಗೆ, ಅಮೆರಿಕಕ್ಕೆ ಸವಾಲೆಸೆದು ಉಡಾವಣೆ ಸಜ್ಜು!

ಚೀನಾ ತನ್ನ 'ಚಾಂಗ್‌ಇ-7' ರೋಬೋಟಿಕ್ ಚಂದ್ರಯಾನದ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ನೀರನ್ನು ಪತ್ತೆಹಚ್ಚಲು ಸಜ್ಜಾಗಿದೆ. ಈ ಸಂಕೀರ್ಣ ಕಾರ್ಯಾಚರಣೆಯು ಆರ್ಬಿಟರ್, ಲ್ಯಾಂಡರ್, ರೋವರ್ ಮತ್ತು ಕುಳಿಗಳೊಳಗೆ ಜಿಗಿಯಬಲ್ಲ ಹಾಪಿಂಗ್ ಪ್ರೋಬ್ ಅನ್ನು ಒಳಗೊಂಡಿದ್ದು, ಶ್ಯಾಕಲ್ಟನ್ ಕುಳಿಯಲ್ಲಿ ನೀರಿನ ಮಾದರಿ ಸಂಗ್ರಹಿಸುವ ಗುರಿ ಹೊಂದಿದೆ. ಈ ಯೋಜನೆ ಭವಿಷ್ಯದ ಅಂತರರಾಷ್ಟ್ರೀಯ ಚಂದ್ರ ಸಂಶೋಧನಾ ಕೇಂದ್ರಕ್ಕೆ ಅಡಿಪಾಯ ಹಾಕಲಿದೆ.
Read Full Story

01:36 PM (IST) Aug 22

ತಿರುಮಲಕ್ಕೆ ಹೋಗ್ತಿದ್ದೀರಾ? ಟಿಟಿಡಿಯಿಂದ ಹೊಸ ನಿಯಮಗಳು ಜಾರಿ, ಇವು ಬ್ಯಾನ್!

ತಿರುಮಲದಲ್ಲಿ ಭಕ್ತರ ದಟ್ಟಣೆ ಹೆಚ್ಚಾಗಿದ್ದು, ಟಿಟಿಡಿ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಭಕ್ತರ ಆರೋಗ್ಯದ ದೃಷ್ಟಿಯಿಂದ ಕಾಲಿಫ್ಲವರ್ ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಅಲ್ಲದೆ, ಮುಂಬರುವ ಬ್ರಹ್ಮೋತ್ಸವ ಮತ್ತು ಗರುಡ ಸೇವೆಗೆ ಸಿದ್ಧತೆಗಳು ನಡೆಯುತ್ತಿವೆ.
Read Full Story

01:21 PM (IST) Aug 22

ಸಿಎಂ ಹೆಗಲ ಮೇಲೆ ಕೈ ಹಾಕಿ ಜಪಾನ್ ವಿದ್ಯಾರ್ಥಿಗಳು ಸೆಲ್ಫಿ ಫೋಟೋ! ವೈರಲ್ ವಿಡಿಯೋ

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಲಕ್ನೋದಲ್ಲಿ ಜಪಾನ್ ವಿದ್ಯಾರ್ಥಿಗಳನ್ನು ಭೇಟಿಯಾದರು. ಈ ಸಭೆಯು ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ನಗೆಯ ಕ್ಷಣಗಳಿಂದ ಕೂಡಿತ್ತು, ವಿದ್ಯಾರ್ಥಿಗಳು ಯೋಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.
Read Full Story

12:56 PM (IST) Aug 22

ಟಾಕ್ಸಿಕ್ ಅಬ್ಬರಕ್ಕೆ ಸರ್ವರ್‌ಗಳೇ 'ಹ್ಯಾಂಗ್' ಆಗೋ ಭೀತಿ; ಚಿತ್ರರಂಗದ ಹಳೆಯ ಎಲ್ಲಾ ದಾಖಲೆ ಪುಡಿಪುಡಿ?!

ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹಿಡಿದು ಮೈಸೂರು, ಹುಬ್ಬಳ್ಳಿ ಸೇರಿದಂತೆ ರಾಜ್ಯದ ಪ್ರತಿಯೊಂದು ನಗರಗಳಲ್ಲಿ ಈಗಾಗ್ಲೇ ಹೌಸ್‌ಫುಲ್ ಬೋರ್ಡ್‌ಗಳು ರಾರಾಜಿಸುತ್ತಿವೆ. ವಿಶೇಷವಾಗಿ ಬೆಳಗಿನ ಜಾವ 6 ಗಂಟೆಯ ಪ್ರದರ್ಶನಗಳಿಗೆ ಅಭಿಮಾನಿಗಳು ಅಕ್ಷರಶಃ ಮುಗಿಬಿದ್ದಿದ್ದಾರೆ. ಏನೆಲ್ಲಾ ಬೆಳವಣಿಗೆ ಅಗಿದೆ ಅಂತ ನೋಡಿ..

Read Full Story

12:56 PM (IST) Aug 22

ನಾಳೆಯೇ ಅಂತಿಮ ದಿನಾಂಕ; ಎಲ್‌ಪಿಜಿ ಗ್ಯಾಸ್ ಬಳಕೆದಾರರಿಗೆ ಇದೇ ಫೈನಲ್‌ ಅಲರ್ಟ್!

ದೇಶದಾದ್ಯಂತ ಇಂಡಿಯನ್, ಎಚ್‌ಪಿ, ಮತ್ತು ಭಾರತ್ ಗ್ಯಾಸ್ ಬಳಕೆದಾರರು ತಮ್ಮ ಎಲ್‌ಪಿಜಿ ಸಬ್ಸಿಡಿಯನ್ನು ಮುಂದುವರಿಸಲು ಇ-ಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಈ ಪ್ರಕ್ರಿಯೆಯನ್ನು ಆನ್‌ಲೈನ್ ಆ್ಯಪ್‌ಗಳ ಮೂಲಕ ಅಥವಾ ಹತ್ತಿರದ ಗ್ಯಾಸ್ ವಿತರಕರ ಕಚೇರಿಗೆ ಭೇಟಿ ನೀಡಿ ಪೂರ್ಣಗೊಳಿಸಬಹುದು, ತಪ್ಪಿದಲ್ಲಿ ಸಬ್ಸಿಡಿ ಸ್ಥಗಿತಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
Read Full Story

12:54 PM (IST) Aug 22

ದಕ್ಷಿಣ ಭಾರತದ ಅಭಿವೃದ್ಧಿಗೆ ಬೆಂಗಳೂರು-ಹೊಸೂರು ಮೆಟ್ರೋ ಮಾರ್ಗ ಅಗತ್ಯ - ತಮಿಳುನಾಡು ಸಿಎಂ ಜೋಸೆಫ್‌ ವಿಜಯ್‌

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್, ದಕ್ಷಿಣ ವಲಯ ಮಂಡಳಿ ಸಭೆಯಲ್ಲಿ ಬೆಂಗಳೂರಿನ ಬೊಮ್ಮಸಂದ್ರದಿಂದ ಹೊಸೂರಿಗೆ ಮೆಟ್ರೋ ವಿಸ್ತರಿಸುವಂತೆ ಒತ್ತಾಯಿಸಿದ್ದಾರೆ. ಈ ಅಂತರ್‌ರಾಜ್ಯ ಮೆಟ್ರೋ ಯೋಜನೆಯು ಎರಡೂ ರಾಜ್ಯಗಳ ಆರ್ಥಿಕತೆಗೆ ಬಲ ನೀಡಲಿದೆ ಎಂದಿದ್ದಾರೆ.

Read Full Story

12:42 PM (IST) Aug 22

SSLCಯಲ್ಲಿ ಬಂದದ್ದು 54% - ಇವನ ಹಣೆಬರಹ ಇಷ್ಟೇ ಎಂದೋರ ಎದುರೇ JEE ನಲ್ಲಿ ಟಾಪರ್​ ಆಗಿ ಮೆರೆದ ಯುವಕ

10ನೇ ತರಗತಿಯಲ್ಲಿ ಕೇವಲ 54% ಅಂಕ ಗಳಿಸಿದ್ದ ಜೈನೇಂದ್ರಜೀತ್, ಪೋಷಕರ ಪ್ರೋತ್ಸಾಹ ಮತ್ತು ಬದಲಾದ ಅಧ್ಯಯನ ಶೈಲಿಯಿಂದ JEE ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ IIT ಬಾಂಬೆಗೆ ಪ್ರವೇಶ ಪಡೆದರು. ಒಂದು ಕೆಟ್ಟ ಫಲಿತಾಂಶವು ಭವಿಷ್ಯವನ್ನು ನಿರ್ಧರಿಸುವುದಿಲ್ಲ ಎಂಬುದಕ್ಕೆ ಅವರ ಈ ಯಶೋಗಾಥೆಯು ಸ್ಫೂರ್ತಿದಾಯಕ ಸಾಕ್ಷಿಯಾಗಿದೆ.
Read Full Story

12:40 PM (IST) Aug 22

ಸಕ್ಕರೆ ಬೆಲೆ ಮತ್ತೆ 30 ರೂ ಏರಿಕೆ, ಎಥೆನಾಲ್‌ನಿಂದ ಶುಗರ್ ದರ ಹೆಚ್ಚಳವಾಯ್ತಾ? ಕೇಂದ್ರದ ಉತ್ತರವೇನು?

ಸಕ್ಕರೆ ಬೆಲೆ ಮತ್ತೆ 30 ರೂಪಾಯಿ ಏರಿಕೆ ಕಂಡು ಇದೀಗ ಕೆಜೆಗಿ 75 ರೂಪಾಯಿ ಆಗಿದೆ. ಇದೀಗ ಎಥೆನಾಲ್ ಉತ್ಪಾದನೆಯಿಂದ ಸಕ್ಕರೆ ಕೊರತೆ ಎದುರಾಗಿದೆ. ಪರಿಣಾಮ ಬೆಲೆ ಗಗನಕ್ಕೇರುತ್ತಿದೆ ಅನ್ನೋ ಆರೋಪಗಳು ಕೇಳಿಬಂದಿದೆ. ಕೇಂದ್ರ ಸರ್ಕಾರದ ಸ್ಪಷ್ಟನೆ ಏನು?

Read Full Story

11:52 AM (IST) Aug 22

ಆರ್ಡರ್ ಮಾಡಿದ 505 ರೂ ಪಿಝಾ ಹಿಂದೆ ಗ್ರಾಹಕನಿಗೆ ಬಂತು 10520 ರೂಪಾಯಿ, ಏನಿದು ಸರ್ಪ್ರೈಸ್?

ಗ್ರಾಹಕ 505 ರೂಪಾಯಿ ನೀಡಿ ಪಿಝಾ ಆರ್ಡರ್ ಮಾಡಿದ್ದಾನೆ. ಪಿಝಾ ತಲುಪಿದೆ. ಆದರೆ ಗ್ರಾಹಕನಿಗೆ ಸಣ್ಣ ಅನುಮಾನ ಕಾಡಿದೆ. ಕಣ್ಣೆತ್ತಿ ನೋಡಿದ ಬೆನ್ನಲ್ಲೇ 10520 ರೂಪಾಯಿ ಕೂಡ ಬಂದಿದೆ. ಏನಿದು ಘಟನೆ?

Read Full Story

11:35 AM (IST) Aug 22

ಹಳೆಯ ಗೆಳೆಯನನ್ನು ಬೈಯ್ಯುತ್ತಿರುವ ಅನುಪಮಾರ ಹೊಸ ಸುದ್ದಿ.. ಮತ್ತೊಬ್ಬನ ಜೊತೆ ಡೇಟಿಂಗ್?!

ಬೆಳ್ಳಿತೆರೆಯ ಮೇಲೆ ಸದಾ ನಗುನಗುತ್ತಾ, ಬಬ್ಲಿ ಹುಡುಗಿಯಾಗಿ ಕಾಣಿಸಿಕೊಳ್ಳುವ ಈ ನಟಿಯ ಮನಸ್ಸಿನ ಆಳದಲ್ಲಿ ಒಂದು ಕರಾಳ ಅಧ್ಯಾಯ ಅಡಗಿದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಇತ್ತೀಚೆಗೆ ಅವರು ಬಿಚ್ಚಿಟ್ಟ ಸತ್ಯಗಳು ಅಭಿಮಾನಿಗಳ ಎದೆಯನ್ನು ಝಲ್ಲೆನಿಸಿವೆ. ಅದೇನು ನೋಡಿ..

Read Full Story

10:56 AM (IST) Aug 22

ಬರೀ 1 ಪೈಸೆ ಬಿಡ್‌ ಸಲ್ಲಿಸಿ ತಮಿಳುನಾಡು ಸರ್ಕಾರದ 755 ಕೋಟಿಯ ಗೋಲ್ಡ್‌ ರಿಂಗ್‌ ಒಪ್ಪಂದ ಗಿಟ್ಟಿಸಿಕೊಂಡ Joyalukkas

ತಮಿಳುನಾಡು ಸರ್ಕಾರದ 'ತಾಯ್ಮಾಮನ್ ತಂಗ ಮೊದಿರಂ ತಿಟ್ಟಂ' ಯೋಜನೆಯಡಿ, ಜೋಯಾಲುಕ್ಕಾಸ್ ಸಂಸ್ಥೆಯು ಪ್ರತಿ ಚಿನ್ನದ ಉಂಗುರಕ್ಕೆ ಕೇವಲ 1 ಪೈಸೆ ಸೇವಾ ಶುಲ್ಕದ ಬಿಡ್ ಸಲ್ಲಿಸಿ 755 ಕೋಟಿ ರೂ. ಮೌಲ್ಯದ ಟೆಂಡರ್‌ನ ಶೇ. 70ರಷ್ಟು ಭಾಗವನ್ನು ಪಡೆದುಕೊಂಡಿದೆ.

Read Full Story

10:48 AM (IST) Aug 22

Bribe Allegation - ಪಂಜಾಬ್ ಸಿಎಂ ಪತ್ನಿ ಮೇಲೆ ₹5 ಕೋಟಿ ಲಂಚದ ಆರೋಪ, NHRC ತನಿಖೆಗೆ ಆದೇಶ

ಹಲವು ಭ್ರಷ್ಟಾಚಾರ, ಡ್ರಗ್ಸ್ ಮಾಫಿಯಾದಿಂದ ಸುದ್ದಿಯಾಗುತ್ತಿರುವ ಪಂಜಾಬ್ ಇದೀಗ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಪತ್ನಿ ವಿರುದ್ಧ ಅತ್ಯಾ೧ಚಾರ ಪ್ರಕರಣವೊಂದನ್ನು ಮುಚ್ಚಿಹಾಕಲು 5 ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಈ ಪ್ರಕರವನ್ನು NHRC ಗಂಭೀರವಾಗಿ ಪರಿಗಣಿಸಿದೆ.

Read Full Story

08:05 AM (IST) Aug 22

'ಆರ್ಥಿಕ ಸ್ಥಿತಿ ಆಧರಿಸಿ ಮೀಸಲಾತಿ ನೀಡಿ..' ಜಾತಿ ಆಧರಿತ ರಿಸರ್ವೇಷನ್‌ ವಿರುದ್ಧ ದೆಹಲಿಯಲ್ಲಿ ಪ್ರತಿಭಟನೆ

ನವದೆಹಲಿಯ ಜಂತರ್‌ ಮಂತರ್‌ನಲ್ಲಿ ಜಾತಿ ಆಧಾರಿತ ಮೀಸಲಾತಿಯನ್ನು ವಿರೋಧಿಸಿ ನೂರಾರು ಮಂದಿ ಪ್ರತಿಭಟನೆ ನಡೆಸಿದರು. ಆರ್ಥಿಕ ಸ್ಥಿತಿಯ ಆಧಾರದ ಮೇಲೆ ಸವಲತ್ತುಗಳನ್ನು ನೀಡಬೇಕು ಮತ್ತು ಮೀಸಲಾತಿಯಲ್ಲಿ ಕೆನೆ ಪದರ ವ್ಯವಸ್ಥೆ ತರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
Read Full Story

07:56 AM (IST) Aug 22

ಶಾಲೆ ತಪಾಸಣೆಗೆ ಬಂದ ಜಿರಳೆ ಕಾರ್ಯಕರ್ತರನ್ನು ಅಟ್ಟಾಡಿಸಿ ಓಡಿಸಿದ ಸ್ಥಳೀಯರು!

ಜೈಪುರದ ರಾಮಪುರ ಕನ್ವರ್‌ಪುರ ಗ್ರಾಮದಲ್ಲಿ ಪಾಳುಬಿದ್ದ ಸರ್ಕಾರಿ ಶಾಲೆಯನ್ನು ಪರಿಶೀಲಿಸಲು ತೆರಳಿದ್ದ ಜಿರಳೆ ಪಕ್ಷದ ಕಾರ್ಯಕರ್ತರನ್ನು ಸ್ಥಳೀಯರು ತಡೆದು ಗ್ರಾಮದಿಂದ ಹೊರಹಾಕಿದ್ದಾರೆ.

Read Full Story

More Trending News