ಬೆಂಗಳೂರು/ನವದೆಹಲಿ: ದೇಶಾದ್ಯಂತ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯದ ತೈಲ ಕಂಪನಿಗಳು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿವೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಬೆಂಗಳೂರು, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈನಂತಹ ಮೆಟ್ರೋ ನಗರಗಳಲ್ಲಿ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗಿವೆ.
ಬೆಂಗಳೂರಿನಲ್ಲಿ ಇಂದಿನ ದರ ಎಷ್ಟು?
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 3.25 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ 106.21 ರೂಪಾಯಿ ತಲುಪಿದೆ. ಇನ್ನುಳಿದಂತೆ ದೇಶದ ಪ್ರಮುಖ ನಗರಗಳ ಇಂದಿನ ದರಗಳು ಹೀಗಿವೆ:
ನವದೆಹಲಿ: ಪೆಟ್ರೋಲ್ 97.77 ರೂ. (+3.00 ರೂ ಏರಿಕೆ)
ಮುಂಬೈ: ಪೆಟ್ರೋಲ್ 106.68 ರೂ. (+3.14 ರೂ ಏರಿಕೆ)
ಕೋಲ್ಕತ್ತಾ: ಪೆಟ್ರೋಲ್ 108.74 ರೂ. (+3.29 ರೂ ಏರಿಕೆ)
ಚೆನ್ನೈ: ಪೆಟ್ರೋಲ್ 103.67 ರೂ. (+2.83 ರೂ ಏರಿಕೆ)
11:05 PM (IST) May 15
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚೀನಾ ಪ್ರವಾಸವು ಸೈಬರ್ ಭದ್ರತಾ ಭೀತಿಯಿಂದಾಗಿ 'ಡಿಜಿಟಲ್ ಲಾಕ್‌ಡೌನ್' ಅಡಿಯಲ್ಲಿ ನಡೆಯಿತು. ಈ ಭೇಟಿಯಲ್ಲಿ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಡುವಿನ ಮಾತುಕತೆ ಯಾವುದೇ ಒಪ್ಪಂದವಿಲ್ಲದೆ ಮುಕ್ತಾಯಗೊಂಡಿತು.
10:46 PM (IST) May 15
ಸಿನಿಮಾ ಪ್ರಚಾರ ಅಂದ ಮೇಲೆ ನಾಯಕ-ನಾಯಕಿ ಒಟ್ಟಾಗಿ ಕಾಣಿಸಿಕೊಳ್ಳುವುದು ವಾಡಿಕೆ. ಆದರೆ 'ಪೆದ್ದಿ' ಪ್ರಚಾರದ ಕಾರ್ಯಕ್ರಮಗಳಲ್ಲಿ ಜಾಹ್ನವಿ ಕಪೂರ್ ಸುಳಿವೇ ಇಲ್ಲ! ಇದಕ್ಕೆ ಕೇಳಿಬರುತ್ತಿರುವ ಕಾರಣ ಮಾತ್ರ ಅಚ್ಚರಿ ಮೂಡಿಸುವಂತಿದೆ. ಕಾರಣ ಏನಿರಬಹುದು? ಈ ಸ್ಟೋರಿ ನೋಡಿ ಗೊತ್ತಾಗುತ್ತೆ..!
10:02 PM (IST) May 15
ಬಾಲಿವುಡ್‌ನಿಂದ ಟಾಲಿವುಡ್ ತನಕ 'ನ್ಯಾಷನಲ್ ಕ್ರಶ್' ಆಗಿ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಈಗ ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಸೌಂದರ್ಯಕ್ಕಲ್ಲ ಬದಲಿಗೆ ಕೇರಳದಲ್ಲಿ ಈ ನಟಿ ಮಾಡಿರುವ ಕೆಲಸಕ್ಕೆ.. ಏನಿದು ಮ್ಯಾಟರ್ ನೋಡಿ..
09:28 PM (IST) May 15
ಸಿಎಂ ಆದ ಖುಷಿಯಲ್ಲಿದ್ದ ವಿಜಯ್‌ಗೆ ಈ ಬೆಳವಣಿಗೆ ಇಕ್ಕಟ್ಟಿಗೆ ಸಿಲುಕಿಸುತ್ತದೆಯೇ? ಅಥವಾ ತ್ರಿಶಾ ಅವರ ಈ ನಿರ್ಧಾರವನ್ನು ಕೇವಲ ಸಿನಿಮಾ ಕೆಲಸ ಎಂದು ಭಾವಿಸಿ ಸುಮ್ಮನಾಗುತ್ತಾರೆಯೇ? ವಿಜಯ್-ತ್ರಿಶಾ ಸ್ನೇಹದ ಹಾದಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ? ಇದೀಗ ಎಲ್ಲರಲ್ಲೂ ಕುತೂಹಲ ಕೆರಳಿದೆ..
08:21 PM (IST) May 15
08:02 PM (IST) May 15
ಸುಪ್ರೀಂ ಕೋರ್ಟ್ ವಕೀಲೆ ನಾಜಿಯಾ ಖಾನ್ ಪಶ್ಚಿಮ ಬಂಗಾಳದ ಕಾಳಿ ದೇಗುಲಕ್ಕೆ ಭೇಟಿ ನೀಡಿ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಹಿಂದೆ ಮಮತಾ ಬ್ಯಾನರ್ಜಿ ಆಡಳಿತದಲ್ಲಿ ಭೇಟಿಗೆ ಯತ್ನಿಸಿದಾಗ ಬಾಂಗ್ಲಾದೇಶದಿಂದ ಜೀವ ಬೆದರಿಕೆಗಳು ಬಂದಿದ್ದವು ಎಂದು ಅವರು ಬಹಿರಂಗಪಡಿಸಿದ್ದಾರೆ.
07:36 PM (IST) May 15
ಇತ್ತೀಚಿನ ಸಂದರ್ಶನವೊಂದರಲ್ಲಿ ಮಾಳವಿಕಾ ಅವರು ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಮೋಹನ್ ಲಾಲ್ ಮತ್ತು ದಳಪತಿ ವಿಜಯ್ ಅವರ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಈ ಘಟಾನುಘಟಿ ನಟರಿಂದ ತಾವು ಕಲಿತದ್ದೇನು ಎಂಬ ಸೀಕ್ರೆಟ್ ಬಿಚ್ಟಿಟ್ಟಿದ್ದಾರೆ.
05:48 PM (IST) May 15
ಸೋಷಿಯಲ್ ಮೀಡಿಯಾಗಳಲ್ಲಿ ಸಖತ್ ವೈರಲ್ ಅಗುತ್ತಿರುವ ಈ ಫೋಟೋ ಇಡೀ ಜಗತ್ತಿನ ನಿದ್ದೆ ಕೆಡಿಸಿದೆ. ಕಾರಣ, ಇದರಲ್ಲಿ ಫೋಟೋ & ಬರಹದ ಮೂಲಕ ಹೇಳಿರೋ ವಿಷಯ ಎಂಥವರನ್ನೂ ಒಮ್ಮೆ ದಂಗುಬಡಿಸುತ್ತದೆ. ನೀವು ಒಮ್ಮೆ ಈ ವೈರಲ್ ಫೋಟೋ ನೋಡಿದರೆ, ತುಂಬಾ ದಿನ ನಿದ್ದೆ ಮಾಡಲಾರಿರಿ.. ಸ್ಟೋರಿ ಒಳಗೆ ಫೋಟೋ ಇದೆ ನೋಡಿ..
05:32 PM (IST) May 15
ಶ್ರೀಮದ್ ಭಗವತ್ ಕಥಾ ಮೂಲಕ ಪುರಾಣದ ಕತೆಗಳನ್ನು ಸುಶ್ರಾವ್ಯವಾಗಿ ಭಕ್ತರಿಗೆ ಹೇಳಲಾಗುತ್ತದೆ. ಹೀಗೆ ಜನಪದ ಗಾಯಕನ ಶ್ರೀಮದ್ ಭಗವತ್ ಕಥಾ ವೇಳೆ ಭಕ್ತರು ಗೋಣಿ ಚೀಲದಲ್ಲಿ ಹಣದ ಸುರಿಮಳೆ ಮಾಡಿದ್ದಾರೆ. ನೋಟುಗಳಿಂದ ಗಾಯಕ ಮುಳುಗಿ ಹೋದ ವಿಡಿಯೋ ಭಾರಿ ವೈರಲ್ ಆಗಿದೆ
03:23 PM (IST) May 15
ಭೋಜಶಾಲಾ ವಿವಾದಿತ ಸ್ಥಳ ಹಿಂದೂ ದೇವಸ್ಥಾನವಾಗಿದೆ. ಬಳಿಕ ಕೆಲ ಭಾಗ ಒಡೆದ ಕಮಲ್ ಮೌಲಾ ಮಸೀದಿ ನಿರ್ಮಾಣ ಮಾಡಲಾಗಿದೆ. ಇಲ್ಲಿ ನಮಾಜ್ ಮಾಡುವುದು ನಿಲ್ಲಿಸಬೇಕು, ಇದು ಸರಸ್ವತಿ ಮಂದಿರ ಸ್ಥಳ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
02:48 PM (IST) May 15
ರಾತ್ರಿ 10 ಗಂಟೆಗೆ ಕರೆ ಮಾಡಿ ತನಗಾಗುತ್ತಿರುವ ಮಾನಿಸಿಕ ದೈಹಿಕ ಹಿಂಸೆ ಕುರಿತು ತಾಯಿಗೆ ಹೇಳಿದ್ದಾಳೆ. ಅಷ್ಟರಲ್ಲೇ ಕೋಣೆಗೆ ಗಂಡ ಆಗಮಿಸಿದ ಕಾರಣ ಫೋನ್ ಕಟ್ ಮಾಡಿದ್ದಾಳೆ. 10 ನಿಮಿಷದಲ್ಲೇ ನಡೆದಿದ್ದೇನು?
02:06 PM (IST) May 15
ಮಲೆನಾಡಿನ ಈ ಚೆಲುವೆ ಮೊದಲು ಕನ್ನಡಿಗರ ಮನೆಗೆದ್ದಿದ್ದು 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ. ಅದರಲ್ಲಿ ಅವರು ನಿರ್ವಹಿಸಿದ 'ತನು' ಎಂಬ ಪಾತ್ರ ಇಂದಿಗೂ ಮನೆಮಾತು. ಕನ್ನಡದ 'ನಮ್ಮ ರುಕ್ಕು' ಸೀರಿಯಲ್ ಬಳಿಕ ಶೋಭಾ ಶೆಟ್ಟಿ ಅವರ ವೃತ್ತಿಜೀವನಕ್ಕೆ ದೊಡ್ಡ ಬ್ರೇಕ್ ನೀಡಿದ್ದು ತೆಲುಗು ಕಿರುತೆರೆ.
01:52 PM (IST) May 15
ಪಶ್ಚಿಮ ಬಂಗಾಳದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಬಿಜೆಪಿ ಇದೀಗ ಯುಪಿಯ ಯೋಗಿ ಮಾಡೆಲ್ ಅನುಸರಿಸುತ್ತಿದೆ. ಸಿಎಂ ಸುವೆಂದು ಅಧಿಕಾರಿ 24 ಬುಲ್ಡೋಜರ್ ಬಳಸಿ ಅತಿಕ್ರಮ ಕಟ್ಟಡ ನೆಲೆಸಮ ಮಾಡಲಾಗುತ್ತಿದೆ.
01:15 PM (IST) May 15
ಸೂರ್ಯನ ಒಂದು ಅದ್ಭುತ ಫೋಟೋಗಾಗಿ ಆ್ಯಸ್ಟ್ರೋ ಫೋಟೋಗ್ರಾಫರ್ ಬರೋಬ್ಬರಿ 1.7 ಮಿಲಿಯನ್ ಫೋಟೋ ತೆಗೆದಿದ್ದಾರೆ. ಸತತ ಒಂದು ವಾರ ಫೋಟೋ ಕ್ಲಿಕ್ ಮಾಡಿ ಜಗತ್ತೇ ಚಕಿತಗೊಳಿಸುವ ಫೋಟೋ, ವಿಡಿಯೋ ತೆಗೆದಿದ್ದಾರೆ. ಈ ಸುಂದರ ಫೋಟೋಗಳು ಇಲ್ಲಿದೆ.
12:41 PM (IST) May 15
ವಾಯುಭಾರತ ಕುಸಿತದಿಂದ ಪ್ರತಿ ದಿನ ಮಳೆ ಆತಂಕ, ಹವಾಮಾನ ವೈಪರಿತ್ಯ ಆತಂಕ ಹೆಚ್ಚಾಗಿದೆ. ಎನ್ ನಿನೊ ಚಂಡಮಾರುತ ಅಪ್ಪಳಿಸುವ ಭೀತಿ ಎದುರಾಗಿದೆ. ಇದರ ಪರಿಣಾಮ ಭಾರತದ ಪ್ರಮುಖ ನಗರಗಳಲ್ಲಿ ಪ್ರವಾಹ ಎಚ್ಚರಿಕೆ ಎದುರಾಗಿದೆ.
12:06 PM (IST) May 15
ಕಿರುತೆರೆಯಿಂದ ಬೆಳ್ಳಿ ಪರದೆಯವರೆಗೆ ಮೌನಿ ರಾಯ್ ಪಯಣ ರೋಚಕವಾಗಿದೆ. 'ದೇವೋಂ ಕೆ ದೇವ್ ಮಹಾದೇವ್' ಮತ್ತು 'ನಾಗಿನ್' ಮೂಲಕ ದೇಶಾದ್ಯಂತ ಜನಪ್ರಿಯತೆ ಗಳಿಸಿದ ಈಕೆ, 'ಕೆಜಿಎಫ್' ಸಿನಿಮಾದ ವಿಶೇಷ ಹಾಡಿನಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಹತ್ತಿರವಾಗಿದ್ದರು. 'ಬ್ರಹ್ಮಾಸ್ತ್ರ' ಚಿತ್ರದ ಮೂಲಕ ಬಾಲಿವುಡ್‌ನಲ್ಲೂ ಮಿಂಚಿದ್ದಾರೆ. ಈಗೇನು ಸಂಸಾರದಲ್ಲಿ ಸಮಸ್ಯೆ?
08:49 AM (IST) May 15
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಏರಿಕೆಯಾದ ಕಾರಣ, ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಪ್ರತಿ ಲೀಟರ್‌ಗೆ ಸರಾಸರಿ 3 ರೂ. ಹೆಚ್ಚಳವಾಗಿವೆ. ಪಶ್ಚಿಮ ಏಷ್ಯಾದ ಸಂಘರ್ಷಗಳು ಈ ಏರಿಕೆಗೆ ಕಾರಣವಾಗಿದ್ದು, 11 ವಾರಗಳ ಬಳಿಕ ತೈಲ ಕಂಪನಿಗಳು ಈ ಹೊರೆಯನ್ನು ಗ್ರಾಹಕರ ಮೇಲೆ ವರ್ಗಾಯಿಸಿವೆ.