ನವದೆಹಲಿ: ತಮಿಳುನಾಡಿನ ಕಲ್ಪಾಕಂ ಅಣು ವಿದ್ಯುತ್ ಸ್ಥಾವರದಲ್ಲಿನ ಸಂಪೂರ್ಣ ಸ್ವದೇಶಿ ನಿರ್ಮಿತ ಪ್ರೋಟೋಟೈಪ್ ಫಾಸ್ಟ್ ಬೀಡರ್ ರಿಯಾಕ್ಟರ್ (ಪಿಎಫ್ ಬಿಆರ್) ಇದೀಗ ನಿರ್ಣಾಯಕ ಹಂತ ತಲುಪಿದ್ದು, ಪರಮಾಣು ವಿದಳನ ಪ್ರಕ್ರಿಯೆ ಆರಂಭಿಸಿದೆ. ಇದನ್ನು ಪರಮಾಣು ವಿದ್ಯುತ್ ಉತ್ಪಾದನೆಯ ದೊಡ್ಡ ಮೈಲುಗಲ್ಲು ಎಂದೇ ಪರಿಗಣಿಸಲಾಗಿದೆ. ರಷ್ಯಾ ಬಳಿಕ ಈ ಸಾಧನೆ ಮಾಡಿದ 2ನೇ ದೇಶ ಎಂಬ ಖ್ಯಾತಿಗೆ ಭಾರತ ಪಾತ್ರವಾಗಿದೆ. ಇಂಧನ ದಹಿಸುತ್ತಲೇ ಇಂಧನ ಸೃಷ್ಟಿಸುವ ಘಟಕ ಇದಾಗಿದ್ದು, ಫಾಸ್ಟ್ ಬೀಡರ್ ಘಟಕ ಹೊಂದಿದ ವಿಶ್ವದ 2ನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.
ಯಾಕೆ ಮಹತ್ವ?
ತ.ನಾಡಿನ ಕಲ್ಪಾಕಂ ಘಟಕ ಸಂಪೂರ್ಣ ಸ್ವದೇಶಿ ವಿನ್ಯಾಸ, ಮತ್ತು ಸ್ವದೇಶಿ ನಿರ್ಮಿತವಾಗಿದೆ.
ಘಟಕದಲ್ಲಿ ಯುರೇನಿಯಂ ಬಳಕೆ ಬಳಿಕ ಲಭ್ಯವಾಗುವ ಪ್ಲುಟೋನಿಯಂ ಮರು ಬಳಕೆ ಮಾಡಲಾಗುತ್ತದೆ.
ವಿದ್ಯುತ್ ಉತ್ಪತ್ತಿಗೆ ಕಡಿಮೆ ಯುರೇನಿಯಂ ಸಾಕಾಗುವುದು ಹಾಗೂ ತ್ಯಾಜ್ಯವೂ ಕಡಿಮೆ
ಸದ್ಯ ರಿಯಾಕ್ಟರ್‌ನಲ್ಲಿ ಅಣು ವಿದಳನ ಕ್ರಿಯೆ ಸುಸ್ಥಿರ ಹಂತಕ್ಕೆ ತಲುಪಿದೆ. ಈ ಎಲ್ಲಾ ಕಾರಣಗಳಿಂದ ಇದು ಮಹತ್ವ ಪಡೆದಿದೆ.
11:49 PM (IST) Apr 08
10:55 PM (IST) Apr 08
ಲೆಬೆನಾನ್ ಮೇಲೆ ಇಸ್ರೇಲ್ ಕಳೆದ 40 ವರ್ಷದಲ್ಲೇ ಅತೀ ಭೀಕರ ದಾಳಿ, 1500 ಮಂದಿ ಹತ್ಯೆ, ಅಮೆರಿಕ ಇರಾನ್ ನಡುವಿನ ಕದನ ವಿರಾಮದಿಂದ ಆಕ್ರೋಶಗೊಂಡಿರುವ ಇಸ್ರೇಲ್ ಇದೀಗ ಹೆಝ್‌ಬೊಲ್ಲಾ ಉಗ್ರರ ಗುರಿಯಾಗಿಸಿ ಲೆಬೆನಾನ್ ಮೇಲೆ ದಾಳಿ ನಡೆಸಿದೆ.
10:10 PM (IST) Apr 08
Breaking ಕದನ ವಿರಾಮ ಬ್ರೇಕ್, ಇಸ್ರೇಲ್ ದಾಳಿಯಿಂದ ಹೊರ್ಮುಜ್ ಜಲಸಂಧಿ ಮುಚ್ಚಿದ ಇರಾನ್, ಅಮೆರಿಕ ಮಾಡಿದ ಕದನ ವಿರಾಮದ ಬೆನ್ನಲ್ಲೇ ಲೆಬೆನಾನ್ ಮೇಲೆ ಇಸ್ರೇಲ್ ದಾಳಿ ಮಾಡಿದೆ. ಪರಿಣಾಮ ಪರಿಸ್ಥಿತಿ ಉದ್ವಿಘ್ನಗೊಂಡಿದೆ.
09:18 PM (IST) Apr 08
ರನೌಟ್ ವಿವಾದಕ್ಕೆ ಅಂಪೈರೆಗೆ ಚಾಕು ಇರಿದ ಅಭಿಮಾನಿ, ದುರಂತ ಸಾವಿನಿಂದ ಕ್ರಿಕೆಟ್ ಜಗತ್ತು ಶಾಕ್, ಮೈದಾನದಲ್ಲಿ ಶುರುವಾದ ರನೌಟ್ ವಿವಾದ ಕೊಲೆಯಲ್ಲಿ ಅಂತ್ಯಗೊಂಡಿದೆ. ಏನಿದು ರನೌಟ್ ಹತ್ಯೆ
08:15 PM (IST) Apr 08
ನಾಸಿಕ್ ಗುರೂಜಿ ಕಾಮಕಾಂಡ ವಿಡಿಯೋ ಟೆಲಿಗ್ರಾಂನಲ್ಲಿ 50 ರೂಗೆ ಮಾರಾಟ, ಈ ಕುರಿತು ವರದಿಗಳು ಹರಿಡಾಡುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಈಗಾಗಲೇ ವಿಡಿಯೋ ಕುರಿತು ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.
07:44 PM (IST) Apr 08
ಬಿಗ್ಬಾಸ್ ಖ್ಯಾತಿಯ 'ವಡಾ ಪಾವ್ ಗರ್ಲ್' ಚಂದ್ರಿಕಾ ದೀಕ್ಷಿತ್, ತಮಗೆ ಉದ್ಯಮಿಯೊಬ್ಬರು ಒಂದು ರಾತ್ರಿ ಕಳೆಯಲು 50 ಲಕ್ಷ ರೂಪಾಯಿ ಆಫರ್ ಮಾಡಿದ್ದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಪತಿಯ ವಿವಾಹೇತರ ಸಂಬಂಧದ ಬಗ್ಗೆಯೂ ಆರೋಪ ಮಾಡಿದ್ದಾರೆ.
07:28 PM (IST) Apr 08
ಕದನ ವಿರಾಮ ಬಳಿಕ ಚಿನ್ನದ ಬೆಲೆ ಏರಿಕೆ, ಮತ್ತೆ ರಾಕೆಟ್ ವೇಗದಲ್ಲಿ ಹೆಚ್ಚುತ್ತಾ ಬಂಗಾರ ದರ?, ಕದನ ವಿರಾಮದಿಂದ ತೈಲ ಬೆಲೆ ಇಳಿಕೆಯಾಗಿದೆ. ಆದರೆ ಚಿನ್ನ ಬೆಲೆ ಮಾತ್ರ ಏರಿಕೆಯಾಗಿದ್ದೇಕೆ?
07:26 PM (IST) Apr 08
07:01 PM (IST) Apr 08
1970ರ ದಶಕದಲ್ಲಿ, ಸೆಹ್ಮತ್ ಖಾನ್ ಎಂಬ ಭಾರತೀಯ ಯುವತಿ ದೇಶಕ್ಕಾಗಿ ತನ್ನೆಲ್ಲಾ ಕನಸುಗಳನ್ನು ತ್ಯಜಿಸಿ ಪಾಕಿಸ್ತಾನಿ ಸೇನಾಧಿಕಾರಿಯನ್ನು ವಿವಾಹವಾದರು. ಶತ್ರುದೇಶದಲ್ಲಿ ಪತ್ನಿಯಾಗಿ ನಟಿಸುತ್ತಾ, ಭಾರತಕ್ಕೆ ನಿರ್ಣಾಯಕ ಗುಪ್ತಚರ ಮಾಹಿತಿಯನ್ನು ರವಾನಿಸಿದ , 1971ರ ಇಂಡೋ-ಪಾಕ್ ಯುದ್ಧದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಮಹಿಳಾ ಗೂಢಚಾರಿಯ ರೋಚಕ ಕಥೆಯಿದು. ಇವರ ಜೀವನಗಾಥೆಯೇ 'ರಾಝಿ' ಸಿನಿಮಾಗೆ ಸ್ಪೂರ್ತಿಯಾಗಿದೆ.
06:22 PM (IST) Apr 08
ಕಥೆಯ ವ್ಯಾಪ್ತಿ ದೊಡ್ಡದಿರುವುದರಿಂದ ಈ ಸಿನಿಮಾವನ್ನು ಕೂಡ ‘ಕೆಜಿಎಫ್’ ಮತ್ತು ‘ಸಲಾರ್’ ಮಾದರಿಯಲ್ಲೇ ಎರಡು ಭಾಗಗಳಲ್ಲಿ ತರಲು ನೀಲ್ ಪ್ಲಾನ್ ಮಾಡುತ್ತಿದ್ದಾರಂತೆ. ಒಟ್ಟಿನಲ್ಲಿ, ಗಾಸಿಪ್‌ಗಳು ಏನೇ ಇರಲಿ, ಪ್ರಶಾಂತ್ ನೀಲ್ ಮತ್ತು ತಾರಕ್ ಜೋಡಿ ತೆರೆಯ ಮೇಲೆ ಬಂದಾಗ ಬಾಕ್ಸ್ ಆಫೀಸ್ ಸುನಾಮಿ ಗ್ಯಾರಂಟಿ ಎಂಬುದು ಮಾತ್ರ ಸತ್ಯ!
06:02 PM (IST) Apr 08
ಭಾರತೀಯ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ಟೆಲಿಕಾಂ ಕಂಪನಿಗಳಿಗೆ ಕೇವಲ ವಾಯ್ಸ್ ಕಾಲಿಂಗ್ ಮತ್ತು ಎಸ್‌ಎಂಎಸ್ ಸೌಲಭ್ಯಗಳಿರುವ ಅಗ್ಗದ ಪ್ಲಾನ್‌ಗಳನ್ನು ಕಡ್ಡಾಯವಾಗಿ ನೀಡಲು ನಿರ್ದೇಶಿಸಿದೆ.
06:01 PM (IST) Apr 08
ಭಾರತದ ಅತ್ಯಂತ ಮಾಲಿನ್ಯ ನಗರ ಮಾರ್ಚ್ 2026 ಪಟ್ಟಿ ರಿಲೀಸ್, ದೆಹಲಿ ಅಲ್ಲ ನಂ.1 ಯಾರು?, ಉತ್ತರ ಪ್ರದೇಶದ ಹಲವು ನಗರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಕರ್ನಾಟಕ ಯಾವುದಾದರು ಸಿಟಿ ಈ ಪಟ್ಟಿಯಲ್ಲಿ ಇದೆಯಾ?
05:28 PM (IST) Apr 08
ಕರ್ನಾಟಕದ 2 ಕ್ಷೇತ್ರ, ಮೂರು ರಾಜ್ಯಗಳಲ್ಲಿ ನಾಳೆ ಮತದಾನ, ಉದ್ಯೋಗಿಗಳಿಗೆ ವೇತನ ಸಹಿತ ರಜೆ, ಚುನಾವಣಾ ಆಯೋಗದ ಆದೇಶದಿಂದ ಮತದಾನ ದಿನ ಕಾರ್ಮಿಕರು, ನೌಕರರಿಗೆ ವೇತನ ಸಹಿತ ರಜೆ ಸಿಗಲಿದೆ.
04:32 PM (IST) Apr 08
ಕದನ ವಿರಾಮದಿಂದ ಕಚ್ಚಾ ತೈಲ ಬೆಲೆ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಯುತ್ತಾ?, ಹೊರ್ಮುಜ್ ಜಲಸಂಧಿ ತೆರೆಯಲಾಗಿದೆ. ಇತ್ತ ಕಚ್ಟಾ ತೈಲ ಬೆಲೆ 100 ಡಾಲರ್‌ಗೆ ಇಳಿಕೆಯಾಗಿದೆ. ಇದೀಗ ಭಾರತದಲ್ಲಿ ಪೆಟ್ರೋಲ್ ಬೆಲೆ ಕತೆ ಏನು?
04:23 PM (IST) Apr 08
04:22 PM (IST) Apr 08
ಮಹಾರಾಷ್ಟ್ರದ ಕಲ್ಯಾಣ್ ಬಳಿ 49 ವರ್ಷದ ವ್ಯಕ್ತಿಯೊಬ್ಬರು ಕೌಟುಂಬಿಕ ಕಲಹದಿಂದ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಡೆತ್ ನೋಟ್‌ನಲ್ಲಿ, ತನ್ನ ಸಾವಿಗೆ ಪತ್ನಿ ಮತ್ತು ಆಕೆಯ ಸಂಬಂಧಿಕರ ಮಾನಸಿಕ ಹಾಗೂ ದೈಹಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ.
03:42 PM (IST) Apr 08
19 ವರ್ಷದ ಗೌರಿ ಎಂ, ಯಾವುದೇ ಪದವಿ ಇಲ್ಲದಿದ್ದರೂ ತನ್ನ ಬಲವಾದ ಪರ್ಸನಲ್ ಬ್ರ್ಯಾಂಡಿಂಗ್ ಮತ್ತು ಸೋಷಿಯಲ್ ಮೀಡಿಯಾ ಪ್ರಭಾವದಿಂದ ವಿಶ್ವಪ್ರಸಿದ್ಧ BMW ಕಂಪನಿಯಲ್ಲಿ ಮಾರ್ಕೆಟಿಂಗ್ ಉದ್ಯೋಗವನ್ನು ಪಡೆದುಕೊಂಡಿದ್ದಾಳೆ.
03:34 PM (IST) Apr 08
ಮೂರು ತಿಂಗಳ ಹಿಂದೆ ಕಳುವಾಗಿದ್ದ ಬೈಕ್‌ಗೆ ಮಾಲೀಕನ ಮನೆಗೆ ಟ್ರಾಫಿಕ್ ಚಲನ್ ಬಂದಿದೆ. ಆ ಚಲನ್‌ನಲ್ಲಿ ಬೈಕ್ ಓಡಿಸುತ್ತಿದ್ದ ಕಳ್ಳನ ಫೋಟೋ ಸ್ಪಷ್ಟವಾಗಿ ಮುದ್ರಿತವಾಗಿದ್ದು, ಮಾಲೀಕರು ಈ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಕಳ್ಳನನ್ನು ಹಿಡಿಯುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
03:16 PM (IST) Apr 08
03:05 PM (IST) Apr 08
ಚುನಾವಣೆಗೂ ಮೊದಲೇ ಒಂದು ಕ್ಷೇತ್ರದಲ್ಲಿ ಸೋಲು ಕಂಡ ವಿಜಯ್ ನೇತೃತ್ವದ ಟಿವಿಕೆ ಪಾರ್ಟಿ, 234 ಸ್ಥಾನಗಳ ಪೈಕಿ ಇದೀಗ ಚುನನಾವಣೆ, ಫಲಿತಾಂಶಕ್ಕೂ ಮೊದಲೇ ಟಿವಿಕೆ ಒಂದು ಸ್ಥಾನ ಕಳೆದುಕೊಂಡಿದೆ.
03:04 PM (IST) Apr 08
ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದ್ದು, ಮೊದಲ ವಾರವೇ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಸಿಕ್ಕಿದೆ. ಈಗಾಗಲೇ ನಾಲ್ಕು ತಂಡಗಳು ಪ್ಲೇ ಆಫ್ ಸ್ಥಾನ ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಟ್ಟಿವೆ.
02:13 PM (IST) Apr 08
ಐಟಿ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಲೇಆಫ್‌ಗಳು ನಡೆಯುತ್ತಿವೆ. ಕೆಲಸ ಕಳೆದುಕೊಂಡ ಅನೇಕರು ತಮ್ಮ ಭವಿಷ್ಯದ ಬಗ್ಗೆ ಚಿಂತಿತರಾಗಿದ್ದಾರೆ. ಆದರೆ, ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಒರಾಕಲ್ ಕಂಪನಿಯ ಮಾಜಿ ಇಂಜಿನಿಯರ್ ಒಬ್ಬರು, ಕೆಲಸ ಹೋದರೂ ಪರಿಸ್ಥಿತಿಯನ್ನು ಎದುರಿಸುತ್ತಿರುವ ರೀತಿ ವೈರಲ್ ಆಗಿದೆ.
01:35 PM (IST) Apr 08
2019ರ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸೈಲಿ ಸುರ್ವೆ, ನಾಲ್ಕು ಮಕ್ಕಳೊಂದಿಗೆ ನಾಪತ್ತೆಯಾಗಿದ್ದಾರೆ. 'ಲವ್ ಜಿಹಾದ್' ಆರೋಪ ಮಾಡಿ, ಹಿಂದೂ ಧರ್ಮಕ್ಕೆ ಮರಳಿದ್ದ ಅವರು, ಪತಿಯಿಂದ ದೌರ್ಜನ್ಯಕ್ಕೊಳಗಾಗಿದ್ದಾಗಿ ಹೇಳಿಕೊಂಡಿದ್ದರು. ಪತಿಯ ಕುಟುಂಬವೇ ಅಪಹರಿಸಿದೆ ಎಂದು ಪೋಷಕರು ದೂರು ನೀಡಿದ್ದಾರೆ.
01:35 PM (IST) Apr 08
01:18 PM (IST) Apr 08
ದೆಹಲಿ ಕನ್ನಡ ಸಂಘದ ಚುನಾವಣೆಯು ಗೂಬೆಯ ವಿಗ್ರಹವನ್ನು ಉಡುಗೊರೆಯಾಗಿ ನೀಡುವುದರಿಂದ ವಿವಾದಕ್ಕೆ ಕಾರಣವಾಗಿದೆ. ಗೂಬೆ ಶುಭವೋ ಅಶುಭವೋ ಎಂಬ ಚರ್ಚೆಯ ನಡುವೆ, ದುಬಾರಿ ಉಡುಗೊರೆಗಳು ಮತ್ತು ಹಣ ಹಂಚಿಕೆ ಮೂಲಕ ಮತದಾರರನ್ನು ಸೆಳೆಯುವ ಪ್ರಯತ್ನಗಳು ನಡೆಯುತ್ತಿವೆ.
01:08 PM (IST) Apr 08
ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಓದುತ್ತಿರುವ ಮಗಳ ಡೈರಿಯಲ್ಲಿ ಶಿಕ್ಷಕರು ಮಾಡಿದ ವ್ಯಾಕರಣ ದೋಷವನ್ನು ಪೋಷಕರೊಬ್ಬರು ವಿಡಿಯೋ ಮೂಲಕ ಬಹಿರಂಗಪಡಿಸಿದ್ದಾರೆ. ದುಬಾರಿ ಶುಲ್ಕ ಪಡೆದು ಕಳಪೆ ಶಿಕ್ಷಣ ನೀಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.
12:55 PM (IST) Apr 08
ದೀಪಿಕಾ ಅವರ ಈ ಒಂದು ಕಾಮೆಂಟ್ ಇಂಟರ್ನೆಟ್‌ನಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರ ಅಭಿಮಾನಿಗಳು ಡಿಪ್ಪಿಯ ಬೆಂಬಲಕ್ಕೆ ನಿಂತಿದ್ದಾರೆ. "ದೀಪಿಕಾ ಅವರು ರಣವೀರ್ ಜೊತೆಯೇ ವಾಸಿಸುತ್ತಾರೆ, ಅವರು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಯೊಂದನ್ನೂ ತೋರಿಸಿಕೊಳ್ಳುವ ಅಗತ್ಯವಿಲ್ಲ" ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
12:36 PM (IST) Apr 08
ಅಮೆರಿಕ-ಇರಾನ್ ಕದನ ವಿರಾಮದಲ್ಲಿ ಪಾಕಿಸ್ತಾನ ಮಧ್ಯಸ್ಥಿಕೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಮೋದಿ ಸರ್ಕಾರದ ವಿದೇಶಾಂಗ ನೀತಿ ಬಗ್ಗೆ ತೀವ್ರ ಟೀಕೆ.. ಪಾಕಿಸ್ತಾನವನ್ನು ಜಾಗತಿಕವಾಗಿ ಏಕಾಂಗಿಯಾಗಿಸುವಲ್ಲಿ ಮೋದಿ ವಿಫಲ, ಇದು ಭಾರತದ ರಾಜತಾಂತ್ರಿಕತೆಗೆ ದೊಡ್ಡ ಹಿನ್ನಡೆ ಎಂದಿದ್ದಾರೆ.
11:48 AM (IST) Apr 08
11:39 AM (IST) Apr 08
ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಗಳನ್ನು ಅದ್ದೂರಿಯಾಗಿ ಸ್ವಾಗತಿಸಿದ ನಿವೃತ್ತ ನ್ಯಾಯಾಧೀಶರ ಕಥೆ ವೈರಲ್ ಆಗಿತ್ತು. ಆದರೆ, ಇದೀಗ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಯುವತಿಯ ಮಾಜಿ ಪತಿಯ ಕುಟುಂಬವು ತಮ್ಮ ಮೇಲಾದ ದೌರ್ಜನ್ಯ ಮತ್ತು ಸಾಮಾಜಿಕ ಅವಮಾನದ ಬಗ್ಗೆ ಮಾತನಾಡಿದ್ದಾರೆ.
11:12 AM (IST) Apr 08
ತಮ್ಮ ಬಗ್ಗೆ ಹಬ್ಬಿರುವ ಈ ಅಸಂಬದ್ಧ ಸುದ್ದಿಗಳ ಬಗ್ಗೆ ಅಂತಿಮವಾಗಿ ಮೌನ ಮುರಿದಿರುವ ತ್ರಿಶಾ, ಇನ್ಸ್ಟಾಗ್ರಾಮ್‌ನಲ್ಲಿ ಅತ್ಯಂತ ಚಾಣಾಕ್ಷತನದಿಂದ ಮತ್ತು ಹಾಸ್ಯದ ಧಾಟಿಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಅವರು ಬರೆದುಕೊಂಡಿರುವ ಮಾತುಗಳು ಈಗ ವೈರಲ್ ಆಗಿವೆ. ಏನ್ ಹೇಳಿದ್ದಾರೆ ತ್ರಿಷಾ?
10:34 AM (IST) Apr 08
Mojtaba Khamenei health update: ಅಮೆರಿಕ-ಇಸ್ರೇಲ್ ದಾಳಿಯಿಂದ ತೀವ್ರವಾಗಿ ಗಾಯಗೊಂಡಿರುವ ಇರಾನ್‌ನ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ವರದಿಯಾಗಿದೆ.
08:19 AM (IST) Apr 08
08:13 AM (IST) Apr 08
08:05 AM (IST) Apr 08
07:24 AM (IST) Apr 08
ಅಮೆರಿಕದ ದಾಳಿಯಿಂದಾಗಿ ಇರಾನ್ ಹೋರ್ಮುಜ್ ಜಲಸಂಧಿ ಮುಚ್ಚಿದ್ದು, ಇದನ್ನು ತೆರೆಯಲು ವಿಶ್ವಸಂಸ್ಥೆಯಲ್ಲಿ ಮಂಡಿಸಿದ ಗೊತ್ತುವಳಿಗೆ ರಷ್ಯಾ ಮತ್ತು ಚೀನಾ ವಿಟೋ ಚಲಾಯಿಸಿವೆ. ಈ ನಡುವೆ, ಸರ್ವನಾಶದ ಎಚ್ಚರಿಕೆ ನೀಡಿದ ಅಮೆರಿಕದೊಂದಿಗೆ ಇರಾನ್ ಮಾತುಕತೆಯ ಬಾಗಿಲನ್ನು ಸಂಪೂರ್ಣವಾಗಿ ಮುಚ್ಚಿದೆ ಎಂದು ವರದಿಯಾಗಿದೆ.