LIVE NOW
Published : Jan 11, 2026, 07:41 AM ISTUpdated : Jan 11, 2026, 10:00 PM IST

India news live: India vs New Zealand - ಕೊಹ್ಲಿ ಕ್ಲಾಸಿಕ್‌ ಇನ್ನಿಂಗ್ಸ್‌, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಗೆಲುವು ಕಂಡ ಟೀಮ್‌ ಇಂಡಿಯಾ

ಸಾರಾಂಶ

ಬಿಜೆಪಿ ನಾಯಕ, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಸತತ ಪ್ರತಿಭಟೆಗಳನ್ನು ಮಾಡುತ್ತಿರುವ ಸುವೆಂದು ಅಧಿಕಾರಿ ಕಾರು ಅಡ್ಡಗಟ್ಟಿ ದಾಳಿ ನಡೆಸಿದ ಘಟನೆ ಚಂದ್ರಕೋನಾದಲ್ಲಿ ನಡೆದಿದೆ. ಸುವೆಂದು ಬೆಂಗಾವಲು ವಾಹನಗಳನ್ನು ಅಡ್ಡಗಟ್ಟಿ ದಾಳಿ ಮಾಡಲಾಗಿದೆ. ಇದು ಟಿಎಂಸಿ ಪಕ್ಷದ ಗೂಂಡಾಗಳ ಕೃತ್ಯ ಎಂದು ಸುವೆಂದು ಅದಿಕಾರಿ ಆರೋಪಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಸೋಮನಾಥ ಮಂದಿರಕ್ಕೆ ಬೇಟಿ ನೀಡಿದ್ದಾರೆ. ಸೋಮನಾಥ ಮಂದಿರ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಸಂದಿದೆ. ಇದರ ಹಿನ್ನಲೆಯಲ್ಲಿ ಸೋಮನಾಥ ಸ್ವಾಭಿಮಾನ ಪರ್ವ ಆಚರಿಸಲಾಗುತ್ತಿದೆ.

KL Rahul

10:00 PM (IST) Jan 11

India vs New Zealand - ಕೊಹ್ಲಿ ಕ್ಲಾಸಿಕ್‌ ಇನ್ನಿಂಗ್ಸ್‌, ನ್ಯೂಜಿಲೆಂಡ್‌ ವಿರುದ್ಧ 4 ವಿಕೆಟ್‌ ಗೆಲುವು ಕಂಡ ಟೀಮ್‌ ಇಂಡಿಯಾ

ನ್ಯೂಜಿಲೆಂಡ್‌ ನೀಡಿದ 301 ರನ್‌ಗಳ ಗುರಿ ಬೆನ್ನತ್ತಿದ ಟೀಮ್‌ ಇಂಡಿಯಾ, ವಿರಾಟ್‌ ಕೊಹ್ಲಿ (93) ಹಾಗೂ ಶುಭ್‌ಮನ್‌ ಗಿಲ್‌ (56) ಅವರ ಸಂಘಟಿತ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್‌ಗಳ ಜಯ ಸಾಧಿಸಿತು. ಕೆಳ ಕ್ರಮಾಂಕದಲ್ಲಿ ಕೆಎಲ್‌ ರಾಹುಲ್‌ ಹಾಗೂ ಹರ್ಷಿತ್‌ ರಾಣಾ ತಂಡದ ಗೆಲುವನ್ನು ಖಚಿತಪಡಿಸಿದರು.
Read Full Story

09:36 PM (IST) Jan 11

ಯಶ್‌ ದಯಾಳ್‌ ಬಳಿಕ ಮತ್ತೊಬ್ಬ ಆರ್‌ಸಿಬಿ ಪ್ಲೇಯರ್‌ ಸೋಶಿಯಲ್‌ ಮೀಡಿಯಾ ರಂಗಿನಾಟ ಬಯಲು..!

ಆರ್‌ಸಿಬಿಯ ಸ್ಟಾರ್ ಆಟಗಾರ ಯಶ್ ದಯಾಳ್ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಬೆನ್ನಲ್ಲೇ, ಇದೀಗ ತಂಡದ ಮಾಜಿ ಆಟಗಾರ ಸ್ವಸ್ತಿಕ್‌ ಚಿಕಾರ ಕೂಡ ವಿವಾದದಲ್ಲಿ ಸಿಲುಕಿದ್ದಾರೆ. ಸ್ವಸ್ತಿಕ್‌ ಚಿಕಾರ ಹಲವು ಯುವತಿಯರೊಂದಿಗೆ ನಡೆಸಿದ್ದಾರೆ ಎನ್ನಲಾದ ಸೋಶಿಯಲ್‌ ಮೀಡಿಯಾ ಚಾಟ್‌ಗಳ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದೆ.

Read Full Story

06:36 PM (IST) Jan 11

ಹೊಸ ಮನೆಗೆ 1 ಕೋಟಿಯ ಸ್ಟೌವ್‌, 14 ಲಕ್ಷದ ಫ್ರಿಜ್‌ - ಅನನ್ಯಾ ಪಾಂಡೆ ಸೋದರಸಂಬಂಧಿಯ ಐಷಾರಾಮಿ ಶಾಪಿಂಗ್ ವಿಡಿಯೋ ವೈರಲ್!

ನಟಿ ಅನನ್ಯಾ ಪಾಂಡೆ ಸೋದರಸಂಬಂಧಿ ಅಲನ್ನಾ ಪಾಂಡೆ ಮತ್ತು ಪತಿ ಐವರ್ ತಮ್ಮ ಹೊಸ 5BHK ಮನೆಗೆ ಶಾಪಿಂಗ್ ಮಾಡಿದ್ದಾರೆ. 1 ಕೋಟಿ ರೂ. ಮೌಲ್ಯದ ಸ್ಟೌವ್ ಮತ್ತು 63 ಲಕ್ಷ ರೂ. ಮೌಲ್ಯದ ಮಾರ್ಬಲ್‌ಗಳಂತಹ ಐಷಾರಾಮಿ ವಸ್ತುಗಳನ್ನು ನೋಡಿದ್ದು, ಅವುಗಳ ಬೆಲೆ ಕೇಳಿ ಜನ ದಂಗಾಗಿದ್ದಾರೆ. 

Read Full Story

05:29 PM (IST) Jan 11

ಕಿವೀಸ್ ತ್ರಿವಳಿಗಳ ಆರ್ಭಟ - ಮೊದಲ ಪಂದ್ಯದಲ್ಲೇ ಭಾರತಕ್ಕೆ ಕಠಿಣ ಗುರಿ!

ವಡೋದರಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ, ಡೇರಲ್ ಮಿಚೆಲ್, ಡೆವೊನ್‌ ಕಾನ್‌ವೇ ಮತ್ತು ಹೆನ್ರಿ ನಿಕೋಲ್ಸ್ ಅವರ ಅರ್ಧಶತಕಗಳ ನೆರವಿನಿಂದ ನ್ಯೂಜಿಲೆಂಡ್ 8 ವಿಕೆಟ್‌ಗೆ 300 ರನ್ ಗಳಿಸಿತು. ಭಾರತದ ಪರ ಹರ್ಷಿತ್ ರಾಣಾ, ಪ್ರಸಿದ್ದ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ ಎರಡು ವಿಕೆಟ್ ಪಡೆದರು.
Read Full Story

05:24 PM (IST) Jan 11

'ಇಂಟರ್ನೆಟ್‌ ಇಲ್ಲ, ಮೊಬೈಲ್‌ ಫೋನ್‌ ಕೂಡ ಇಲ್ಲ..' ಸಂವಹನ ನಡೆಸುವ ಸೀಕ್ರೆಟ್‌ ಹೇಳಿದ ಅಜಿತ್‌ ದೋವಲ್‌!

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು 'ವಿಕಸಿತ್ ಭಾರತ್' ಸಂವಾದದಲ್ಲಿ ತಾವು ಅಧಿಕೃತ ಕೆಲಸಕ್ಕಾಗಿ ಮೊಬೈಲ್ ಫೋನ್ ಅಥವಾ ಇಂಟರ್ನೆಟ್ ಬಳಸುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಕುಟುಂಬದ ಅಗತ್ಯಗಳಿಗೆ ಮಾತ್ರ ಫೋನ್ ಬಳಸುವುದಾಗಿ ಹೇಳಿದ್ದಾರೆ.

Read Full Story

04:53 PM (IST) Jan 11

148 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ದಾಖಲೆ ಬರೆಯಲು ತುದಿಗಾಲಲ್ಲಿ ನಿಂತ ರೋಹಿತ್ ಶರ್ಮಾ!

ವಡೋದರ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು 2026ರಲ್ಲಿ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿವೆ. ಹೀಗಿರುವಾಗಲೇ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ, 148 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಯಾರೂ ಮಾಡದ ಅಪರೂಪದಲ್ಲೇ ಅಪರೂಪದ ದಾಖಲೆ ಬರೆಯಲು ರೆಡಿಯಾಗಿದ್ದಾರೆ.

 

Read Full Story

04:49 PM (IST) Jan 11

2 ತಿಂಗಳು ರೈಲ್ವೆ ಮಾರ್ಗದಲ್ಲಿ ಭಾರಿ ಬದಲಾವಣೆ- ಈ ರೈಲ್ವೆ ಸ್ಟೇಷನ್​ ತಾತ್ಕಾಲಿಕ ಬಂದ್​ - ಡಿಟೇಲ್ಸ್​ ಇಲ್ಲಿದೆ

ಕೆಎಸ್ಆರ್ ಬೆಂಗಳೂರು ನಿಲ್ದಾಣದಲ್ಲಿ ಪಿಟ್ ಲೈನ್ ಪುನರ್ನಿರ್ಮಾಣ ಕಾರ್ಯದಿಂದಾಗಿ, ಜನವರಿ 16 ರಿಂದ ಮಾರ್ಚ್ 11 ರವರೆಗೆ ಹಲವು ರೈಲುಗಳ ಮೂಲ ಮತ್ತು ಅಂತ್ಯ ನಿಲ್ದಾಣಗಳನ್ನು ಬದಲಾಯಿಸಲಾಗಿದೆ. ಎರ್ನಾಕುಲಂ, ನಾಂದೇಡ್ ಮತ್ತು ಕಣ್ಣೂರು ಮಾರ್ಗದ ರೈಲುಗಳು ಸೇರಿದಂತೆ ಕೆಲವು ರೈಲು ಮಾರ್ಗಗಳ ಡಿಟೇಲ್ಸ್​ ಇಲ್ಲಿದೆ.

Read Full Story

04:38 PM (IST) Jan 11

ಟ್ರಂಪ್‌ ಹೇಳಿಕೆ ಬೆನ್ನಲ್ಲೇ ಇರಾನ್‌ನಲ್ಲಿ ಪ್ರತಿಭಟನೆ ತೀವ್ರ, ಅಮೆರಿಕ ಸೇನಾ ನೆಲೆ, ಹಡಗಿನ ಮೇಲೆ ದಾಳಿಯ ಎಚ್ಚರಿಕೆ ನೀಡಿದ ಇರಾನ್‌!

ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಲಿಟರಿ ದಾಳಿಯ ಆಯ್ಕೆಗಳನ್ನು ಪರಿಗಣಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ, ದಾಳಿ ನಡೆದರೆ ಅಮೆರಿಕದ ಸೇನಾನೆಲೆಗಳು ಮತ್ತು ಹಡಗುಗಳನ್ನು ಗುರಿಯಾಗಿಸುವುದಾಗಿ ಇರಾನ್ ಎಚ್ಚರಿಸಿದೆ.

Read Full Story

04:20 PM (IST) Jan 11

ಕಣ್ಣು ತೆರೆ ಅಪ್ಪ, ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಮಗಳ ಆಕ್ರಂದನ

ಕಣ್ಣು ತೆರೆ ಅಪ್ಪ, ಹೃದಯಾಘಾತದಿಂದ ಮೃತಪಟ್ಟ ಗಾಯಕ-ನಟ ಪ್ರಶಾಂತ್ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಿಡುವಿನ ವೇಳೆಯಲ್ಲಿ ಮಗಳ ಜೊತೆ ಮಗುವಾಗಿ ಆಟವಾಡುತ್ತಿದ್ದ ಪ್ರಶಾಂತ್ ತಮಂಗ್ ನಿಧನ ಪುಟ್ಟ ಅರಿಯಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ.

Read Full Story

03:56 PM (IST) Jan 11

ರಜಿನಿಕಾಂತ್ ಅಪ್ಪಟ ಅಭಿಮಾನಿ ಆದಿತ್ಯ ಅಶೋಕ್ ಈಗ ಭಾರತ ಎದುರಾಳಿ! ಯಾರು ಈ ಕಿವೀಸ್ ಲೆಗ್‌ಸ್ಪಿನ್ನರ್?

ಭಾರತದ ವಿರುದ್ಧದ ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಪರ ಆಡುತ್ತಿರುವ ಆದಿತ್ಯ ಅಶೋಕ್ ತಮಿಳುನಾಡು ಮೂಲದವರು. ಬಾಲ್ಯದಲ್ಲೇ ನ್ಯೂಜಿಲೆಂಡ್‌ಗೆ ತೆರಳಿದ ಇವರು, ಸೂಪರ್‌ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರ ಪ್ರಸಿದ್ಧ ಡೈಲಾಗ್ ಅನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ.
Read Full Story

03:50 PM (IST) Jan 11

3ನೇ ಮಹಾಯುದ್ಧಕ್ಕೆ ಮುನ್ನುಡಿ, ಗ್ರೀನ್‌ಲ್ಯಾಂಡ್‌ ಆಕ್ರಮಿಸಲು ಸಿದ್ಧರಾಗುವಂತೆ ಆರ್ಮಿ ಚೀಫ್‌ಗೆ ಸೂಚಿಸಿದ ಟ್ರಂಪ್‌!

ಗ್ರೀನ್‌ಲ್ಯಾಂಡ್‌ಗೆ ಆಕ್ರಮಣ ಯೋಜನೆಗಳನ್ನು ಸಿದ್ಧಪಡಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಶೇಷ ಪಡೆಗಳಿಗೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಆದರೆ, ಹಿರಿಯ ಮಿಲಿಟರಿ ನಾಯಕರು, ಕಾನೂನು ಹಾಗೂ ಯುಎಸ್‌ ಕಾಂಗ್ರೆಸ್‌ನ ಅಡೆತಡೆಯನ್ನು ಉಲ್ಲೇಖಿಸಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

Read Full Story

02:35 PM (IST) Jan 11

ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಪಾತಾಳ ಲೋಕ ಖ್ಯಾತಿಯ ನಟ ಸಾವು

ದಿಢೀರ್ ಕುಸಿದು ಬಿದ್ದು ಇಂಡಿಯನ್ ಐಡೋಲ್ ವಿನ್ನರ್, ಗಾಯಕ ಹಾಗೂ ನಟ ಪ್ರಶಾಂತ್ ತಮಂಗ ಮೃತಪಟ್ಟಿದ್ದಾರೆ. ಅಪ್ಪನ ಸಾವಿನಿಂದ ಮುದ್ದಿನ ಮಗಳ ಆಕ್ರಂದನ ಮುಗಿಲು ಮುಟ್ಟಿದೆ. ಬಾಲಿವುಡ್ ಸಿನಿಮಾದಲ್ಲೂ ಮಿಂಚಿದ್ದ ನಟ ಸಾವು ಹಲವರಿಗೆ ಶಾಕ್ ನೀಡಿದೆ.

 

Read Full Story

02:12 PM (IST) Jan 11

ಬಾಂಗ್ಲಾದೇಶ ಮಾಜಿ ನಾಯಕನನ್ನು 'ಭಾರತದ ಏಜೆಂಟ್' ಎಂದು ಕರೆದ ನಜ್ರುಲ್‌ ಇಸ್ಲಾಂ! ಬಾಂಗ್ಲಾ ಮಂಡಳಿ ವಿರುದ್ದವೇ ತಿರುಗಿಬಿದ್ದ ಆಟಗಾರರು

ಢಾಕಾ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ ತಿಕ್ಕಾಟ ಇದೀಗ ಮತ್ತೊಂದು ಹಂತ ತಲುಪಿದ್ದು, ಟಿ20 ವಿಶ್ವಕಪ್ ಟೂರ್ನಿಯಾಡಲು ನಾವು ಭಾರತಕ್ಕೆ ಬರುವುದಿಲ್ಲ ಎಂದು ಬಾಂಗ್ಲಾದೇಶ ಪಟ್ಟು ಹಿಡಿದಿದೆ. ಹೀಗಿರುವಾಗಲೇ ಬಾಂಗ್ಲಾದೇಶ ಮಾಜಿ ನಾಯಕನ ಮೇಲೆ ನಜ್ರುಲ್‌ ಇಸ್ಲಾಂ ಗಂಭೀರ ಆರೋಪ ಮಾಡಿದ್ದಾರೆ.

Read Full Story

01:18 PM (IST) Jan 11

ಕಿವೀಸ್ ಎದುರು ಟಾಸ್ ಗೆದ್ದ ಭಾರತ ಬೌಲಿಂಗ್ ಆಯ್ಕೆ; ಆರು ಬೌಲರ್‌ಗಳೊಂದಿಗೆ ಕಣಕ್ಕೆ!

ವಡೋದರಾದಲ್ಲಿ ನಡೆಯುತ್ತಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೊದಲ ಏಕದಿನ ಪಂದ್ಯದಲ್ಲಿ, ಟಾಸ್ ಗೆದ್ದ ನಾಯಕ ಶುಭ್‌ಮನ್ ಗಿಲ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರು ಬೌಲರ್‌ಗಳೊಂದಿಗೆ ಕಣಕ್ಕಿಳಿದಿರುವ ಭಾರತ. ಕಿವೀಸ್ ಪರ ಕ್ರಿಸ್ಟಿನ್ ಕ್ಲಾರ್ಕ್ ಪಾದಾರ್ಪಣೆ ಮಾಡಿದ್ದಾರೆ.

Read Full Story

01:15 PM (IST) Jan 11

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, 1000 ವರ್ಷದ ದಾಳಿ ಕತೆ ಹೇಳುತ್ತಿದೆ ಸ್ವಾಭಿಮಾನ ಪರ್ವ

ಸೋಮನಾಥ ಮಂದಿರದಲ್ಲಿ ಮೋದಿ ಶೌರ್ಯ ಯಾತ್ರೆ, ಮಂದಿರದ ಮೇಲೆ ಮೊದಲ ದಾಳಿಯಾಗಿ 1000 ವರ್ಷಗಳು ಉರುಳಿದೆ. ಸತತ ದಾಳಿಗೆ ಎದೆಯೊಡ್ಡಿ ನಿಂತ ಸೋಮನಾಥ ಮಂದಿರ ಭಾರತದ ಇತಿಹಾಸ ಹೇಳುತ್ತಿದೆ. ಈ ಸ್ವಾಭಿಮಾನ ಪರ್ವದಲ್ಲಿ ಮೋದಿ ಪಾಲ್ಗೊಂಡಿದ್ದಾರೆ.

 

Read Full Story

12:41 PM (IST) Jan 11

ಕುಟುಂಬದ ಕಂಪೆನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಮದುವೆಯಾಗಿ ₹3000 ಕೋಟಿ ಉದ್ಯಮ ಕಟ್ಟಿದ ಸಾಹಸಿ

ಕುಟುಂಬದ ಕಪಂನಿ, ಆಸ್ತಿ ತ್ಯಜಿಸಿ ಪ್ರೀತಿ ಆಯ್ಕೆ, ಹಳೇ ಸಿನಿಮಾಗಳಲ್ಲಿರುವಂತೆ ಪೋಷಕರು, ಕುಟುಂಬಸ್ಥರು ಆಫರ್ ಮುಂದಿಟ್ಟದ್ದರು. ಒಂದೋ ನಿನ್ನ ಪ್ರೀತಿ, ಇಲ್ಲಾ ಉದ್ಯಮ ಒಂದೇ ಆಯ್ಕೆ ಕೊಟ್ಟಿದ್ದರು. ಪ್ರೀತಿ ಆಯ್ಕೆಮಾಡಿಕೊಂಡು ಯಶಸ್ವಿ ಉದ್ಯಮ ಕಟ್ಟಿದ ಸಾಧಕನ ಕತೆ ಇದು

Read Full Story

12:21 PM (IST) Jan 11

ಏಕದಿನ ಸರಣಿಯಿಂದ ಪಂತ್ ಔಟ್; ಸಂಜು, ಇಶಾನ್ ಕಿಶನ್ ಬದಲಿಗೆ ಈ ವಿಕೆಟ್ ಕೀಪರ್‌ಗೆ ಬಿಸಿಸಿಐ ಬುಲಾವ್!

ವಡೋದರಾ: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಹೀಗಿರುವಾಗಲೇ ಭಾರತ ತಂಡದಿಂದ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಗಾಯದ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ. ಹೀಗಾಗಿ ಮತ್ತೊಬ್ಬ ವಿಕೆಟ್ ಕೀಪರ್ ತಂಡ ಕೂಡಿಕೊಂಡಿದ್ದಾರೆ.

 

Read Full Story

11:36 AM (IST) Jan 11

ವರ್ಷದ ಆರಂಭದಲ್ಲೇ ಜಿಯೋ ಗ್ರಾಹಕರಿಗೆ ಲಾಟರಿ! 450 ರೂ.ಗೆ ಹಬ್ಬದ ಭರ್ಜರಿ ಆಫರ್​ ಕೊಟ್ಟ ಕಂಪೆನಿ

ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ರೂ.450 ರ ಹೊಸ ಹಬ್ಬದ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಈ ಯೋಜನೆಯು 36 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2 GB ಡೇಟಾ, ಅನಿಯಮಿತ ಕರೆಗಳನ್ನು ನೀಡುತ್ತದೆ. ಇದರ ಜೊತೆಗೆ, ಇನ್ನಷ್ಟು ಪ್ರಯೋಜನಗಳಿದ್ದು, ಅವುಗಳ ಡಿಟೇಲ್ಸ್​ ಇಲ್ಲಿದೆ.

Read Full Story

10:35 AM (IST) Jan 11

ದಿಢೀರ್ ಎನ್ನುವಂತೆ ಜಾನ್‌ ಜೆಲೆಜ್ನಿ ಜತೆ ಕೋಚಿಂಗ್‌ ಒಪ್ಪಂದ ಕೊನೆಗೊಳಿಸಿದ ನೀರಜ್‌ ಚೋಪ್ರಾ!

ನವದೆಹಲಿ: ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಳಪೆ ಪ್ರದರ್ಶನ ಬೆನ್ನಲ್ಲೇ ಒಲಿಂಪಿಕ್‌ ಚಾಂಪಿಯನ್‌ ನೀರಜ್‌ ಚೋಪ್ರಾ ತಮ್ಮ ಕೋಚ್‌ ಬದಲಿಸಲು ನಿರ್ಧರಿಸಿದ್ದಾರೆ. ಈ ಕುರಿತಾದ ಮಹತ್ವದ ಅಪ್‌ಡೇಟ್ಸ್‌ ಇಲ್ಲಿದೆ ನೋಡಿ.

 

Read Full Story

10:24 AM (IST) Jan 11

ಖೇಲೋ ಇಂಡಿಯಾ ಬೀಚ್‌ ಗೇಮ್ಸ್ - ಮತ್ತೆ ಚಿನ್ನ ಗೆದ್ದ ಧ್ರುಪದ್; ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ಕರ್ನಾಟಕ

ದಿಯುನಲ್ಲಿ ನಡೆದ ಖೇಲೋ ಇಂಡಿಯಾ ಬೀಚ್‌ ಗೇಮ್ಸ್‌ನಲ್ಲಿ ಕರ್ನಾಟಕದ ಈಜುಪಟುಗಳು ಅದ್ಭುತ ಪ್ರದರ್ಶನ ನೀಡಿ, ರಾಜ್ಯ ತಂಡವು ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಬಸವನಗುಡಿ ಈಜು ಕೇಂದ್ರದ ದ್ರುಪದ್ ರಾಮಕೃಷ್ಣ 5 ಕಿ.ಮೀ. ಸ್ಪರ್ಧೆಯಲ್ಲಿ ತಮ್ಮ ಚಿನ್ನದ ಪದಕವನ್ನು ಯಶಸ್ವಿಯಾಗಿ ಉಳಿಸಿಕೊಂಡಿದ್ದಾರೆ.
Read Full Story

08:50 AM (IST) Jan 11

ಭಾರತ-ಕಿವೀಸ್ ಕದನ - ರೋ-ಕೋ ಅಬ್ಬರಕ್ಕೆ ವೇದಿಕೆ ಸಿದ್ಧ! ಮ್ಯಾಚ್ ಆರಂಭ ಎಷ್ಟು ಗಂಟೆಗೆ?

ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಏಕದಿನ ಸರಣಿ ಆರಂಭವಾಗಲಿದ್ದು, ಭರ್ಜರಿ ಫಾರ್ಮ್‌ನಲ್ಲಿರುವ ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಮೇಲೆ ಎಲ್ಲರ ಕಣ್ಣಿದೆ. ಗಾಯದಿಂದ ಚೇತರಿಸಿಕೊಂಡಿರುವ ಶ್ರೇಯಸ್ ಅಯ್ಯರ್ ತಂಡಕ್ಕೆ ಮರಳಿದ್ದು, ಅನನುಭವಿ ಕಿವೀಸ್ ತಂಡವನ್ನು ಭಾರತ ಎದುರಿಸಲಿದೆ.
Read Full Story

08:35 AM (IST) Jan 11

ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ತಂಡದಿಂದ ಹೊರಬಿದ್ದ ಸ್ಟಾರ್ ಆಟಗಾರ

ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಶಾಕ್, ಜನವರಿ 11ರಿಂದ ನ್ಯೂಜಿಲೆಂಡ್ ವಿರುದ್ದದ ಏಕದಿನ ಸರಣಿ ಆರಂಭಗೊಳ್ಳುತ್ತಿದೆ. ಆದರೆ ಪ್ಲೇಯಿಂಗ್ 11 ಆಯ್ಕೆ ಬಹುತೇಕ ಅಂತಿಮಗೊಂಡ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗ ಹೊರಬಿದ್ದಿದ್ದಾರೆ.

 

Read Full Story

08:06 AM (IST) Jan 11

ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಭೀಕರ ಸ್ಟ್ರೈಕ್‌ಗೆ ತತ್ತರಿಸಿದ ಸಿರಿಯಾ

ಐಸಿಸ್ ಭಯೋತ್ಪಾದಕರ ಮೇಲೆ ಅಮೆರಿಕ ದಾಳಿ, ಸಿರಿಯಾದಲ್ಲಿ ಬೇರು ಬಿಟ್ಟಿರುವ ಐಸಿಸ್ ಉಗ್ರ ತಾಣಗಳ ಮೇಲೆ ಅಮೆರಿಕ ಸ್ಟ್ರೈಕ್ ನಡೆಸಿದೆ. ವಾಯುಪಡೆ, ನೌಕಾ ಪಡೆಗಳ ಮಿಸೈಲ್ ದಾಳಿಗೆ ಸಿರಿಯಾ ತತ್ತರಿಸಿದೆ.

Read Full Story

07:43 AM (IST) Jan 11

ಟಿಎಂಸಿ ಧ್ವಜ ಹಿಡಿದು ಕಾರಿನ ಮೇಲೆ ದಾಳಿ ಎಂದ ನಾಯಕ

ಟಿಎಂಸಿ ಪಕ್ಷದ ಧ್ವದಜ ಹಿಡಿದ ಕೆಲ ಗೂಂಡಾಗಳು ಕಾರು ತಡೆದು ದಾಳಿ ಮಾಡಿದ್ದಾರೆ. ಬಜೆಪಿ ನಾಯಕರ ಟಾರ್ಗೆಟ್ ಮಾಡಿ ಟಿಎಂಸಿ ಗೂಂಡಾಗಳು ದಾಳಿ ನಡೆಸುತ್ತಿದ್ದಾರೆ. ಪದೇ ಪದೇ ಈ ರೀತಿ ಘಟನೆಗಳು ಮರುಕಳಿಸುತ್ತಿದೆ ಎಂದು ಸುವೆಂದು ಅಧಿಕಾರಿ ಆರೋಪಿಸಿದ್ದಾರೆ.


More Trending News