ನವದೆಹಲಿ : ‘ಜನರ ಹೃದಯದಲ್ಲಿ ನೆಲೆಸಿರುವ ರಾಷ್ಟ್ರೀಯ ಗೀತೆ ವಂದೇ ಮಾತರಂ ಬಗ್ಗೆ ಚರ್ಚೆ ಅಗತ್ಯವೇನಿತ್ತು? ಎಂದು ಪ್ರಶ್ನಿಸಿರುವ ಸಂಸದೆ ಪ್ರಿಯಾಂಕಾ ಗಾಂಧಿ, ‘ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವುದರಿಂದ ಸರ್ಕಾರ ಈ ವಿಷಯದ ಚರ್ಚೆಗೆ ಮುಂದಾಗಿದೆ’ ಎಂದು ಆರೋಪಿಸಿದ್ದಾರೆ. ಮೋದಿಯವರ ಆತ್ಮಸ್ಥೈರ್ಯ ಈಗ ಮೊದಲಿನಂತಿಲ್ಲ. ಅವರು ರೂಪಿಸಿರುವ ನಿಯಮಗಳು ದೇಶವನ್ನು ದುರ್ಬಲಗೊಳಿಸುತ್ತಿವೆ. ಇದರ ಕಡೆ ಜನರ ಗಮನ ಹರಿಯದಂತೆ ಮಾಡಲು, ಅವರು ರಾಷ್ಟ್ರೀಯ ಗೀತೆ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಆ ನೆಪದಲ್ಲಿ ಬಿಜೆಪಿ, ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ದೇಶಕ್ಕಾಗಿ ಹೋರಾಡಿದವರ ವಿರುದ್ಧ ಹೊಸ ಆರೋಪಗಳನ್ನು ಮಾಡುತ್ತಿದೆ ಎಂದರು.
ಚರ್ಚೆಯೇ ಅನಗತ್ಯ:
‘ವಂದೇ ಮಾತರಂ ನಮ್ಮ ದೇಶದ ಆತ್ಮವಿದ್ದಂತೆ. ಅದರ ಬಗ್ಗೆ ಮಾತನಾಡಿದಾಗ ಸ್ವಾತಂತ್ರ್ಯ ಚಳವಳಿಯ ಇತಿಹಾಸ ನೆನಪಾಗುತ್ತದೆ. ದೇಶವಾಸಿಗಳ ಮನಸ್ಸಲ್ಲಿ ನೆಲೆಸಿರುವ ಗೀತೆಯ ಬಗ್ಗೆ ಚರ್ಚೆ ನಡೆಯುತ್ತಿರುವುದೇ ವಿಚಿತ್ರ. ರಾಷ್ಟ್ರೀಯ ಗೀತೆಯ ಬಗ್ಗೆ ಚರ್ಚೆ ಅಗತ್ಯವೇ?’ ಎಂದಿರುವ ಪ್ರಿಯಾಂಕಾ ಪ್ರಶ್ನಿಸಿದ್ದಾರೆ.
10:27 PM (IST) Dec 09
ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ , ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ದಾಳಿಗೆ ಸೌತ್ ಆಫ್ರಿಕಾ ಬೆಚ್ಚಿ ಬಿದ್ದಿದೆ. ಕೇವಲ 12.3 ಓವರ್‌ಗಳಲ್ಲಿ ಪಂದ್ಯ ಮುಗಿಸಿದೆ.
09:41 PM (IST) Dec 09
ಜಿಮ್‌ನಿಂದ ಮರಳುತ್ತಿದ್ದಾಗ ಬಿಗ್ ಬಾಸ್ ಮಾಜಿ ಸ್ಪರ್ಧಿ ಕಾರು ಭೀಕರ ಅಪಘಾತ, ವೇಗವಾಗಿ ಬರುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜು ಗುಜ್ಜಾಗಿದೆ.
08:51 PM (IST) Dec 09
ಕುಸಿದ ಭಾರತಕ್ಕೆ ಪಾಂಡ್ಯ ಅಬ್ಬರದ ಬ್ಯಾಟಿಂಗ್, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್, ಆರಂಭದಲ್ಲೇ ವಿಕೆಟ್ ಪತನಗೊಂಡು ಸಂಕಷ್ಟದಲ್ಲಿದ್ದ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ನೆರವಾಗಿದೆ.ಪರಿಣಾಮ ಸ್ಪರ್ಧಾತ್ಮಕ ಮೊತ್ತ ಸಿಡಿಸಿದೆ.
08:00 PM (IST) Dec 09
ಉತ್ತರ ಪ್ರದೇಶದ ಎಕ್ಸ್‌ಪ್ರೆಸ್‌ವೇಯಲ್ಲಿ, ಕಾರಿನಲ್ಲಿದ್ದ ದಂಪತಿಗಳ ಖಾಸಗಿ ಕ್ಷಣವನ್ನು ಸಿಸಿಟಿವಿಯಲ್ಲಿ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್ ಮಾಡಲಾಗಿದೆ. ಎಟಿಎಂಎಸ್ ವ್ಯವಸ್ಥಾಪಕನೇ ಈ ಕೃತ್ಯ ಎಸಗಿದ್ದು, ಹಣ ಸುಲಿಗೆ ಮಾಡಿ ವಿಡಿಯೋವನ್ನು ವೈರಲ್ ಮಾಡಿದ್ದಾನೆ.
06:55 PM (IST) Dec 09
ವೃತ್ತಿಪರತೆ ಅಂತ್ಯಸಂಸ್ಕಾರ, ಪ್ರಶ್ನೆ ಕೇಳಿದ ಪತ್ರಕರ್ತೆಗೆ ಕಣ್ಣು ಹೊಡೆದ ಪಾಕಿಸ್ತಾನ ಸೇನಾ ಲೆ.ಜನರಲ್ ನಡೆ ಭಾರಿ ವಿವಾದಕ್ಕೆ ಕಾರಣವಾಗದೆ. ಇದು ವೃತ್ತಿಪರತೆಯ ಅಂತ್ಯಸಂಸ್ಕಾರ ಎಂದು ಹಲವರು ಕರೆದಿದ್ದಾರೆ. ಈ ವಿಡಿಯೋ ಭಾರಿ ವೈರಲ್ ಆಗುತ್ತಿದ್ದಂತೆ ಆಕ್ರೋಶ ಹೆಚ್ಚಾಗಿದೆ.
06:49 PM (IST) Dec 09
Woman elopes with online lover: ರೀಲ್ಸ್ ಮಾಡುವ ಯುವಕನಿಗೆ ಮನಸೋತ 26 ವರ್ಷದ ಮಹಿಳೆಯೊಬ್ಬಳು ತನ್ನ ಗಂಡ ಇಬ್ಬರು ಮಕ್ಕಳನ್ನು ತೊರೆದು ಪರಾರಿಯಾಗಿದ್ದಾಳೆ. ನಂತರ, ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಬಳಿಕ ಮಹಿಳೆ ತನಗೆ ಮಾಟ ಮಂತ್ರ ಮಾಡಲಾಗಿದೆ ಎಂದು ಆರೋಪಿಸಿದ್ದಾಳೆ.
06:02 PM (IST) Dec 09
06:01 PM (IST) Dec 09
ಕೆಲವೇ ದಿನದಲ್ಲಿ ಸ್ಮೃತಿ ಮಂಧನಾ ಮದುವೆ ಆಘಾತದಿಂದ ಹೊರಬಂದಿದ್ದೇಗೆ? ಕಠಿಣ ಹಾಗೂ ಸಂಕಷ್ಟದ ಪರಿಸ್ಥಿತಿ ಎದುರಿಸುವ ಕುರಿತು ಮೂರು ವರ್ಷ ಹಿಂದೆ ಸ್ಮೃತಿ ಮಂಧನಾ ಸ್ಪೂರ್ತಿಯ ಮಾತುಗನ್ನಾಡಿದ್ದರು. ಇದು ಪ್ರತಿಯೊಬ್ಬರ ಜೀವನಕ್ಕೂ ಅನ್ವಯಿಸಲಿದೆ.
05:41 PM (IST) Dec 09
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತ ತಂಡ ಸಜ್ಜಾಗಿದ್ದು, ಆಡುವ ಬಳಗವನ್ನು ಆಯ್ಕೆ ಮಾಡುವಲ್ಲಿ ಗೊಂದಲದಲ್ಲಿದೆ. ವಿಕೆಟ್ ಕೀಪರ್ ಸ್ಥಾನಕ್ಕಾಗಿ ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.
05:40 PM (IST) Dec 09
woman kills live-in partner: ಲಕ್ನೋದಲ್ಲಿ ಮಹಿಳೆಯೊಬ್ಬಳು ತನ್ನ ಲೀವ್ ಇನ್ ಪಾರ್ಟನರ್‌ನನ್ನು ಕೊಲೆ ಮಾಡಿದ್ದಾಳೆ. ತನ್ನ ಮಗಳನ್ನು ಅಸಭ್ಯವಾಗಿ ಸ್ಪರ್ಶಿಸಿದ್ದೇ ಕೊಲೆಗೆ ಕಾರಣ ಎಂದು ಆಕೆ ಹೇಳಿದರೆ, ಆಸ್ತಿಗಾಗಿ ಈ ಕೃತ್ಯ ಎಸಗಲಾಗಿದೆ ಎಂದು ಮೃತನ ತಂದೆ ಆರೋಪಿಸಿದ್ದಾರೆ.
04:46 PM (IST) Dec 09
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ ಇಂದಿನಿಂದ ಆರಂಭವಾಗಲಿದೆ. ಮುಂಬರುವ ಟಿ20 ವಿಶ್ವಕಪ್‌ಗೆ ತಯಾರಿಯ ದೃಷ್ಟಿಯಿಂದ ಈ ಸರಣಿ ಮಹತ್ವದ್ದಾಗಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರಗಳು ಮತ್ತು ಸಂಭಾವ್ಯ ಆಡುವ ಬಳಗದ ಮಾಹಿತಿ ಇಲ್ಲಿದೆ.
04:43 PM (IST) Dec 09
ದೆಹಲಿಯ ಕಾರ್ಡೂಮಾ ನ್ಯಾಯಾಲಯದ ಆವರಣದಲ್ಲಿ ಮಾಜಿ ಸಿಜೆಐ ಬಿಆರ್ ಗವಾಯಿ ಮೇಲೆ ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಅವರಿಗೆ ಚಪ್ಪಲಿಯಿಂದ ಥಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
04:29 PM (IST) Dec 09
ಕೋಕಾ ಕೋಲಾ ಕಂಪನಿಯಲ್ಲಿ ಚಾರ್ಟೆಡ್ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ 42 ವರ್ಷದ ವ್ಯಕ್ತಿಯೊಬ್ಬರು ವಿಮಾನ ನಿಲ್ದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದೆ.
04:13 PM (IST) Dec 09
ತಿರುಪರಾನುಕುಂದ್ರಂ ಬೆಟ್ಟದ ದರ್ಗಾದ ಹತ್ತಿರದಲ್ಲಿರುವ ಸ್ಥಳದಲ್ಲಿ ಕಾರ್ತಿಕ ದೀಪವನ್ನು ಬೆಳಗಿಸಲು ನ್ಯಾಯಮೂರ್ತಿ ಸ್ವಾಮಿನಾಥನ್ ತೀರ್ಪು ನೀಡಿದ್ದು, ತಮಿಳುನಾಡು ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿದೆ.
03:57 PM (IST) Dec 09
ಗಂಡ ಹೆಂಡತಿಗೆ ಮುಳ್ಳಾದ ಈರುಳ್ಳಿ ಬೆಳ್ಳುಳ್ಳಿ, ಅನ್ಯೋನ್ಯಾವಾಗಿದ್ದ ಕುಟುಂಬದಲ್ಲಿ ಕಲಹ ಶುರುವಾಗಿದೆ. ಈರುಳ್ಳಿ ಹಾಗೂ ಬೆಳ್ಳುಳ್ಳಿ ಬೆಲೆ ಏರಿಕೆಯೂ ಈ ಮಟ್ಟಿಗೆ ಟೆನ್ಶನ್ ಕೊಟ್ಟಿರಲಿಲ್ಲ. ಆದರೆ ಇದರ ಘಾಟು ಒಂದು ಕುಟುಂಬವನ್ನೇ ಇಬ್ಬಾಗ ಮಾಡಿದೆ
03:51 PM (IST) Dec 09
03:25 PM (IST) Dec 09
ಜಪಾನ್‌ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ 30 ಜನರು ಗಾಯಗೊಂಡಿದ್ದಾರೆ. ಭೂಕಂಪನದ ತೀವ್ರತೆಗೆ ಕಟ್ಟಡಗಳು ಅಲುಗಾಡುವ, ಅಕ್ವೇರಿಯಂ ನೀರು ಚೆಲ್ಲುವ ದೃಶ್ಯಗಳು ವೈರಲ್ ಆಗಿದ್ದು, ಕೆಲ ದೃಶ್ಯಗಳ ವಿಡಿಯೋ ಇಲ್ಲಿದೆ.
03:00 PM (IST) Dec 09
ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್ ಎದುರಾಗಿದೆ. ಪುತ್ರ ಜೈ ಅನ್ಮೋಲ್ ವಿರುದ್ದ 228 ಕೋಟಿ ರೂಪಾಯಿ ವಂಚನೆ ಕೇಸ್ ದಾಖಲಾಗಿದೆ. ಬ್ಯಾಂಕ್ ನೀಡಿ ದೂರಿನ ಆಧಾರದ ಮೇಲೆ ಸಿಬಿಐ ಅನಿಲ್ ಅಂಬಾನಿ ಪುತ್ರನ ವಿರುದ್ಧ ದೂರು ದಾಖಲಿಸಿದೆ.
02:48 PM (IST) Dec 09
Yuvraj Singh FINO Tequila: ಕ್ರಿಕೆಟಿಗ ಯುವರಾಜ್ ಸಿಂಗ್ 'ಫಿನೋ' ಎಂಬ ತಮ್ಮ ಅಲ್ಟ್ರಾ-ಪ್ರೀಮಿಯಂ ಟಕಿಲಾ ಬ್ರ್ಯಾಂಡ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದ್ದಾರೆ. 100% ಬ್ಲೂ ವೆಬರ್ ಅಗೇವ್‌ನಿಂದ ಇದನ್ನು ತಯಾರಿಸಲಾಗಿದೆ.
01:55 PM (IST) Dec 09
2025 ರಲ್ಲಿ ಪಾಕಿಸ್ತಾನಿಗಳು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಿದ ಕ್ರೀಡಾಪಟು ಕೊಹ್ಲಿ ಅಥವಾ ರೋಹಿತ್ ಅಲ್ಲ, ಬದಲಿಗೆ ಭಾರತದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ. ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ವಿರುದ್ಧ ತೋರಿದ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಅವರು ಪಾಕಿಸ್ತಾನಿ ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದರು.
01:08 PM (IST) Dec 09
Delhi Court Issues Notice to Sonia Gandhi Over Alleged Pre-Citizenship Voter List Inclusion ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲೇ, 1980ರ ವೋಟರ್ ಲಿಸ್ಟ್‌ನಲ್ಲಿ ಹೆಸರು ಸೇರಿಸಿದ ಆರೋಪದ ಮೇಲೆ ಸೋನಿಯಾ ಗಾಂಧಿ ವಿರುದ್ಧ ದೆಹಲಿ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.
01:07 PM (IST) Dec 09
50 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನು ಅವರ ಮಗನ ಶಾಲೆಯ ಮುಂದೆಯೇ ಬರ್ಬರವಾಗಿ ಕೊಲೆ ಮಾಡಲಾಗಿದೆ. ಮಗನನ್ನು ಶಾಲೆಗೆ ಬಿಟ್ಟು ವಾಪಸ್ ಬರುವಾಗ ಆರು ಜನರ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದೆ.
12:40 PM (IST) Dec 09
ಬೆಂಗಳೂರು: ಬಹುನಿರೀಕ್ಷಿತ 2026ರ ಐಪಿಎಲ್ ಮಿನಿ ಹರಾಜು ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಈ ಹರಾಜು ಪ್ರಕ್ರಿಯೆ ಎಲ್ಲಿ? ಯಾವಾಗ? ಎಷ್ಟು ಗಂಟೆಗೆ? ಆರಂಭವಾಗಲಿದೆ. ಎಷ್ಟು ಜನ ಅದೃಷ್ಟ ಪರೀಕ್ಷೆ ಮುಂದಾಗಿದ್ದಾರೆ? ಎಲ್ಲಿ ಹರಾಜು ವೀಕ್ಷಿಸಬಹುದು ಎನ್ನುವುದರ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
12:06 PM (IST) Dec 09
South Indian Movies of 2025: 2025ನೇ ಇಸವಿ ಮುಗಿಯಲು ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಹಿನ್ನೆಲೆಯಲ್ಲಿ 2025ರಲ್ಲಿ ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳು ಯಾವುವು ಮತ್ತು ಅವುಗಳ ಕಲೆಕ್ಷನ್ ವಿವರವನ್ನು ಈ ಲೇಖನದಲ್ಲಿ ನೋಡೋಣ.
11:14 AM (IST) Dec 09
25 ಜನರ ಬಲಿ ಪಡೆದ ಗೋವಾದ ನೈಟ್‌ಕ್ಲಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ದುರಂತ ನಡೆದ ಕೆಲವೇ ಗಂಟೆಗಳಲ್ಲಿ ಕ್ಲಬ್‌ನ ಮಾಲೀಕರಾದ ಗೌರವ್ ಮತ್ತು ಸೌರಭ್ ಲುತ್ರಾ ದೇಶ ಬಿಟ್ಟು ಥೈಲ್ಯಾಂಡ್‌ಗೆ ಪರಾರಿಯಾಗಿದ್ದು, ಪೊಲೀಸರು ಅವರಿಗಾಗಿ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.
09:47 AM (IST) Dec 09
ನವದೆಹಲಿ: ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ, ಐಸಿಸಿಗೆ ಬಿಗ್ ಶಾಕ್ ನೀಡಿದ್ದಾರೆ. ಮುಕೇಶ್ ಅಂಬಾನಿ ನೇತೃತ್ವದ ಜಿಯೋ ಹಾಟ್‌ಸ್ಟಾರ್, ಐಸಿಸಿ ಜತೆಗಿನ ಭಾರತದಲ್ಲಿ ಕ್ರಿಕೆಟ್ ಪ್ರಸಾರ ಮಾಡುವ ಹಕ್ಕಿನಿಂದ ಹಿಂದೆ ಸರಿದಿದೆ. ಇದು ಐಸಿಸಿ ಪಾಲಿಗೆ ಬಿಗ್ ಶಾಕ್ ಎನಿಸಿಕೊಂಡಿದೆ.
08:55 AM (IST) Dec 09
ಇಂದು ವಂದೇ ಮಾತರಂ ಗೀತೆಯನ್ನು ಮುಂದಿಟ್ಟುಕೊಂಡು ದೇಶದ ಮುಸ್ಲಿಮರನ್ನು ಕಟಕಟೆಯಲ್ಲಿ ನಿಲ್ಲಿಸುವ ಪ್ರಯತ್ನ ನಡೆಯುತ್ತಿದೆ. ಮುಸ್ಲಿಮರು ಆಯ್ಕೆಯಿಂದ ಭಾರತೀಯರಾಗಿದ್ದಾರೆರೇ ಹೊರತು ಆಕಸ್ಮಿಕವಾಗಿಲ್ಲ. ನಮ್ಮ ಪೂರ್ವಜರು ಪ್ರೀತಿಯಿಂದ ಈ ದೇಶವನ್ನು ಆಯ್ಕೆ ಮಾಡಿಕೊಂಡಿದ್ದಾರೆ.
08:32 AM (IST) Dec 09
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಸರಣಿಯೊಂದಿಗೆ ತನ್ನ ತಯಾರಿಯನ್ನು ಆರಂಭಿಸಲಿದೆ. ಗಾಯದಿಂದ ಚೇತರಿಸಿಕೊಂಡಿರುವ ಹಾರ್ದಿಕ್ ಪಾಂಡ್ಯ ಮತ್ತು ಶುಭಮನ್ ಗಿಲ್ ತಂಡಕ್ಕೆ ಮರಳಿದ್ದು, ಅಭಿಷೇಕ್ ಶರ್ಮಾ ಅವರಂತಹ ಯುವ ಆಟಗಾರರ ಮೇಲೆ ಎಲ್ಲರ ಕಣ್ಣಿದೆ.