ಭಾರತ- ರಷ್ಯಾ ಸಂಬಂಧಕ್ಕೆ ಹುಳಿ ಹಿಂಡಲು ಅಮೆರಿಕ ಯತ್ನಿಸುತ್ತಿರುವ ಹೊತ್ತಿನಲ್ಲೇ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಎರಡು ದಿನಗಳ ಭೇಟಿಗಾಗಿ ಗುರುವಾರ ಭಾರತಕ್ಕೆ ಬಂದಿಳಿದಿದ್ದಾರೆ. ಈ ವೇಳೆ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ವಿಮಾನ ನಿಲ್ದಾಣಕ್ಕೆ ತೆರಳಿ ತಮ್ಮ ಆತ್ಮೀಯ ಮಿತ್ರನನ್ನು ಆಲಿಂಗಿಸಿ ಸ್ವಾಗತಿಸಿದರು. ಯಾವುದೇ ಮುನ್ಸೂಚನೆ ನೀಡದೆ, ಶಿಷ್ಟಾಚಾರ ಉಲ್ಲಂಘಿಸಿ ವಿಮಾನ ನಿಲ್ದಾಣಕ್ಕೆ ತೆರಳಿ ಪುಟಿನ್‌ರನ್ನು ಸ್ವಾಗತಿಸಿದ ಪ್ರಧಾನಿ ಮೋದಿ ಅವರ ಸ್ನೇಹಪರತೆ ಬಗ್ಗೆ ರಷ್ಯಾ ಅತೀವ ಅಚ್ಚರಿ ಮತ್ತು ಸಂತಸ ವ್ಯಕ್ತಪಡಿಸಿದೆ. ಸ್ವತಃ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಷ್ಟೇ ಅಲ್ಲದೆ ಬಳಿಕ ಪುಟಿನ್‌ರನ್ನು ತಮ್ಮ ಕಾರಿನಲ್ಲೇ ಕೂರಿಸಿ ಕರೆದೊಯ್ದ ಮೋದಿ ತಮ್ಮ ನಿವಾಸದಲ್ಲಿ ರಷ್ಯಾ ಅಧ್ಯಕ್ಷರಿಗೆ ಖಾಸಗಿ ಭೋಜನಕೂಟ ಆಯೋಜಿಸಿದ್ದರು. 4 ವರ್ಷದ ಬಳಿಕ ಭಾರತಕ್ಕೆ ಬಂದಿಳಿದ ತಮ್ಮ ಮಿತ್ರನನ್ನು ಮೋದಿ ಸ್ವಾಗತಿಸಿದ ರೀತಿ, ಉಭಯ ದೇಶಗಳ ನಡುವಿನ ಸಂಬಂಧ ಹೊಸ ಎತ್ತರಕ್ಕೆ ಏರಿದರ ಸಂಕೇತ ಎಂದೇ ಬಣ್ಣಿಸಲಾಗಿದೆ.

08:30 AM (IST) Dec 05