ಪಾಲ್ಘರ್: ಪಶು ವಿಮಾ ಪರಿಹಾರ ವಿಳಂಬ ಖಂಡಿಸಿ ರೈತನೊಬ್ಬ ತನ್ನ ಮೃತ ಎಮ್ಮೆಯ ಕಳೇಬರ ಇರಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿದ ಪ್ರಸಂಗ ಮಹಾ ರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ತಕ್ಷಾಡ ಗ್ರಾಮದ ನವಸು ದಿಘಾ ಎಂಬ ರೈತ, 2022ರಲ್ಲಿ ಬ್ಯಾಂಕಿನಿಂದ 12 ಲಕ್ಷ ರು. ಸಾಲ ಪಡೆದು 10 ಎಮ್ಮೆ ಖರೀದಿಸಿದ್ದ ಹಾಗೂ ವಿಮೆ ಮಾಡಿಸಿದ್ದ. ಕಳೆದ 3 ವರ್ಷ ಗಳಲ್ಲಿ ಸಾವನ್ನಪ್ಪಿದ್ದ 2 ಎಮ್ಮೆಗಳಿಗೆ ವಿಮೆ ಹಣವೇ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡು ಸತ್ತಿದ್ದ ಎಮ್ಮೆ ತೆಗೆದುಕೊಂಡು ಬಂದ ಆತ ಬ್ಯಾಂಕ್ ಎದುರು ಪ್ರತಿಭಟಿಸಿದ್ದಾನೆ. ಆಗ ಬೆಚ್ಚಿದ ಬ್ಯಾಂಕು, 1 ತಿಂಗಳಲ್ಲಿ ವಿಮೆ ಹಣ ನೀಡುವ ಲಿಖಿತ ಭರವಸೆ ನೀಡಿದೆ.

09:56 PM (IST) Nov 03
ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು, ವಿಚಿತ್ರ ಬೇಡಿಕೆಯೊಂದನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಪೊಲೀಸರಿಗೆ ಈ ಬೇಡಿಕೆಯನ್ನು ತಳ್ಳಿ ಹಾಕುವಂತಿಲ್ಲ, ಕಾರಣ ಈತ ಮೊದಲೇ ನೀಲಿ ಡ್ರಂ ಕತೆ ಹೇಳಿದ್ದಾನೆ.
08:20 PM (IST) Nov 03
AI Mahabharat Series Massively Trolled on Social Media ಜಿಯೋ ಹಾಟ್‌ಸ್ಟಾರ್‌ನ ಎಐ ವೆಬ್ ಸಿರೀಸ್, 'ಮಹಾಭಾರತ್ ಏಕ್ ಧರ್ಮಯುದ್ಧ್' ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೆ ಈಡಾಗಿದೆ.
07:28 PM (IST) Nov 03
Dinesh Beedi owner death: ಪ್ರಸಿದ್ಧ ದಿನೇಶ್ ಬೀಡಿ ಸ್ಥಾಪಕ, ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಅವರನ್ನು ಅವರ ಮಗ ನರೇಶ್ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. ಮದ್ಯಪಾನದ ವಿಚಾರವಾಗಿ ತಂದೆ ಆಕ್ಷೇಪಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
07:08 PM (IST) Nov 03
06:21 PM (IST) Nov 03
ಹಾರಾಟದ ನಡುವೆ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಸ್ಯಾನ್‌ಫ್ರಾನ್ಸಿಸ್ಕೋದಿಂದ ಹೊರಟ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಸಮಸ್ಯೆಯಂದ ಮಂಗೋಲಿಯಾದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ.
06:13 PM (IST) Nov 03
Fans Hail Amol Muzumdar as Real-Life Kabir Khan After Women's World Cup Triumph ದೇಶೀಯ ಕ್ರಿಕೆಟ್‌ನಲ್ಲಿ ಮಿಂಚಿದರೂ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಅಮೋಲ್ ಮಜುಂದಾರ್, ಇದೀಗ ಕೋಚ್ ಆಗಿ ಭಾರತ ಮಹಿಳಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.
06:05 PM (IST) Nov 03
ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ 586 ರನ್‌ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ, ಕೇರಳ ತನ್ನ ಮೊದಲ ಇನಿಂಗ್ಸ್‌ನಲ್ಲಿ 238 ರನ್‌ಗಳಿಗೆ ಆಲೌಟ್ ಆಗಿ ಫಾಲೋ-ಆನ್‌ಗೆ ಸಿಲುಕಿದೆ. ಬಾಬಾ ಅಪರಾಜಿತ್ (88) ಅವರ ಏಕಾಂಗಿ ಹೋರಾಟದ ಹೊರತಾಗಿಯೂ, ವಿದ್ವತ್ ಕಾವೇರಪ್ಪ ಅವರ ಮಾರಕ ಬೌಲಿಂಗ್‌ಗೆ ಕೇರಳ ತತ್ತರಿಸಿತು.
05:20 PM (IST) Nov 03
ರಾಜಸ್ಥಾನದ ಎಸಿಬಿ ಡಿಸಿಪಿ ಭೈರುಲಾಲ್ ಮೀನಾ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದಂದೇ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡಿದ್ದರು. ಆದರೆ, ಭಾಷಣ ಮುಗಿದ ಒಂದು ಗಂಟೆಯಲ್ಲೇ ₹80,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
04:50 PM (IST) Nov 03
ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ, ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ತಮ್ಮ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಅವರು 22 ವಿಕೆಟ್‌ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಹೊರಹೊಮ್ಮಿದ್ದಾರೆ.
04:29 PM (IST) Nov 03
Drunken Dumper Drivers Deadly Rampage in Jaipur Kills 19 ರಾಜಸ್ಥಾನದ ಜೈಪುರದಲ್ಲಿ ಕುಡಿದ ಡಂಪರ್ ಚಾಲಕನೊಬ್ಬ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಈ ಭೀಕರ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
04:07 PM (IST) Nov 03
boy rejected entrance in school: ಶಬರಿಮಲೆ ಯಾತ್ರೆಗಾಗಿ ಅಯ್ಯಪ್ಪ ಮಾಲೆ ಧರಿಸಿದ್ದ 5ನೇ ತರಗತಿ ವಿದ್ಯಾರ್ಥಿಗೆ ಆಂಧ್ರಪ್ರದೇಶದ ಖಾಸಗಿ ಶಾಲೆಯೊಂದು ಪ್ರವೇಶ ನಿರಾಕರಿಸಿದೆ. ಈ ಘಟನೆಯು ವ್ಯಾಪಕ ಪ್ರತಿಭಟನೆಗೆ ಕಾರಣವಾದ ನಂತರ, ಶಾಲೆಯು ಕ್ಷಮೆಯಾಚಿಸಿ ವಿದ್ಯಾರ್ಥಿಗೆ ಹಾಜರಾಗಲು ಅನುಮತಿ ನೀಡಿತು.
03:51 PM (IST) Nov 03
US Firm Tillman Global Eyes $4-$6 Billion (₹52,000 Cr) Investment in Vodafone Idea ಅಮೆರಿಕದ ಟಿಲ್ಮನ್ ಗ್ಲೋಬಲ್ ಹೋಲ್ಡಿಂಗ್ಸ್ (ಟಿಜಿಹೆಚ್) ಸಂಸ್ಥೆಯು ವೊಡಾಫೋನ್-ಐಡಿಯಾ (ವಿ) ಕಂಪನಿಯಲ್ಲಿ ₹35,000-52,000 ಕೋಟಿ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ.
03:25 PM (IST) Nov 03
ಅಮೋಲ್ ಮುಜುಂದಾರ್: ಈ ಕೋಚ್‌ಗೆ ಒಂದೂ ಅಂತಾರಾಷ್ಟ್ರೀಯ ಮ್ಯಾಚ್ ಆಡಿದ ಅನುಭವವಿಲ್ಲ. ಟೀಮ್ ಇಂಡಿಯಾವನ್ನು ಪ್ರತಿನಿಧಿಬೇಕೆಂದು ಕನಸು ಕಂಡಿದ್ದರು. ಆದರೆ ಆ ಕನಸು ನನಸಾಗಲಿಲ್ಲ. ಆದರೀಗ ವಿಶ್ವಕಪ್ ಗೆದ್ದಿದ್ದಾರೆ.
03:18 PM (IST) Nov 03
ಏರ್ ಇಂಡಿಯಾ ದುರಂತದಲ್ಲಿ ಬುದುಕುಳಿದ ಏಕೈಕ ಲಕ್ಕಿ ಮ್ಯಾನ್ ಈಗಿನ ಪರಿಸ್ಥಿತಿ ಯಾರಿಗೂ ಬೇಡ, 241 ಪ್ರಯಾಣಿಕರ ಬಲಿ ಪಡೆದ ಅಹಮ್ಮದಾಬಾದ್ ದುರಂತದಲ್ಲಿ ಅಚ್ಚರಿ ಎಂಬಂತೆ ವಿಶ್ವಾಸ್ ಕುಮಾರ್ ಬದುಕುಳಿದಿದ್ದರು. ವಿಶ್ವಾಸ್ ಕುಮಾರ್ ಈಗಿನ ಪರಿಸ್ಥಿತಿ ಹೇಗಿದೆ?
03:16 PM (IST) Nov 03
CCTV installed for stalking: ಮಾಜಿ ಪ್ರಿಯತಮೆಯ ಚಲನವಲನಗಳ ಮೇಲೆ ಕಣ್ಣಿಡಲು ಯುವಕನೊಬ್ಬ ಆಕೆಯ ಮನೆ ಹಿಂದೆ ಸಿಸಿಟಿವಿ ಅಳವಡಿಸಿದ ವಿಚಿತ್ರ ಘಟನೆ ನಡೆದಿದೆ. ಸಂಬಂಧವನ್ನು ಮುರಿದುಕೊಂಡಿದ್ದಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದ ಈತನ ಕೃತ್ಯವನ್ನು ದಂಪತಿ ಪತ್ತೆಹಚ್ಚಿ, ಪೊಲೀಸರಿಗೆ ದೂರು ನೀಡಿದ್ದಾರೆ.
03:09 PM (IST) Nov 03
Yogi Adityanath Calls Rahul, Akhilesh, Tejashwi 'Three Monkeys of INDIA Alliance ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂಡಿಯಾ ಮೈತ್ರಿಕೂಟದ ನಾಯಕರಾದ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಅಖಿಲೇಶ್ ಯಾದವ್ ಅವರನ್ನು 'ಮೂರು ಮಂಗಗಳು' ಎಂದು ಕರೆದಿದ್ದಾರೆ.
02:37 PM (IST) Nov 03
ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
02:27 PM (IST) Nov 03
Indian-Origin School Friends Become Youngest Self-Made Billionaires at 22 22 ವರ್ಷದ ಮೂವರು ಸ್ನೇಹಿತರಾದ ಬ್ರೆಂಡನ್ ಫೂಡಿ, ಆದರ್ಶ್ ಹಿರೇಮಠ್ ಹಾಗೂ ಸೂರ್ಯ ಮಿಧಾ, ತಮ್ಮ 'ಮರ್ಕಾರ್' ಎಐ ಸ್ಟಾರ್ಟ್‌ಅಪ್ ಮೂಲಕ ವಿಶ್ವದ ಅತ್ಯಂತ ಕಿರಿಯ ಸ್ವ-ನಿರ್ಮಿತ ಕೋಟ್ಯಧಿಪತಿಗಳಾಗಿದ್ದಾರೆ.
01:42 PM (IST) Nov 03
ನಟಿ ಐಶ್ವರ್ಯ ರೈ ಅವರು ಮಿಸ್ ಇಂಡಿಯಾ ಆಗುವ ಮುನ್ನ, ಆಮೀರ್ ಖಾನ್ ಜೊತೆಗಿನ ತಂಪು ಪಾನೀಯದ ಜಾಹೀರಾತಿನಲ್ಲಿ ಕೇವಲ ನಾಲ್ಕು ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದರು. 'ಸಂಜು' ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ರಾತ್ರೋರಾತ್ರಿ ಫೇಮಸ್ ಆದರು. ಆ ವಿಡಿಯೋದಲ್ಲಿ ಏನಿದೆ?
12:46 PM (IST) Nov 03
ಸಾಮಾಜಿಕ ಜಾಲತಾಣದಲ್ಲಿ ವರನೊಬ್ಬ ವಿವಾಹಕ್ಕೆ 10 ಬೇಡಿಕೆ ಇಟ್ಟಿದ್ದು ವೈರಲ್ ಆಗಿವೆ. ಪ್ರೀ-ವೆಡ್ಡಿಂಗ್ ಶೂಟ್ ಇಲ್ಲ, ವಧು ಸೀರೆಯುಡಬೇಕು ಹೀಗೆ 10 ಬೇಡಿಕೆಗಳನ್ನು ಆತ ಮುಂದಿಟ್ಟಿದ್ದಾನೆ. ಆದರೆ ಆತನ ಬೇಡಿಕೆಗಳನ್ನು ಹೆಣ್ಣು ಮಕ್ಕಳು ನಿರಾಕರಿಸಿದ್ದಾರೆ. ಆದರೆ ಕೆಲ ಪುರುಷರು ಸ್ವಾಗತಿಸಿದ್ದಾರೆ.
12:15 PM (IST) Nov 03
ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದಿದೆ. ಗೆಲುವಿನ ನಂತರ, ಹರ್ಮನ್‌ಪ್ರೀತ್ ಕೋಚ್ ಅಮೂಲ್ ಮಜುಂದಾರ್ ಮತ್ತು ಐಸಿಸಿ ಅಧ್ಯಕ್ಷ ಜಯ್ ಶಾ ಅವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಸಂಸ್ಕಾರವನ್ನು ಪ್ರದರ್ಶಿಸಿದ್ದಾರೆ.
11:52 AM (IST) Nov 03
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಅವರ 3,000 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ.
11:36 AM (IST) Nov 03
ತಲೆಗೆ 14 ಲಕ್ಷ ರೂಪಾಯಿ ಬಹುಮಾನ ಹೊತ್ತಿದ್ದ ಮಹಿಳಾ ನಕ್ಸಲೈಟ್ ಸುನೀತಾ, ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಪೊಲೀಸರಿಗೆ ಶರಣಾಗಿದ್ದಾಳೆ. ಕೇಂದ್ರ ಸರ್ಕಾರದ ಕಠಿಣ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಸಿಕ್ಕ ಫಲ ಇದಾಗಿದೆ.
11:26 AM (IST) Nov 03
ಮಹಿಳಾ ವಿಶ್ವಕಪ್ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿ ಭಾರತ ಐತಿಹಾಸಿಕ ಗೆಲುವು ಸಾಧಿಸಿದೆ. ಶಫಾಲಿ ವರ್ಮಾ ಅವರ 87 ರನ್ ಮತ್ತು ದೀಪ್ತಿ ಶರ್ಮಾ ಅವರ 5 ವಿಕೆಟ್ ಪ್ರದರ್ಶನ ತಂಡದ ಗೆಲುವಿಗೆ ಕಾರಣವಾಯಿತು. ಈ ಸಂದರ್ಭದಲ್ಲಿ ಮಾಜಿ ನಾಯಕ ರೋಹಿತ್ ಶರ್ಮಾ ಮೈದಾನದಲ್ಲೇ ಭಾವುಕರಾದರು.
10:22 AM (IST) Nov 03
10:15 AM (IST) Nov 03
Tipper lorry bus collision Telangana: ಹೈದರಾಬಾದ್-ಬಿಜಾಪುರ ಹೆದ್ದಾರಿಯಲ್ಲಿ ಜಲ್ಲಿಕಲ್ಲು ಸಾಗಿಸುತ್ತಿದ್ದ ಟಿಪ್ಪರ್ ಲಾರಿ ಮತ್ತು ಬಸ್ ನಡುವೆ ನಡೆದ ಭೀಕರ ಅಪಘಾತದಲ್ಲಿ 20 ಜನರು ಸಾವನ್ನಪ್ಪಿದ್ದಾರೆ. ಬಸ್‌ನೊಳಗೆ ಜಲ್ಲಿಕಲ್ಲು ತುಂಬಿದ್ದರಿಂದ ಅನೇಕ ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
09:31 AM (IST) Nov 03
ಮುಂಬೈ: ಹರ್ಮನ್‌ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ