ಲಂಡನ್: 18ನೇ ಶತಮಾನದಲ್ಲಿ ಮೈಸೂರು ಆಳಿದ್ದ ಟಿಪ್ಪು ಸುಲ್ತಾನ್‌ನ ವಂಶಸ್ಥೆ, ನೂರ್ ಇನಾಯತ್ ಹೆಸರಿನಲ್ಲಿ ಅಂಚೆಚೀಟಿ ಬಿಡುಗಡೆ ಮೂಲಕ ಫ್ರಾನ್ಸ್ ವಿಶೇಷ ಗೌರವ ಸಲ್ಲಿಸಿದೆ. ಈ ಪುರಸ್ಕಾರಕ್ಕೆ ಭಾಜನರಾದ ಮೊದಲ ಭಾರತ ಮೂಲದ ಮಹಿಳೆ ಎನ್ನುವ ಇತಿಹಾಸ ನಿರ್ಮಿಸಿದ್ದಾರೆ.
ಫ್ರೆಂಚ್‌ನ ಅಂಚೆ ಇಲಾಖೆ, ಲಾ ಪೋಸ್ಟೆ, ನಾಜಿಗಳ ವಿರುದ್ಧ ಹೋರಾಡಿದವರ ಗೌರವಾರ್ಥವಾಗಿ ಈ ಅಂಚೆಚೀಟಿ ಬಿಡುಗಡೆ ಮಾಡುತ್ತದೆ. ಈ ತಿಂಗಳು ಎರಡನೇ ಮಹಾಯುದ್ಧಕ್ಕೆ 80 ವರ್ಷ ಹಿನ್ನೆಲೆ 12 ಜನರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದು, ನೂರ್ ಕೂಡ ಇಬ್ಬರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್‌ನ ವಿಶೇಷ ಕಾರ್ಯಾಚರಣೆ ವಿಭಾಗಕ್ಕೆ ರಹಸ್ಯ ಪ್ರತಿನಿಧಿಯಾಗಿ ಫ್ರಾನ್ಸ್ ಪರ ನೂರ್ ಕೆಲಸ ಮಾಡಿದ್ದರು.
07:41 PM (IST) Nov 25
06:51 PM (IST) Nov 25
ಸೀರಿಯಲ್ ಮತ್ತು ಸಿನಿಮಾಗಳಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಶಿಶುಗಳು ಯಾರು ಎಂಬ ಕುತೂಹಲ ಅನೇಕರಿಗಿದೆ. ನಿರ್ದೇಶಕರು ಸಿಲಿಕಾನ್‌ನಿಂದ ಮಾಡಿದ ಕೃತಕ ಮಕ್ಕಳನ್ನು ಬಳಸುತ್ತಾರೆ. ಈ ಕೃತಕ ಶಿಶುಗಳು ಎಷ್ಟು ನೈಜವಾಗಿರುತ್ತವೆ ಎಂದರೆ, ಅವುಗಳನ್ನು ನಿಜವಾದ ಮಕ್ಕಳಿಂದ ಪ್ರತ್ಯೇಕಿಸುವುದು ಕಷ್ಟ.
06:49 PM (IST) Nov 25
ಹೆದ್ದಾರಿಯಲ್ಲಿ ಸಾಗುತ್ತಿದ್ದ ವೇಳೆ ಹೊತ್ತಿ ಉರಿದ ಪ್ರಯಾಣಿಕರ ಬಸ್, 45 ಮಂದಿ ಪ್ರಾಣ ಉಳಿಸಿದ ಚಾಲಕ, ಬಸ್ ಸಂಪೂರ್ಣ ಹೊತ್ತಿ ಉರಿದಿದೆ. ಚಾಲಕನ ಸಾಹಸ ಹಾಗೂ ಧೈರ್ಯದಿಂದ ಪ್ರಯಾಣಿಕರ ಪ್ರಾಣ ಉಳಿದಿದೆ.
05:36 PM (IST) Nov 25
ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಸ್ಮೃತಿ ತಂದೆಯ ಅನಾರೋಗ್ಯದಿಂದ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗಿತ್ತು. ಆದರೆ, ಪಲಾಶ್ ಅವರ ಅಕ್ರಮ ಸಂಬಂಧದ ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.
04:46 PM (IST) Nov 25
ಮದುವೆ ಮನೆಯಲ್ಲಿ ಹ್ಯಾಂಗೋವರ್‌ನಿಂದ ಹೊರಬರಲು IV ಡ್ರಿಪ್, ಎಷ್ಟೇ ಕುಡಿದ್ರೂ ಕ್ಷಣಾರ್ಧದಲ್ಲಿ ಫ್ರೆಶ್, ಮದುವೆ ಮನೆಯ ಈ ವಿಡಿಯೋ ಒಂದು ಭಾರಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ತಜ್ಞರು ಹ್ಯಾಂಗ್ಓವರ್ ಬಿಡಿಸಲು ಐವಿ ಡ್ರಿಪ್ ಬಳಕೆಯಿಂದ ಅಪಾಯವಿದೆ ಎಂದಿದ್ದಾರೆ.
04:20 PM (IST) Nov 25
ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಭಾರತ ತಂಡವು 549 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ್ದು, ನಾಲ್ಕನೇ ದಿನದಾಟದಂತ್ಯಕ್ಕೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಕೊನೆಯ ದಿನ ಗೆಲುವಿಗೆ 522 ರನ್‌ಗಳ ಅಗತ್ಯವಿದೆ.
04:19 PM (IST) Nov 25
26/11: ಮುಂಬೈ ಮೇಲೆ 26/11 ದಾಳಿ ನಡೆದು 17 ವರ್ಷಗಳು ಕಳೆದರೂ, ಹಲವು ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಸಾಜಿದ್ ಮಿರ್ ನ ನಿಜವಾದ ಗುರುತು, ಆತನ ಭಾರತ ರಹಸ್ಯ ಪ್ರವಾಸ ಮತ್ತು ದಾವೂದ್ ಇಬ್ರಾಹಿಂ ನ ಸಂಭಾವ್ಯ ಪಾತ್ರ ಇವು ಇನ್ನೂ ಉತ್ತರ ಸಿಗದ ಕೆಲವು ವಿಷಯಗಳಾಗಿವೆ.
03:56 PM (IST) Nov 25
ರಾಜಕೀಯ ಬೆಳವಣಿಗೆ ನಡುವೆ ಕಾಂಗ್ರೆಸ್‌ನಲ್ಲಿ ಮೇಜರ್ ಸರ್ಜರಿ, 7 ಪ್ರಮುಖ ನಾಯಕರ ಉಚ್ಚಾಟನೆ ಮಾಡಲಾಗಿದೆ. ಅಶಿಸ್ತು, ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ಶಿಸ್ತು ಸಮಿತಿ ಈ ಕ್ರಮ ತೆಗೆದುಕೊಂಡಿದೆ.
03:44 PM (IST) Nov 25
ಕ್ಯಾಪ್ಟನ್ ರವಿ ಧರ್ಣಿಧಿರ್ಕ ಮತ್ತು ಮಾಜಿ ಕಮಾಂಡೋಗಳು 157 ಭಯಭೀತ ಜನರನ್ನು ಉರಿಯುತ್ತಿರುವ ತಾಜ್ ಹೋಟೆಲ್‌ಗಿಂದ ಹೊರಗೆ ಕರೆದೊಯ್ದರು.ನಿರಂತರ ಬಿಕ್ಕಟ್ಟಿನ ಅಡಿಯಲ್ಲಿ ಅವರ ಶಾಂತತೆ, ಧೈರ್ಯ ಮತ್ತು ತೀಕ್ಷ್ಣವಾದ ಪ್ರವೃತ್ತಿ 26/11 ರ ಅತ್ಯಂತ ಅಸಾಧಾರಣ ವೀರ ಕೃತ್ಯಗಳಲ್ಲಿ ಒಂದಾಗಿದೆ.
03:12 PM (IST) Nov 25
ಕೈಗೆಟುಕುವ ಬೆಲೆಯಲ್ಲಿ ಸಿಯೆರಾ ಬಿಡುಗಡೆ ಮಾಡಿ ಹ್ಯುಂಡೈ, ಮಹೀಂದ್ರಗೆ ಶಾಕ್ ಕೊಟ್ಟ ಟಾಟಾ, ದೊಡ್ಡ ವಾಹನ ಕ್ರೆಟಾ ಹಾಗೂ ಸೆಲ್ಟೋಸ್ ಕಾರಿನ ಬೆಲೆಯಲ್ಲಿ, ಜೊತಗೆ ಗರಿಷ್ಠ ಸುರಕ್ಷತೆ, ರೇಂಜ್ ರೋವರ್ ರೀತಿಯ ಪ್ರೀಮಿಯಂ ಕ್ಲಾಸ್ ಸೇರಿದಂತೆ ಹಲವು ವಿಶೇಷತೆ ಇದರಲ್ಲಿದೆ.
02:30 PM (IST) Nov 25
ನಟ ಉಪೇಂದ್ರ ಅವರೊಂದಿಗೆ ಶ್ರೀಮತಿ ಸಿನಿಮಾದಲ್ಲಿ ನಟಿಸಿದ್ದ ಬಾಲಿವುಡ್ ನಟಿ ಸೆಲಿನಾ ಜೆಟ್ಲಿ ಮುಂಬೈ ಕೋರ್ಟ್ ಮೆಟ್ಟಿಲೇರಿದ್ದಾರೆ. ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಆರೋಪ ಹೊರಿಸಿದ್ದಾರೆ.
01:17 PM (IST) Nov 25
ಸ್ಮೃತಿ ಮಂಧನಾ ಮತ್ತು ಫಿಲ್ಮ್ ಮೇಕರ್ ಪಲಾಶ್ ಮುಚ್ಚಲ್ ಅವರ ಮದುವೆ ತಂದೆಯ ಅನಾರೋಗ್ಯದ ಕಾರಣಕ್ಕೆ ಮುಂದೂಡಲ್ಪಟ್ಟಿತ್ತು. ಆದರೆ, ಇದೀಗ ಪಲಾಶ್ ಮುಚ್ಚಲ್ ಮತ್ತೋರ್ವ ಮಹಿಳೆಯೊಂದಿಗೆ ನಡೆಸಿದ್ದಾರೆ ಎನ್ನಲಾದ ಇನ್‌ಸ್ಟಾಗ್ರಾಂ ಚಾಟ್ ಲೀಕ್ ಆಗಿದ್ದು, ಇದು ಅವರ ಸಂಬಂಧ ಮುರಿದುಬೀಳಲು ಕಾರಣವಾಯಿತೇ?
01:05 PM (IST) Nov 25
12:30 PM (IST) Nov 25
India vs Pakistan 2026 Match Date: ಮುಂದಿನ ವರ್ಷ ಟಿ20 ವಿಶ್ವಕಪ್ 2026 ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಭಾರತ-ಪಾಕಿಸ್ತಾನ ತಂಡಗಳು ಯಾವಾಗ, ಎಲ್ಲಿ ಮುಖಾಮುಖಿಯಾಗಲಿವೆ ಎಂಬುದರ ಕಂಪ್ಲೀಟ್ ಡೀಟೈಲ್ಸ್.
12:26 PM (IST) Nov 25
IAS Santosh Verma Sparks Row Over Reservation Remark on Brahmin Daughter Marriage ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು, ಬ್ರಾಹ್ಮಣ ಸಂಘಗಳು ಐಎಎಸ್ ಅಧಿಕಾರಿ ಸಂತೋಚ್ ವರ್ಮಾ ಅವರ ಹೇಳಿಕೆಗೆ ಭಾರೀ ಆಕ್ಷೇಪ ವ್ಯಕ್ತಪಡಿಸಿವೆ.
11:59 AM (IST) Nov 25
ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯ ಶ್ರೀ ರಾಮ ಮಂದಿರದ ಶಿಖರದ ಮೇಲೆ ಭಗವಾಧ್ವಜವನ್ನು ಹಾರಿಸಿದರು. ಈ ಧ್ವಜವು ಸೂರ್ಯ, 'ಓಂ' ಮತ್ತು ಕೋವಿದಾರ ಮರದ ಚಿಹ್ನೆಗಳನ್ನು ಹೊಂದಿದ್ದು, ರಾಮನ ಸೂರ್ಯವಂಶ ಮತ್ತು ಅಯೋಧ್ಯೆಯ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ.
10:47 AM (IST) Nov 25
ಕ್ರಿಕೆಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಲ್ ಅವರ ವಿವಾಹವು ಸ್ಮೃತಿಯ ತಂದೆಯ ಹಠಾತ್ ಅನಾರೋಗ್ಯದ ಕಾರಣ ಮುಂದೂಡಲ್ಪಟ್ಟಿದೆ. ಈ ನಡುವೆ, ಸ್ಮೃತಿ ಸೋಶಿಯಲ್ ಮೀಡಿಯಾದಿಂದ ಮದುವೆಯ ಪೋಸ್ಟ್‌ಗಳನ್ನು ಅಳಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
09:18 AM (IST) Nov 25
ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಚುನಾವಣೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್, ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಕುರಿತಾದ ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ.
08:45 AM (IST) Nov 25
ಭಾರತ ಮಹಿಳಾ ಕಬಡ್ಡಿ ತಂಡವು 2ನೇ ಆವೃತ್ತಿಯ ವಿಶ್ವಕಪ್ ಫೈನಲ್‌ನಲ್ಲಿ ಚೈನೀಸ್ ತೈಪೆ ತಂಡವನ್ನು 35-28 ಅಂಕಗಳಿಂದ ಮಣಿಸಿ ಚಾಂಪಿಯನ್ ಆಗಿದೆ. 13 ವರ್ಷಗಳ ಬಳಿಕ ನಡೆದ ಟೂರ್ನಿಯಲ್ಲಿ ಭಾರತ ಅಜೇಯವಾಗಿ ಉಳಿದು ಟ್ರೋಫಿ ಗೆದ್ದುಕೊಂಡಿತು. ಕರ್ನಾಟಕದ ತೇಜಸ್ವಿನಿ ಬಾಯಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದು ವಿಶೇಷ.