LIVE NOW
Published : Dec 25, 2025, 08:02 AM ISTUpdated : Dec 25, 2025, 11:14 AM IST

India Latest News Live: ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!

ಸಾರಾಂಶ

ಉತ್ತರ ಪ್ರದೇಶದ ರಾಜಧಾನಿ ಲಖನೌನ ಗೋಮತಿ ನದಿ ತೀರದಲ್ಲಿ ನಿರ್ಮಿಸಲಾದ ಭವ್ಯ 'ರಾಷ್ಟ್ರೀಯ ಪ್ರೇರಣಾ ಸ್ಥಳ'ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದಾರೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 101ನೇ ಜಯಂತಿಯ ನೆನಪಿಗಾಗಿ ಈ ಸ್ಮಾರಕವನ್ನು ದೇಶಕ್ಕೆ ಸಮರ್ಪಿಸಲಾಗುತ್ತಿದೆ. 

ಈ ಹಿಂದೆ ತ್ಯಾಜ್ಯ ವಿಲೇವಾರಿ ಕೇಂದ್ರವಾಗಿದ್ದ (ಲಗಸಿ ವೇಸ್ಟ್ ಡಂಪ್) 65 ಎಕರೆ ಪ್ರದೇಶವನ್ನು ಇಂದು ₹230 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಉದ್ಯಾನವನ್ನಾಗಿ ಪರಿವರ್ತಿಸಲಾಗಿದೆ. ಈ ಇಡೀ ಸಂಕೀರ್ಣವನ್ನು 'ಕಮಲ'ದ ಆಕೃತಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು, ರಾಷ್ಟ್ರೀಯತೆಯ ಸಂಕೇತವಾಗಿ ನಿರ್ಮಿಸಲಾಗಿದೆ.

 

11:14 AM (IST) Dec 25

ತಮಿಳುನಾಡು ಹೆದ್ದಾರಿಯಲ್ಲೂ ಚಿತ್ರದುರ್ಗ ಮಾದರಿ ದುರಂತ, ಸರ್ಕಾರಿ ಬಸ್‌ ಪಂಚರ್‌ ಆಗಿ 9 ಮಂದಿ ಸಾವು!

ತಮಿಳುನಾಡಿನ ಕಡಲೂರು ಬಳಿ ಚೆನ್ನೈ-ತಿರುಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್‌ಇಟಿಸಿ ಬಸ್ಸಿನ ಟೈರ್ ಸ್ಫೋಟಗೊಂಡು ಭೀಕರ ಅಪಘಾತ ಸಂಭವಿಸಿದೆ. ಬಸ್ ಡಿವೈಡರ್ ದಾಟಿ ಎರಡು ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ, ಮಗು ಸೇರಿದಂತೆ ಒಂಬತ್ತು ಮಂದಿ ಸಾವನ್ನಪ್ಪಿದ್ದಾರೆ.

Read Full Story

10:32 AM (IST) Dec 25

ವಿಜಯ್ ಹಜಾರೆ ಟ್ರೋಫಿ - ದೇಶಿ ಕ್ರಿಕೆಟಲ್ಲಿ ರನ್‌ ಮಳೆ, ದಾಖಲೆಗಳ ಪ್ರವಾಸ; ಮೊದಲ ದಿನವೇ 22 ಶತಕ ದಾಖಲು!

ವಿಜಯ್ ಹಜಾರೆ ಟ್ರೋಫಿಯಲ್ಲಿ, ಜಾರ್ಖಂಡ್ ನೀಡಿದ 413 ರನ್‌ಗಳ ಬೃಹತ್ ಗುರಿಯನ್ನು ಕರ್ನಾಟಕ ಯಶಸ್ವಿಯಾಗಿ ಬೆನ್ನಟ್ಟಿದೆ. ಇದು ಟೂರ್ನಿಯ ಇತಿಹಾಸದಲ್ಲೇ ಅತ್ಯಧಿಕ ರನ್ ಚೇಸ್ ಆಗಿದೆ. ದೇವದತ್ ಪಡಿಕ್ಕಲ್ ಅವರ ಭರ್ಜರಿ 147 ರನ್‌ಗಳ ನೆರವಿನಿಂದ ಕರ್ನಾಟಕ ಈ ಐತಿಹಾಸಿಕ ಜಯ ಸಾಧಿಸಿತು.
Read Full Story

08:04 AM (IST) Dec 25

ಇಸ್ರೋ ಹೊಸ ಮೈಲುಗಲ್ಲು- 6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ

ಶ್ರೀಹರಿಕೋಟಾ: ಅಮೆರಿಕದ ಎಎಸ್‌ಟಿ ಸ್ಪೇಸ್‌ ಮೊಬೈಲ್‌ ಕಂಪನಿಗೆ ಸೇರಿದ ಬ್ಲ್ಯೂಬರ್ಡ್‌ ಬ್ಲಾಕ್-2 ಉಪಗ್ರಹವನ್ನು ಇಸ್ರೋದ ಎಲ್‌ವಿಎಂ3- ಎಂ6 ರಾಕೆಟ್‌ ಬುಧವಾರ ಯಶಸ್ವಿಯಾಗಿ ಕಕ್ಷೆ ಸೇರಿಸಿದೆ. ಇದು, ಇಸ್ರೋ ಇದುವರೆಗೆ ಕೆಳಕಕ್ಷೆಗೆ ಸೇರಿಸಿದ ಅತ್ಯಂತ ಭಾರದ ಉಪಗ್ರಹವಾಗಿದೆ. ಮುಂಬರುವ ಮಾನವ ಸಹಿತ ಗಗನಯಾನಕ್ಕೆ ಕೂಡಾ ಇಸ್ರೋ, ಇದೇ ರಾಕೆಟ್‌ ಬಳಕೆ ಮಾಡಲು ಉದ್ದೇಶಿಸಿರುವ ಕಾರಣ, ಬುಧವಾರ ಸಾಧನೆ ಇಸ್ರೋದ ಕನಸಿಗೆ ಮತ್ತಷ್ಟು ಬೆಂಬಲ ನೀಡಿದೆ.

ಬ್ಲ್ಯೂಬರ್ಡ್‌ ಬ್ಲಾಕ್‌-2 ಉಪಗ್ರಹ ಹೊತ್ತ ಬಾಹುಬಲಿ ಖ್ಯಾತಿಯ ಎಲ್‌ವಿಎಂ3-ಎಂಸಿ ರಾಕೆಟ್‌ ಬುಧವಾರ ಬೆಳಗ್ಗೆ 9.55ಕ್ಕೆ ನಭಕ್ಕೆ ನೆಗೆದು, 15 ನಿಮಿಷಗಳ ಬಳಿಕ ಉಪಗ್ರಹವನ್ನು ಯಶಸ್ವಿಯಾಗಿ ಕೆಳಹಂತದ ಕಕ್ಷೆಗೆ ಸೇರಿಸಿತು.

ಇಸ್ರೋದ ಈ ಸಾಧನೆಗೆ, ಬೆಂಗಳೂರು ಮೂಲದ ಸಂಸ್ಥೆಯ ಅಧ್ಯಕ್ಷ ನಾರಾಯಣನ್‌ ಮತ್ತು ಪ್ರಧಾನಿ ನರೇಂದ್ರ ಮೋದಯಾಗಿ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.

Read Full Story

More Trending News