ನ್ಯೂಯಾರ್ಕ್/ವಾಷಿಂಗ್ಟನ್: ಗಣೇಶ ಚತುರ್ಥಿ ಮುನ್ನಾ ದಿನ ಭಾರತೀಯ ಉತ್ಪನ್ನಗಳ ಮೇಲೆ ಶೇ.50ರಷ್ಟು ತೆರಿಗೆ ಘೋಷಿಸಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ನವರಾತ್ರಿಗೂ ಮುನ್ನ ಭಾರತದ ಮೇಲೆ ಹೊಸ ಪ್ರಹಾರ ನಡೆಸಿದ್ದಾರೆ. ಭಾರತದ ಐಟಿ ಕಂಪನಿಗಳು ಮತ್ತು ಐಟಿ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಎಚ್ 1ಬಿ ವೀಸಾ ಶುಲ್ಕ ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದಾರೆ. ಅದರಂತೆ, ಇನ್ನು ಮುಂದೆ ಎಚ್-1ಬಿ ವೀಸಾ ಪ್ರಾಯೋಜಕತ್ವ ಕಾರ್ಯಕ್ರಮದಡಿ ವಿದೇಶಿ ನೌಕರರಿಗೆ ಉದ್ಯೋಗ ನೀಡುವ ಕಂಪನಿಗಳು ವಾರ್ಷಿಕವಾಗಿ 88 ಲಕ್ಷ ರು. ಶುಲ್ಕ ಪಾವತಿಸುವುದು ಕಡ್ಡಾಯ. ಈ ಕುರಿತು ಟ್ರಂಪ್ ಅಧಿಸೂಚನೆ ಹೊರಡಿಸಿದ್ದು, ಸೆ.21ರ ಬೆಳಗಿನ ಜಾವ 12.01 ನಿಮಿಷದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಈ ಹೊಸ ಗೊಂದಲ ಸೃಷ್ಟಿಸಿದ ಬಳಿಕ ಅಮೆರಿಕ ಸರ್ಕಾರ ಇದಕ್ಕೆ ಸ್ಪಷ್ಟನೆ ನೀಡಿದ್ದು, 'ನಿಯಮ ಇನ್ನು ಮುಂದಿನ ದಿನಗಳಲ್ಲಿ ವಿತರಣೆ ಆಗುವ ಎಚ್.1- ಬಿ ವೀಸಾಗಳಿಗೆ ಮಾತ್ರ ಅನ್ವಯ ಆಗಲಿದೆ. ಹಾಲಿ ಅಮೆರಿಕದಲ್ಲೇ ಇರುವ ಉದ್ಯೋಗಿಗಳ ನವೀಕರಣಕ್ಕೆ ಅನ್ವಯ ಆಗದು' ಎಂದು ಸ್ಪಷ್ಟನೆ ನೀಡಿದೆ. ಈವರೆಗೆ ಈ ವೀಸಾ ಶುಲ್ಕ 1.75 ಲಕ್ಷದಿಂದ 4 ಲಕ್ಷ ರು.ವರೆಗೆ ಇತ್ತು. ಇದೀಗ ಆ ಶುಲ್ಕವನ್ನು ಸುಮಾರು 40 ಪಟ್ಟು ಹೆಚ್ಚಿಸಲು ಟ್ರಂಪ್ ನಿರ್ಧರಿಸಿದ್ದಾರೆ.
11:48 PM (IST) Sep 21
ಜಗಳಕ್ಕಿಳಿದ ಪಾಕ್ ಬೌಲರ್ಸ್‌ಗೆ ಬ್ಯಾಟ್ ಜೊತೆಗೆ ಅವರದ್ಧೇ ಭಾಷೆಯಲ್ಲಿ ಉತ್ತರ ಕೊಟ್ಟ ಅಭಿಷೇಕ್, ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಅಭಿಶೇಕ್ ಶರ್ಮಾ ಹಾಗೂ ಪಾಕಿಸ್ತಾನ ಬೌಲರ್ಸ್ ನಡುವಿನ ಮಾತಿನ ಚಕಮಕಿ ಸದ್ದು ಮಾಡುತ್ತಿದೆ.
11:14 PM (IST) Sep 21
ಹಾಫ್ ಸೆಂಚುರಿ ಸಂಭ್ರಮದಲ್ಲಿ ಪೆಹಲ್ಗಾಂ ಉಗ್ರ ದಾಳಿಗೆ ಬಲಿಯಾದವರ ಅಣಕಿಸಿದ್ರಾ ಫರ್ಹಾನ್? ಪಾಕಿಸ್ತಾನ ಕ್ರಿಕೆಟಿಗನ ಸಂಭ್ರಮ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಗನ್ ಫೈರಿಂಗ್ ಶೈಲಿಯ ಸಂಭ್ರಮದ ಮೂಲಕ ಫರ್ಹಾನ್ ನೀಡಿದ ಸಂದೇಶವೇನು?
10:02 PM (IST) Sep 21
INDvsPAK ನಾಲ್ಕು ಕ್ಯಾಚ್ ಕೈಚೆಲ್ಲಿದ ಭಾರತ, ಲಾಭ ಪಡೆದು 171 ರನ್ ಸಿಡಿಸಿದ ಪಾಕಿಸ್ತಾನ, ಒಂದೆಡೆ ಕ್ಯಾಚ್ ಡ್ರಾಪ್, ಮತ್ತೊಂದೆಡೆ ಫರ್ಹಾನ್ ಅಬ್ಬರದ ನಡುವೆ ಭಾರತ ಸಂಘಟಿತ ಹೋರಾಟ ನೀಡಿದೆ.ಆದರೆ ಪಾಕಿಸ್ತಾನ ಭಾರತಕ್ಕೆ ಬೃಹತ್ ಟಾರ್ಗೆಟ್ ನೀಡಿದೆ.
08:29 PM (IST) Sep 21
ಪಂದ್ಯ ಆರಂಭದಲ್ಲೇ ಎಡವಟ್ಟು ಮಾಡಿದ ಟೀಂ ಇಂಡಿಯಾ, ಆದರೂ ಪಾಕ್‌ಗೆ ಖುಲಾಯಿಸಿದ ಅದೃಷ್ಠ, ಬ್ಯಾಟಿಂಗ್ ಇಳಿದ ಪಾಕಿಸ್ತಾನಕ್ಕೆ ಶಾಕ್ ನೀಡುವ ಅವಕಾಶವನ್ನು ಟೀಂ ಇಂಡಿಯಾ ಕೈಚೆಲ್ಲಿದೆ. ಇದಕ್ಕೆ ನಾಯಕ ಸೂರ್ಯುಕಮಾರ್ ಯಾದವ್ ಪ್ರತಿಕ್ರಿಯೆ ಏನು?
07:41 PM (IST) Sep 21
07:35 PM (IST) Sep 21
IND vs Pak ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಏಷ್ಯಾಕಪ್ ಸೂಪರ್ 4 ಹಂತದ ರೋಚಕ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ವೇಳೆ ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿದೆ.
07:16 PM (IST) Sep 21
ಜಾತಿ ಜಾತಿಗೆ ಮೀಸಲಾತಿ ಕೊಡವುದಲ್ಲ, ಅರ್ಥಿಕವಾಗಿ ಅವಶ್ಯಕತೆ ಇರುವರಿಗೆ ನೀಡಿ, ಸುಪ್ರಿಯಾ ಸುಳೆ, ಅಜ್ಜ ಅಜ್ಜಿಗೆ ಸಿಕ್ಕಿದೆ, ಪೋಷಕರಿಗೆ ಸಿಕ್ಕಿದೆ, ಮಕ್ಕಳಿಗೂ ಸಿಗಲಿ ಅನ್ನೋದಲ್ಲ, ಯಾರಿಗೆ ಅಗತ್ಯ ಇದೆ, ಅವರಿಗೆ ನೀಡುವಂತಾಗಬೇಕು ಎಂದು ಸಂಸದೆ ಸುಪ್ರೀಯಾ ಸುಳೆ ಹೇಳಿಕೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
07:13 PM (IST) Sep 21
06:16 PM (IST) Sep 21
ಪ್ರೀತಿಸಿ ಮದುವೆಯಾದ ಜೋಡಿ ಸಂಸಾರಕ್ಕೆ ಹುಳಿ ಹಿಂಡಿದ ನಾಯಿ- ಬೆಕ್ಕು, 8 ತಿಂಗಳಿಗೆ ಡಿವೋರ್ಸ್, ಘಟನೆ ನಡೆದಿದೆ. ಮದುವೆಯಾಗಿ ಅನ್ಯೋನ್ಯವಾಗಿ ಸಂಸಾರ ನಡೆಸಲು ಮುಂದಾದ ಈ ಜೋಡಿಗೆ ತಮ್ಮ ಮುದ್ದಿನ ಸಾಕು ಪ್ರಾಣಿಗಳೇ ಮುಳ್ಳಾಗಿದ್ದು ಹೇಗೆ?
06:16 PM (IST) Sep 21
ಮಲ್ಟಿಬ್ಯಾಗರ್ ಸ್ಟಾಕ್ ಕೇವಲ 2 ವರ್ಷಗಳಲ್ಲಿ ಹೂಡಿಕೆದಾರರಿಗೆ 900% ರಷ್ಟು ಲಾಭ ನೀಡಿದೆ. ಸೆಂಟ್ರಲ್ ಗುಜರಾತ್ ವಿಜ್ ಕಂಪನಿಯಿಂದ 265 ಕೋಟಿ ರೂಪಾಯಿ ಮೌಲ್ಯದ ಬೃಹತ್ ಪ್ರಾಜೆಕ್ಟ್ ಪಡೆದ ನಂತರ ಕಂಪನಿಯ ಷೇರುಗಳ ಮೌಲ್ಯ ನಿರಂತರವಾಗಿ ಏರಿಕೆಯಾಗುತ್ತಿದೆ.
06:08 PM (IST) Sep 21
05:48 PM (IST) Sep 21
ಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ, ನಾಳೆಯಿಂದ ಕಾರು, ಬೈಕ್ ಖರೀದಿ, ಮನೆ ಕಟ್ಟುುವುದು ಕಷ್ಟವಲ್ಲ. ಈ ಕುರಿತ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಮೋದಿ ಕೊಟ್ಟ ಗಿಫ್ಟ್ ಏನು?
05:41 PM (IST) Sep 21
ದುಬೈ: ಏಷ್ಯಾಕಪ್ ಟೂರ್ನಿಯ ಸೂಪರ್-4 ಪಂದ್ಯದಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತದ ಆಡುವ ಹನ್ನೊಂದರ ಬಳಗದಲ್ಲಿ ಈ ಆಟಗಾರನಿಗೆ ಛಾನ್ಸ್ ಕೊಡಿ ಎಂದು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟೀಮ್ ಮ್ಯಾನೇಜ್‌ಮೆಂಟ್‌ಗೆ ಮನವಿ ಮಾಡಿಕೊಂಡಿದ್ದಾರೆ.
05:14 PM (IST) Sep 21
ಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ, ದೇಶದ ಕ್ರಾಂತಿಕಾರ ಜಿಎಸ್‌ಟಿ ಪರಿಷ್ಕರಣೆ ಕುರಿತು ಮೋದಿ ಮಾತನಾಡಿದ್ದು, ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಪ್ರಧಾನಿ ಮೋದಿ ಬಾಷಣದಲ್ಲಿ ಹೇಳಿದ್ದೇನು?
05:13 PM (IST) Sep 21
ಡೊನಾಲ್ಡ್ ಟ್ರಂಪ್ ಕೊನೆಯ ಅಧ್ಯಕ್ಷರಾಗಲಿದ್ದಾರೆ. ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ವೀಟೋ ಪವರ್ ಸಿಗಲಿದ್ದು, ಮಮತಾ ಬ್ಯಾನರ್ಜಿ ಮತ್ತು ನಿತೀಶ್ ಕುಮಾರ್ ಅವರ ರಾಜಕೀಯ ಯುಗಾಂತ್ಯವಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ. ಏನಿದು ವಿಷಯ?
04:52 PM (IST) Sep 21
Drunk Mans Stunt: ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಎತ್ತರದ ಬಿಲ್‌ಬೋರ್ಡ್ ಮೇಲೇರಿ ಮಲಗಿದ್ದಾನೆ. ಬಳಿಕ ಪೊಲೀಸರು ಕ್ರೇನ್ ತರಿಸಿ ಆತನನ್ನು ರಕ್ಷಿಸಿದ್ದಾರೆ. ಚೀನಾದಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕುಡುಕರು ಕಾರನ್ನು ತಳ್ಳಿಕೊಂಡು ಹೋದ ಘಟನೆ ನಡೆದಿದೆ.
04:17 PM (IST) Sep 21
ದುಬೈ: ಏಷ್ಯಾಕಪ್ ಟೂರ್ನಿಯಲ್ಲಿಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಖ ಕನ್ಫರ್ಮ್ ಆಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
04:10 PM (IST) Sep 21
ಭಾರತದ ಮೊದಲ ಖಾಸಗಿ ಚಿನ್ನದ ಗಣಿ ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ. ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ (DGML) ನೇತೃತ್ವದ ಈ ಯೋಜನೆಯು, ದೇಶದ ಚಿನ್ನದ ಆಮದನ್ನು ಕಡಿಮೆ ಮಾಡಿ ಆರ್ಥಿಕತೆಗೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
03:24 PM (IST) Sep 21
ಸಂಜೆ 5 ಗಂಟೆಗೆ ಜನರನ್ನುದ್ದೇಶಿಸಿ ಮೋದಿ ಭಾಷಣ, ಮತ್ತೊಂದು ಮಹತ್ವದ ಘೋಷಣೆ ಇದೆಯಾ? ಆತಂಕ ಕುತೂಹಲ ಮನೆ ಮಾಡಿದೆ. ನೋಟ್ ಬ್ಯಾನ್ ಸೇರಿದಂತೆ ಹಲವು ಘೋಷಣೆಗಳು ಇದೇ ರೀತಿಯ ಜನರನ್ನುದ್ದೇಶಿ ನಡೆಸಿದ ಭಾಷಣದಲ್ಲೇ ಘೋಷಣೆಯಾಗಿತ್ತು. ಆದರೆ ಈ ಬಾರಿಯ ಮೋದಿ ಭಾಷಣದ ಪ್ರಮುಖ ಅಂಶವೇನು?
03:16 PM (IST) Sep 21
ಚೀನಾದ ಸಿಚುವಾನ್‌ನಲ್ಲಿರುವ ಪಾಂಡಾ ಸಂರಕ್ಷಣಾ ಕೇಂದ್ರವು ಪಾಂಡಾಗಳನ್ನು ಮುದ್ದಾಡಿ, ಆರೈಕೆ ಮಾಡುವ ಕೆಲಸಕ್ಕೆ ವಾರ್ಷಿಕ 30 ಲಕ್ಷ ರೂ. ಸಂಬಳವನ್ನು ನೀಡುತ್ತಿದೆ. ಈ ಉದ್ಯೋಗದ ಜೊತೆ ವಸತಿ ಮತ್ತು ಕಾರಿನಂತಹ ಸೌಲಭ್ಯಗಳನ್ನು ನೀಡಲಾಗುತ್ತದೆ. ಈ 'ಕನಸಿನ ಉದ್ಯೋಗ' ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
03:10 PM (IST) Sep 21
ಹಾರರ್ ಸಿನಿಮಾ ಇಂದಿಗೂ ವಿಶ್ವದ ಅತ್ಯಂತ ಭಯಾನಕ ಚಿತ್ರವೆಂದು ಪರಿಗಣಿಸಲ್ಪಟ್ಟಿದೆ. ಶಾಪಗ್ರಸ್ಥ ಎಂದು ಕರೆಯಲ್ಪಡುವ ಈ ಚಿತ್ರವು ಹಲವು ದೇಶಗಳಲ್ಲಿ ನಿಷೇಧಕ್ಕೊಳಗಾಗಿತ್ತು ಮತ್ತು ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿ ಸುಮಾರು 3800 ಕೋಟಿ ರೂ. ಗಳಿಸಿತ್ತು.
02:54 PM (IST) Sep 21
ಬೆಂಗಳೂರು: ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಇದೀಗ ಸೂಪರ್-4 ಪಂದ್ಯಗಳ ಆರಂಭವಾಗಿವೆ. ಇನ್ನು ಇವತ್ತು ಭಾರತ-ಪಾಕಿಸ್ತಾನ ಮ್ಯಾಚ್ ನಡೆಯಲಿದೆ. ಈ ಪಂದ್ಯವನ್ನು ನೀವು ಉಚಿತವಾಗಿ ವೀಕ್ಷಿಸಬಹುದು. ಅದು ಹೇಗೆ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
01:00 PM (IST) Sep 21
12:55 PM (IST) Sep 21
12:55 PM (IST) Sep 21
ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ನಾಳೆಯಿಂದ ಜಾರಿಯಾಗಲಿದ್ದು, ರೈತರು ಬಳಸುವ ಟ್ರ್ಯಾಕ್ಟರ್, ಸ್ಪ್ರಿಂಕ್ಲರ್‌ಗಳು, ಕೊಯ್ಲು ಯಂತ್ರಗಳ ಮೇಲಿನ ಜಿಎಸ್‌ಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಇದರೊಂದಿಗೆ, ವೈದ್ಯಕೀಯ ಉಪಕರಣ, ಕೆಲವು ಅಗತ್ಯ ಔಷಧಿಗಳ ಮೇಲಿನ ತೆರಿಗೆ ಸಹ ಕಡಿಮೆ ಮಾಡಲಾಗಿದೆ.
11:58 AM (IST) Sep 21
ಕೇಂದ್ರ ಸರ್ಕಾರದ ಜಿಎಸ್‌ಟಿ ಇಳಿಕೆ ನಿರ್ಧಾರದಿಂದಾಗಿ 1200 cc ಗಿಂತ ಕಡಿಮೆ ಸಾಮರ್ಥ್ಯದ ಹಲವು ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ದಸರಾ ಹಬ್ಬದ ಸಂದರ್ಭದಲ್ಲಿ ಕಾರು ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಅವಕಾಶವಾಗಿದೆ.
11:13 AM (IST) Sep 21
Lack of Civic Sense: ಭಾರತದಲ್ಲಿ ಅನಕ್ಷರಸ್ಥರಿಗಿಂತ ಕೆಲ ಸುಶಿಕ್ಷಿತರೇ ಅನಾಗರಿಕರಂತೆ ವರ್ತಿಸುತ್ತಾರೆ. ಮರ್ಸಿಡಿಸ್ ಕಾರ್‌ನಲ್ಲಿ ಸಾಗುತ್ತಿದ್ದ ಯುವತಿ ತನ್ನ ಕಾರಿನಲ್ಲಿದ್ದ ಕಸವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದಾಳೆ. ಇದನ್ನು ಪ್ರಶ್ನಿಸಿದ್ದಕ್ಕೆ ಉದ್ಧಟತನದ ಉತ್ತರ ನೀಡಿದ್ದಾಳೆ.
11:06 AM (IST) Sep 21
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಶತಾಯಗತಾಯ ಭಾರತ ಎದುರು ಗೆಲ್ಲಬೇಕು ಎಂದು ಶಪಥ ಮಾಡಿರುವ ಪಾಕಿಸ್ತಾನ ಇದೀಗ, ಸೂಪರ್ 4 ಪಂದ್ಯಕ್ಕೂ ಮುನ್ನ ಹೊಸ ಮಾಸ್ಟರ್ ಪ್ಲಾನ್ ಹಾಗೂ ಹೊಸ ಮನೋಭಾವದೊಂದಿಗೆ ಕಣಕ್ಕಿಳಿಯಲು ತೀರ್ಮಾನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
09:58 AM (IST) Sep 21
09:07 AM (IST) Sep 21
ಸ್ಮೃತಿ ಮಂಧನಾ ಆಸ್ಟ್ರೇಲಿಯಾ ವಿರುದ್ಧ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿ, ಭಾರತೀಯ ಕ್ರಿಕೆಟ್‌ನಲ್ಲಿ (ಪುರುಷ ಮತ್ತು ಮಹಿಳಾ) ವಿರಾಟ್ ಕೊಹ್ಲಿಯವರ ವೇಗದ ಶತಕದ ದಾಖಲೆಯನ್ನು ಮುರಿದರು. ಮಂಧನಾ ಅವರ ಈ ಹೋರಾಟದ ಹೊರತಾಗಿಯೂ, ಬೃಹತ್ ಮೊತ್ತದ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿತು.
08:13 AM (IST) Sep 21
todays news roundup: ಅಮೆರಿಕಾ ಎಚ್1 ಬಿ ವೀಸಾ ಗಡುವು ವಿಸ್ತರಣೆ, ಕೇಂದ್ರ ಸರ್ಕಾರದಿಂದ ಉದ್ದು ಶೇಂಗಾಕ್ಕೆ ಬೆಂಬಲ ಬೆಲೆ, GST ಕಡಿತದ ಬಳಿಕೆ ಕೆಎಂಎಫ್ ನಂದಿನಿ ಉತ್ಪನ್ನಗಳ ಬೆಲೆ ಇಳಿಕೆ, ಬೆಳಗಾವಿಯಲ್ಲಿ ತಿರುಪತಿ ದೇಗುಲ ನಿರ್ಮಾಣ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ಇಂದಿನ ಪ್ರಮುಖ ಸುದ್ದಿಗಳು