ಅಗತ್ಯವಸ್ತು,ಮನೆ, ಟಿವಿ, ವಾಹನ ಖರೀದಿ ಇನ್ನು ಸುಲಭ, ಜನತೆಗೆ ಬಂಪರ್ ಗಿಫ್ಟ್ ಕೊಟ್ಟ ಮೋದಿ, ನಾಳೆಯಿಂದ ಕಾರು, ಬೈಕ್ ಖರೀದಿ, ಮನೆ ಕಟ್ಟುುವುದು ಕಷ್ಟವಲ್ಲ. ಈ ಕುರಿತ ಪ್ರಧಾನಿ ಮೋದಿ ದೇಶದ ಜನತೆಯನ್ನುದ್ದೇಶಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. ಮೋದಿ ಕೊಟ್ಟ ಗಿಫ್ಟ್ ಏನು?
ನವದೆಹಲಿ (ಸೆ.21) ನವರಾತ್ರಿ ಹಬ್ಬದ ಸಂಭ್ರಮಮನ್ನು ಪ್ರಧಾನಿ ಮೋದಿ ಡಬಲ್ ಮಾಡಿದ್ದಾರೆ. ನಾಳೆಯಿಂದ (ಸೆ.22) ನವರಾತ್ರಿ ಹಬ್ಬ ಆರಂಭಗೊಳ್ಳುತ್ತಿದೆ. ಇದರ ಬೆನ್ನಲ್ಲೇ ದೇಶದ ಜನತೆಯನ್ನುದ್ದೇಶಿ ಮಾತನಾಡಿದ ಪ್ರಧಾನಿ ಮೋದಿ, ನಾಳೆಯಿಂದಲೇ ಹಲವರ ಕನಸು ಸಾಕಾರಗೊಳಿಸುಲ ಹಿಂದಿನಷ್ಟು ಪ್ರಯಾಸಪಡಬೇಕಿಲ್ಲ ಎಂದಿದ್ದಾರೆ. ಮನೆ ಕಟ್ಟುವುದು, ಬೈಕ್, ಸ್ಕೂಟರ್, ಕಾರು ಸೇರಿ ವಾಹನ ಖರೀದಿ, ಅಗತ್ಯವಸ್ತುಗಳ ಖರೀದಿ, ದಿನ ಬಳಕೆ ವಸ್ತುಗಳು, ಔಷಧಿ ಸೇರಿದಂತೆ ಹಲವು ಸೇವೆಗಳು ಸುಲಭವಾಗಿ ಕೈಗೆಟುಕಲಿದೆ ಎಂದು ಮೋದಿ ಹೇಳಿದ್ದಾರೆ. ನಾಳೆಯಿದಂ ಪರಿಷ್ಕೃತ ಜಿಎಸ್‌ಟಿ ನೀತಿ ಜಾರಿಯಾಗುತ್ತಿದೆ. ಹೀಗಾಗಿ ಹಲವು ವಸ್ತುಗಳ ಬೆಲೆ ಇಳಿಕೆಯಾಗುತ್ತಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ನಿಮ್ಮ ಕನಸು ಸಾಕಾರ, ಹಣವೂ ಉಳಿತಾಯ
ಪ್ರಮುಖವಾಗಿ ಹಲವು ವಸ್ತುಗಳಿಗೆ ಶೂನ್ಯ ತೆರಿಗೆ, ದಿನ ಬಳಕೆ ವಸ್ತುಗಳಿಗೆ ಶೇಕಡಾ 5ರಷ್ಟು ತೆರಿಗೆ ಸೇರಿದಂತೆ ಜಿಎಸ್‌ಟಿಯಲ್ಲಿ ಮಹತ್ತರ ಬದಾಲಾವಣೆ ಮಾಡಲಾಗಿದೆ. ನವರಾತ್ರಿ ಹಬ್ಬದ ಆರಂಭದ ದಿನವಾದ ನಾಳೆ ಬೆಳಗ್ಗಿನ ಸೂರ್ಯೋದಯ ಸಿಹಿಯೊಂದಿಗೆ ಆರಂಭಗೊಳ್ಳಲಿದೆ. ಮಧ್ಯರಾತ್ರಿ 12 ಗಂಟೆಯಿಂದ ಜಿಎಸ್‌ಟಿ ಹೊಸ ನೀತಿ ಜಾರಿಯಾಗುತ್ತಿದೆ ಎಂದಿದ್ದಾರೆ. ನಿಮ್ಮ ಕನಸುಗಳನ್ನು ಸಾಕಾರಗೊಳಿಸುವುದು ಈಗ ಸುಲಭ. ಮನೆ ಕಟ್ಟುವುದು, ಟಿವಿ, ಫ್ರಿಡ್ಜ್ ಸೇರಿ ಎಲೆಕ್ಟ್ರಾನಿಕ್ ವಸ್ತು ಖರೀದಿ, ಸ್ಕೂಟರ್, ಬೈಕ್, ಕಾರು ಸೇರಿದಂತೆ ಹಲವು ವಸ್ತುಗಳ ಖರೀದಿ ಮೇಲೆ ನೀವು ಕಡಿಮೆ ಖರ್ಚು ಮಾಡಿದರೆ ಸಾಕು. ನಾಳೆಯಿಂದ ಇದರ ಮೇಲೆ ಜಿಎಸ್‌ಟಿ ಭಾರಿ ಇಳಿಕೆಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಮೋದಿ ಭಾಷಣ Live, ನವರಾತ್ರಿ ಹಬ್ಬಕ್ಕೆ ದೇಶದ ಜನತೆಗೆ ಸಿಹಿ ಹಂಚಿದ ಪ್ರಧಾನಿ
ಪ್ರವಾಸ, ಹೊಟೆಲ್ ತಂಗಲು ಖರ್ಚು ಕಡಿಮೆ
ಪ್ರವಾಸ ಮಾಡುವುದು, ಹೊಟೆಲ್‌ನಲ್ಲಿ ಉಳಿದುಕೊಳ್ಳಲು ಹೆಚ್ಚು ಖರ್ಚು ಮಾಡಬೇಕಿಲ್ಲ. ಹೆಚ್ಚಿನ ಹೊಟೆಲ್ ಮೇಲಿನ ಜಿಎಸ್‌ಟಿ ಕಡಿಮೆ ಮಾಡಲಾಗಿದೆ. ಪ್ರತಿಯೊಬ್ಬರಿಗೆ ಅಂದರೆ ಗ್ರಾಹಕರು ಹಾಗೂ ವ್ಯಾಪಾರಿಗಳು, ಉದ್ಯಮಿಗಳೂ ಇದು ಲಾಭ ತಂದುಕೊಡಲಿದೆ. ನಾಗರೀಕ ದೇವೋಭವ ಮಂತ್ರದೊಂದಿಗೆ ನಾವು ಮುನ್ನಡೆಯುತ್ತಿದ್ದೇವೆ.
ಮಧ್ಯಮ ವರ್ಗಕ್ಕೆ ಡಬಲ್ ಬೋನಸ್
ಮಧ್ಯಮ ವರ್ಗಕ್ಕೆ ಇದು ಡಬಲ್ ಬೋನಸ್ ಎಂದು ಮೋದಿ ಹೇಳಿದ್ದಾರೆ. ಆಹಾರ ವಸ್ತುಗಳು, ಔಷಧಿ, ಬ್ರೆಶ್,ಪೇಸ್ಟ್, ಆರೋಗ್ಯಸೇವೆಗಳು ಸೇರಿದಂತೆ ಹಲವು ಸೇವೆ ಹಾಗೂ ವಸ್ತುಗಳ ಮೇಲೆ ತೆರಿಗೆ ಸಂಪೂರ್ಣ ಶೂನ್ಯ ಅಥವಾ ತೆರಿಗೆ ಇಳಿಕೆ ಮಾಡಲಾಗಿದೆ ಎಂದು ಮೋದಿ ಹೇಳಿದ್ದಾರೆ.
ಗರ್ವದಿಂದ ಹೇಳಿ ಸ್ವದೇಶಿ
ದೇಶದ ಸಮದ್ಧಿಯನ್ನು ಸ್ವದೇಶಿ ಮಂತ್ರದಿಂದ ಸಾಧಿಸಲು ಸಾಧ್ಯವಿದೆ. ನಮ್ಮ ಪ್ರತಿ ದಿನದ ಜೀವನದಲ್ಲಿ ವಿದೇಶಿ ವಸ್ತುಗಳು ನಮಗೆ ಗೊತ್ತಿಲ್ಲದೆ ಬಂದಿದೆ. ನಾವು ಬಳಸುವ ವಸ್ತುಗಳು ವಿದೇಶ ವಸ್ತುಗಳು ಆಗಿರುತ್ತವೇ. ಆದರೆ ನಾವು ಖರೀದಿಸುವ ವಸ್ತು, ಬಳಸುವ ವಸ್ತುಗಳು ಮೇಡ್ ಇನ್ ಇಂಡಿಯಾ ಆಗಬೇಕು. ನಮ್ಮ ಪ್ರತಿ ಮನೆ ಸ್ವದೇಶಿ ವಸ್ತುಗಳಿಂದ ತುಂಬಿರಬೇಕು. ಗರ್ವದಿಂದ ಹೇಳಿ ನಾನು ಸ್ವದೇಶಿ ಎಂದು. ಇದರಿಂದ ನಮ್ಮ ಸಣ್ಣ ಸಣ್ಣ ವ್ಯಾಪಾರ, ಕಂಪನಿಗಳು, ವಸ್ತುಗಳು, ಉತ್ಪನ್ನಗಳಿಗೆ ಮಾರುಕಟ್ಟೆ ಸಿಗಲಿದೆ. ಇದರಿಂದ ಆತ್ಮನಿರ್ಭರ ಭಾರತ ಸಾಧ್ಯವಾಗಲಿದೆ. ಸ್ವದೇಶಿ ಅಭಿಯಾನಕ್ಕೆ ವೇಗ ನೀಡಲು ಪ್ರತಿ ರಾಜ್ಯಗಳಲ್ಲಿ ಮನವಿ ಮಾಡುತ್ತೇನೆ. ಸ್ವದೇಶಿ ವಸ್ತುಗಳ ಉತ್ಪಾದನೆಗೆ ರಾಜ್ಯಗಳು ಪ್ರೋತ್ಸಾಹ ನೀಡಬೇಕು ಎಂದು ಮೋದಿ ಹೇಳಿದ್ದಾರೆ. ಇದರಿಂದ ಭಾರತ ಹಾಗೂ ಪ್ರತಿ ರಾಜ್ಯಗಳು ಅಭಿವೃದ್ಧಿಯಾಗುತ್ತದೆ ಎಂದು ಮೋದಿ ಹೇಳಿದ್ದಾರೆ.
