ಹಲವು ಪತಿಯಂದಿರು ತಮ್ಮ ಪತ್ನಿಯರನ್ನು ಹೊಗಳುವುದರಲ್ಲಿ ಕಂಜೂಸುತನ ತೋರುತ್ತಾರೆ. ಆದರೆ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಭಾನುವಾರದಂದು 'ಪತ್ನಿಯನ್ನು ಹೊಗಳುವ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಮಹತ್ವ ಮತ್ತು ನಿಮ್ಮ ಪತ್ನಿಯನ್ನು ಏಕೆ ಪ್ರಶಂಸಿಸಬೇಕು ಎಂಬುದನ್ನು ಈ ಲೇಖನ ವಿವರಿಸುತ್ತದೆ.
'ಹೆಂಡತಿಯೊಬ್ಬಳು ಮನೆಯೊಳಗಿದ್ದರೆ...' ಎನ್ನುವ ಹಾಡನ್ನು ಕೇಳೇ ಇರ್ತೀರಿ ಅಲ್ವಾ? ಕವಿ ಕೆ.ಎಸ್. ನರಸಿಂಹಸ್ವಾಮಿ ಅವರು ಬರೆದಿರುವ ಈ ಹಾಡನ್ನು ಹಲವರು ಗುನುಗುತ್ತಿರುತ್ತಾರೆ. ಅದರಲ್ಲಿಯೂ ಹೆಂಡತಿ ಮನೆಯಲ್ಲಿ ಇಲ್ಲದೇ ಬೇರೆಡೆ ಹೋಗಿದ್ದ ಸಂದರ್ಭದಲ್ಲಿ ಹೊಟ್ಟೆ ಚುರುಕ್ ಎಂದಾಗಲೋ ಇಲ್ಲವೇ ಅಡುಗೆ ಮಾಡಿದ್ದರೆ ಸಿಂಕ್ನಲ್ಲಿ ಪಾತ್ರೆ ನೋಡಿದಾಗಲೋ ಈ ಹಾಡು ಒಮ್ಮೆ ಹಲವು ಪತಿಯಂದಿರಿಗೆ ನೆನಪಿಗೆ ಬರುವುದು ಉಂಟು. ಪತಿ-ಪತ್ನಿ ಸಮಾನರು, ಪುರುಷ- ಮಹಿಳೆಯರು ಸಮಾನರು ಎಂದು ಎಷ್ಟೇ ಹೇಳಿದರೂ ಒಂದಿಷ್ಟು ಮನೆಯ ಕೆಲಸದ ವಿಷಯದಲ್ಲಿ ಹೆಣ್ಣಾದವಳು ರಾಜಿ ಮಾಡಿಕೊಳ್ಳುವುದು ಇದೆ. ಹಲವು ಬಾರಿ ಇದು ಅನಿವಾರ್ಯವೂ ಹೌದು. ವಿಷ್ಯ ಏನೇ ಇರಲಿ, ಮನೆಯಲ್ಲಿ ಹೆಣ್ಣು ಇದ್ದರೇನೇ ಅದಕ್ಕೊಂದು ಕಳೆ ಎನ್ನುವುದನ್ನು ಮಾತ್ರ ಯಾರೂ ಅಲ್ಲಗಳೆಯುವುದಿಲ್ಲ.
ಹೊಗಳೋ ವಿಷ್ಯದಲ್ಲಿ ಕಂಜೂಸು
ಗೃಹಿಣಿಯಾಗಲೀ, ಕೆಲಸಕ್ಕೆ ಹೋಗುವ ಮಹಿಳೆಯೇ ಆಗಲಿ ಎಲ್ಲವನ್ನೂ ನಿಭಾಯಿಸಿದರೂ, ಹಲವು ಪತಿಯಂದಿರು ಪತ್ನಿಯನ್ನು ಬಾಯ್ತುಂಬ ಹೊಗಳುವಲ್ಲಿ ಸ್ವಲ್ಪ ಕಂಜೂಸೇ ಸರಿ. ಅದು ಅವಳ ಕೆಲಸ, ಮಾಡಿದ್ದಾಳೆ ಅಷ್ಟೇ ಎಂದುಕೊಳ್ಳುವ ಗಂಡಸರೇ ಹೆಚ್ಚು. ಅಡುಗೆಯ ವಿಷಯದಲ್ಲಾಗಲೀ, ಚೆನ್ನಾಗಿ ಡ್ರೆಸ್ ಮಾಡಿಕೊಂಡಾಗಲಾಗಲೀ ತನ್ನ ಪತಿ ಒಂಚೂರಾದ್ರೂ ಹೊಗಳಲಿ ಎಂದು ಬಯಸುವ ಹೆಣ್ಣುಮಕ್ಕಳು ತುಂಬಾ ಜನ ಇದ್ದಾರೆ. ಆದರೆ ಗಂಡಸರಿಗೆ ಅದು ಅಷ್ಟಕ್ಕಷ್ಟೇ. ಯಾವಾಗ್ಲೂ ಚೆನ್ನಾಗಿ ಅಡುಗೆ ಮಾಡ್ತಾಳೆ, ಚೆನ್ನಾಗಿ ಶೃಂಗಾರ ಮಾಡಿಕೊಳ್ತಾಳೆ ಮತ್ತೇನು ಹೇಳೋದು ಎಂದು ಕೆಲವರು ಅಂದುಕೊಂಡು ಸುಮ್ಮನಾದರೆ, ಮತ್ತೆ ಕೆಲವರಿಗೆ ಪತ್ನಿಯಲ್ಲಿ ಯಾವ ಬದಲಾವಣೆಯೂ ಕಾಣೋದೇ ಇಲ್ಲ. ಹಾಗೆಂದು ಎಲ್ಲಾ ಪತ್ನಿಯರೂ ಪತಿಯನ್ನು ಹೊಗಳ್ತಾ ಇರುತ್ತಾರೆ ಎಂದು ಅರ್ಥವೇನಲ್ಲ. ಅವರದ್ದೂ ಅದೇ ಕಥೆ ಬಿಡಿ.
ಇದನ್ನೂ ಓದಿ: ಪುರುಷರ ಬೆವರ ವಾಸನೆಯಿಂದ ಮಹಿಳೆಯರಿಗೆ ಏನೇನೋ ಸುಖ ಸಿಗತ್ತಂತೆ! ಅಧ್ಯಯನ ಏನ್ ಹೇಳಿದೆ ನೋಡಿ
ಇವತ್ತು ಪತ್ನಿಯನ್ನು ಹೊಗಳಿದ್ರಾ?
ಇರಲಿ ಬಿಡಿ. ಬೇರೆ ದಿನದ ವಿಷಯ ಸದ್ಯಕ್ಕೆ ಬಿಡಿ. ಇವತ್ತು ಅರ್ಥಾತ್ ಈ ಸಲದ ಸೆಪ್ಟೆಂಬರ್ 21ರಂದು ನೀವು ಪತ್ನಿಯನ್ನು ಇದುವರೆಗೆ ಹೊಗಳದೇ ಇದ್ದರೆ ದೊಡ್ಡ ತಪ್ಪು ಮಾಡಿಬಿಟ್ಟಿದ್ದೀರಿ! ಇನ್ನೇನು ಕೆಲವೇ ಗಂಟೆಗಳಲ್ಲಿ ಸೆಪ್ಟೆಂಬರ್ 21 ಮುಗಿದೇ ಹೋಗುತ್ತದೆ. ಸ್ವಲ್ಪ ಅಡ್ಜಸ್ಟ್ ಮಾಡಿಕೊಂಡಾದ್ರೂ, ಕಂಜೂಸ್ತನ ಬದಿಗಿಟ್ಟು ಪತ್ನಿಯನ್ನು ಮನಸಾರೆ ಹೊಗಳಿ ಬಿಡಿ. ಅದ್ಯಾಕೆ ಅಂತೀರಾ? ಇವತ್ತು ಸೂರ್ಯ ಗ್ರಹಣ ಅಂತ ಅಲ್ಲ ಮತ್ತೆ. ಅದ್ಯಾಕೆ ಎಂದರೆ ಇವತ್ತು ಪತ್ನಿಯನ್ನು ಹೊಗಳುವ ದಿನ (Wife appreciation day) ಅದಕ್ಕೇ!
ಮೂಗು ಮುರೀಬೇಡಿ
ಒಂದೊಂದು ದಿನಕ್ಕೆ ಒಂದೊಂದು ಡೇ ಇರುತ್ತೆ ಎಂದು ಮೂಗು ಮುರಿಯೋದು ಬೇಡ. ಪ್ರತಿದಿನವೂ ಅಪ್ಪ-ಅಮ್ಮ, ಪತಿ-ಪತ್ನಿ, ಸಂಬಂಧಿಕರು ಯಾರನ್ನು ಹೊಗಳಲು, ಅವರ ಬಳಿ ಕುಳಿತು ನಾಲ್ಕು ಚೆನ್ನಾಗಿ ಮಾತನಾಡಲು ಹಲವರಿಗೆ ಟೈಮೇ ಇಲ್ಲ. ಅದೇ ಕಾರಣಕ್ಕೆ ವರ್ಷಕ್ಕೆ ಒಮ್ಮೆಯಾದರೂ ಹೀಗೆ ಮಾಡಿ ವರ್ಷದ ಸಾಲ ತೀರಿಸಿಬಿಡಿ ಎನ್ನುವ ಕಾರಣಕ್ಕೆ ಇಂಥ ಡೇ ಗಳನ್ನು ಆಚರಿಸಲಾಗುತ್ತದೆ. ಇನ್ನು Wife appreciation day ಕುರಿತು ಹೇಳುವುದಾದರೆ, ಪ್ರತಿ ವರ್ಷದ ಸೆಪ್ಟೆಂಬರ್ ಮೂರನೆಯ ಭಾನುವಾರ ಈ ದಿನವನ್ನು ಆಚರಿಸಲಾಗುತ್ತದೆ. ಇದೇ ಕಾರಣಕ್ಕೆ ಇನ್ನೂ ಹೇಳದಿದ್ದರೆ ಪತ್ನಿಗೆ ಥ್ಯಾಂಕ್ಸ್ ಹೇಳಿಬಿಡಿ. ಇವತ್ತು ಸಾಧ್ಯವಾಗದಿದ್ರೆ ನಾಳೆನೋ, ನಾಡಿದ್ದೋನೋ ಹೇಳಿದ್ರೂ ಓಕೆ. ನಿಮಗೆ ಮನಸ್ಸು ಇರ್ಬೇಕು ಅಷ್ಟೇ ಏನಂತೀರಾ?
ಇದನ್ನೂ ಓದಿ: ದೇಹದ ಈ ಭಾಗಗಳಲ್ಲಿ Birth Mark ಇದ್ದರೆ ಮಹಾ ರಸಿಕರು, ಹೆಚ್ಚು ಸಂಬಂಧ ಗ್ಯಾರೆಂಟಿ! ಎಲ್ಲೆಲ್ಲಿ ನೋಡಿ...
