ದಾದಿಯಾಗುವ ಕನಸು ಕಂಡಿದ್ದ ಅಲೆ ಗೌಚಾ ಎಂಬ ಯುವತಿಗೆ ತನ್ನ ಅತಿಯಾದ ಸೌಂದರ್ಯವೇ ಮುಳುವಾಗಿದೆ. 50ಕ್ಕೂ ಹೆಚ್ಚು ಸಂದರ್ಶನಗಳಲ್ಲಿ ತಿರಸ್ಕೃತಗೊಂಡ ನಂತರ, ಆಕೆ ಸೋಷಿಯಲ್ ಮೀಡಿಯಾದಲ್ಲಿ ಯಶಸ್ಸು ಕಂಡುಕೊಂಡಿದ್ದು, ತನ್ನ ಸೌಂದರ್ಯದಿಂದಾಗಿ ಮಹಿಳೆಯರು ತನಗೆ ಕೆಲಸ ನೀಡಲು ಹಿಂಜರಿದರು ಎಂದು ಹೇಳಿಕೊಂಡಿದ್ದಾಳೆ.
ಸಾಮಾನ್ಯವಾಗಿ ಜನರಿಗೆ ಉದ್ಯೋಗಕ್ಕೆ ತಕ್ಕಂಥ ಅರ್ಹತೆ ಇಲ್ಲ ಎಂದು ಕೆಲಸ ಸಿಗುವುದಿಲ್ಲ. ಅರ್ಹತೆ ಇದ್ದರೂ ಸಂದರ್ಶನದಲ್ಲಿ ವಿಫಲವಾಗುವ ಕಾರಣಕ್ಕೆ ಕೆಲಸ ಪಡೆದುಕೊಳ್ಳಲು ಆಗುವುದಿಲ್ಲ. ಮತ್ತೆ ಕೆಲವೊಂದು ಸಲ, ತಮ್ಮ ಅರ್ಹತೆಗೆ ತಕ್ಕಂತೆ ಉದ್ಯೋಗ ಇಲ್ಲ ಎಂದು ಆ ಕೆಲಸಕ್ಕೆ ಇವರು ಹೋಗುವುದಿಲ್ಲ. ಮತ್ತೆ ಕೆಲವೊಮ್ಮೆ ಉದ್ಯೋಗ ಪಡೆದುಕೊಳ್ಳಲು ಲಂಚ ಕೊಡುವಷ್ಟು ಹಣ ಇಲ್ಲದೇ ಇರುವುದಕ್ಕೆ ಅರ್ಹತೆ ಇದ್ದರೂ ಕೆಲಸ ದಕ್ಕುವುದಿಲ್ಲ. ಇವೆಲ್ಲಾ ನಿತ್ಯ ಜೀವನದಲ್ಲಿ ಮಾಮೂಲಾಗಿದೆ. ಆದರೆ ಇಲ್ಲೊಬ್ಬ ಯುವತಿಗೆ ಸೌಂದರ್ಯ ಹೆಚ್ಚಾಗಿರೋ ಕಾರಣ ಕೆಲಸ ಸಿಗ್ತಿಲ್ವಂತೆ! ಕೆಲವು ಉದ್ಯೋಗಕ್ಕೆ ಸೌಂದರ್ಯ ನೋಡುವುದು ಇದ್ದೇ ಇದೆ. ಆದರೆ ಸೌಂದರ್ಯ ಹೆಚ್ಚಾಯ್ತು ಎನ್ನೋ ಕಾರಣಕ್ಕೆ ಕೆಲಸ ಸಿಕ್ತಿಲ್ಲಾ ಎನ್ನೋದು ಈಕೆ ಗೋಳು. ತನ್ನ ದೇಹದ ಸೌಂದರ್ಯ ಮತ್ತು ಆಕೃತಿಯನ್ನು ನೋಡಿ ಜನರು ನನ್ನನ್ನು ಉದ್ಯೋಗಕ್ಕೆ ನೇಮಿಸಿಕೊಳ್ತಿಲ್ಲ ಎಂದು ಈ ಸೋಷಿಯಲ್ ಮೀಡಿಯಾ ಸ್ಟಾರ್ ಹೇಳಿಕೊಂಡಿದ್ದಾಳೆ. ನನಗೆ ಉದ್ಯೋಗದ ಎಲ್ಲಾ ಅರ್ಹತೆ ಇದ್ದರೂ, ಸಂದರ್ಶನಗಳನ್ನೂ ಚೆನ್ನಾಗಿ ಮಾಡಿದರೂ 50ಕ್ಕೂ ಹೆಚ್ಚು ಕಡೆಗಳಲ್ಲಿ ನನ್ನನ್ನು ರಿಜೆಕ್ಟ್ ಮಾಡಿದ್ದಾರೆ ಎಂದು ಅದಕ್ಕೆ ಸೌಂದರ್ಯದ ಕಾರಣ ಕೊಟ್ಟಿದ್ದಾಳೆ ಈ ಯುವತಿ.
ದಾದಿಯಾಗುವ ಕನಸು ಭಗ್ನ
ಈಕೆ ಹೆಸರು, ಅಲೆ ಗೌಚಾ. ವಯಸ್ಸು 21 ವರ್ಷ ವಯಸ್ಸು. ಬ್ರೆಜಿಲ್‌ನ ಪೋರ್ಟೊ ಅಲೆಗ್ರೆ ನಿವಾಸಿ ಮತ್ತು ಯಶಸ್ವಿ ಸಾಮಾಜಿಕ ಮಾಧ್ಯಮ ಪ್ರಭಾವಿ. ಈಕೆ ದಾದಿಯ ಕೆಲಸದಲ್ಲಿ ಅರ್ಹತೆ ಪಡೆದುಕೊಂಡಿದ್ದಾಳೆ. ಪೋಷಕರು ತಮ್ಮ ಮಕ್ಕಳನ್ನು ದಿನವಿಡೀ ನೋಡಿಕೊಳ್ಳಲು ದಾದಿಯರನ್ನು ನೇಮಿಸಿಕೊಳ್ಳುತ್ತಾರೆ, ಇದರಿಂದ ಅವರು ಆರಾಮವಾಗಿ ಕೆಲಸಕ್ಕೆ ಹೋಗಲು ಅವಕಾಶ ಸಿಗುತ್ತದೆ. ವಿದೇಶಗಳಲ್ಲಿ ಈ ಪರಿಕಲ್ಪನೆ ತುಂಬಾ ಹಳೆಯದು. ಈ ಕೆಲಸಕ್ಕೆ ಭಾರಿ ಡಿಮಾಂಡ್ ಮತ್ತು ಸಂಬಳ ಕೂಡ ಅಷ್ಟೇ ಹೆಚ್ಚಿದೆ. ಇದೇ ಉದ್ಯೋಗವನ್ನು ಮಾಡುವ ಆಸೆ ಇತ್ತು ಅಲೆ ಗೌಚಾಗೆ. ಆದರೆ, ಅವಳು ಇದಾಗಲೇ 50 ಸಂದರ್ಶನಗಳನ್ನು ನೀಡಿದ್ದಾಳೆ. ತಾನು ದಾದಿಯಾಗಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವ ಬಗ್ಗೆ ಹೇಳಿದರೂ, ಪ್ರತಿ ಬಾರಿಯೂ ವಿಫಲನಾಗುತ್ತಿದ್ದೇನೆ ಎಂದು ನೋವು ತೋಡಿಕೊಂಡ ಇವಳಿಗೆ ಆರಂಭದಲ್ಲಿ ಇದಕ್ಕೆ ಕಾರಣ ಏನು ಎಂದು ತಿಳಿಯಲಿಲ್ಲವಂತೆ.
ಇದನ್ನೂ ಓದಿ: ಮುಖಕ್ಕೆ ಫೇಷಿಯಲ್ ಮಾಡಿಸೋದೇ ಇಲ್ಲ... ಎನ್ನುತ್ತಲೇ ಬ್ಯೂಟಿ ಸೀಕ್ರೇಟ್ ಬಿಚ್ಚಿಟ್ಟ ಬಿಗ್ಬಾಸ್ ಅನುಷಾ ರೈ
ಸೌಂದರ್ಯವೇ ಮುಳುವಾಯ್ತಂತೆ!
ಕೊನೆಗೆ ಕೆಲವರ ಬಳಿ ಕಾರಣ ತಿಳಿದಾಗ ಶಾಕ್ ಆಯ್ತುಂತೆ. ತನ್ನ ಸೌಂದರ್ಯ ಮತ್ತು ಅಂಗಸೌಷ್ಠವ ನೋಡಿ ಮನೆಯಲ್ಲಿರುವ ಗಂಡಸರು ಡಿಸ್ಟರ್ಬ್ ಆಗ್ತಾರೆ ಎಂದು ಹೆಂಗಸರು ಹೊಟ್ಟೆ ಉರಿದುಕೊಳ್ತಿರೋ ಕಾರಣ ನನಗೆ ಕೆಲಸ ಸಿಗುತ್ತಿಲ್ಲ. ನಾನು ಇಷ್ಟು ಸುಂದರಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಎಂದಿದ್ದಾಳೆ ಈಕೆ! ಎಲ್ಲರೂ ನನ್ನ ಪದವಿಗಿಂತ ನನ್ನ ಮೈಮಾಟಕ್ಕೆ ಆಕರ್ಷಿತರಾದರು. ಈ ಹುದ್ದೆಯಲ್ಲಿ ಸಕಲ ಅರ್ಹತೆ ಹೊಂದಿದ್ದರೂ ಇದೇ ಕಾರಣಕ್ಕೆ ನನ್ನನ್ನು ಯಾರೂ ನೇಮಿಸಿಕೊಳ್ಳುತ್ತಿಲ್ಲ ಎಂದಿದ್ದಾಳೆ ಅಲೆ ಗೌಚಾ.
ಸೋಷಿಯಲ್ ಮೀಡಿಯಾ ಸ್ಟಾರ್
ಮೂರು ವರ್ಷಗಳ ಹಿಂದೆ ದಾದಿಯ ಕೋರ್ಸ್ ಮುಗಿಸಿದ ನಂತರ, ಮಕ್ಕಳನ್ನು ನೋಡಿಕೊಳ್ಳುವ ಮೂಲಕ ಆರ್ಥಿಕ ಸ್ವಾತಂತ್ರ್ಯವನ್ನು ಸಾಧಿಸುವ ಕನಸು ಕಂಡಿದ್ದೆ. ಆದರೆ ವಿಧಿ ಅವಳಿಗೆ ಬೇರೆಯದೇ ಮಾರ್ಗವನ್ನು ಆರಿಸಿಕೊಂಡಿದೆ ಎಂದು ನೋವು ತೋಡಿಕೊಂಡಿದ್ದಾರೆ. ಆರಂಭದಲ್ಲಿ, ನನ್ನ ಅನುಭವದ ಕೊರತೆಯು ದೊಡ್ಡ ಅಡಚಣೆಯಾಗಿದೆ ಎಂದು ಅವಳು ಭಾವಿಸಿದ್ದೆ. ಆದರೆ ಪದೇ ಪದೇ ವಿಫಲವಾದ ನಂತರ, ನಿಜವಾದ ಕಾರಣ ಬೇರೇನೋ ಎಂದು ಅವಳು ಅರಿತುಕೊಂಡೆ. ಜನರು ತನ್ನ ಅರ್ಹತೆಗಳು ಮತ್ತು ಪ್ರಮಾಣಪತ್ರಗಳಿಗಿಂತ ತನ್ನ ಸೌಂದರ್ಯ ಮತ್ತು ಆಕೃತಿಯ ಮೇಲೆ ಹೆಚ್ಚು ಗಮನಹರಿಸಿರುವುದು ತಿಳಿಯಿತು. ನಾನು ಆತ್ಮವಿಶ್ವಾಸದಿಂದ ಹೋಗುತ್ತಿದ್ದೆ, ನನ್ನ ಪ್ರಮಾಣಪತ್ರಗಳನ್ನು ತೋರಿಸುತ್ತಿದ್ದೆ, ನಾನು ಕಲಿತದ್ದನ್ನು ವಿವರಿಸುತ್ತಿದ್ದೆ, ಆದರೆ ಯಾರೂ ಪ್ರತಿಕ್ರಿಯಿಸುತ್ತಿರಲಿಲ್ಲ, ಆ ಬಳಿಕ ಸಂದರ್ಶನಕ್ಕೆ ಹೋಗುವುದನ್ನೇ ಬಿಟ್ಟೆ ಎಂದಿದ್ದಾಳೆ.
ಇದನ್ನೂ ಓದಿ: ಹೇರ್ಸ್ಟೈಲ್ಗಾಗಿ ಬ್ಯೂಟಿ ಪಾರ್ಲರ್ಗೆ ಹೋಗುವವರೇ ಎಚ್ಚರ ಎಚ್ಚರ! ಎಡವಟ್ಟಾದರೆ ಭಾರಿ ಅನಾಹುತ...
ಸುಳ್ಳು ಹೇಳಬೇಡ ಎಂದ ಕಮೆಂಟಿಗರು
ಕೊನೆಗೆ ಬೇರೆ ದಾರಿ ಕಾಣದೇ, ಹೊಸ ಅವಕಾಶ ಹುಡುಕಿದ ಅಲೆ ಗೌಚಾ, ಸಂಪೂರ್ಣವಾಗಿ ಸಾಮಾಜಿಕ ಮಾಧ್ಯಮದ ಮೇಲೆ ಕೇಂದ್ರೀಕರಿಸಲು ಪ್ರಾರಂಭಿಸಿದಳು. ಕ್ರಮೇಣ, ಫ್ಯಾನ್ಸ್ ಸಂಖ್ಯೆ ಬೆಳೆಯುತ್ತಾ ಬಂತು. ಇಂದು ಈಕೆಗೆ ಐದೂವರೆ ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ವಿಷಯ ರಚನೆಯ ಮೂಲಕ ಗುರುತು ಮತ್ತು ಆರ್ಥಿಕ ಸ್ವಾತಂತ್ರ್ಯ ಎರಡನ್ನೂ ಕಂಡುಕೊಂಡಿದ್ದಾಳಂತೆ! ಆದರೆ ಇವಳ ಕಥೆ ನೋಡಿದವರು, ಎಲ್ಲರೂ ಅಸೂಯೆ ಪಡುವಷ್ಟು ಸುಂದರವಾಗಿ ನೀನೇನೂ ಇಲ್ಲ ಬಿಡು, ಎಷ್ಟೋ ಮಂದಿ ಸುಂದರಿಯರು ಇದ್ದಾರೆ. ಕಟ್ಟು ಕಥೆ ಹೇಳಬೇಡ ಎನ್ನುತ್ತಿದ್ದಾರೆ.
