ಪಾಕಿಸ್ತಾನ ವಿರುದ್ದ ಟಾಸ್ ಗೆದ್ದ ಟೀಂ ಇಂಡಿಯಾ, ಏಷ್ಯಾಕಪ್‌ನಲ್ಲಿ ಮತ್ತೆ ಶತ್ರು ರಾಷ್ಟ್ರಕ್ಕೆ ಮುಖಭಂಗ, ಏಷ್ಯಾಕಪ್ ಸೂಪರ್ 4 ಹಂತದ ರೋಚಕ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಸಜ್ಜಾಗಿದೆ. ಟಾಸ್ ವೇಳೆ ಮತ್ತೆ ಪಾಕಿಸ್ತಾನ ಮುಖಭಂಗ ಅನುಭವಿಸಿದೆ. 

ದುಬೈ (ಸೆ.21) ಭಾರತ ಹಾಗೂ ಪಾಕಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯ ಆರಂಭಗೊಂಡಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂಇಂಡಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ. ಇಂದೂ ಕೂಡ ಪಾಕಿಸ್ತಾನ ಮುಖಭಂಗ ಅನುಭವಿಸಿದೆ. ಟಾಸ್ ವೇಳೆ ನಾಯಕ ಸೂರ್ಯಕುಮಾರ್ ಯಾದವ್ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿಗೆ ಹ್ಯಾಂಡ್‌ಶೇಕ್ ಮಾಡಿಲ್ಲ. ಪಾಕಿಸ್ತಾನ ಹ್ಯಾಂಡ್‌ಶೇಕ್ ನೀರೀಕ್ಷೆಯಲ್ಲಿದ್ದರೂ ಭಾರತ ತನ್ನ ನಿರ್ಧಾರ ಬದಲಿಸಿಲ್ಲ.

ಟೀಂ ಇಂಡಿಯಾ ಪ್ಲೇಯಿಂಗ್ 11

ಅಭಿಷೇಕ್ ಶರ್ಮಾ, ಶುಬಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್(ನಾಯಕ), ತಿಲಕ್ ವರ್ಮಾ, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ

ಪಾಕಿಸ್ತಾನ ಪ್ಲೇಯಿಂಗ್ 11

ಸಯೀಮ್ ಆಯುಬ್, ಶಾಹಿಬ್‌ಜದಾ, ಫರ್ಹಾನ್, ಫಕರ್ ಜಮಾನ್, ಸಲ್ಮಾನ್ ಅಘಾ (ನಾಯಕ), ಹುಸೈನ್ ತಲಟ್, ಮೊಹ್ಮದ್ ಹ್ಯಾರಿಸ್, ಮೊಹಮ್ಮದ್ ನವಾಜ್, ಫಹೀಮ್ ಅಶ್ರರಫ್, ಶಾಹೀನ್ ಆಫ್ರಿದಿ, ಹ್ಯಾರಿಸ್ ರೌಫ್, ಅಬ್ರಾರ್ ಅಹಮ್ಮದ್,

ಹ್ಯಾಂಡ್‌ಶೇಕ್ ಇಲ್ಲ, ಪಾಕಿಸ್ತಾನಕ್ಕೆ ಮುಖಭಂಗ

ಪೆಹಲ್ಗಾಂ ಉಗ್ರ ದಾಳಿ, ಅಮಾಯಕರ ಬಲಿದಾನ, ಭಾರತೀಯ ಸೇನೆಯ ಆಪರೇಶನ್ ಸಿಂದೂರ್‌ನಿಂದ ಪಾಕಿಸ್ತಾನ ಜೊತೆಗಿನ ಸಂಬಂಧ ತೀವ್ರವಾಗಿ ಹಳಸಿದೆ. ಪಾಕಿಸ್ತಾನ ವಿರುದ್ದಧ ಏಷ್ಯಾಕಪ್ ಪಂದ್ಯಕ್ಕೂ ಭಾರಿ ವಿರೋಧ ವ್ಯಕ್ತವಾಗಿದೆ. ಆದರೆ ಕೇಂದ್ರ ಸರ್ಕಾರ ಪಂದ್ಯ ಆಡಲು ಅನುಮತಿ ನೀಡಿತ್ತು. ಆದರೆ ಟೀಂ ಇಂಡಿಯಾ ಕ್ರಿಕೆಟಿಗರು ಲೀಗ್ ಹಂತದ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟಿಗರ ಜೊತೆ ಕೈಕುಲುಕಲು ನಿರಾಕರಿಸಿತ್ತು. ಟಾಸ್ ವೇಳೆ, ಪಂದ್ಯ ಮುಗಿದ ಬಳಿಕವೂ ಹ್ಯಾಂಡ್‌ಶೇಕ ಮಾಡಲೇ ಇಲ್ಲ. ಇತ್ತ ಡ್ರೆಸ್ಸಿಂಗ್ ರೂಂ ಬಾಗಿಲು ಕೂಡ ಮುಚ್ಚಿತ್ತು. ಇದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾಗಿತ್ತು. ಐಸಿಸಿಗೆ ದೂರು ನೀಡಿದರೂ ಪ್ರಯೋಜನವಾಗಿರಲಿಲ್ಲ.

ಏಷ್ಯಾಕಪ್ ಲೀಗ್ ಹಂತದಲ್ಲಿ ಭಾರತಕ್ಕೆ 7 ವಿಕೆಟ್ ಗೆಲುವು

ಏಷ್ಯಾಕಪ್ ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ ಭಾರತದ ದಾಳಿಗೆ ತತ್ತರಿಸಿತ್ತು. ಪರಿಣಾಮ 9 ವಿಕೆಟ್ ನಷ್ಟಕ್ಕೆ 127 ರನ್ ಸಿಡಿಸಿತ್ತು. 128 ರನ್ ಗುರಿಯನ್ನು ಭಾರತ 15.5 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು.