ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ನಾಳೆಯಿಂದ ಜಾರಿಯಾಗಲಿದ್ದು, ರೈತರು ಬಳಸುವ ಟ್ರ್ಯಾಕ್ಟರ್, ಸ್ಪ್ರಿಂಕ್ಲರ್‌ಗಳು, ಕೊಯ್ಲು ಯಂತ್ರಗಳ ಮೇಲಿನ ಜಿಎಸ್‌ಟಿ ದರ ಗಣನೀಯವಾಗಿ ಇಳಿಕೆಯಾಗಿದೆ. ಇದರೊಂದಿಗೆ, ವೈದ್ಯಕೀಯ ಉಪಕರಣ, ಕೆಲವು ಅಗತ್ಯ ಔಷಧಿಗಳ ಮೇಲಿನ ತೆರಿಗೆ ಸಹ ಕಡಿಮೆ ಮಾಡಲಾಗಿದೆ.

ರೈತರಿಗೂ ಬಂಪರ್‌: ಜಿಎಸ್‌ಟಿ ಇಳಿಕೆ ಬಳಿಕ ಟ್ರ್ಯಾಕ್ಟರ್ ಸೇರಿದಂತೆ ಹಲವು ಕೃಷಿ ಯಂತ್ರೋಪಕರಣಗಳ ದರ ಹೀಗಿದೆ

ನವದೆಹಲಿ: ನಾಳೆಯಿಂದ ಕೇಂದ್ರ ಸರ್ಕಾರದ ಹೊಸ ಜಿಎಸ್‌ಟಿ ದರ ಜಾರಿಗೆ ಬರಲಿದ್ದು, ಜಿಎಸ್‌ಟಿ ದರ ಇಳಿಕೆಯಿಂದ ರೈತರಿಗೂ ಹಲವು ಅನುಕೂಲವಾಗಲಿದೆ. ರೈತರು ಅಗತ್ಯವಾಗಿ ಬಳಸುವ ಹಲವು ಯಂತ್ರೋಪಕರಣಗಳ ದರದಲ್ಲಿ ಭಾರಿ ಇಳಿಕೆಯಾಗಿದೆ.

1800 ccಯ ಟ್ರಾಕ್ಟರುಗಳ ಮೇಲಿನ ಜಿಎಸ್ಟಿ 12% ನಿಂದ 5% ಕ್ಕೆ ಇಳಿಕೆಯಾಗಿದೆ. ಟೈರ್‌ಗಳು, ಟ್ಯೂಬ್‌ಗಳು, ಹೈಡ್ರಾಲಿಕ್ ಪಂಪ್‌ಗಳು ಸೇರಿದಂತೆ ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್‌ಟಿ ಶೇ. 18 ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ.

ಸ್ಪ್ರಿಂಕ್ಲರ್‌ಗಳು, ಹನಿ ನೀರಾವರಿ, ಕೊಯ್ಲು ಯಂತ್ರೋಪಕರಣಗಳು, ಟ್ರ್ಯಾಕ್ಟರ್ ಬಿಡಿಭಾಗಗಳ ಜಿಎಸ್‌ಟಿ ಶೇ. 12 ರಿಂದ ಶೇ. 5 ಕ್ಕೆ ಇಳಿಕೆಯಾಗಿದೆ. ಸ್ಥಿರ ವೇಗದ ಡೀಸೆಲ್ ಎಂಜಿನ್‌ಗಳು (15 HP), ಒಕ್ಕಣೆ/ಕೊಯ್ಲು ಯಂತ್ರಗಳು, ಕಾಂಪೋಸ್ಟ್ ಯಂತ್ರಗಳ ಮೇಲಿನ ಜಿಎಸ್‌ಟಿ 12% ರಿಂದ 5% ಕ್ಕೆ ಇಳಿಕೆಯಾಗಿದೆ.

ಕೃಷಿ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಹೆಸರುಹಳೆದರಹೊಸದರಉಳಿತಾಯ
ಟ್ರ್ಯಾಕ್ಟರ್ 35 ಹೆಚ್.ಪಿ6,50,0006,09,00041000
ಟ್ರ್ಯಾಕ್ಟರ್ 45 ಹೆಚ್.ಪಿ.7,20,0006,75,00045,000
ಟ್ರ್ಯಾಕ್ಟರ್ 50 ಎಚ್‌ಪಿ8,50,0007,97,00053,000
ಟ್ರ್ಯಾಕ್ಟರ್ 75 ಹೆಚ್.ಪಿ10,00,0009,37,00063,000
ಪವರ್ ಟಿಲ್ಲರ್ 13 ಎಚ್‌ಪಿ1,90,0001,78,12511,875
ಭತ್ತದ ಕಸಿ ಯಂತ್ರ2,46,4002,31,00015,400
ಮಲ್ಟಿಕ್ರಾಪ್ ಥ್ರೆಷರ್2,24,0002,24,00014,000
ಪವರ್ ವೀಡರ್ 7.5 ಎಚ್‌ಪಿ87,92082,4255,495
ಟ್ರೇಲರ್ 5 ಟೋನ್ ಸಾಮರ್ಥ್ಯ1,68,0001,57,50010,500
ರೋಟೇವೇಟರ್16 ಅಡಿ1,25,0001,17,1877,812.

ವೈದ್ಯಕೀಯ ಉಪಕರಣಗಳ ಮೇಲಿನ ಜಿಎಸ್‌ಟಿಯೂ ಇಳಿಕೆ:

ಹಾಗೆಯೇ ವೈದ್ಯಕೀಯ, ಶಸ್ತ್ರಚಿಕಿತ್ಸಾ, ದಂತ ಅಥವಾ ಪಶುವೈದ್ಯಕೀಯ ಬಳಕೆಗಾಗಿ ಅಥವಾ ಭೌತಿಕ ಅಥವಾ ರಾಸಾಯನಿಕ ವಿಶ್ಲೇಷಣೆಗಾಗಿ ಬಳಸುವ ವಿವಿಧ ವೈದ್ಯಕೀಯ ಉಪಕರಣಗಳು ಮತ್ತು ಸಾಧನಗಳ ಮೇಲಿನ ಜಿಎಸ್‌ಟಿ ದರಗಳನ್ನು 18% ರಿಂದ 5% ಕ್ಕೆ ಇಳಿಸಲಾಗಿದೆ. ವಾಡಿಂಗ್ ಗಾಜ್, ಬ್ಯಾಂಡೇಜ್‌ಗಳು, ಡಯಾಗ್ನೋಸ್ಟಿಕ್ ಕಿಟ್‌ಗಳು ಮತ್ತು ಕಾರಕಗಳು, ಗ್ಲುಕೋಮೀಟರ್ ವೈದ್ಯಕೀಯ ಸಾಧನಗಳು ಇತ್ಯಾದಿಗಳಂತಹ ವಿವಿಧ ವೈದ್ಯಕೀಯ ಉಪಕರಣಗಳು ಮತ್ತು ಸರಬರಾಜು ಸಾಧನಗಳ ಮೇಲಿನ ಜಿಎಸ್‌ಟಿ ದರಗಳನ್ನು 12% ರಿಂದ 5% ಕ್ಕೆ ಇಳಿಕೆ ಮಾಡಲಾಗಿದೆ.

ವಸ್ತುಹಳೆದರಹೊಸದರಉಳಿತಾಯ
ಹಿಮಾಲಯ ಬೇಬಿ ಸೋಪ್70 -628
ಬೇಬಿ ಶಾಂಪೂ24021436
ಬೇಬಿ ಹೇರ್ ಆಯಿಲ್30026733
ಡಯಾಪರ್ ರಾಶ್ ಕ್ರೀಮ್1501419
ಕಾಫ್ಲೆಟ್ ಸಿರಪ್1251179
ರೋಲ್ ಆನ್17015911
ಲೀವ್ ಸಿರಪ್25023416
ಗ್ಯಾಸೆಕ್ಸ್ ಟ್ಯಾಬ್ಲೆಟ್22020614
ವಯಸ್ಕರ ಡೈಪರ್65060941
ಫಿಲೆಕ್ಸ್ ಟ್ಯಾಬ್ಲೆಟ್234250 16
ಫ್ರೆಶ್ ಕೋಟ್63056169

ಹಾಗೆಯೇ ಕೆಲ ಅಗತ್ಯ ಔಷಧಿಗಳ ಮೇಲಿನ ತೆರಿಗೆಯನ್ನು ತೆಗೆದುಹಾಕಲಾಗಿದೆ. 33 ಔಷಧಿಗಳಲ್ಲಿ ಕ್ಯಾನ್ಸರ್, ರಕ್ತ ಅಸ್ವಸ್ಥತೆಗಳು, ಅಪರೂಪದ ಆನುವಂಶಿಕ ಕಾಯಿಲೆಗಳು ಮತ್ತು ಇತರ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ ದುಬಾರಿ ಔಷಧಿಗಳ ದರ ಇಳಿಕೆಯಾಗಿದೆ.

ಇದನ್ನೂ ಓದಿ: ಮರ್ಸಿಡಿಸ್ ಬೇಂಜ್ ಕಾರ್ ಇದೆ ಕಾಮನ್‌ಸೆನ್ಸ್ ಇಲ್ಲ: ರಸ್ತೆಗೆ ಕಸ ಎಸೆದ ಮಹಿಳೆ ಪ್ರಶ್ನಿಸಿದ್ದಕ್ಕೆ ಉದ್ಧಟತನದ ವರ್ತನೆ
ಇದನ್ನೂ ಓದಿ: ಈ ಸೀರೆಗೆ ರವಿಕೆ ಬೇಕಿಲ್ಲ... ಹೊಸ ರೆಡಿ ಟು ವೇರ್ ಸೀರೆಗೆ ಫಿದಾ ಆದ ಹೆಂಗೆಳೆಯರು.. ವೀಡಿಯೋ ನೋಡಿ