- Home
- Sports
- Cricket
- Asia Cup 2025 Super-4: ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ ಪಾಕ್! ಇದು ವರ್ಕೌಟ್ ಆಗುತ್ತಾ?
Asia Cup 2025 Super-4: ಭಾರತ ಸೋಲಿಸಲು ಮಾಸ್ಟರ್ ಪ್ಲಾನ್ ಮಾಡಿದ ಪಾಕ್! ಇದು ವರ್ಕೌಟ್ ಆಗುತ್ತಾ?
ದುಬೈ: 2025ರ ಏಷ್ಯಾಕಪ್ ಟೂರ್ನಿಯಲ್ಲಿ ಶತಾಯಗತಾಯ ಭಾರತ ಎದುರು ಗೆಲ್ಲಬೇಕು ಎಂದು ಶಪಥ ಮಾಡಿರುವ ಪಾಕಿಸ್ತಾನ ಇದೀಗ, ಸೂಪರ್ 4 ಪಂದ್ಯಕ್ಕೂ ಮುನ್ನ ಹೊಸ ಮಾಸ್ಟರ್ ಪ್ಲಾನ್ ಹಾಗೂ ಹೊಸ ಮನೋಭಾವದೊಂದಿಗೆ ಕಣಕ್ಕಿಳಿಯಲು ತೀರ್ಮಾನಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಮೊದಲ ಪಂದ್ಯದಲ್ಲೂ ಪಾಕ್‌ಗೆ ಹೀನಾಯ ಸೋಲು
2025ರ ಏಷ್ಯಾಕಪ್ ಟೂರ್ನಿಯ ಗ್ರೂಪ್ ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಸೆಪ್ಟೆಂಬರ್ 14ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎದುರು ಪಾಕಿಸ್ತಾನ ಹೀನಾಯ ಸೋಲು ಕಂಡಿತ್ತು.
ಉಭಯ ತಂಡದಲ್ಲೂ ಕೈಕುಲುಕದ ಆಟಗಾರರು
ಇದಿಷ್ಟು ಸಾಲದೆಂಬಂತೆ, ಭಾರತೀಯ ಆಟಗಾರರು, ಪಾಕ್ ಆಟಗಾರರನ್ನು ಕೈಕುಲುಕುವುದಿರಲಿ, ಅವರ ಕಡೆ ಕಣ್ಣೆತ್ತಿಯೂ ನೋಡದೇ, ಪೆಹಲ್ಗಾಂ ಉಗ್ರರ ದಾಳಿಯನ್ನು ತಮ್ಮ ಆಟ ಹಾಗೂ ವರ್ತನೆಯ ಮೂಲಕ ಖಂಡಿಸಿದ್ದರು.
ಪಾಕ್ ಎದುರಿನ ಗೆಲುವು ಸೇನೆಗೆ ಅರ್ಪಣೆ
ಪಂದ್ಯ ಮುಗಿದ ಬಳಿಕ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್, ಪಾಕಿಸ್ತಾನ ಎದುರಿನ ಗೆಲುವನ್ನು ಪೆಹಲ್ಗಾ ಉಗ್ರದಾಳಿಯಲ್ಲಿ ಮೃತಪಟ್ಟ ಕುಟುಂಬಸ್ಥರಿಗೆ ಹಾಗೂ ಭಾರತೀಯ ಸೇನೆಗೆ ಅರ್ಪಿಸುವ ಮೂಲಕ, ಪಾಕ್ ಸೋಲಿನ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದರು.
ಆತ್ಮವಿಶ್ವಾಸ ಕಳೆದುಕೊಂಡಿರುವ ಪಾಕ್
ಇದೀಗ ಭಾರತ ವಿರುದ್ಧ ಹೀನಾಯ ಸೋಲು ಹಾಗೂ ಏಷ್ಯಾಕಪ್ ಟೂರ್ನಿಯಲ್ಲಿ ಸಾಧಾರಣ ಪ್ರದರ್ಶನ ದಿಂದಾಗಿ ಆತ್ಮವಿಶ್ವಾಸ ಕಳೆದುಕೊಂಡಿರುವ ಪಾಕಿಸ್ತಾನ ತಂಡ, ಭಾರತ ವಿರುದ್ದ ಭಾನುವಾರದ ಪಂದ್ಯಕ್ಕೂ ಮುನ್ನ ಸ್ಫೂರ್ತಿ ಭಾಷಣಕಾರ(ಮೋಟಿವೇಷನಲ್ ಸ್ಪೀಕರ್)ನನ್ನು ಕರೆತಂದಿದೆ.
ಡಾ. ರಾಹೀಲ್ ಕರೀಂ ಕರೆತಂದ ಪಾಕ್
ಈ ಮೂಲಕ ಆಟಗಾರರಲ್ಲಿ ಆತ್ಮವಿಶ್ವಾಸ ತುಂಬುವ ಪ್ರಯತ್ನದಲ್ಲಿದೆ. 'ಡಾ.ರಹೀಲ್ ಕರೀಂ ಬುಧವಾರ ತಂಡ ಕೂಡಿಕೊಂಡಿದ್ದು, ಟೂರ್ನಿ ಯುದ್ದಕ್ಕೂ ತಂಡದ ಜೊತೆಗಿರಲಿದ್ದಾರೆ' ಎಂದು ಮೂಲಗಳು ತಿಳಿಸಿವೆ.
ಇಂದು ಭಾರತ-ಪಾಕ್ ಸೂಪರ್-4 ಕದನ
ಸೂಪರ್ 4 ಹಂತದಿಂದ ಫೈನಲ್‌ಗೇರುವ ನಿಟ್ಟಿನಲ್ಲಿ ಉಭಯ ತಂಡಗಳ ಪಾಲಿಗೆ ಈ ಪಂದ್ಯವು ಸಾಕಷ್ಟು ಮಹತ್ವದ್ದೆನಿಸಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದಲ್ಲಿ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗುತ್ತಿದೆ.