ತಿರುಪತಿ: ತಿರುಮಲ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ದ್ವಾರ ದರ್ಶನದಲ್ಲಿ ಕಾಲ್ತುಳಿತ ಮತ್ತು ಅಹಿತಕರ ಘಟನೆ ನಡೆಯದಂತೆ ತಡೆಯುವ ನಿಟ್ಟಿನಲ್ಲಿ ಟಿಟಿಡಿ ಕೌಂಟರ್ ಟೋಕನ್ ವ್ಯವಸ್ಥೆಯನ್ನು ಡಿ.30ರಿಂದ ಜ.8ರವರೆಗೆ ರದ್ದುಗೊಳಿಸಿದೆ. ಕೇವಲ ಟಿಟಿಡಿ ವೆಬ್‌ಸೈಟ್, ಆ್ಯಪ್ ಮತ್ತು ವಾಟ್ಸಾ ಪ್‌ನಲ್ಲಿ ಟೋಕನ್ ಪಡೆದುಕೊಳ್ಳಬೇಕಿದೆ. ಈ ವರ್ಷ ಡಿ.31ಕ್ಕೆ ವೈಕುಂಠ ಏಕಾದಶಿ ಇದೆ. 10 ದಿನ ಕಾಲ 186 ತಾಸು ವೈಕುಂಠ ದ್ವಾರ ದರ್ಶನಕ್ಕೆ ಅವಕಾಶ ನೀಡ ಲಾಗುತ್ತದೆ. ಇದರಲ್ಲಿ 164 ಗಂಟೆ ಸಾಮಾನ್ಯ ದರ್ಶ ನದಲ್ಲಿ ಬರುವವರಿಗೆಂದು ಮೀಸಲಿರಿಸಲಾಗಿದೆ. ಕಳೆದ ವರ್ಷ ಇದೇ ವೇಳೆ ಕಾಲ್ತುಳಿತ ಉಂಟಾಗಿ 6 ಭಕ್ತರು ಅಸುನೀಗಿದ್ದರು.

10:20 PM (IST) Nov 19
ಭಾರತದ ರಫೇಲ್ ಯುದ್ಧ ವಿಮಾನ ಒಪ್ಪಂದವನ್ನು ಹಾಳು ಮಾಡಲು ಚೀನಾ ನಕಲಿ ಸಾಮಾಜಿಕ ಮಾಧ್ಯಮ ಅಭಿಯಾನ ನಡೆಸಿತ್ತು ಎಂದು ಅಮೆರಿಕದ ವರದಿಯೊಂದು ಬಹಿರಂಗಪಡಿಸಿದೆ. ರಫೇಲ್ ಹೊಡೆದುರುಳಿಸಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿ, ತನ್ನದೇ ಯುದ್ಧ ವಿಮಾನಗಳನ್ನು ಪ್ರಚಾರ ಮಾಡಲು ಚೀನಾ ಯತ್ನಿಸಿತ್ತು ಹೇಳಿದೆ.
09:07 PM (IST) Nov 19
ಎಲಾನ್ ಮಸ್ಕ್ ಮಾಲೀಕತ್ವದ ಎಕ್ಸ್, ನಕಲಿ ಪ್ರೊಫೈಲ್‌ಗಳು ಮತ್ತು ಬಾಟ್‌ಗಳನ್ನು ನಿಯಂತ್ರಿಸಲು ಎಲ್ಲಾ ಬಳಕೆದಾರರ ಖಾತೆಗಳಲ್ಲಿ ದೇಶದ ಲೇಬಲ್ ಅನ್ನು ಕಡ್ಡಾಯಗೊಳಿಸಿದೆ. ಈ ಹೊಸ ಬದಲಾವಣೆಯು ಐಪಿ ವಿಳಾಸ ಆಧಾರದ ಮೇಲೆ ದೇಶವನ್ನು ಗುರುತಿಸಲಿದೆ.
07:46 PM (IST) Nov 19
Sridhar Vembu marriage advice: ಝೋಹೋ ಸಹ-ಸಂಸ್ಥಾಪಕ ಶ್ರೀಧರ್ ವೆಂಬು ಅವರು ಯುವಕರು 20ರ ಹರೆಯದಲ್ಲಿಯೇ ಮದುವೆಯಾಗಿ ಮಕ್ಕಳನ್ನು ಪಡೆಯಬೇಕೆಂದು ಸಲಹೆ ನೀಡಿದ್ದಾರೆ. ಉಪಾಸನಾ ಕೊನ್ನಿಡೆಲ್ಲಾ ಅವರ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ ನೀಡಿದ ಈ ಹೇಳಿಕೆಯು, ಈಗ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
06:24 PM (IST) Nov 19
Lamborghini Hurricane India: ಟೋಲ್ ಕಟ್ಟದೇ ಯಾವುದೇ ವಾಹನಗಳು ಟೋಲ್ ಗೇಟ್‌ಗಳಲ್ಲಿ ಮುಂದೆ ಹೋಗಲು ಸಾಧ್ಯವಿಲ್ಲ ಏಕೆಂದರೆ ಟೋಲ್ ಮುಂದಿನ ಕಬ್ಬಿಣದ ರಾಡ್‌ಗಳನ್ನು ಟೋಲ್ ಕಟ್ಟಿದ ನಂತರವೇ ತೆರೆಯುತ್ತಾರೆ. ಆದರೂ ಇಲ್ಲೊಂದು ಕಾರು ಟೋಲ್ ಕಟ್ಟದೇ ಮುಂದೆ ಹೋಗಿದೆ ಅದು ಹೇಗೆ ಇಲ್ಲಿದೆ ನೋಡಿ ಸ್ಟೋರಿ…
05:55 PM (IST) Nov 19
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸೋಲಿನ ಬಳಿಕ ಕೋಚ್ ಗೌತಮ್ ಗಂಭೀರ್ ಅವರನ್ನು ಕೆಳಗಿಳಿಸಬೇಕೆಂಬ ಕೂಗು ಎದ್ದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌರವ್ ಗಂಗೂಲಿ, ಗಂಭೀರ್ ಮತ್ತು ನಾಯಕ ಗಿಲ್ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
04:48 PM (IST) Nov 19
ಛತ್ತೀಸ್‌ಗಢದಲ್ಲಿ ನಡೆಯುತ್ತಿರುವ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಹಾಕ್ ಫೋರ್ಸ್‌ನ ಇನ್ಸ್‌ಪೆಕ್ಟರ್ 2 ಬಾರಿ ಶೌರ್ಯ ಪ್ರಶಸ್ತಿ ವಿಜೇತ ಅಧಿಕಾರಿ ಅಶೀಶ್ ಶರ್ಮಾ ಅವರು ಹುತಾತ್ಮರಾಗಿದ್ದಾರೆ.
04:47 PM (IST) Nov 19
04:12 PM (IST) Nov 19
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಚುನಾವಣಾ ಆಯೋಗದ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ 'ಅಮಾನವೀಯ' ಒತ್ತಡದಿಂದಾಗಿ ಜಲಪೈಗುರಿಯಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
04:10 PM (IST) Nov 19
ಬೆಂಗಳೂರು: 19ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿಗೆ ಕ್ಷಣಗಣನೆ ಆರಂಭವಾಗಿದೆ. ಪ್ರತಿ ಹರಾಜಿಗೂ ಮುನ್ನ ಡೆಲ್ಲಿ ಮೂಲದ ಕೊಹ್ಲಿ ಆರ್‌ಸಿಬಿ ಪಾಲಾಗಿದ್ದು ಹೇಗೆ ಎನ್ನುವುದು ಚರ್ಚೆಯಾಗುತ್ತಲೇ ಇರುತ್ತದೆ. ಇದಕ್ಕೆ ಸೆಹ್ವಾಗ್ ಉತ್ತರಿಸಿದ್ದಾರೆ.
03:59 PM (IST) Nov 19
Bride's bold decision : ಮದುವೆ ಮಂಟಪದಲ್ಲಿಯೇ ಫೋಟೋಗ್ರಾಫರ್‌ಗೆ ವರ ಕಪಾಳಮೋಕ್ಷ ಮಾಡಿದ್ದಕ್ಕೆ ಸಿಟ್ಟಾದ ವಧು, ಮದುವೆಯನ್ನೇ ರದ್ದುಗೊಳಿಸಿದ್ದಾಳೆ. ಮಧ್ಯಪ್ರದೇಶದ ಇಂದೋರ್‌ನಲ್ಲಿ ಈ ಘಟನೆ ನಡೆದಿದೆ.
03:36 PM (IST) Nov 19
ಮದ್ಯ ಅಥವಾ ವಿಸ್ಕಿಯನ್ನು ಪೆಗ್‌ಗಳಲ್ಲಿ ಅಳೆಯುತ್ತಾರೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮದ್ಯವನ್ನು ಅಳೆಯಲು 'ಪೆಗ್' ಎಂಬ ಪದವನ್ನೇ ಯಾಕೆ ಬಳಸುತ್ತಾರೆ? ಈ ಪದ ಎಲ್ಲಿಂದ ಬಂತು? ಸೇಫ್ ಲಿಮಿಟ್ ಅಂದ್ರೆ ಏನು? ಎಂಬಿತ್ಯಾದಿ ಆಸಕ್ತಿಕರ ವಿಷಯಗಳನ್ನು ಈಗ ತಿಳಿಯೋಣ.
02:41 PM (IST) Nov 19
Alice and Ellen Kessler story: ಯುರೋಪ್‌ನಲ್ಲಿ ನಟನೆ, ಗಾಯನ ಮತ್ತು ನೃತ್ಯದಿಂದ ಪ್ರಸಿದ್ಧರಾಗಿದ್ದ ಜರ್ಮನಿ ಮೂಲದ ಕೆಸ್ಲರ್ ಅವಳಿಗಳಾದ ಆಲಿಸ್ ಮತ್ತು ಎಲೆನ್, ತಮ್ಮ 89ನೇ ವಯಸ್ಸಿನಲ್ಲಿ ಜೊತೆಯಾಗಿ ಸಾವಿಗೆ ಶರಣಾಗಿದ್ದಾರೆ.
01:44 PM (IST) Nov 19
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನವೆಂಬರ್ 22 ರಿಂದ ಆರಂಭವಾಗಲಿರುವ ಎರಡನೇ ಟೆಸ್ಟ್‌ಗೆ ಶುಭಮನ್ ಗಿಲ್ ಲಭ್ಯತೆ ಬಗ್ಗೆ ಅನುಮಾನ ಮೂಡಿದೆ. ಮೊದಲ ಟೆಸ್ಟ್‌ನಲ್ಲಿ ಕುತ್ತಿಗೆ ನೋವಿನಿಂದ ಹೊರಗುಳಿದಿದ್ದ ಗಿಲ್, ಗುವಾಹಟಿ ಟೆಸ್ಟ್‌ನಲ್ಲಿ ಆಡುತ್ತಾರೋ ಇಲ್ಲವೋ ಎಂಬ ಕುತೂಹಲ ಹೆಚ್ಚಾಗಿದೆ.
01:03 PM (IST) Nov 19
ಆರ್‌ಸಿಬಿ ತಂಡ ಮಾರಾಟಕ್ಕಿದೆ ಎಂಬ ಸುದ್ದಿಯ ಬೆನ್ನಲ್ಲೇ, 'ಕೆಜಿಎಫ್' ಖ್ಯಾತಿಯ ಹೊಂಬಾಳೆ ಫಿಲ್ಮ್ಸ್ ಅದನ್ನು ಖರೀದಿಸಲಿದೆ ಎಂಬ ವದಂತಿ ಹಬ್ಬಿದೆ. ಈ ಸುದ್ದಿಯ ಸತ್ಯಾಸತ್ಯತೆ, ಹೊಂಬಾಳೆ-ಆರ್‌ಸಿಬಿ ನಡುವಿನ ಈಗಿನ ಸಂಬಂಧ ಮತ್ತು ಸುಮಾರು 17,000 ಕೋಟಿ ರೂ. ಬ್ರ್ಯಾಂಡ್ ಮೌಲ್ಯದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
11:49 AM (IST) Nov 19
Wayanad zipline fake AI video: ಕೇರಳದ ವಯನಾಡ್‌ನಲ್ಲಿ ತಾಯಿ ಮತ್ತು ಮಗು ಜಿಪ್‌ಲೈನ್ ಅಪಘಾತಕ್ಕೀಡಾಗಿದ್ದಾರೆ ಎಂದು ಬಿಂಬಿಸುವ ನಕಲಿ ಎಐ ವೀಡಿಯೋವನ್ನು ಸೃಷ್ಟಿಸಿ ಹಂಚಿಕೊಂಡ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರಲ್ಲಿ ಭೀತಿ ಹುಟ್ಟಿಸಿತ್ತು.
11:09 AM (IST) Nov 19
09:50 AM (IST) Nov 19
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಮತ್ತು ಟಿ20 ತಂಡಗಳ ಆಯ್ಕೆ ಬಗ್ಗೆ ಕುತೂಹಲ ಹೆಚ್ಚಾಗಿದೆ. ಶುಭ್‌ಮನ್ ಗಿಲ್ ಇಲ್ಲದಿದ್ದರೆ, ಕೆ ಎಲ್ ರಾಹುಲ್ ಅಥವಾ ಪಂತ್ ಪೈಕಿ ಯಾರು ನಾಯಕತ್ವ ವಹಿಸುತ್ತಾರೆ ಎಂಬ ಪ್ರಶ್ನೆ ಎದ್ದಿದೆ. ಇದೇ ವೇಳೆ ರೋಹಿತ್ ಶರ್ಮಾ ವಾಪಸಾತಿ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
09:34 AM (IST) Nov 19
08:18 AM (IST) Nov 19