ನಾಗ್ಪುರ: ‘ಛತ್ರಪತಿ ಶಿವಾಜಿ ಮಹಾರಾಜರ ದಾರಿಯಲ್ಲೇ ಟಿಪ್ಪು ಸುಲ್ತಾನರೂ ನಡೆದಿದ್ದಾರೆ. ಟಿಪ್ಪುವನ್ನು ಶಿವಾಜಿ ಮಹಾರಾಜರಿಗೆ ಸಮಾನವಾಗಿ ಕಾಣಬೇಕು’ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಾಲ್ ಹೇಳಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದ್ದು, ಸಿಎಂ ದೇವೇಂದ್ರ ಫಡ್ನವೀಸ್ ಕಿಡಿಕಾರಿದ್ದಾರೆ.
‘ಟಿಪ್ಪು ಸುಲ್ತಾನ್ ಒಬ್ಬ ಯೋಧ. ಆತ ಬ್ರಿಟಿಷರ ವಿರುದ್ಧ ಹೋರಾಡಿದ ಧೈರ್ಯವನ್ನು ತೋರಿಸಿದವನು. ಮಣ್ಣಿನ ಮಗ. ಅವನೆಂದೂ ವಿಷಕಾರಿ, ವಿನಾಶಕಾರಿ ವಿಚಾರಗಳನ್ನು ಸ್ವೀಕರಿಸಲಿಲ್ಲ. ಶೌರ್ಯದ ಸಂಕೇತವಾಗಿ, ಟಿಪ್ಪು ಸುಲ್ತಾನನನ್ನು ಛತ್ರಪತಿ ಶಿವಾಜಿ ಮಹಾರಾಜರಿಗೆ ಸಮಾನವಾಗಿ ನೋಡಬೇಕು’ ಎಂದು ಸಪ್ಕಾಲ್ ಹೇಳಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ‘ಶಿವಾಜಿ ಮಹಾರಾಜರು ಸ್ವರಾಜ್ಯವನ್ನು ಸ್ಥಾಪಿಸಿ ಜನರನ್ನು ಮೊಘಲ್ ಆಳ್ವಿಕೆಯಿಂದ ಮುಕ್ತಗೊಳಿಸಿದರು. ಮತ್ತೊಂದೆಡೆ, ಟಿಪ್ಪು ಸಾವಿರಾರು ಹಿಂದೂಗಳನ್ನು ಕೊಂದ. ನಾವು ಈ ಹೋಲಿಕೆಯನ್ನು ಸಹಿಸುವುದಿಲ್ಲ’ ಎಂದು ಕಿಡಿ ಕಾರಿದ್ದಾರೆ.
11:43 PM (IST) Feb 15
ಭಾರತ ವಿರುದ್ಧ ಪಂದ್ಯ ಸೋತರೂ ಪಾಕ್ ನಾಯಕ ಸಲ್ಮಾನ್‌ಗೆ ನೆಮ್ಮದಿಯ ನಿದ್ದೆ, ಕಾರಣ ಏನು? ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ 61 ರನ್ ಹೀನಾಯ ಸೋಲಿನ ಬಳಿಕವೂ ಪಾಕ್ ನಾಯಕನಲ್ಲಿ ಸೋಲಿಗಿಂತ ಸಂಭ್ರಮೇ ಕಾಣುತ್ತಿದೆ
10:26 PM (IST) Feb 15
ಆಡಲ್ಲ ಆಡಲ್ಲ ಅಂದ ಪಾಕ್ ಕೊನೆಗೆ ಆಡಿದ್ರೂ ಕನಿಷ್ಠ ಹೋರಾಟ ನೀಡ್ಲಿಲಿಲ್ಲ, ಭಾರತದ ದಾಳಿಗೆ ಪಾಕಿಸ್ತಾನ ತತ್ತರಿಸಿ ಹೋಯಿತು. ಉಸ್ಮಾನ್ ಖಾನ್ ಹೋರಾಟ ಹೊರತುಪಡಿಸಿದರೆ ಇನ್ಯಾರು ಕ್ರೀಸ್‌ಗೆ ಬಂದಿದ್ದೇ ಗೊತ್ತಾಗಲಿಲ್ಲ.
09:42 PM (IST) Feb 15
ಪಾಕಿಸ್ತಾನದ 4 ವಿಕೆಟ್ ಪತನದ ಬಳಿಕ ವಿನ್ನಿಂಗ್ ಪರ್ಸೆಂಟೇಜ್ ಎಷ್ಟಿದೆ? ಯಾರಿಗಿದೆ ಚಾನ್ಸ್? ಭಾರತ ನೀಡಿದ 176 ರನ್ ಟಾರ್ಗೆಟ್ ಚೇಸಿಂಗ್ ನಡುವೆ ಗೆಲುವಿನ ಸಾಧ್ಯೆತೆಗಳು ಕ್ಷಣಕ್ಷಣಕ್ಕೆ ಬದಲಾಗುತ್ತಿದೆ. ಸದ್ಯ ಯಾರಿಗೆ ಎಷ್ಟು ವಿನ್ನಿಂಗ್ ಪರ್ಸೆಂಟೇಜ್ ಇದೆ.
09:09 PM (IST) Feb 15
ಕೇವಲ 10 ತಿಂಗಳ ಮಗುವೊಂದು ಅಂಗಾಗ ದಾನ ಮಾಡುವ ಮೂಲಕ 4 ಜನರಿಗೆ ಜೀವ ದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದೆ. ಹೌದು ಕೇರಳದ ಅಲಿನ್ ಶೆರಿನ್ ಅಬ್ರಹಾಂ ಎಂಬ 10 ತಿಂಗಳ ಮಗು ಈಗ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
08:48 PM (IST) Feb 15
08:24 PM (IST) Feb 15
ಟಿ20 ವಿಶ್ವಕಪ್ 2026ರ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಭಾರತದ ನಾಯಕ ಸೂರ್ಯಕುಮಾರ್ ಯಾದವ್ ಶೇಕ್ ಹ್ಯಾಂಡ್ ನೀಡಲು ನಿರಾಕರಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಹೀಗೆ ಮಾಡಿದ್ದೇಕೆ ಎನ್ನುವುದನ್ನು ನೋಡೋಣ ಬನ್ನಿ.
08:20 PM (IST) Feb 15
ಕೇರಳದ ಅತ್ಯುತ್ತಮ ಕೃಷಿಕ ಪ್ರಶಸ್ತಿ ವಿಜೇತ ಕಣ್ಣೂರಿನ ರೈತ ಅಲಿಯಾಸ್ ಅಂಬತ್, ತೀವ್ರ ಸಾಲಬಾಧೆಯಿಂದಾಗಿ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾರೆ. ಸುಮಾರು 35 ಲಕ್ಷದಿಂದ 50 ಲಕ್ಷದಷ್ಟು ಸಾಲದ ಸುಳಿಯಲ್ಲಿ ಸಿಲುಕಿದ್ದ ಅವರು,ಈ ದುರಂತ ನಿರ್ಧಾರ ಕೈಗೊಂಡಿದ್ದಾರೆ.
08:05 PM (IST) Feb 15
07:44 PM (IST) Feb 15
ಕೊಲಂಬೋ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಸೋತು ಬ್ಯಾಟಿಂಗ್ ಮಾಡಲಿಳಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿದೆ. ಇದರ ಬೆನ್ನಲ್ಲೇ ಅಭಿಷೇಕ್ ಶರ್ಮಾ ಕೆಟ್ಟ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
07:39 PM (IST) Feb 15
ಅಪೂರ್ವ ಮುಖಿಜಾ ಎಂಬ ಓದಿನಲ್ಲಿ ಟಾಪ್ ಇದ್ದ ಎಂಜಿನಿಯರ್, ತನ್ನ ಶೈಕ್ಷಣಿಕ ಸಾಧನೆಗೆ ಮಾನ್ಯತೆ ಸಿಗದಿದ್ದಾಗ ಸೋಷಿಯಲ್ ಮೀಡಿಯಾ ಜಗತ್ತಿಗೆ ಕಾಲಿಟ್ಟರು. ಅರೆ-ಬರೆ ಉಡುಪಿನಲ್ಲಿ ರೀಲ್ಸ್ ಮಾಡಿ, ಟ್ರೋಲ್‌ಗಳ ಮೂಲಕವೇ ಪ್ರಸಿದ್ಧರಾಗಿ, ಇಂದು 45 ಕೋಟಿಗೂ ಹೆಚ್ಚು ಸಂಪಾದಿಸಿ ಕೋಟ್ಯಧಿಪತಿಯಾಗಿದ್ದಾರೆ.
07:20 PM (IST) Feb 15
ಕನ್ನಡ ಸೇರಿ ಬಾಲಿವುಡ್‌ನಲ್ಲಿ ಮಿಂಚುತ್ತಿರುವ ನಟಿಗೆ ಜೈಲಿನಿಂದಲೇ 30 ಕೋಟಿ ರೂ ಹೆಲಿಕಾಪ್ಟರ್ ಗಿಫ್ಟ್ ನೀಡಲಾಗಿದೆ. ಅರೆಸ್ಟ್ ಆಗಿ ಜೈಲು ಸೇರಿರುವ ಬಾಯ್‌ಫ್ರೆಂಡ್ ಪ್ರೇಮಿಗಳ ದಿನಾಚರಣೆಗೆ ಈ ಗಿಫ್ಟ್ ನೀಡಿದ್ದಾನೆ.
07:05 PM (IST) Feb 15
06:41 PM (IST) Feb 15
ಟಿ20 ವಿಶ್ವಕಪ್‌ನ ಹೈವೋಲ್ಟೇಜ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಮಹತ್ವದ ಪಂದ್ಯಕ್ಕಾಗಿ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಕುಲ್ದೀಪ್ ಯಾದವ್ ಅವರನ್ನು ಸೇರಿಸಿ ಎರಡು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ.
05:52 PM (IST) Feb 15
ವಿಮಾನ ನಿಲ್ದಾಣದಲ್ಲಿ ಬೀದಿ ನಾಯಿಯೊಂದು ಮಹಿಳಾ ಪ್ರಯಾಣಿಕರೊಬ್ಬರಿಗೆ ಕಚ್ಚಿದ ಘಟನೆ ನಡೆದಿದೆ. ಗಾಯಾಳು ಮಹಿಳೆಗೆ ಚಿಕಿತ್ಸೆ ನೀಡಲಾಗಿದ್ದು, ವಿಮಾನ ನಿಲ್ದಾಣದಂತಹ ಹೆಚ್ಚಿನ ಭದ್ರತಾ ವಲಯದಲ್ಲಿ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
05:41 PM (IST) Feb 15
ಇಂಡೋ ಪಾಕ್ ಪಂದ್ಯದಿಂದ ಜಾಹೀರಾತು ಬೆಲೆಯಲ್ಲಿ ದಾಖಲೆ, ಪಂದ್ಯ ಪ್ರಸಾರದ ವೇಳೆ ಬರುವ 10 ಸೆಕೆಂಡ್ ಜಾಹೀರಾತಿನ ಬೆಲೆ ಕೇಳಿದರೆ ಅಚ್ಚರಿಯಾಗುವುದು ಖಚಿತ, ಶೇಕಡಾ 90ರಷ್ಟು ಜಿಗಿತ ಕಂಡಿದೆ.
05:07 PM (IST) Feb 15
ಅಭಿಷೇಕ್ ಶರ್ಮಾ ಇನ್, ಸಂಜು ಔಟ್, ಪಾಕ್ ವಿರುದ್ಧ ಟೀಂ ಇಂಡಿಯಾದಲ್ಲಿ ಮಹತ್ತರ ಬದಲಾವಣೆ ಸೂಚನೆ, ಕುಲ್ದೀಪ್ ಯಾದವ್ ಕಣಕ್ಕಿಳಿಯುವ ಸಾಧ್ಯತೆ ಇದೆ. ಪಾಕ್ ವಿರುದ್ಧ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11
04:40 PM (IST) Feb 15
ಸೊಂಟ ಹಿಡಿದು ಕಿಸ್ಸಿಂಗ್ ನಟನೆ ಭಾಗ, ಇಂಟಿಮೇಟ್ ಸೀನ್ ಬಗ್ಗೆ ಬಿಗ್ ಬಾಸ್ ಮಾಜಿ ಸ್ಫರ್ಧಿ ಸ್ಫೋಟಕ ಮಾತು, ರೊಮ್ಯಾನ್ಸ್, ಇಂಟೀಮೇಟ್ ಸೀನ್ ಮಾಡಲು ನಾನು ರೆಡಿ, ಆದರೆ ಒಂದು ಕಂಡೀಷನ್ ಹಾಕಿದ್ದಾರೆ.
04:37 PM (IST) Feb 15
ವೀಕೆಂಡ್ ವಿತ್ ರಮೇಶ್‌ನಲ್ಲಿ ನೀವು ಕಾರ್ಯಕ್ರಮಕ್ಕೆ ಬಂದ ಅತಿಥಿಗಳ ಫೋಟೋಗಳನ್ನು ಕಾರ್ಯಕ್ರಮದ ಕೊನೆಯಲ್ಲಿ ವಾಲ್ ಆಫ್ ಫೇಮ್‌ಗೆ ಸೇರಿಸುವುದನ್ನು ನೋಡಿರಬಹುದು. ಅದೇ ಬೀದಿ ಬದಿ ಕಸ ಎಸೆಯುವವರಿಗೆ ಬುದ್ಧಿ ಕಲಿಸಲು ಅಸ್ಸಾಂನ ತಿನ್‌ಸುಖಿಯಾ ನಗರ 'ವಾಲ್ ಆಫ್ ಶೇಮ್' ಎಂಬ ವಿನೂತನ ಅಭಿಯಾನ ಆರಂಭಿಸಿದೆ.
03:59 PM (IST) Feb 15
21 ಸೆಕೆಂಡ್ ವಿಡಿಯೋ ಕೋಲಾಹಲ, ಕ್ರೈಸ್ತ ಸನ್ಯಾಸಿನಿಗೆ ಕಾಮ ಪ್ರಚೋದಿಸಿದ ವಿದ್ಯಾರ್ಥಿಗಳ ಗುಂಪು, ಯುವ ಸಮೂಹದ ಅಸಭ್ಯವಾಗಿ ಕಾಮಪ್ರಚೋದಕತೆ ಮಾಡುತ್ತಿರುವ ದೃಶ್ಯ ಭಾರಿ ವಿರೋಧಕ್ಕೆ ಕಾರಣವಾಗಿದೆ. ಏನಿದು 21 ಸೆಕೆಂಡ್ ವಿಡಿಯೋ?
03:01 PM (IST) Feb 15
ಗುಜರಾತ್‌ನ ವಡೋದರಾದಲ್ಲಿ, ಮಗಳ ಮದುವೆಗೆಂದು ಎನ್‌ಆರ್‌ಐ ಕುಟುಂಬವೊಂದು ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 65 ಲಕ್ಷ ಮೌಲ್ಯದ ಚಿನ್ನ ನಾಪತ್ತೆಯಾಗಿದೆ. ಮದುವೆಗೆ ಕೆಲವೇ ದಿನಗಳಿರುವಾಗ ಈ ಘಟನೆ ಬೆಳಕಿಗೆ ಬಂದಿದೆ.
02:57 PM (IST) Feb 15
02:57 PM (IST) Feb 15
ಹಾಲ್ ಟಿಕೆಟ್ ಕೈಸೇರಿದ್ರೂ 10ನೇ ಕ್ಲಾಸ್ ಎಕ್ಸಾಂ ಬರೆಯಲ್ಲ ವೈಭವ್ ಸೂರ್ಯವಂಶಿ, ಅ19 ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ವೈಭವ್ ಹಾಲ್ ಟಿಕೆಟ್ ಇದ್ದರೂ, ಪರೀಕ್ಷೆ ಬರೆಯಲು ಅನುಮತಿ ನೀಡಿದರೂ ಬರೆಯದಿರಲು ಕಾರಣವೇನು?
02:25 PM (IST) Feb 15
ಕೊನೆಯ ಕ್ಷಣದಲ್ಲಿ ಭಾರತ ಪಾಕ್ ಪಂದ್ಯಕ್ಕೆ ಎದುರಾಗುತ್ತಾ ವಿಘ್ನ? ತೆಲೆಕೆಡಿಸಿಕೊಳ್ಳಲ ಎಂದ ಸೂರ್ಯ? ಟೀಂ ಇಂಡಿಯಾ ನಾಯಕ ನಮಗೆ ಗೇಮ್ ಮಾತ್ರ ಫೋಕಸ್, ಇನ್ನುಳಿದ ವಿಚಾರಗಳ ಕುರಿತು ನಾವು ತಲೆಕೆಡಿಸಿಕೊಳ್ಳಲ ಎಂದಿದ್ದಾರೆ.
01:59 PM (IST) Feb 15
ತವರು ಮನೆಯಿಂದ ಪತ್ನಿ ವಾಪಸ್ ಬಾರದಿದ್ದಕ್ಕೆ ಕೋಪಗೊಂಡ ಪತಿ, ತನ್ನ ಮಾವನನ್ನೇ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ಪರಾರಿಯಾಗಿದ್ದಾನೆ.
01:12 PM (IST) Feb 15
elderly couple divorce case: 58 ವರ್ಷಗಳ ಕಾಲ ಸುಖವಾಗಿ ದಾಂಪತ್ಯ ನಡೆಸಿದ್ದ ವೃದ್ಧ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಆ ದಂಪತಿಗೆ ವಿಚ್ಚೇದನ ನೀಡಲು ರಾಜಸ್ಥಾನ ಹೈಕೋರ್ಟ್ ನಿರಾಕರಿಸಿದ್ದೇಕೆ?
12:22 PM (IST) Feb 15
12:20 PM (IST) Feb 15
ಶೇಕ್ ಹಸೀನಾ ಉಚ್ಚಾಟನೆಯ ನಂತರ ನಡೆದ ಚುನಾವಣೆಯಲ್ಲಿ ಬಾಂಗ್ಲಾದೇಶ ರಾಷ್ಟ್ರೀಯತವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯಗಳಿಸಿದ್ದು, ತಾರಿಖ್ ರೆಹಮಾನ್ ನೂತನ ನಾಯಕರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಪ್ರಮಾಣವಚನ ಸಮಾರಂಭಕ್ಕೆ ಭಾರತ ಸೇರಿದಂತೆ 13 ದೇಶಗಳ ನಾಯಕರಿಗೆ ಆಹ್ವಾನ ನೀಡಲಾಗಿದೆ.
12:18 PM (IST) Feb 15
ಮನೆ ಕಟ್ಟುವಾಗ ಪ್ರತಿಯೊಂದನ್ನೂ ವಾಸ್ತು ಪ್ರಕಾರವೇ ಮಾಡಬೇಕು. ಮನೆಯ ಪ್ರತಿಯೊಂದು ಭಾಗದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ವಿವರಿಸಲಾಗಿದೆ. ಮನೆಯಲ್ಲಿ ಯಾವ ಬಣ್ಣದ ಟೈಲ್ಸ್ ಬಳಸಬಾರದು ಎಂಬುದರ ಬಗ್ಗೆಯೂ ಮಾಹಿತಿ ಇದೆ. ತಪ್ಪು ಬಣ್ಣದ ಟೈಲ್ಸ್ ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆಗಳನ್ನು ತಂದೊಡ್ಡಬಹುದು.
11:41 AM (IST) Feb 15
ಬೆಂಗಳೂರು: ಟಿ20 ವಿಶ್ವಕಪ್ ಕ್ರಿಕೆಟ್ ಜ್ವರ ಏರುತ್ತಿದೆ. ಈ ಬಾರಿ ಕಣದಲ್ಲಿರುವ ಆಟಗಾರರು ಕೇವಲ ಆಟದಲ್ಲಿ ಮಾತ್ರವಲ್ಲ, ಹಣ ಗಳಿಕೆಯಲ್ಲೂ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್, ಫ್ರಾಂಚೈಸಿ ಲೀಗ್ ಮತ್ತು ಬ್ರ್ಯಾಂಡ್‌ಗಳಿಂದ ಅತಿ ಹೆಚ್ಚು ಸಂಪಾದಿಸಿದ ಟಾಪ್ 06 ಆಟಗಾರರ ಪಟ್ಟಿ ಇಲ್ಲಿದೆ.
11:20 AM (IST) Feb 15
ಬ್ಯಾಂಕ್‌ಗಳು ಸುಲಭವಾಗಿ ಸಾಲ ನೀಡುತ್ತಿರುವುದರಿಂದ ಮತ್ತು ಕಾರುಗಳ ಬೆಲೆ ಕೂಡ ಕಡಿಮೆಯಾಗಿರುವುದರಿಂದ, ಮಧ್ಯಮ ವರ್ಗದವರ ಕಾರು ಹೊಂದುವ ಕನಸು ನನಸಾಗುತ್ತಿದೆ. 10 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಕೆಲವು ಅತ್ಯುತ್ತಮ CNG ಕಾರುಗಳು ಮತ್ತು ಅವುಗಳ ಫೀಚರ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ.
10:52 AM (IST) Feb 15
10:51 AM (IST) Feb 15
ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನು ಹತ್ಯೆಯ ಸಂಚಿನ ಆರೋಪ ಎದುರಿಸುತ್ತಿದ್ದ ಭಾರತ ಮೂಲದ ನಿಖಿಲ್ ಗುಪ್ತಾ, ಅಮೆರಿಕದ ನ್ಯಾಯಾಲಯದಲ್ಲಿ ತನ್ನ ಅಪರಾಧ ಒಪ್ಪಿಗೆ ಈ ಹಿಂದೆ ಆರೋಪಗಳನ್ನು ನಿರಾಕರಿಸಿದ್ದ ಆತನ ಮೇಲೆ ಇದೀಗ ದೋಷಾರೋಪ ಹೊರಿಸಲಾಗಿದ್ದು, ಮೇ 29 ರಂದು ತೀರ್ಪು ಪ್ರಕಟವಾಗಲಿದೆ.
10:42 AM (IST) Feb 15
ಪಾಕಿಸ್ತಾನದ ಸೂಪರ್ ಸ್ಟಾರ್ ಬ್ಯಾಟರ್ ಹಾಗೂ ರನ್ ಮಷೀನ್ ಎಂದೇ ಗುರುತಿಸಿಕೊಂಡಿರುವ ಬಾಬರ್ ಅಜಂ ಅವರ ಪ್ರದರ್ಶನ ಭಾರತದ ಮೇಲೆ ಹೇಗಿದೆ ಎನ್ನುವುದನ್ನು ನೋಡೋಣ ಬನ್ನಿ.
09:54 AM (IST) Feb 15
Mahindra Udo ಮಹೀಂದ್ರಾ ಸಂಸ್ಥೆಯು 'ಆಟೋ ಪ್ಲೇನ್' ಪರಿಕಲ್ಪನೆಯ ಹೊಸ ಎಲೆಕ್ಟ್ರಿಕ್ ಆಟೋ 'ಉಡೋ'ವನ್ನು ಬಿಡುಗಡೆ ಮಾಡಿದೆ. ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ಮೈಲೇಜ್ ನೀಡುವ ಈ ವಾಹನವು, ರಿವರ್ಸ್ ಥ್ರೋಟಲ್, ಮೂರು ಡ್ರೈವಿಂಗ್ ಮೋಡ್‌ಗಳಂತಹ ಸ್ಮಾರ್ಟ್ ವೈಶಿಷ್ಟ್ಯಗಳಿವೆ.
09:31 AM (IST) Feb 15
ಕ್ರಿಕೆಟ್ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಪಂದ್ಯಕ್ಕೆ ಈಗ ಮಳೆಯ ಭೀತಿ ಎದುರಾಗಿದೆ. ಫೆಬ್ರವರಿ 15 ರಂದು ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಗ್ರೂಪ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯ ಮಳೆಯಿಂದಾಗಿ ನಡೆಯೋದೇ ಡೌಟ್ ಎನ್ನಲಾಗ್ತಿದೆ.
09:10 AM (IST) Feb 15
ಕೊಲಂಬೊ: ಕ್ರಿಕೆಟ್ ಜಗತ್ತಿನ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಮ್ಯಾಚ್ ಇಂದು ನಡೆಯಲಿದೆ. ಈ ಮ್ಯಾಚ್‌ನಲ್ಲಿ ಆಟಗಾರರ ನಡುವೆ ಶೇಕ್‌ಹ್ಯಾಂಡ್ ಇರುತ್ತಾ ಎನ್ನುವ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಉತ್ತರಿಸಿದ್ದಾರೆ.
08:48 AM (IST) Feb 15
ಕೊಲಂಬೊ: 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಬಹುನಿರೀಕ್ಷಿತ ಪಂದ್ಯದಲ್ಲಿಂದು ಭಾರತ-ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಭಾರತ ತಂಡವು ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವುದು ಬಹುತೇಕ ಕನ್ಫರ್ಮ್ ಆಗಿದೆ. ಭಾರತ ಸಂಭಾವ್ಯ ತಂಡ ಹೀಗಿದೆ.