LIVE NOW
Published : Dec 15, 2025, 07:18 AM ISTUpdated : Dec 15, 2025, 11:43 PM IST

India Latest News Live: Mock Auction - 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!

ಸಾರಾಂಶ

ಪುಣೆ: ‘ಡಿ.19ಕ್ಕೆ ಅಮೆರಿಕದಲ್ಲಿ ವಿವಾದಾತ್ಮಕ ಜೆಫ್ರಿ ಎಪ್‌ಸ್ಟೀನ್‌ ಲೈಂ*ಗಿಕ ಕಡತಗಳು ಬಿಡುಗಡೆಯಾಗಲಿವೆ. ಅದು ಭಾರತದ ರಾಜಕೀಯದ ಮೇಲೆ ಪರಿಣಾಮ ಬೀರಲಿದೆ. ಹಾಗೇನಾದರೂ ಆದರೆ ಪ್ರಧಾನಿ ನರೇಂದ್ರ ಮೋದಿ ಅಧಿಕಾರದಿಂದ ಕೆಳಗಿಳಿಯುತ್ತಾರೆ. ಮಹಾರಾಷ್ಟ್ರದಿಂದಲೇ ಒಬ್ಬರು ಪ್ರಧಾನಿಯಾಗುವ ಸಾಧ್ಯತೆಯಿದೆ’ ಎಂದು ಹಿರಿಯ ಕಾಂಗ್ರೆಸ್‌ ನಾಯಕ ಪೃಥ್ವಿರಾಜ್‌ ಚವಾಣ್ ಹೊಸ ಬಾಂಬ್‌ ಸಿಡಿಸಿದ್ದಾರೆ.

ಜೆಫ್ರಿ ಎಪ್‌ಸ್ಟೀನ್ ಅಮೆರಿಕದ ಲೈಂ*ಗಿಕ ಅಪರಾಧಿ. ಅಪ್ರಾಪ್ತ ಬಾಲಕಿಯರನ್ನು ಲೈಂ*ಗಿಕ ದೌರ್ಜನ್ಯಕ್ಕೆ ಒಳಪಡಿಸಿದ ಆರೋಪದ ಮೇಲೆ 2019ರಲ್ಲಿ ಜೈಲಿನಲ್ಲಿದ್ದಾಗಲೇ ಸಾವನ್ನಪ್ಪಿದ್ದ. ಆತನ ಲೈಂ*ಗಿಕ ಹಗರಣಗಳ ರಹಸ್ಯ ದಾಖಲೆಗಳನ್ನು ಬಿಡುಗಡೆ ಮಾಡುವ ಆದೇಶಕ್ಕೆ ಅಮೆರಿಕ ಅಧ್ಯಕ್ಷ ಟ್ರಂಪ್ ಸಹಿ ಹಾಕಿದ್ದಾರೆ. ಇದರಲ್ಲಿ ಅನೇಕ ಗಣ್ಯರ ಹೆಸರಿವೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಚವಾಣ್‌ ಈ ಹೇಳಿಕೆ ನೀಡಿದ್ದಾರೆ.

11:43 PM (IST) Dec 15

Mock Auction - 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!

Mock Auction Shock: Cameroon Green Sold to KKR for Record ₹30.5 Crore Ahead of IPL 2026 Mini-Auction ಕೆಕೆಆರ್ ಐಪಿಎಲ್ 2026 ರ ಹರಾಜಿನಲ್ಲಿ 64.30 ಕೋಟಿ ರೂಪಾಯಿಗಳ ಅತಿ ದೊಡ್ಡ ಹಣದೊಂದಿಗೆ ಪ್ರವೇಶಿಸಲಿದೆ.

 

Read Full Story

11:20 PM (IST) Dec 15

29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!

Squash World Cup 2025: ಭಾರತ ಸ್ಕ್ವಾಷ್ ವಿಶ್ವಕಪ್ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತ ಮೊದಲ ಬಾರಿಗೆ ಗೆಲುವಿನ ರುಚಿ ಸವಿಯಿತು. ಅಂತಿಮ ಪಂದ್ಯದಲ್ಲಿ ಹಾಂಗ್ ಕಾಂಗ್ ತಂಡವನ್ನು ಸೋಲಿಸಿ ಪ್ರಶಸ್ತಿ ಗೆದ್ದಿತು.

Read Full Story

10:52 PM (IST) Dec 15

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!

ರಿಲಯನ್ಸ್ ಜಿಯೋ ಹ್ಯಾಪಿ ನ್ಯೂ ಇಯರ್ ಪ್ಲಾನ್ 2026 ಅನ್ನು ಬಿಡುಗಡೆ ಮಾಡಿದೆ. ಈ ಹೊಸ ಪ್ಲಾನ್ ನಲ್ಲಿ ಡೇಟಾ, ಕರೆ ಮತ್ತು SMS ಜೊತೆಗೆ, ನೀವು ಕಡಿಮೆ ಬೆಲೆಗೆ 10 ಕ್ಕೂ ಹೆಚ್ಚು OTT ಆಪ್ ಗಳಿಗೆ ಉಚಿತ ಪ್ರವೇಶ ನೀಡಲಿದೆ.

 

Read Full Story

09:19 PM (IST) Dec 15

'ಮಹಿಳೆಯರು ಇರೋದು ಗಂಡನ ಜೊತೆ ಮಲಗೋಕೆ ಮಾತ್ರ..' ವಿಜಯೋತ್ಸವ ಭಾಷಣದಲ್ಲಿ ಸಿಪಿಎಂ ನಾಯಕನ ವಿವಾದಿತ ಮಾತು

ಮಲಪ್ಪುರಂನಲ್ಲಿ ಚುನಾವಣಾ ಗೆಲುವಿನ ಬಳಿಕ ಸಿಪಿಎಂ ಪ್ರಾದೇಶಿಕ ನಾಯಕ ಸಯೀದ್ ಅಲಿ ಮಜೀದ್, ಮಹಿಳೆಯರು ರಾಜಕೀಯಕ್ಕಲ್ಲ, ತಮ್ಮ ಗಂಡನ ಜೊತೆ ಮಲಗಲು ಮಾತ್ರ ಎಂದು ಸ್ತ್ರೀದ್ವೇಷದ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯು ಕೇರಳದಲ್ಲಿ ತೀವ್ರ ವಿವಾದ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
Read Full Story

08:17 PM (IST) Dec 15

ಸೊಂಟಕ್ಕೆ ಸನ್‌ಗ್ಲಾಸ್‌ ಸಿಕ್ಕಿಸಿಕೊಂಡು ನಟಿಯ ಪೋಸ್‌.. ಟ್ರೋಲಿಗರ ಕಾಮೆಂಟ್ಸ್‌ಗೆ ಕಂಗಾಲಾದ ಸೀರಿಯಲ್‌ ತಾರೆ!

Shivali Prab Photos: ಜನಪ್ರಿಯ ಮರಾಠಿ ನಟಿ ಶಿವಾಲಿ ಪರಬ್ ತಮ್ಮ ಇತ್ತೀಚಿನ ಹಾಟ್ ಫೋಟೋಶೂಟ್‌ಗಾಗಿ ಸುದ್ದಿಯಲ್ಲಿದ್ದಾರೆ. ಹಳದಿ ಸೀರೆ, ಬ್ಲೇಜರ್ ಧರಿಸಿ, ಸೊಂಟದ ಬಳಿ ಕನ್ನಡಕ ಇಟ್ಟುಕೊಂಡು ಪೋಸ್ ನೀಡಿದ ಫೋಟೋದಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಟ್ರೋಲ್‌ಗೆ ಒಳಗಾಗಿದ್ದಾರೆ.

Read Full Story

08:00 PM (IST) Dec 15

ರೈಲ್ ಇಂಡಿಯಾ ನೇಮಕಾತಿ - 154 ಹುದ್ದೆಗಳಿಗೆ ಅರ್ಜಿ ಅಹ್ವಾಣ , ತಕ್ಷಣವೇ ಅರ್ಜಿ ಸಲ್ಲಿಸಿ

ರೈಲ್ ಇಂಡಿಯಾ ತಾಂತ್ರಿಕ & ಆರ್ಥಿಕ ಸೇವೆ (RITES) 2025ನೇ ಸಾಲಿಗೆ 154 ಹಿರಿಯ ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದೆ. ಡಿಪ್ಲೊಮಾ ವಿದ್ಯಾರ್ಹತೆ ಹೊಂದಿರುವ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 30, 2025 ರೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
Read Full Story

07:38 PM (IST) Dec 15

ಹಸೆಮಣೆ ಏರುವ ಮುನ್ನ ಎಕ್ಸ್​ ಬಾಯ್​ಫ್ರೆಂಡ್​ ಜೊತೆ ಕೊನೆಯ ಹಗ್ ಮಾಡಿದ ವಧು! ಹೀಗೂ ಉಂಟು- ವಿಡಿಯೋ ವೈರಲ್​

ಮದುವೆಗೆ ಕೆಲವೇ ಗಂಟೆಗಳ ಮೊದಲು, ವಧುವೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಭೇಟಿಯಾಗಿ ಅಪ್ಪಿಕೊಂಡಿರುವ ವಿಡಿಯೋ ವೈರಲ್ ಆಗಿದೆ. ಕುಟುಂಬದ ಒತ್ತಡದಿಂದ ಬೇರೆಯವರನ್ನು ಮದುವೆಯಾಗುತ್ತಿರುವ ಆಕೆ, ಕೊನೆಯ ಬಾರಿ ಪ್ರೇಮಿಗೆ ವಿದಾಯ ಹೇಳಲು ಬಂದಿದ್ದಳು.   

Read Full Story

07:32 PM (IST) Dec 15

Viral Video - ವೇದಿಕೆಯಲ್ಲೇ ಮಹಿಳಾ ವೈದ್ಯೆಯ ಹಿಜಾಬ್‌ ತೆಗೆಯಲು ಯತ್ನಿಸಿದ ಬಿಹಾರ ಸಿಎಂ ನಿತೀಶ್‌ ಕುಮಾರ್‌

ಬಿಹಾರ ಸಿಎಂ ನಿತೀಶ್ ಕುಮಾರ್ ಅವರು ಆಯುಷ್ ವೈದ್ಯರಿಗೆ ನೇಮಕಾತಿ ಪತ್ರ ನೀಡುವ ಸಮಾರಂಭದಲ್ಲಿ, ಮಹಿಳಾ ವೈದ್ಯೆಯೊಬ್ಬರ ಹಿಜಾಬ್ ತೆಗೆಯಲು ಯತ್ನಿಸಿ ವಿವಾದ ಸೃಷ್ಟಿಸಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ವಿರೋಧ ಪಕ್ಷಗಳು ಅವರ ಮಾನಸಿಕ ಸ್ಥಿತಿಯನ್ನು ಪ್ರಶ್ನಿಸಿ, ರಾಜೀನಾಮೆಗೆ ಆಗ್ರಹಿಸಿವೆ.
Read Full Story

07:11 PM (IST) Dec 15

ನಕಲಿ ಕ್ಯೂಆರ್​ ಕೋಡ್​ಗೆ ಬಲಿಯಾಗದಿರಿ ಎಚ್ಚರ! ಯಾಮಾರಿದ್ರೆ ಅಕೌಂಟ್​ ಖಾಲಿ - ನಕಲಿ ಗುರುತಿಸುವುದು ಹೇಗೆ?

ಡಿಜಿಟಲ್ ಯುಗದಲ್ಲಿ ಕ್ಯೂಆರ್ ಕೋಡ್ ಪಾವತಿ ಸಾಮಾನ್ಯವಾಗಿದ್ದು, ಇದರೊಂದಿಗೆ ಮೋಸದ ಜಾಲವೂ ಬೆಳೆಯುತ್ತಿದೆ. ಪಾರ್ಕಿಂಗ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ನಕಲಿ ಕ್ಯೂಆರ್ ಕೋಡ್‌ ಅಂಟಿಸಿ ವಂಚನೆ ಹೆಚ್ಚಾಗಿದ್ದು, ಇದನ್ನು ಗುರುತಿಸುವುದು ಮತ್ತು ಮೋಸ ಹೋದರೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ

Read Full Story

06:30 PM (IST) Dec 15

ರಜೆ ಮುಗಿಸಿ ವಾಪಾಸ್‌ ಬಂದ ಬಾಲಕಿಯರಿಗೆ ಪ್ರೆಗ್ನೆನ್ಸಿ ಟೆಸ್ಟ್‌, ಸರ್ಕಾರಿ ಗರ್ಲ್ಸ್‌ ಹಾಸ್ಟೆಲ್‌ನ ಹೊಸ ನಿಯಮಕ್ಕೆ ಆಕ್ರೋಶ

ಮಹಿಳಾ ಆಯೋಗ ಕೂಡ ಈ ಸೂಕ್ಷ್ಮ ವಿಷಯವನ್ನು ಗಮನದಲ್ಲಿಟ್ಟುಕೊಂಡು ತನಿಖೆಯನ್ನು ಪ್ರಾರಂಭಿಸಿದೆ. ಈ ಪರೀಕ್ಷೆಯು ಗೌಪ್ಯತೆಯ ಉಲ್ಲಂಘನೆ ಮಾತ್ರವಲ್ಲದೆ ತಾರತಮ್ಯವೂ ಆಗಿದೆ ಎಂದು ಮಹಿಳಾ ಹಕ್ಕುಗಳ ಕಾರ್ಯಕರ್ತರು ಹೇಳಿದ್ದಾರೆ.

 

Read Full Story

05:44 PM (IST) Dec 15

ಅದೇನೇ ಆಫರ್‌ ಬರಲಿ, ಬಿಜೆಪಿ ಮಾತ್ರ ಸೇರೋದಿಲ್ಲ, ಜಾತ್ಯಾತೀತಕ್ಕೆ ನನ್ನ ಬೆಂಬಲ - ಕಾಂಗ್ರೆಸ್‌ ರೆಬಲ್‌ ಲೀಡರ್‌

Congress Rebel H. Rasheed Wins Palakkad Polls, Declares Support for Secular Front; Will Not Join BJP ಪಕ್ಷದಿಂದ ಉಚ್ಚಾಟನೆಗೊಂಡಿರುವುದರಿಂದ ತಾನು ಸ್ವತಂತ್ರ ಅಭ್ಯರ್ಥಿಯಾಗಿಯೇ ಉಳಿಯುತ್ತೇನೆ ಎಂದು ರಶೀದ್ ಹೇಳಿದ್ದಾರೆ.

 

Read Full Story

05:32 PM (IST) Dec 15

ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!

ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜು ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಹೀಗಿರುವಾಗಲೇ 19ನೇ ಆವೃತ್ತಿಯ ಐಪಿಎಲ್ ಹರಾಜಿಗೂ ಮುನ್ನ ಟಾಪ್ 06 ದುಬಾರಿ ಆಟಗಾರರು ಯಾರು ಎನ್ನುವುದನ್ನು ನೋಡೋಣ ಬನ್ನಿ.

 

Read Full Story

05:23 PM (IST) Dec 15

ಕೋಡಿಂಗ್, ನಿರಂತರ ಮೀಟಿಂಗ್ ನಡೆಸಿ ಬೇಸತ್ತು 30 ಲಕ್ಷ ರೂ ವೇತನದ ಉದ್ಯೋಗ ತೊರೆದ ಚೆನ್ನೈ ಟೆಕ್ಕಿ!

ಚೆನ್ನೈ ಮೂಲದ ಸಾಫ್ಟ್‌ವೇರ್ ವೃತ್ತಿಪರರಾದ ವನತಿ ಎಸ್, ₹30 ಲಕ್ಷ ಸಂಬಳದ ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿದ್ದಾರೆ. ಕಾರ್ಪೊರೇಟ್ ಒತ್ತಡ ಮತ್ತು ದಣಿವಿನಿಂದಾಗಿ ಈ ನಿರ್ಧಾರ ಕೈಗೊಂಡ ಅವರು, ಇದೀಗ ಪೂರ್ಣಕಾಲಿಕ ಕಂಟೆಂಟ್ ಕ್ರಿಯೇಟರ್ ಆಗಿ ತೃಪ್ತಿಕರ ಜೀವನ ನಡೆಸುತ್ತಿದ್ದಾರೆ.
Read Full Story

04:47 PM (IST) Dec 15

ಮೋದಿಗೆ ಸಮಾಧಿ ತೊಡುತ್ತೇವೆ - ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ

ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ 'ಮೋದಿ ತೇರಿ ಕಬರ್ ಖುದೇಗಿ' ಎಂಬ ಘೋಷಣೆ ಕೂಗಲಾಗಿದ್ದು, ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಈ ಘೋಷಣೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ, ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಮೊಘಲರಂತೆ ಅಂತ್ಯ ಕಾಣಲಿದೆ ಎಂದು ಹೇಳಿದೆ.

Read Full Story

04:46 PM (IST) Dec 15

'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!

ತ್ರಿಕ್ಕಾಕರದ ಸ್ವತಂತ್ರ ಅಭ್ಯರ್ಥಿ ಸಾಬು ಫ್ರಾನ್ಸಿಸ್, ಚುನಾವಣಾ ಫಲಿತಾಂಶ ಪ್ರಕಟವಾಗುವ ಮೊದಲೇ 12,000 ಲಡ್ಡುಗಳನ್ನು ತಯಾರಿಸುವ ಮೂಲಕ ತಮ್ಮ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದರು. ಇದು ವ್ಯರ್ಥ ಕೂಡ ಆಗಲಿಲ್ಲ. ಆತ 142 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

 

Read Full Story

04:25 PM (IST) Dec 15

ಮೆಸ್ಸಿ ಜತೆ ಮುಗಿಬಿದ್ದು ಸೆಲ್ಫಿ ಕ್ಲಿಕ್ಕಿಸಿಕೊಂಡ ಅಮೃತಾ ಫಡ್ನವೀಸ್! ಮಹಾರಾಷ್ಟ್ರ ಸಿಎಂ ಪತ್ನಿ ಫುಲ್ ಟ್ರೋಲ್

ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವೀಸ್, ಮುಂಬೈನಲ್ಲಿ ಫುಟ್ಬಾಲ್ ದಂತಕಥೆ ಲಿಯೋನೆಲ್ ಮೆಸ್ಸಿ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ವೇಳೆ ಸಹ ಆಟಗಾರರನ್ನು ಬದಿಗೆ ಸರಿಸಿ, ಅನುಮತಿ ಇಲ್ಲದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಅವರ ವರ್ತನೆಯು ನೆಟ್ಟಿಗರು ಅವರನ್ನು ಟ್ರೋಲ್ ಮಾಡುತ್ತಿದ್ದಾರೆ.

Read Full Story

04:03 PM (IST) Dec 15

ಮನ್ರೆಗಾ ಹೆಸರು ಬದಲಿಸಲು ಇಚ್ಛಿಸಿದ ಮೋದಿ ಸರ್ಕಾರ, ಇನ್ಮುಂದೆ ಇದು VBGRAMG!

ಮೋದಿ ಸರ್ಕಾರವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (MGNREGA) ಯನ್ನು ರದ್ದುಗೊಳಿಸಿ, 'ವಿಕಸಿತ ಭಾರತ- ಉದ್ಯೋಗ ಮತ್ತು ಜೀವನೋಪಾಯಕ್ಕಾಗಿ ಖಾತರಿ ಮಿಷನ್ (ಗ್ರಾಮೀಣ) (ವಿಬಿ-ಜಿ RAM ಜಿ) ಮಸೂದೆ, 2025' ಎಂಬ ಹೊಸ ಕಾನೂನನ್ನು ಪರಿಚಯಿಸುತ್ತಿದೆ.

Read Full Story

03:46 PM (IST) Dec 15

ರಾಮಕಥಾ ವಾಚಿಸುತ್ತಲೇ ಕೊನೆಯುಸಿರು - ರಾಮಮಂದಿರ ಚಳುವಳಿಯ ಹಿರಿಯ ಸಂತ ಡಾ ರಾಮವಿಲಾಸ್ ದಾಸ್ ಇನ್ನಿಲ್ಲ...

ರಾಮ ಮಂದಿರ ಚಳವಳಿಯ ಹಿರಿಯ ಸಂತ ಮತ್ತು ಮಾಜಿ ಸಂಸದ ಡಾ. ರಾಮ್ ವಿಲಾಸ್ ದಾಸ್ ವೇದಾಂತಿ ಅವರು ಮಧ್ಯಪ್ರದೇಶದ ರೇವಾದಲ್ಲಿ ನಿಧನರಾಗಿದ್ದಾರೆ. ರಾಮ ಜನ್ಮಭೂಮಿ ನ್ಯಾಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದ ಅವರು, ರಾಮಕಥಾ ಪ್ರವಚನದ ವೇಳೆ ಆರೋಗ್ಯ ಹದಗೆಟ್ಟು ಕೊನೆಯುಸಿರೆಳೆದಿದ್ದಾರೆ.

Read Full Story

03:28 PM (IST) Dec 15

ಶುಭ್‌ಮನ್ ಗಿಲ್‌ಗೆ ಇನ್ನೂ 2 ಮ್ಯಾಚ್‌ನಲ್ಲಿ ಅವಕಾಶ ಕೊಡಿ - ಅಶ್ವಿನ್ ಅಚ್ಚರಿಯ ಹೇಳಿಕೆ

ಓಪನರ್ ಆಗಿ ನಿರಾಸೆ ಮೂಡಿಸುತ್ತಿರುವ ಶುಭಮನ್ ಗಿಲ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮುಂದಿನ 2 ಪಂದ್ಯಗಳಲ್ಲಿ ಅವಕಾಶ ನೀಡಬೇಕು ಎಂದು ಮಾಜಿ ಆಟಗಾರ ಆರ್. ಅಶ್ವಿನ್ ಹೇಳಿದ್ದಾರೆ. ಒಂದು ವೇಳೆ ಆ ಪಂದ್ಯಗಳಲ್ಲೂ ಗಿಲ್ ವಿಫಲವಾದರೆ, ಅವರನ್ನು ತಂಡದಿಂದ ಕೈಬಿಡುವ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

Read Full Story

02:44 PM (IST) Dec 15

ಬಿಟೆಕ್ ಪದವಿಯನ್ನು ಪೂರ್ಣಗೊಳಿಸಲು ಅಸಮರ್ಥರಾಗಿರುವ ವಿದ್ಯಾರ್ಥಿಗಳಿಗೆ ಹೊಸ ಯೋಜನೆ ಘೋಷಿಸಿದ ಐಐಟಿ ಮದ್ರಾಸ್‌

ಐಐಟಿ ಮದ್ರಾಸ್, ಬಿಟೆಕ್ ಪದವಿ ಪೂರ್ಣಗೊಳಿಸಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ನಂತರ ಬಿಎಸ್ಸಿ ಪದವಿಯೊಂದಿಗೆ ನಿರ್ಗಮಿಸುವ ಹೊಸ ಆಯ್ಕೆಯನ್ನು ಪರಿಚಯಿಸಿದೆ. ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರುವ ಈ ಕ್ರಮವು, ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

Read Full Story

01:47 PM (IST) Dec 15

ಇವತ್ತು 10/10 ಎಂದ ಮಾಸ್ಟರ್ ಬ್ಲಾಸ್ಟರ್! ಸಚಿನ್‌ ತೆಂಡೂಲ್ಕರ್‌ಗೆ ಅಪರೂಪದ ಗಿಫ್ಟ್ ಕೊಟ್ಟ ಮೆಸ್ಸಿ!

ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಿಯೋನೆಲ್ ಮೆಸ್ಸಿ ತಮ್ಮ ಭಾರತ ಪ್ರವಾಸದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿಯಾದರು. ಈ ಐತಿಹಾಸಿಕ ಭೇಟಿಯ ವೇಳೆ ಇಬ್ಬರೂ ದಿಗ್ಗಜರು ವಿಶೇಷ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.

Read Full Story

01:11 PM (IST) Dec 15

ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ನವಜಾತ ಶಿಶು ಸಾವು

ಉತ್ತರ ಪ್ರದೇಶದ ಅಮ್ರೋಹಾದಲ್ಲಿ, ನಿದ್ರಿಸುತ್ತಿದ್ದ ಪೋಷಕರ ಮಧ್ಯೆ ಸಿಲುಕಿ ಒಂದು ತಿಂಗಳ ನವಜಾತ ಶಿಶು ಉಸಿರುಕಟ್ಟಿ ಸಾವನ್ನಪ್ಪಿದೆ. ಡಿಟೇಲ್ ಸ್ಟೋರಿ ಇಲ್ಲಿದೆ.

Read Full Story

01:00 PM (IST) Dec 15

ನಾನು ಫಾರ್ಮ್ ಕಳೆದುಕೊಂಡಿಲ್ಲ, ಆದ್ರೆ..! 3ನೇ ಟಿ20 ಪಂದ್ಯದ ಗೆಲುವಿನ ಬೆನ್ನಲ್ಲೇ ಸೂರ್ಯ ಅಚ್ಚರಿ ಹೇಳಿಕೆ!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿದರೂ, ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಚಿಂತೆಗೆ ಕಾರಣವಾಗಿದೆ. ಪಂದ್ಯದ ನಂತರ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ ಸೂರ್ಯ, ತಾನು ಔಟ್ ಆಫ್ ಫಾರ್ಮ್ ಆಗಿಲ್ಲ  ಎಂದು ಹೇಳಿದ್ದಾರೆ.

Read Full Story

11:51 AM (IST) Dec 15

ಸಿಡ್ನಿಯ ಬೋಂಡಿ ಬೀಚ್‌ನಲ್ಲಿ 15 ಜನರ ಬಲಿ ಪಡೆದ ಯಹೂದಿ ಹಬ್ಬದ ಮೇಲಿನ ದಾಳಿಯ ಹಿಂದೆ ಪಾಕಿಸ್ತಾನಿ ಅಪ್ಪ ಮಗ

ಆಸ್ಟ್ರೇಲಿಯಾದ ಬೋಂಡಿ ಬೀಚ್‌ನಲ್ಲಿ ಯಹೂದಿ ಹಬ್ಬದ ವೇಳೆ ನಡೆದ ಗುಂಡಿನ ದಾಳಿಯಲ್ಲಿ 15 ಜನರು ಸಾವನ್ನಪ್ಪಿದ್ದಾರೆ. ಈ ಕೃತ್ಯವನ್ನು ಪಾಕಿಸ್ತಾನಿ ಮೂಲದ ತಂದೆ ಮತ್ತು ಮಗ ಎಸಗಿದ್ದು, ಇದೊಂದು ಭಯೋತ್ಪಾದಕ ಕೃತ್ಯ ಎಂದು ಪ್ರಧಾನಿ ಆಂಥೋನಿ ಅಲ್ಬನೀಸ್ ಬಣ್ಣಿಸಿದ್ದಾರೆ.
Read Full Story

10:53 AM (IST) Dec 15

ಭಾರತ ಎದುರು ಹೀನಾಯ ಸೋಲಿಗೆ ಅಚ್ಚರಿ ಕಾರಣ ಬಿಚ್ಚಿಟ್ಟ ದಕ್ಷಿಣ ಆಫ್ರಿಕಾ ಕ್ಯಾಪ್ಟನ್ ಮಾರ್ಕ್‌ರಮ್!

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭಾರತ 7 ವಿಕೆಟ್‌ಗಳ ಜಯ ಸಾಧಿಸಿ, ಸರಣಿಯಲ್ಲಿ 2-1ರ ಮುನ್ನಡೆ ಕಾಯ್ದುಕೊಂಡಿದೆ. ಭಾರತದ ಬೌಲರ್‌ಗಳ ದಾಳಿಗೆ ತತ್ತರಿಸಿದ ಹರಿಣಗಳ ಪಡೆ 117 ರನ್‌ಗಳಿಗೆ ಆಲೌಟ್ ಆಯಿತು. ಸೋಲಿನ ಬಗ್ಗೆ ದಕ್ಷಿಣ ಆಫ್ರಿಕಾ ನಾಯಕ ಮಾರ್ಕ್‌ರಮ್ ಕಾರಣ ಬಿಚ್ಚಿಟ್ಟಿದ್ದಾರೆ.

Read Full Story

09:32 AM (IST) Dec 15

PM Modi - ಮತ್ತೆ ದಕ್ಷಿಣದತ್ತ ಮುಖ ಮಾಡಿದ ಪ್ರಧಾನಿ - ರಾಜಕೀಯ ಮಹತ್ವ ಪಡೆದ ಮೋದಿ ನಡೆ

ಪ್ರಧಾನಿ ಮೋದಿ ತಮಿಳುನಾಡು ಪ್ರವಾಸ ಕೈಗೊಂಡು ರೈತರೊಂದಿಗೆ ಪೊಂಗಲ್ ಆಚರಿಸುವ ಸಾಧ್ಯತೆಯಿದ್ದು, ಇದು ರಾಜಕೀಯ ಮಹತ್ವ ಪಡೆದಿದೆ. ತಮಿಳುನಾಡಿನ ಗ್ರಾಮೀಣ ಮತ್ತು ರೈತಾಪಿ ವರ್ಗದ ಮತ ಸೆಳೆಯಲೂ ಮುಂದಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.

Read Full Story

09:17 AM (IST) Dec 15

IPL 2026 - ಮಿನಿ ಹರಾಜಿಗೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಭಾರತದ ಸ್ಟಾರ್ ಕ್ರಿಕೆಟಿಗ 'ವೈಲ್ಡ್ ಕಾರ್ಡ್' ಎಂಟ್ರಿ!

2026ರ ಐಪಿಎಲ್ ಮಿನಿ ಹರಾಜಿಗೆ ಕೊನೆಯ ಕ್ಷಣದಲ್ಲಿ ಭಾರತದ ಬ್ಯಾಟರ್ ಅಭಿಮನ್ಯು ಈಶ್ವರನ್ ಅವರ ಹೆಸರು ವೈಲ್ಡ್ ಕಾರ್ಡ್ ಮೂಲಕ ಸೇರ್ಪಡೆಯಾಗಿದೆ. ಫ್ರಾಂಚೈಸಿಯೊಂದರ ಮನವಿಯ ಮೇರೆಗೆ ಈ ಸೇರ್ಪಡೆ ನಡೆದಿದ್ದು, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿನ ಅವರ ಸ್ಫೋಟಕ ಪ್ರದರ್ಶನ ಇದಕ್ಕೆ ಕಾರಣವಾಗಿದೆ.
Read Full Story

08:56 AM (IST) Dec 15

ರುಪಾಯಿ ಮೌಲ್ಯ ಕುಸಿತದ ಎಫೆಕ್ಟ್‌ - ಹೊಸ ವರ್ಷಕ್ಕೆ ದೇಶವಾಸಿಗಳಿಗೆ ಸಿಗಲಿದೆ ಶಾಕ್!

ಡಾಲರ್‌ ಎದುರು ರುಪಾಯಿ ಮೌಲ್ಯ ಕುಸಿಯುತ್ತಿರೋದರಿಂದ ಸಾರ್ವಜನಿಕರಿಗೆ ಬೆಲೆ ಏರಿಕೆ ಬಿಸಿ ತಾಗಲಿದೆ. ಆಮದು ವೆಚ್ಚಗಳು ಹೆಚ್ಚಾದ ಹಿನ್ನೆಲೆ ಬೆಲೆ  ಏರಿಕೆ ಅನಿವಾರ್ಯ ಎಂದು ಉತ್ಪಾದಕರು ಮಾಹಿತಿ ನೀಡಿದ್ದಾರೆ.

Read Full Story

08:08 AM (IST) Dec 15

ಮುಂಬೈನಲ್ಲಿ ಮೆಸ್ಸಿ ಮೇನಿಯಾ! ಫುಟ್ಬಾಲ್‌ ಲೆಜೆಂಡ್‌ಗೆ 2011ರ ವಿಶ್ವಕಪ್ ಜೆರ್ಸಿ ಕೊಟ್ಟ ಸಚಿನ್

ಅರ್ಜೆಂಟೀನಾದ ಫುಟ್ಬಾಲ್‌ ದಂತಕಥೆ ಲಿಯೋನೆಲ್‌ ಮೆಸ್ಸಿ ತಮ್ಮ ಭಾರತ ಪ್ರವಾಸದ ಭಾಗವಾಗಿ ಮುಂಬೈಗೆ ಭೇಟಿ ನೀಡಿದರು. ಈ ವೇಳೆ ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡುಲ್ಕರ್‌ ಮತ್ತು ಫುಟ್ಬಾಲ್‌ ನಾಯಕ ಸುನಿಲ್‌ ಚೆಟ್ರಿ ಅವರನ್ನು ಭೇಟಿಯಾಗಿ, ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.  

Read Full Story

07:58 AM (IST) Dec 15

62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಡೆಸಿ ಗೆದ್ದ 82ರ ವೃದ್ಧ

ಪಂಜಾಬ್‌ನ 80 ವರ್ಷದ ವೃದ್ಧರೊಬ್ಬರು 62 ವರ್ಷಗಳ ಸುದೀರ್ಘ ಕಾನೂನು ಹೋರಾಟದ ನಂತರ ಭೂ ವ್ಯಾಜ್ಯವನ್ನು ಗೆದ್ದಿದ್ದಾರೆ. 1963ರಲ್ಲಿ ತಮ್ಮ ತಾಯಿ ಖರೀದಿಸಿದ್ದ ಸೈಟುಗಳಿಗೆ ಸಂಬಂಧಿಸಿದ ಈ ಪ್ರಕರಣದಲ್ಲಿ, ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ ವೃದ್ಧರ ಪರ ತೀರ್ಪು ನೀಡಿದೆ.

Read Full Story

07:49 AM (IST) Dec 15

ಆರ್‌ಎಸ್‌ಎಸ್‌ ಸಿದ್ಧಾಂತಗಳು ದೇಶಕ್ಕೆ ಮಾರಕ - ಮಲ್ಲಿಕಾರ್ಜುನ ಖರ್ಗೆ

‘ವೋಟ್‌ ಚೋರ್‌ ಗದ್ದೀ ಛೋಡ್‌’ ರ್‍ಯಾಲಿಯಲ್ಲಿ ಮಾತನಾಡಿದ ಖರ್ಗೆ, ‘ಬಿಜೆಪಿಗರು ದ್ರೋಹಿಗಳು ಮತ್ತು ಡ್ರಾಮೆಬಾಜ್‌ (ನಾಟಕ) ಮಾಡುತ್ತಾರೆ. ಅವರನ್ನು ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಮಲ್ಲಿಕಾರ್ಜುನ್ ಖರ್ಗೆ ಆಗ್ರಹಿಸಿದರು.

Read Full Story

07:36 AM (IST) Dec 15

ಕೇಂದ್ರ ಸಚಿವರನ್ನು ಟಾರ್ಗೆಟ್ ಮಾಡಿದ ಪಾಕಿಸ್ತಾನದ ಐಎಸ್‌ಐ - ಕೇಂದ್ರ ಗೃಹ ಇಲಾಖೆಯಿಂದ ಭದ್ರತೆ ಹೆಚ್ಚಳ

ಚೌಹಾಣ್‌ ಅವರನ್ನು ಪಾಕ್‌ನ ಐಎಸ್‌ಐ ಗುರಿ ಮಾಡಿದೆ ಎಂಬ ಮಾಹಿತಿ ಲಭಿಸಿದ ತಕ್ಷಣವೇ ಕೇಂದ್ರ ಗೃಹ ಇಲಾಖೆಯು ಕೂಡಲೇ ಮಧ್ಯ ಪ್ರದೇಶ ಡಿಜಿಪಿ ಮತ್ತು ದೆಹಲಿಯ ವಿಶೇಷ ಕಮಿಷನರ್‌ರಿಗೆ ಪತ್ರ ಬರೆದು ಭದ್ರತೆ ಹೆಚ್ಚಿಸುವಂತೆ ಆದೇಶಿಸಿದೆ.

Read Full Story

More Trending News