ಪಟನಾ: ಬಿಹಾರದ ವಿಪಕ್ಷ ಕೂಟದಲ್ಲಿ ಕೊನೆಗೂ ಸೀಟು ಹಂಚಿಕೆ ಅಂತಿಮ ಹಂತಕ್ಕೆ ಬಂದಿದ್ದು, 144 ಸೀಟಿನ ಆಸೆಯಲ್ಲಿದ್ದ ಆರ್‌ಜೆಡಿಗೆ 135, 70 ಸೀಟುಗಳ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ಗೆ 61 ದಕ್ಕಿವೆ ಎಂದು ಮೂಲಗಳು ತಿಳಿಸಿವೆ. ಸಿಪಿಐಎಂ ಎಲ್, ಸಿಪಿಐ ಮತ್ತು ಸಿಪಿಎಂಗೆ 29ರಿಂದ 31 ಹಾಗೂ ಮುಕೇಶ್ ಸಹನಿ ಅವರ ವಿಐಪಿ ಪಕ್ಷಕ್ಕೆ 16 ಸೀಟುಗಳು ಸಿಗಲಿವೆ ಎನ್ನಲಾಗಿದೆ. ಅಂತಿಮ ಪಟ್ಟಿ ಮಂಗಳವಾರ ಬಿಡುಗಡೆಯಾಗಲಿದೆ. ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ 65 ಅಭ್ಯರ್ಥಿಗಳ 2ನೇ ಪಟ್ಟಿ ಪ್ರಕಟಿಸಿದ್ದು, ಇದರ ಲ್ಲಿಯೂ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕ್ಷೇತ್ರ ರಾಘೋಪುರದಲ್ಲಿ ಪಕ್ಷದ ಪರ ಕಣಕ್ಕಿಳಿ ಯಲಿರುವ ಅಭ್ಯರ್ಥಿಯನ್ನು ಘೋಷಿಸಿಲ್ಲ. ಇಲ್ಲಿ ಸ್ವತಃ ಪಿಕೆ ಸೆಣಸಲಿದ್ದಾರೆ ಎನ್ನಲಾಗುತ್ತಿದೆ.

09:24 PM (IST) Oct 14
ಊರಿಗೆ ಹೊರಟ ಪ್ರಯಾಣಿಕರ ಖಾಸಗಿ ಬಸ್ ಅವಘಡ, ಹೊತ್ತಿ ಉರಿದು ಹಲವರು ಗಂಭೀರ, 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸ್ಥಳೀಯರ ನೆರವಿನಿಂದ ಹಲವರ ರಕ್ಷಣೆ ಮಾಡಲಾಗಿದೆ. ಬಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
08:40 PM (IST) Oct 14
Bigg Boss Ex Contestant edin rose Sexually Harassed Outside Temple ಬಿಗ್ ಬಾಸ್ ಖ್ಯಾತಿಯ ನಟಿ ಅದೀನಾ ರೋಸ್ ಅವರು ದೇವಸ್ಥಾನದ ಹೊರಗೆ ತಮಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ವೀಡಿಯೊ ಮೂಲಕ ಬಹಿರಂಗಪಡಿಸಿದ್ದಾರೆ.
08:18 PM (IST) Oct 14
ದೀಪಾವಳಿ ಡಿಸ್ಕೌಂಟ್ ಆಫರ್, ಸ್ಕೋಡಾ ಕಾರುಗಳ ಮೇಲೆ ಗರಿಷ್ಠ 4.5 ಲಕ್ಷ ರೂ ಡಿಸ್ಕೌಂಟ್ ಘೋಷಿಸಿದೆ. 7 ಲಕ್ಷ ರೂಪಾಯಿ ಇದ್ದ ಕೈಲಾಖ್ ಕಾರು ಡಿಸ್ಕೌಂಟ್ ಬಳಿಕ ಕೈಗೆಟುಕುವ ದರದಲ್ಲಿ ಲಭ್ಯವಾಗುತ್ತಿದೆ. ಯಾವ ಕಾರುಗಳಿಗೆ ಎಷ್ಟೆಷ್ಟು ಡಿಸ್ಕೌಂಟ್?
07:22 PM (IST) Oct 14
ಕನ್ನಡ ಬೆನ್ನಲ್ಲೇ ಮತ್ತೊಂದು ಬಿಗ್ ಬಾಸ್ ಶೋ ಸ್ಥಗಿತಗೊಳ್ಳುವ ಆತಂಕ, ಸ್ಪೀಕರ್ ಮುಂದೆ ಪ್ರಸ್ತಾವನೆ, ಆಡಳಿತರೂಢ ಸರ್ಕಾರದ ಮೈತ್ರಿ ಪಕ್ಷವೇ ಬಿಗ್ ಬಾಸ್ ವಿರುದ್ಧ ತೊಡೆ ತಟ್ಟಿ ನಿಂತಿದೆ. ಶೋ ಸ್ಥಗಿತಗೊಳಿಸಲು ಮುಂದಾಗಿದ್ದು, ಆತಂಕ ಹೆಚ್ಚಾಗುತ್ತಿದೆ.
06:49 PM (IST) Oct 14
Tata Motors Share Price Drops 40% After Demerger ಟಾಟಾ ಮೋಟಾರ್ಸ್ ತನ್ನ ವಾಣಿಜ್ಯ ಮತ್ತು ಪ್ರಯಾಣಿಕ ವಾಹನ ವಿಭಾಗಗಳನ್ನು ಬೇರ್ಪಡಿಸಿದ ನಂತರ, ಅದರ ಷೇರುಗಳ ಮೌಲ್ಯದಲ್ಲಿ ಸುಮಾರು 40% ಕುಸಿತ ಕಂಡಿದೆ. ಈ ಕುಸಿತವು ಡೀಮರ್ಜರ್ ಯೋಜನೆಯ ತಾಂತ್ರಿಕ ಹೊಂದಾಣಿಕೆಯಾಗಿದೆ.
06:35 PM (IST) Oct 14
2 ಲಕ್ಷ ಸ್ಯಾಲರಿ ಇದ್ದವರು 80 ಲಕ್ಷ ಬೆಂಜ್ ಖರೀದಿ, ಚರ್ಚೆಗೆ ಗ್ರಾಸವಾದ ಕಾರು ಶೋ ಆಫ್ ಪೋಸ್ಟ್, ಈ ಪೋಸ್ಟ್‌ನಿಂದ ಇದೀಗ ಕಾರು ಖರೀದಿ ಕುರಿತು ಭಾರಿ ಚರ್ಚೆಯಾಗುತ್ತಿದೆ. ಅವರವರ ಹಣದಲ್ಲಿ ಕಾರು ಖರೀದಿಸಿದರೆ ತಪ್ಪೇನು? ಪೋಸ್ಟ್ ಹೇಳುತ್ತಿರುವುದೇನು?
06:33 PM (IST) Oct 14
ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದರೂ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. 100 ಪಾಯಿಂಟ್ಸ್ ಶೇಕಡಾವಾರು ಹೊಂದಿರುವ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಶ್ರೀಲಂಕಾ ಎರಡನೇ ಸ್ಥಾನದಲ್ಲಿ ಭಾರತಕ್ಕಿಂತ ಮುಂದಿದೆ.
05:49 PM (IST) Oct 14
Hyderabad Tragedy: ಎರಡು ಅವಳಿ ಕಂದಮ್ಮಗಳ ಕೊಂದು ತಾಯಿಯೊಬ್ಬಳು ಸಾವಿಗೆ ಶರಣಾದಂತಹ ಆಘಾತಕಾರಿ ಘಟನೆ ನೆರೆಯ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. 27 ವರ್ಷದ ಮಹಿಳೆಯೊಬ್ಬಳು ತನ್ನ 2 ವರ್ಷ ಪ್ರಾಯದ ಅವಳಿ ಮಕ್ಕಳನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ಸಾವಿಗೆ ಶರಣಾಗಿದ್ದಾಳೆ
05:17 PM (IST) Oct 14
ಹರ್ಷಿತ್ ರಾಣಾ ಆಯ್ಕೆಯು ಕೋಚ್ ಗೌತಮ್ ಗಂಭೀರ್ ಅವರ ಪ್ರಭಾವದಿಂದಾಗಿದೆ ಎಂಬ ಮಾಜಿ ಆಯ್ಕೆಗಾರ ಶ್ರೀಕಾಂತ್ ಅವರ ಆರೋಪಕ್ಕೆ ಗಂಭೀರ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಯೂಟ್ಯೂಬ್ ವೀಕ್ಷಣೆಗಾಗಿ 23 ವರ್ಷದ ಯುವ ಆಟಗಾರನನ್ನು ಗುರಿಯಾಗಿಸುವುದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದಾರೆ.
04:57 PM (IST) Oct 14
ವಿಮಾನ ನಿಲ್ದಾಣ ಡ್ಯೂಟಿ ಫ್ರೀ ಶಾಪ್‌ನಿಂದ ಮದ್ಯ ಖರೀದಿಸಿದ ಯುವಕ ಅರೆಸ್ಟ್, ನಿಯಮವೇನು?, ಬಂಧಿತ ಯುವಕನಿಂದ 10 ಬಾಟಲಿ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ದುಡ್ಡು ಕೊಟ್ಟು ಮದ್ಯ ಖರೀದಿಸಿದರೂ ಯುವಕ ಅರೆಸ್ಟ್ ಆಗಿದ್ದೇಕೆ?
04:49 PM (IST) Oct 14
Hyperactive child behavior: ಕೆಬಿಸಿ ಜ್ಯೂನಿಯರ್‌ನಲ್ಲಿ ಬಾಲಕನೊಬ್ಬ ಅಮಿತಾಭ್ ಬಚ್ಚನ್ ಅವರೊಂದಿಗೆ ತೋರಿದ ವರ್ತನೆಗೆ ಅನೇಕರು ಇದನ್ನು ಪೋಷಕರ ಸಂಸ್ಕಾರದ ಕೊರತೆ ಎಂದು ದೂಷಿಸಿದರೆ, ಇದು ADHD ಸಮಸ್ಯೆ ಅಂತಿದ್ದಾರೆ ಒಬ್ಬರು, ಹಾಗಿದ್ದರೆ ಏನಿದು ಎಡಿಹೆಚ್‌ಡಿ ಸಮಸ್ಯೆ
04:17 PM (IST) Oct 14
ಬಿಹಾರ ಚುನಾವಣೆಗೆ 71 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ, ಯಾರಿಗೆಲ್ಲಾ ಟಿಕೆಟ್? ನೀಡಲಾಗಿದೆ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಬಿಹಾರ ಉಪಮುಖ್ಯಮಂತ್ರಿ ಮೊದಲ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
04:02 PM (IST) Oct 14
ಒಲಿಂಪಿಕ್ ಪದಕ ವಿಜೇತೆ ಸೈನಾ ನೆಹ್ವಾಲ್, ದೈಹಿಕ ಕ್ಷಮತೆಯ ಕಾರಣ ನೀಡಿ ಭಾರವಾದ ಹೃದಯದಿಂದ ಬ್ಯಾಡ್ಮಿಂಟನ್‌ಗೆ ವಿದಾಯ ಹೇಳಿದ್ದಾರೆ. ಸದ್ಯಕ್ಕೆ ಕೋಚಿಂಗ್ ಅಥವಾ ರಾಜಕೀಯದಲ್ಲಿ ಆಸಕ್ತಿಯಿಲ್ಲದ ಅವರು, ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯದಲ್ಲಿ ಸಂತಸ ಕಂಡುಕೊಂಡಿದ್ದಾರೆ.
03:58 PM (IST) Oct 14
AIADMK CV Shanmugams Sexist Remark Sparks Outrage ಎಐಡಿಎಂಕೆ ಸಂಸದ ಸಿವಿ ಷಣ್ಮುಗಂ, ಚುನಾವಣಾ ಉಚಿತ ಕೊಡುಗೆಗಳ ಕುರಿತು ಮಾತನಾಡುತ್ತಾ, 'ಉಚಿತವಾಗಿ ಹೆಂಡತಿಯನ್ನು ಕೂಡ ನೀಡಬಹುದು' ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
03:43 PM (IST) Oct 14
ಸ್ವಿಫ್ಟ್, ವ್ಯಾಗನ್ಆರ್, ಬ್ರೆಜಾ ಅಲ್ಲ, ಮಾರುತಿ ಸುಜುಕಿ ಈ ಕಾರು ಖರೀದಿಗೆ ಮುಗಿಬಿದ್ದ ಗ್ರಾಹಕರು, ಸೆಪ್ಟೆಂಬರ್ ತಿಂಗಳಲ್ಲಿ ಮಾರುತಿ ಸುಜುಕಿಯಲ್ಲಿ ಗರಿಷ್ಠ ಮಾರಾಟ ಕಾರುಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನ ಪಡೆದಿದೆ. ಇದರ ಬೆಲೆ 6.25 ಲಕ್ಷ ರೂ ಮಾತ್ರ.
03:15 PM (IST) Oct 14
ಮಲೇಷ್ಯಾದಲ್ಲಿ ನಡೆಯುತ್ತಿರುವ ಸುಲ್ತಾನ್ ಆಫ್ ಜೋಹರ್ ಕಪ್ ಕಿರಿಯರ ಹಾಕಿ ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಮುಖಾಮುಖಿಯಾಗಲಿವೆ. ಈ ಹಿನ್ನೆಲೆಯಲ್ಲಿ, ಪಂದ್ಯದ ವೇಳೆ ಭಾರತೀಯ ಆಟಗಾರರು ಕೈಕುಲುಕದಿದ್ದರೆ ಅದನ್ನು ನಿರ್ಲಕ್ಷಿಸಿ, ಕೇವಲ ಆಟದ ಮೇಲೆ ಗಮನಹರಿಸುವಂತೆ ಪಿಎಚ್‌ಎಫ್ ತನ್ನ ಆಟಗಾರರಿಗೆ ಸಲಹೆ ನೀಡಿದೆ.
03:05 PM (IST) Oct 14
ಹಮಾಸ್ ಒತ್ತೆಯಾಳಾಗಿದ್ದ ಹಿಂದೂ ವಿದ್ಯಾರ್ಥಿ ಬಿಪಿನ್ ಜೋಶಿ ಜೀವಂತವಾಗಿ ಮರಳಲೇ ಇಲ್ಲ, ಹಮಾಸ್ ಎಲ್ಲಾ 20 ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದ್ದರೆ, ಬಿಪಿನ್ ಬರುವಿಕೆಯಲ್ಲಿದ್ದ ಕುಟುಂಬಕ್ಕೆ ಆಘಾತವಾಗಿದೆ. ಬಿಪಿನ್ ಕಳೇಬರ ಮಾತ್ರ ಬಂದಿದೆ.
01:30 PM (IST) Oct 14
12:00 PM (IST) Oct 14
Taliban ಅಫ್ಘಾನ್ ತಾಲಿಬಾನ್ ಸರ್ಕಾರದ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿಗೆ ಭಾರತ ಸರ್ಕಾರ ರಾಜಾತಿಥ್ಯ ನೀಡಿರುವುದನ್ನು ಗೀತರಚನೆಕಾರ ಜಾವೇದ್ ಅಖ್ತರ್ ತೀವ್ರವಾಗಿ ಖಂಡಿಸಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಡುವ ದೇಶವೇ ತಾಲಿಬಾನ್ ಪ್ರತಿನಿಧಿಗೆ ಗೌರವ ನೀಡಿರುವುದು ನಾಚಿಕೆಗೇಡು ಎಂದಿದ್ದಾರೆ.
11:54 AM (IST) Oct 14
ಭಾರತ-ವೆಸ್ಟ್ ಇಂಡೀಸ್ ಎರಡನೇ ಟೆಸ್ಟ್‌ನಲ್ಲಿ, ವಿಂಡೀಸ್‌ನ ಕೊನೆಯ ವಿಕೆಟ್ ಜೊತೆಯಾಟ ಭಾರತದ ತಾಳ್ಮೆ ಪರೀಕ್ಷಿಸಿತು. ಈ ವೇಳೆ ಮೊಹಮ್ಮದ್ ಸಿರಾಜ್ ತಮಾಷೆಯಾಗಿ ಎದುರಾಳಿ ಆಟಗಾರನಿಗೆ ಎಚ್ಚರಿಕೆ ನೀಡಿದ ಘಟನೆ ವೈರಲ್ ಆಗಿದೆ.
11:09 AM (IST) Oct 14
ಕುಲ್ದೀಪ್ ಯಾದವ್ ಅವರ ಮಾರಕ ಬೌಲಿಂಗ್ & ಕೆ ಎಲ್ ರಾಹುಲ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ, ಭಾರತವು ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಟೀಂ ಇಂಡಿಯಾ 2 ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ.
10:12 AM (IST) Oct 14
ಫಾಲೋ ಆನ್‌ಗೆ ಒಳಗಾಗಿದ್ದ ವೆಸ್ಟ್ ಇಂಡೀಸ್, 2ನೇ ಇನ್ನಿಂಗ್ಸ್‌ನಲ್ಲಿ ಜಾನ್ ಕ್ಯಾಂಬೆಲ್ ಮತ್ತು ಶಾಯ್ ಹೋಪ್ ಅವರ ಶತಕಗಳ ನೆರವಿನಿಂದ ದಿಟ್ಟ ಹೋರಾಟ ಪ್ರದರ್ಶಿಸಿತು. 5ನೇ ದಿನಕ್ಕೆ ಕಾಲಿಟ್ಟಿದ್ದು, 121 ರನ್‌ಗಳ ಗುರಿ ಬೆನ್ನತ್ತಿರುವ ಭಾರತಕ್ಕೆ ಗೆಲ್ಲಲು ಇನ್ನೂ 58 ರನ್‌ಗಳ ಅವಶ್ಯಕತೆಯಿದೆ.